ಸದಸ್ಯ:Preetha Lakshman/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೧೦ ಕೆಬಿpx|thumb|ಹಣ್ಣು


ಪರಿಚಯ[ಬದಲಾಯಿಸಿ]

               ಹಣ್ಣು ಎಂಬ ಪದವು ಸಸ್ಯಶಾಸ್ತ್ರದಲ್ಲಿ[೧] ಮತ್ತು ಸಾಮಾನ್ಯ ಬಳಕೆಯಲ್ಲಿ ಸ್ವಲ್ಪ ವ್ಯತ್ಯಾಸ ಇರುವ ಅರ್ಥಗಳನ್ನು ಹೊಂದಿದೆ. ಸಸ್ಯಶಾಸ್ತ್ರದಲ್ಲಿ ಹೂಬಿಡುವ ಸಸ್ಯಗಳು ತಮ್ಮ ಬೀಜಗಳನ್ನು ಪಸರಿಸಲು ಬೆಳೆಸಿಕೊಳ್ಳುವ ಅಂಗಗಳು.[೨] ಸಾಮಾನ್ಯ ಬಳಕೆಯಲ್ಲಿ ಸಸ್ಯಶಾಸ್ತ್ರದ ಪ್ರಕಾರದ ಹಣ್ಣುಗಳಲ್ಲಿ ಕೇವಲ ಆಹಾರವಾಗಿ ಉಪಯೋಗಕ್ಕೆ ಬರುವ, ಸಿಹಿ ರುಚಿಯುಳ್ಳವನ್ನು ಹಣ್ಣುಗಳೆಂದು ಪರಿಗಣಿಸಲಾಗುತ್ತದೆ.
               ಪ್ರಕೃತಿ ನಮಗೆ ನೀಡಿರುವ ಅಮೂಲ್ಯಗಳಲ್ಲಿ 'ಹಣ್ಣು' ಒಂದು ವಿಷಯ.ಹಣ್ಣುಗಳು ಮನುಷ್ಯ ಜೀವನದಲ್ಲಿ ಬಹಳ ಪಾತ್ರಗೊಂಡಿವೆ.ಹಣ್ಣು ಎಂದರೇನು? ಅವು ಜೀಜ ಹೊಂದಿದ ಮತ್ತು ಆಹಾರ ಸೇವಿಸುವ; ಮರ ಅಥವಾ ಇತರ ಸಸ್ಯ ಸಿಹಿ ಹಾಗೂ ತಿರುಳಿನಿಂದ ಕೂಡಿದ ಉತ್ಪನ್ನ. ಹಣ್ಣು ರುಚಿಕರವಾದ ಮತ್ತು ಪೌಷ್ಟಿಕ ಆಹಾರ.ಇದು ತೋಟ ಗಳು,ಗಿಡ-ಮರಗಳ ಮೇಲೆ ಬೆಳೆಯುತ್ತದೆ. ಮಾವಿನಹಣ್ಣು,ಸೇಬುಗಳು,ಪಪ್ಪಾಯಿ,ಕಿತ್ತಳೆ,ದ್ರಾಕ್ಷಿ,ದಾಳಿಂಬೆ,ನಿಂಬೆ, ಮುಂತಾದ ಹಣ್ಣುಗಳು ನಮಗೆ ಪರಿಸರದಲ್ಲಿ ಸಿಗುತ್ತದೆ. ಅವು ವರ್ಷದ ವಿವಿಧ ಋತುಗಳಲ್ಲಿ ಬೆಳೆಯುತ್ತದೆ.[೩]
               ಮಾವಿನ ಪ್ರಭೇದಗಳು ಭಾರತದಲ್ಲಿ ಅನೇಕ ಕಾಣಬಹುದು.ಅತ್ಯಂತ ಜನಪ್ರಿಯವಾದುದು 'ಆಲ್ಪೊನ್ಸ'.

ಉಪಯೋಗಗಳು[ಬದಲಾಯಿಸಿ]

               ಹಣ್ಣುಗಳು ದೈನಂದಿನ ತಿನ್ನುವದರಿಂದ ಬಹಳ ಪ್ರಯೋಜನಗಳಿವೆ. ಈ ದಿನಗಳಲ್ಲಿ ನಮ್ಮ ಶರೀರ ಹಿಂದೆಂದಿಗಿಂತ ಹೆಚ್ಚು ಜೀವಸತ್ವಗಳು ಮತ್ತು ಖನಿಜಗಳ ಅಗತ್ಯವಿದೆ. ಪ್ರತಿದಿನ ಹಣ್ಣು ತಿನ್ನುವದರಿಂದ ಜೀವನದ ಒತ್ತಡಗಳು,ಕಾಯಿಲೆಗಳನ್ನು ಎದುರಿಸಬಹುದು. ಒಂದು ಸಮತೋಲನ ಆಹಾರಕ್ಕಾಗಿ ಹಣ್ಣುಗಳನ್ನು ತಿನ್ನುವುದು ಅಗತ್ಯ.ಅವುಗಳಿಂದ ಉಪ್ಪಿನ ಕಾಯಿ,ಸೌಂದರ್ಯವರ್ಧಕಗಳು,ಜಾಮ್,ಶಕ್ತಿ ಪಾನೀಯಗಳು,ಆರೋಗ್ಯ ಉತ್ಪನ್ನಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ.


thumb|ಮಾವು,ಭಾರತದ ರಾಷ್ಟ್ರೀಯ ಹಣ್ಣು

ಭಾರತದ ರಾಷ್ಟ್ರೀಯ ಹಣ್ಣು[ಬದಲಾಯಿಸಿ]

              ಮಾವು ಉಷ್ಣವಲಯ ದೇಶಗಳಲ್ಲಿ ವ್ಯಾಪಕವಾಗಿ ಬೆಳೆದ ಹಣ್ಣಾಗಿದೆ.ಗುಡ್ಡಗಾಡು ಪ್ರದೇಶಗಳನ್ನು ಹೊರತು,ಬಹುತೇಕ ಭಾಗಗಳಲ್ಲಿ ಬೆಳಸಲಾಗುತ್ತದೆ.ಇತಿಹಾಸಕಾರರು ಪ್ರಾಚೀನ ಕಾಲದಲ್ಲಿ ಈ ಖಾರದ ಹಣ್ಣಿನ ಸ್ವಾರಸ್ಯ ತಿಳಿಸಿದ್ದಾರೆ.ಮಹಾನ್ ಅಲೇಕ್ಸಾಂಡರ್ ಮತ್ತು ಪ್ರಸಿದ್ದ ಚೀನೀ ಪ್ರವಾಸಿ ಆದ ಹ್ಯೂನ್ ಸ್ಯಾಂಗ್ ಅದರ ದೈವಿಕ ಪರಿಮಳವನ್ನು ರುಚಿಗೊಂಡಿದ್ದಾರೆ.ಪ್ರಸಿದ್ದ ಭಾರತೀಯ ಕವಿ ಕಾಳಿದಾಸ ಮಾವಿನಹಣ್ಣಿನ ಮೇಲೆ ಶ್ಲಾಘನೆಗಳು ಬರೆದಿದ್ದಾರೆ.
              ಭಾರತದ ರಾಷ್ಟ್ರೀಯ ಹಣ್ಣು 'ಮಾವು' [೪] ಸಹ ಹಣ್ಣುಗಳ ರಾಜ ಎಂದು ಕರೆಯಲಾಗಿದೆ. ಭಾರತದಲ್ಲಿ ನೂರಕ್ಕೂ ಹೆಚ್ಚು ಮಾವಿನಹಣ್ಣು ವಿಧಗಳಿವೆ. ಅವು ವಿವಿಧ ಬಣ್ಣಗಳಲ್ಲಿ,ಗಾತ್ರಗಳಲ್ಲಿ ಮತ್ತು ಆಕಾರಗಳಲ್ಲಿ ಲಭ್ಯವಿದೆ.ಇದು ಯುಗದಿಂದ ಭಾರತದಲ್ಲಿ ಬೆಳೆಸಲಾಗುತ್ತದೆ.ಸಾಮಾನ್ಯ ಮಾವಿನ ಮರದ ಎತ್ತರ ೧೫-೩೦ ಮೀಟರ್ ಹೊಂದಬಹುದು.ಬೇಸಿಗೆಯ   ಕಾಲದಲ್ಲಿ ಹಣ್ಣುಗಳು ಬೆಳೆಯಲು ವಾತಾವರಣ ಬೆಚ್ಚಗಿರುತ್ತದೆ. ಜನರು ಮಾವಿನಹಣ್ಣನ್ನು ಕಳಿತ ತಿನ್ನುತ್ತಾರೆ,ಅಥವಾ ಉಪ್ಪಿನಕಾಯಿ,ಸಾಸ್ ತಯಾರಿಸುತ್ತಾರೆ.

ಪೌಷ್ಟಿಕಾಂಶದ ಅಂಶಗಳು[ಬದಲಾಯಿಸಿ]

               ಹಣ್ಣುಗಳನ್ನು ಖಾಲಿ ಹೊಟ್ಟೆಯಲ್ಲಿ ತೆಗೆದುಕೊಳ್ಳಲು ಸೂಚಿಸಲಾಗುತ್ತದೆ. ಹಣ್ಣುಗಳು ಸರಳ-ಶರ್ಕಗಳನ್ನು ಹೊಂದಿದೆ,ಇದು ದೇಹದಲ್ಲಿ ಸಂಪೂರ್ಣವಾಗಿ ಹೀರಿಕೊಳ್ಳಲು ಸಮಯ ಅಗತ್ಯವಿದೆ.ಆದಾಗ್ಯೂ,ಊಟವನ್ನು ತಿನ್ನಿದ ತಕ್ಷಣ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ.ಊಟದ ನಂತರ ಕನಿಷ್ಟ ೩೦ ನಿಮಿಷಗಳ ಅಂತರ ಇರಬೇಕು.ಮಲಗುವ ವೇಳೆ ಹಣ್ಣುಗಳನ್ನು ತಿನ್ನುವುದು ಒಳ್ಳೆಯದಲ್ಲ ಏಕೆಂದರೆ ರಕ್ತದ ಸಕ್ಕರೆ ಮತ್ತು ಇನ್ಸುಲಿನ್ ಮಟವನ್ನು ಹೆಚ್ಚಳು ಉಂಟುಮಾಡುತ್ತದೆ ಮತ್ತು ನಿದ್ರೆಯು ಕಷ್ಟವಾಗುತ್ತದೆ.
               ಹಣ್ಣುಗಳು ಸರಿಯಾದ ಜೀರ್ಣಿಸುವಿಕೆಯಲ್ಲಿ ನೆರವಾಗುತ್ತದೆ.ಅವುಗಳನ್ನು ನಿಯಮಿತವಾಗಿ ಬಳಸುವ ವ್ಯಕ್ತಿಗಳಿಗೆ ದೀರ್ಘ ಆಯುಷ್ಯವಿರುತ್ತದೆ.ಹಣ್ಣುಗಳಿಂದ ಅನೇಕ ಉಪಾಯಗಳಿವೆ,ಅದನ್ನು ನಾವು ಸರಿಯಾಗಿ ಉಪಯೋಗಿಸಬೇಕು.

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Botany
  2. https://en.wikipedia.org/wiki/Fruit
  3. https://en.wikipedia.org/wiki/List_of_culinary_fruits
  4. https://en.wikipedia.org/wiki/Mango