ಸದಸ್ಯ:Prathiksha S Shetty/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಪ್ರತೀಕ್ಷ ಶೆಟ್ಟಿ. ನಾನು ಸಂತ ಅಲೋಶಿಯಸ್ ಕಾಲೇಜಿನಲ್ಲಿ ಪ್ರಥಮ ಬಿ.ಎಸ್ಸಿ.ಓದುತ್ತಿದ್ದೇನೆ. ನಾನು ಮೂಲತಹ ಮಂಗಳೂರಿನವಳು. ಬೆಳೆದದ್ದು ಬೆಂಗಳೂರಿನಲ್ಲಿ. ನನ್ನ ಶಾಲೆಯ ಹೆಸರು ಕ್ತೈಸ್ಟ್ ಶಾಲೆ.ಭಾರತೀಯ

ವಾಯುಪಡೆಯಲ್ಲಿ ಪೈಲಟ್ ಆಗಬೇಕೆಂದು ನನ್ನ ಆಸೆ.ನನ್ನ ಮನೆಯಲ್ಲಿ ನನ್ನ ತಂದೆ ತಾಯಿ ಮತ್ತು ಅಣ್ಣ ಇದ್ದಾರೆ. ನನ್ನ ತಾಯಿ ಕನ್ನಡದ ಅಧ್ಯಾಪಕಿ. ಅಣ್ಣ ಬೆಂಗಳೂರಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ.ಚಿಕ್ಕಂದಿನಿಂದಲೂ ನನಗೆ

ಮಂಗಳೂರು ಎಂದರೆ ಬಹಳ ಇಷ್ಟ. ವಷಕ್ಕೊಮ್ಮೆ ಬೇಸಿಗೆ ರಜೆಯಲ್ಲಿ ನಾನು ಇಲ್ಲಿಗೆ ಬರುತ್ತಿದ್ದೆ. ಆಗಿನಿಂದಲೂ ಇಲ್ಲಿ ಒಮ್ಮೆಯಾದರೂ ಓದಬೇಕು ಎಂಬುದು ನನ್ನ ಆಸೆ.ಅದು ಈಗ ನೆರವೇರಿದೆ.ಬರೀ ವಾಹನಗಳ ಸದ್ದು, ಧೂಳು,ಹೊಗೆ

ಇವೆಲ್ಲ ತುಂಬಿದ ಬೆಂಗಳೂರಿಗಿಂತ ಸುತ್ತ ಹಸಿರು ಬೆಟ್ಟ ಗುಡ್ಡ ತುಂಬಿದ ಮಂಗಳೂರು ನನಗೆ ಬಹಳ ಇಷ್ಟ. ನನ್ನ ಮುಂಚೆ ಓದುತ್ತಿದ್ದ ಕಾಲೇಜಿನಲ್ಲಿ ಯಾರೂ ಕನ್ನಡ ಮಾತನಾಡುತ್ತಿರಲಿಲ್ಲ.ಇಂಗ್ಲಿಸ್ ಅಲ್ಲದೇ ಬೇರೆ ಭಾಷೆಯನ್ನು ಮಾತನಾಡಿದರೆ

ಅವರನ್ನು ಹಳ್ಳಿ ಮಕ್ಕಳು ಎಂದು ಅವಮಾನ ಮಾಡುತ್ತಿದ್ದರು. ದ್ವಿತೀಯ ಭಾಷೆ ಕನ್ನಡ ಎಂದು ಆರಿಸಿಕೊಂಡರೂ ಕೂಡ ತನಗೆ ಕನ್ನಡ ಬರದ ಹಾಗೆ ನಟಿಸುತ್ತಿದ್ದರು. ನನಗೆ ಇದು ಬಹಳ ಬೇಸರವನ್ನು ಉಂಟು ಮಾಡಿತ್ತು.ನನಗೆ ಕನ್ನಡದಲ್ಲಿ
ಲೇಖನಗಳನ್ನು ಬರೆಯುವುದು ಮತ್ತು ಕವನಗಳನ್ನು ಬರೆಯುವುದು ಎಂದರೆ ಬಹಳ ಇಷ್ಟ.ನಾನು ನಮ್ಮ ಕಾಲೇಜಿನ ಎನ್.ಸಿ.ಸಿ. ಸದಸ್ಯೆ ಆಗಿದ್ದೇನೆ.ಎನ್.ಸಿ.ಸಿ ಯಲ್ಲಿ ಸಿ.ಪ್ರಮಾಣಪತ್ರ ಪರೀಕ್ಷೆ ಮುಗಿಸಿ ಅದರ ಮೂಲಕ ವಾಯುಪಡೆ 

ಸೇರಬೇಕೆಂಬುದು ನನ್ನ ಹಿರಿದಾಸೆ. ನನಗೆ ಕಷ್ಟವೆನಿಸಿದರೂ ಕೂಡ ನಾನು ವಾಯುಪಡೆ ಸೇರಲೇಬೇಕೆಂದು ದೃಢ ಸಂಕಲ್ಷವನ್ನು ಮಾಡಿದ್ದೇನೆ.