ಸದಸ್ಯ:Prathiba 16/sandbox

ವಿಕಿಪೀಡಿಯ ಇಂದ
Jump to navigation Jump to search

thumb| ಸೃಜನ್ ಲೋಕೇಶ್

ಸೃಜನ್ ಲೋಕೇಶ್[ಬದಲಾಯಿಸಿ]

೨೮ ಜೂನ್ ೧೯೮೦ , ಬಗ್ಲೂರ್ ಕರ್ನಾಟಕರಲ್ಲಿ ಸೃಜನ್ ಲೋಕೇಶ್ ಜನಿಸಿದರು.ಸೃಜನ್ ಲೋಕೇಶವರು ಕನ್ನಡ ಚಲನಚಿತ್ರ ನಟ , ದೂರದರ್ಶನದ ನಿರೂಪಕ , ರೇಡಿಯೋ ನಿರೂಪಕ , ನಿರ್ಮಾಪಕರು .

ಅವರ ಕುಟುಂಬ[ಬದಲಾಯಿಸಿ]

. ಅವರ ತಂದೆ 'ಲೋಕೇಶ್ ಆವರು ರಂಗಭೂಮಿಯ ಕಲಾವಿದರು ಮತ್ತು ಚಲನಚಿತ್ರ ನಟರಾಗಿದ್ದರು. ಅವರ ತಾಯಿ 'ಗಿರಿಜ ಲೋಕೇಶ್ ಅವರು ದೂರದರ್ಶನದ ನಟಿ . ಅವರ ಅಜ್ಜ ಸುಬ್ಬಯ್ಯ ನಾಯ್ಡು ಕನ್ನಡ ಮೂಕ ಚಲನಚಿತ್ರದ ಪ್ರಪ್ರಥಮ ನಟನಾಗಿದ್ದರು . ಅವರ ತಂಗಿ ಪೂಜಾ ಲೋಕೇಶ್ ಸಹ ಕನ್ನಡ ಹಾಗು ತಮಿಳಿನ ಕಲಾವಿದೆ.೨೦೦೧ರಲ್ಲಿ ಅವರು ಎಸ್.ಎಸ್.ಎಮ್.ಆರ್.ವಿ ಕಾಲೇಜಿನಲ್ಲಿ ಪದವಿ ಪಡೆದರು. ಅವರು ನೀಲ ಮೇಘ ಶ್ಯಾಮ ಎಂಬ ಚಲನಚಿತ್ರದಿಂದ ತಮ್ಮ ಅಭಿನಯದ ವೃತ್ತಿಜೀವನವನ್ನು ಆರಂಭಿಸಿದರು.ಅವರ ಪತ್ನಿ ಗ್ರೀಷ್ಮ ರಂಗಭೂಮಿಯ ಕಲಾವಿದೆ, ದೂರದರ್ಶನದ ನಟಿ ಹಾಗು ಕಥಕ್ಕಳಿ ನೃತ್ಯಗಾರ್ತಿ .

ನಟನಾವೃತ್ತಿ[ಬದಲಾಯಿಸಿ]

ಸೃಜನ್ ಲೋಕೇಶ್ ಪ್ರಮುಖ ಪಾತ್ರಗಳಲ್ಲಿ ಯಶಸ್ಸನ್ನು ಕಾಣಲಿಲ್ಲ . ಇತ್ತೀಚಿನ ದಿನಗಳಲ್ಲಿ , ಅವರ ದೂರದರ್ಶನದ ಕಾರ್ಯಕಮ ಮಜಾ ವಿತ್ ಸೃಜಾ , ಮಜಾ ಟಾಕೀಸ್ ಬಹಳ ಪ್ರಸ್ಸಿದ್ದಿ ಪಡೆಯಿತು .

ಬಾಲನಟನಾಗಿ[ಬದಲಾಯಿಸಿ]

ಅವರ ಸುತ್ತ ಚಲನಚಿತ್ರ ಹಾಗು ರಂಗಭೂಮಿಯ ಕಲಾವಿದರು ಇದ್ದುದರಿಂದ ಅವರಿಗೆ ನಟನಾವೃತ್ತಿಯಲ್ಲಿ ಮುಂದು ಹೋಗಲು ಪ್ರೇರೇಪಣೆಯಾಗಿತ್ತು . ಅವರು ೧೯೯೦ರಲ್ಲಿ ತೆರೆ ಕಾಣಿದ ಬುಜಂಗಯ್ಯನ ದಶಾವಾತಾರ ಮತ್ತು ೧೯೯೧ರಲ್ಲಿ ಬಿಡುಗಡೆಯಾದ ವೀರಪ್ಪನ್ ಎಂಬ ಚಲನಚಿತ್ರದಲ್ಲಿ ಬಾಲನಟನಾಗಿ ಚಿತ್ರಮಂದಿರಕ್ಕೆ ಕಾಲಿಟ್ಟರು. 

ಪ್ರಮುಖ ಪಾತ್ರಗಳಲ್ಲಿ[ಬದಲಾಯಿಸಿ]

ಅವರು ನಟನಾಗಿ ಯಶಸ್ವಿಯಾಗಲಿಲ್ಲ . ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಲು ಮುಂದುವರಿಸಿದರು. ಅವರು ಪೋಷಕ ಪಾತ್ರಗಳಲ್ಲಿ ಅಭಿನಯಿಸಿದ ಚಲನಚಿತ್ರಗಳು ಪೊರ್ಕಿ , ನವಗ್ರಹ , ಚಿಂಗಾರಿ , ಎದೆಗಾರಿಕೆ , ಅಂದರ್ ಬಾಹರ್ , ಸ್ನೇಹಿತರು , ಐಪಿಸಿ ಸೆಕ್ಷನ್ ೩೦೦ ಮತ್ತು ಹಲವಾರು . ಅವರು ಹಲವಾರು ರಿಯಾಲಿಟಿ ಕಾರ್ಯಕ್ರಮಗಳನ್ನು ಶುರುಮಾಡಿದ್ದಾರೆ .ಅವು ಸೈ- ನೃತ್ಯ ರಿಯಾಲಿಟಿ ಕಾರ್ಯಕ್ರಮ , ಮಜಾ ವಿತ್ ಸೃಜಾ ಇತ್ಯಾದಿ . ಆನೆ ಪಟಾಕಿ ಎನ್ನುವ ಚಲನಚಿತ್ರವು ಹನ್ನೊಂದು ವರ್ಷಗಳ ನಂತರ ಅವರ ಎರಡನೇಯ ಚಿತ್ರವಾಗಿತ್ತು .

ನಿರ್ಮಾಣ[ಬದಲಾಯಿಸಿ]

೨೦೧೩ರಲ್ಲಿ  ಲೋಕೇಶ್ ಪ್ರೊಡಕ್ಷನ್ಸ್ ಶುರುವಾಯಿತ್ತು . ಇದನ್ನು ಸೃಜನ್ ಲೋಕೇಶ್ ಮತ್ತು ಗಿರಿಜ ಲೋಕೇಶ್ ನಿಭಾಯಿಸುತ್ತಿದ್ದಾರೆ . ಅವರ ನಿರ್ಮಾಣದಲ್ಲಿ ಹಲವಾರು ದೂರದರ್ಶನ ಕಾರ್ಯಕ್ರಮಗಳು ಹೊರಬಂದಿದೆ. ಚಾಲೆಂಜ್ , ಛೋಟಾ ಚಾಂಪಿಯನ್ಸ್ , ಕಾಸಿಗೆ ಟಾಸು . ಪ್ರಸ್ತುತ ಮಜಾ ಟಾಕೀಸ್ ಎನ್ನುವ ಕಾರ್ಯಕ್ರಮವನ್ನು ನಿರ್ಮಾಣಿಸಿದ್ದಾರೆ . ಚಾಲೆಂಜ್ ( ೨೦೧೨-೨೦೧೩ ) ಎನ್ನುವ ಕಾರ್ಯಕ್ರಮ ಜೀ  ಕನ್ನಡದಲ್ಲಿ ಬರುತಿತ್ತು . ಈ ಕಾರ್ಯಕ್ರಮವನ್ನು ಕನ್ನಡದ ನಟ ರಾಜೇಶ್ ಆಯೋಜಿಸಿದರು . ಛೋಟಾ ಚಾಂಪಿಯನ್ ಕಾರ್ಯಕ್ರಮವನ್ನು ಸೃಜನ್ ಲೋಕೇಶವರು ೨೦೧೩-೨೦೧೪ರಲ್ಲಿ ಆಯೋಜಿಸಿದರು . ಈ ಕಾರ್ಯಕ್ರಮವು ನಾಲ್ಕು ವಯಸ್ಸಿನೊಳಗಿರುವ ಮಕ್ಕಳಿಗೆ ಮೀಸಲಾಗಿತ್ತು . ಕಾಸಿಗೆ ಟಾಸ್ ಎನ್ನುವ ರಿಯಾಲಿಟಿ ಕಾರ್ಯಕ್ರಮವನ್ನು ಕನ್ನಡದ ಬಿಗ್ ಬಾಸ್ ಸ್ಪರ್ದಿ ರೋಹಿತ್ ನಡೆಸಿ ಕೊಟ್ಟರು . ಪ್ರಸ್ತುತ ಮಜಾ ಟಾಕೀಸ್ ಎಂಬ ಕಾರ್ಯಕ್ರಮವನ್ನು ಸೃಜನವರ ಹಾಸ್ಯವನ್ನು ಪ್ರಧಾನಿಸುತ್ತದೆ . ಈ ಕಾರ್ಯಕ್ರಮವನ್ನು ಸೃಜನವರೇ ನಿರ್ದೇಶಿಸಿದ್ದಾರೆ .  ಹಿಂದಿಯ ಕಾಮಿಡಿ ನೈಟ್ಸ್ ವಿತ್ ಕಪಿಲ್ ಎನ್ನುವ ಕಾರ್ಯಕ್ರಮದ ಮೇಲೆ ಆಧಾರಿತವಾಗಿದೆ . ಇಂದ್ರಜಿತ್ ಲಂಕೇಶ್ , ಶ್ವೇತಾ ಚೆಂಗಪ್ಪ ,ಅಪರ್ಣ , ಮಿಮಿಕ್ರಿ ದಯಾನಂದ್ , ವಿ ಮನೋಹರ್ , ಮಂಡ್ಯಾ ರಮೇಶವರು ಕಾರ್ಯಕ್ರಮದ ಪಾತ್ರಧಾರಿಗಳು .

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

೨೦೧೧ರಲ್ಲಿ ಸುವರ್ಣ ಚಾನೆಲ್ ಅವರು ಅತ್ಯುತ್ತಮ ಅಂಕರ್ ಎನ್ನುವ ಪ್ರಶಸ್ತಿ ನೀಡಿದ್ದಾರೆ . ೨೦೧೧ರಲ್ಲಿ ಬಿಗ್ ಎಂಟರ್ಟೇಂಮೆಂಟ್ ಅವಾರ್ಡ್ರಲ್ಲಿ ಅತ್ಯಂತ ಜನಪ್ರೀಯ ವರ್ಗದಲ್ಲಿ ಅತ್ಯುತ್ತಮ ಅಂಕರ್ ಎನ್ನುವ ಪ್ರಶಸ್ತಿ ಲಭಿಸಿದೆ . ೨೦೧೨, ೨೧೦೩ರಲ್ಲಿ ಮಾದ್ಯಮ ಅವಾರ್ಡ್ರಲ್ಲಿ ಅತ್ಯುತ್ತಮ ಅಂಕರ್ ಎನ್ನುವ ವರ್ಗದಲ್ಲಿ ಪ್ರಶಸ್ತಿ ದೊರಕಿದೆ .

ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

 ೧೯೯೧ರಲ್ಲಿ ವೀರಪ್ಪನ್ ಎನ್ನುವ ಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೧೯೯೦ರಲ್ಲಿ ಬುಜಂಗಯ್ಯನ ದಶಾವಾತಾರ ಎಂಬ ಚಲನಚಿತ್ರದಲ್ಲಿ ಬಾಲ ನಟನಾಗಿ ಅಭಿನಯಿಸಿದರು . ೨೦೦೨ರಲ್ಲಿ ನೀಲ ಮೇಘ ಶ್ಯಾಮ ಎನ್ನುವ ಚಿತ್ರದಲ್ಲಿ ಶ್ಯಾಮನಾಗಿ ಅಭಿನಯಿಸಿದರು . ೨೦೦೮ರಲ್ಲಿ ನವಗ್ರಹ ಚಿತ್ರದಲ್ಲಿ ಚಾಲೆಂಜಿಂಗ್ ಸ್ಟಾರ್ ದರ್ಶನ್ ಜೊತೆ ನಟಿಸಿದರು . ೨೦೦೯ರಲ್ಲಿ ಐಪಿಸಿ ಸೆಕ್ಷನ್ ೩೦೦ ಎಂಬ ಚಿತ್ರದಲ್ಲಿ ಅಭಿನಯಿಸಿದರು . ೨೦೧೦ರಲ್ಲಿ  ಪೊರ್ಕಿ ಎನ್ನುವ ಚಿತ್ರದಲ್ಲಿ ದರ್ಶನ್ ಜೊತೆ ನಟಿಸಿದರು . ೨೦೧೨ರಲ್ಲಿ ಚಿಂಗಾರಿ ಚಲನಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ರಲ್ಲಿ ಸ್ನೇಹಿತರು ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೨ ಎದೆಗಾರಿಕೆ ಎಂಬ ಚಿತ್ರ ಬಿಡುಗಡೆಯಾಯಿತು . ೨೦೧೩  ಅಂದರ್ ಬಾಹರ್ ಎಂಬ ಚಿತ್ರದಲ್ಲಿ ನಟಿಸಿದರು. ೨೦೧೩ರಲ್ಲಿ ಬೀರೇಗೌಡ ಎನ್ನುವ ಪಾತ್ರದಲ್ಲಿ ಆನೆ ಪಟಾಕಿ ಚಿತ್ರದಲ್ಲಿ ನಟಿಸಿದ್ದಾರೆ .೨೦೧೪ರಲ್ಲಿ ಕೈಲಾಸ್ ಎನ್ನುವ ಪಾತ್ರದಲ್ಲಿ ಟಿಪಿಕಲ್ ಕೈಲಾಸ್ ಎಂಬ ಚಿತ್ರದಲ್ಲಿ ಅಭಿನಯಿಸಿದ್ದಾರೆ . ೨೦೧೪ರಲ್ಲಿ ಪರಮಶಿವಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಸಪ್ನೊಂ ಕಿ ರಾಣಿ ಎಂಬ ಚಿತ್ರದಲ್ಲಿ ನಟಿಸಿದ್ದಾರೆ. ೨೦೧೫ರಲ್ಲಿ ಲವ್ ಯು ಆಲಿಯಾ ಎಂಬ ಚಲನಚಿತ್ರದಲ್ಲಿ  ಕಿರಿ ಪಾತ್ರವನು ಮಾಡಿದ್ದಾರೆ . ೨೦೧೬ರಲ್ಲಿ  ದರ್ಶನವರೊಂದಿಗೆ ಜಗ್ಗು ದಾದ ಎನ್ನುವ ಚಿತ್ರದಲ್ಲಿ ನಟಿಸಿದ್ದಾರೆ . ಪ್ರಸ್ತುತ ಸಮೋಸ ಎನ್ನುವ ಚಲನಚಿತ್ರವನ್ನು ಚಿತ್ರಿಕರಣಿಸುತಿದ್ದಾರೆ .

ಕಾರ್ಯಕ್ರಮಗಳ ಪಟ್ಟಿ[ಬದಲಾಯಿಸಿ]

ಸುವರ್ಣ ಚಾನೆಲ್ ಅಲ್ಲಿ ಮಜಾ ವಿತ್ ಸೃಜಾ , ಸೈ ,ಕಿಚ್ಚನ್ ಕಿಲಾಡಿಗಳು , ಸ್ಟಾರ್ ಸಿಂಗರ್ , ಸೈ ೨ ,ಪ್ರಸಾರವಾಗುತಿತ್ತು . ಮಮ್ಮಿ ನಂಬರ್ ೧ , ಕಾಸಿಗೆ ಟಾಸ್ , ಛೋಟಾ ಚಾಂಪಿಯನ್ಸ್ , ಛೋಟಾ ಚಾಂಪಿಯನ್ಸ್ ೨ , ಪ್ರಸಾರವಾಗುತಿತ್ತು. ಸುವರ್ಣ ವಾಹಿನಿಯಲ್ಲಿ ಪ್ರಸಾರವಾಗುತಿದ್ದ ಬಿಗ್ ಬಾಸ್ ೨ ಕಾರ್ಯಕ್ರಮದಲ್ಲಿ ಸ್ಪರ್ಧಿಯಾಗಿ ಕಾಣಿಸಿಕೊಂಡರು . ಕಲರ್ಸ್ ಕನ್ನಡ ಚಾನೆಲಿನಲ್ಲಿ ಶನಿವಾರ ಮತ್ತು ಭಾನುವಾರ ರಾತ್ರಿ ಎಂಟು ಗಂಟೆಗೆ ಮಜಾ ಟಾಕೀಸ್ ಪ್ರಸಾರವಾಗುತ್ತಿದೆ . ವಿ ಮನೋಹರ್ ಅವರು ಮಜಾ ಟಾಕೀಸ್ ಕಾರ್ಯಕ್ರಮಕ್ಕಾಗಿ ಹಾಡನ್ನು ಸಂಯೋಜಿಸಿದ್ದಾರೆ .

ಅವರ ಬಗ್ಗೆ[ಬದಲಾಯಿಸಿ]

 ಪ್ರಸ್ತುತ ಅವರ ಎತ್ತರ ೫ ಅಡಿ ೮ ಇಂಚುಗಳು . ಅವರ ತೂಕ ಸುಮಾರು ೬೮ ಕಿಲೋಗ್ರಾಂ . ಸಿಕ್ಸ್ ಪ್ಯಾಕ್ ಇವರ ದೇಹ ಪ್ರಕಾರವಾಗಿದೆ .

ಉಲ್ಲೇಖಗಳು[ಬದಲಾಯಿಸಿ]

[೧][೨]

  1. https://en.wikipedia.org/wiki/Srujan_Lokesh
  2. http://celebritystate.com/srujan-lokesh-height-weight-body-statistics-biography/