ಸದಸ್ಯ:Pranavshivakumar/5

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ರಾಹುಲ್ ಶರ್ಮ

ರಾಹುಲ್ ಶರ್ಮ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಇವರು ಲೆಗ್ ಬ್ರೇಕ್ ಹಾಗು ಗೂಗ್ಲಿ ಬಾಲಿಂಗ್ ಮಾಡ್ತಾರೆ. ಇವರು ತಮ್ಮದೇ ಆದ ಬಾಲಿಂಗ್ ಶೈಲಿಗೆ ಹೆಸರುವಾಸಿ. ೨೦೦೬ ರಿಂದ ಪಂಜಾಬ್ ಕ್ರಿಕೆಟ್ ತಂಡದ ಸದಸ್ಯರಗಿದ್ದಾರೆ.

ಆರಂಭಿಕ ಜೀವನ[ಬದಲಾಯಿಸಿ]

ರಾಹುಲ್ ಶರ್ಮರವರು ೩೦ ನವಂಬರ್ ೧೯೮೬ರಲ್ಲಿ ಪಂಜಾಬ್ಜಲಂಧರ್ ಜಿಲ್ಲೆಯಲ್ಲಿ ಜನಿಸಿದರು. ಇವರು ಮೊದಲು ಮದ್ಯಮ ವೇಗದ ಬೌಲರ್ ಆಗಿ ಕ್ರಿಕೆಟ್ ಪ್ರವೇಶಿಸಿದರು ನಂತರ ಲೆಗ್ ಸ್ಪಿನ್ನರ್ ಆಗಿ ತಮ್ಮ ಬಾಲಿಂಗ್ ಶೈಲಿಯನ್ನು ಬದಲಾಯಿಸಿಕೊಂಡರು. ೨೫ ಡಶಂಬರ ೨೦೦೬ರಲ್ಲಿ ಪಂಜಾಬ್ ತಂಡದಿಂದ ಪ್ರಥಮ ದರ್ಜೆ ಕ್ರಿಕೆಟ್‌‍ಗೆ ಪದಾರ್ಪನೆ ಮಾಡಿದರು. ೨೦೦೯-೧೦ರ ರಣಜಿ ಟ್ರೋಫೀ ಅವಧಿಯಲ್ಲಿ ಇವರು ೭ ಪ್ರಥಮ ದರ್ಜೆ ಪಂದ್ಯಗಳಿಂದ ೧೩ ವಿಕೆಟ್‍ಗಳನ್ನು ಪದೆದಿದ್ದರು.

ವಯಕ್ತಿಕ ಜೀವನ[ಬದಲಾಯಿಸಿ]

ರಾಹುಲ್ ಶರ್ಮರವರು ಮದ್ಯಮ ವರ್ಗದ ಕುಟುಂಬದಿಂದ ಬಂದವರು. ಇವರ ತಂದೆಯ ಹೆಸರು ಪ್ರದೀಪ್ ಶರ್ಮ, ಇವರು ಪಂಜಾಬ್ ಪೋಲಿಸ್‍ನಲ್ಲಿ ಸಹಾಯಕ ಉಪ ಇನ್ಸ್ಪೆಕ್ಟರ್ ಆಗಿದ್ದಾರೆ. ರಾಹುಲ್ ಬಿ ಎ ಪದವಿಯನ್ನು ಪಡೆದಿದ್ದಾರೆ. ಪ್ರಸ್ತುತ ರಾಹುಲ್‍ಅವರು ತಮ್ಮ ಸಹೋದರ, ಸಹೋದರಿ, ತಂದೆ ಹಾಗು ತಾಯಿಯ ಜೊತೆ ಜಲಂಧರ್ ಜಿಲ್ಲೆಯಲ್ಲಿ ವಾಸಿಸುತ್ತಿದ್ದಾರೆ.

ವೃತ್ತಿ ಜೀವನ[ಬದಲಾಯಿಸಿ]

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

೨೦೧೦ರಲ್ಲಿ ದೆಕ್ಕನ್ ಚಾರ್ಜೆರ್ಸ್ ತಂಡದಿಂದ ಐಪಿಎಲ್ ಜಗತ್ತಿಗೆ ಪದಾರ್ಪನೆ ಮಾಡಿದ ರಾಹುಲ್ ನಂತರ ಪುಣೆ ವಾರಿಯರ್ಸ್ ತಂಡಕ್ಕೆ ಸೇರಿ ತಮ್ಮ ವೃತ್ತಿಯಲ್ಲಿ ಯಶಸ್ಸುಗಳಿಸಿದರು.[೧] ೨೦೧೧ರ ಐಪಿಎಲ್ ನಲ್ಲಿ ಮುಂಬೈ ಇಂಡಿಯನ್ಸ್ ತಂಡದ ವಿರುದ್ದದ ಪಂದ್ಯದಲ್ಲಿ ತಮ್ಮ ೪ ಒವರ್ ಗಳಿಂದ ಕೇವಲ ೦೭ ರನ್ ಮಾತ್ರ ಬಿಟ್ಟುಕೊಟ್ಟಿದ್ದರು, ಇದು ಟ್ವಿಟರ್‍ನಲ್ಲಿ ಬಹಳ ಚರ್ಚೆಗೆ ಕಾರಣವಾಗಿತ್ತು.[೨][೩][೪]

ಅಂತರರಾಷ್ತ್ರೀಯ ಕ್ರಿಕೆಟ್[ಬದಲಾಯಿಸಿ]

ಏಕದಿನ ಕ್ರಿಕೆಟ್[ಬದಲಾಯಿಸಿ]

೦೮ ಡಿಸಂಬರ್ ೨೦೧೧ರಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಸರಣಿಯ ೪ನೇ ಏಕದಿನ ಪಂದ್ಯದ ಮೂಲಕ ಇವರು ಅಂತರರಾಷ್ತ್ರೀಯ ಕ್ರಿಕೆಟ್ ಜಗತ್ತಿಗೆ ಪದಾರ್ಪನೆ ಮಾಡಿದರು. ಈ ಪಂದ್ಯದಲ್ಲಿ ಇವರು ೦೩ ವಿಕೆಟ್ ಪಡೆದಿದ್ದರು. ಇದೇ ಪಂದ್ಯದಲ್ಲಿ ವಿರೇಂದ್ರ ಸೆಹವಾಗ್ ರವರು ಗರಿಷ್ಟ ರನ್ ಪಟ್ಟಿಯಲ್ಲಿ ಹೊಸ ದಾಖಲೆ (೨೧೯ ರನ್) ಸೃಷ್ಟಿಸಿದ್ದರು.[೫][೬]

ಟಿ-೨೦ ಕ್ರಿಕೆಟ್[ಬದಲಾಯಿಸಿ]

೦೧ ಫೆಬ್ರವರಿ ೨೦೧೨ರಲ್ಲಿ ಆಸ್ಟ್ರೇಲಿಯ ವಿರುದ್ಧ ನಡೆದ ಸರಣಿಯ ಮೊದಲ ಪಂದ್ಯದ ಮೂಲಕ ಇವರು ಟಿ-೨೦ ಕ್ರಿಕೆಟ್‍ನಲ್ಲಿ ಪದಾರ್ಪನೆ ಮಾಡಿದರು. ಟಿ-೨೦ ಕ್ರಿಕೆಟ್‍ನಲ್ಲಿ ಇವರ ಮೊದಲ ವಿಕೆಟ್ ದೇವಿಡ್ ಹಸ್ಸಿಯವರದ್ದು.[೭]

ಪಂದ್ಯಗಳು[ಬದಲಾಯಿಸಿ]

 • ಪ್ರಥಮ ದರ್ಜೆ : ೨೨ ಪಂದ್ಯಗಳು.[೮][೯]
 • ಏಕದಿನ : ೦೪ ಪಂದ್ಯಗಳು.
 • ಟಿ-೨೦ : ೦೨ ಪಂದ್ಯಗಳು.
 • ಐಪಿಎಲ್ : ೪೪ ಪಂದ್ಯಗಳು.

ವಿಕೆಟ್ ಗಳು[ಬದಲಾಯಿಸಿ]

  1. ಪ್ರಥಮ ದರ್ಜೆ ಪಂದ್ಯಗಳಲ್ಲಿ : ೪೨[೧೦]
  2. ಏಕದಿನ ಪಂದ್ಯಗಳಲ್ಲಿ : ೦೬
  3. ಟಿ-೨೦ ಪಂದ್ಯಗಳಲ್ಲಿ : ೦೩
  4. ಐಪಿಎಲ್ ಪಂದ್ಯಗಳಲ್ಲಿ : '೪೦

ಉಲ್ಲೇಖಗಳು[ಬದಲಾಯಿಸಿ]

 1. http://www.cricbuzz.com/profiles/6304/rahul-sharma#profile
 2. http://www.espncricinfo.com/indian-premier-league-2011/content/story/514066.html
 3. http://www.espncricinfo.com/indian-premier-league-2011/content/story/514001.html
 4. http://archive.indianexpress.com/news/world-record-219-sehwag-runs-past-sachin-hits-highest-in-odi/885419/
 5. http://www.espncricinfo.com/series/12675/scorecard/536932/India-vs-West-Indies-4th-ODI
 6. http://www.cricbuzz.com/live-cricket-scorecard/11072/ind-vs-wi-4th-odi-west-indies-in-india-2011
 7. http://www.espncricinfo.com/series/12641/scorecard/518954/Australia-vs-India-1st-T20I
 8. http://www.espncricinfo.com/ci/content/current/player/272994.html
 9. http://www.wisdenindia.com/player/India/Rahul-Sharma/4311
 10. http://www.cricbuzz.com/profiles/6304/rahul-sharma#profile