ಸದಸ್ಯ:Pranavshivakumar/2

ವಿಕಿಪೀಡಿಯ ಇಂದ
Jump to navigation Jump to search

ಅಜಿಂಕ್ಯ ರಹಾನೆ

ಅಜಿಂಕ್ಯ ಮಧುಕರ್ ರಹಾನೆ, ಓರ್ವ ಭಾರತೀಯ ಕ್ರಿಕೆಟ್ ಆಟಗಾರ. ಭಾರತಟೆಸ್ಟ್ ಕ್ರಿಕೆಟ್ ತಂಡದ ಉಪನಾಯಕ. ಇವರು ಬಲಗೈ ಅರಂಭಿಕ ಆಟಗಾರ. [೧]


ಆರಂಭಿಕ ಜೀವನ[ಬದಲಾಯಿಸಿ]

ರಹಾನೆಯವರು ಜೂನ್ ೦೬, ೧೯೮೮ರಲ್ಲಿ ಅಹ್ಮದ್ ನಗರ ಜಿಲ್ಲೆಯ ಮಧುಕರ್ ಬಾಬು ರಹಾನೆ ಹಾಗು ಸುಜಾತ ರಹಾನೆಯವರಿಗೆ ಜನಿಸಿದರು. ತಮ್ಮ ೧೭ನೇ ವಯಸ್ಸಿನಲ್ಲಿ ರಹಾನೆಯವರು ಭಾರತದ ಮಾಜಿ ಕ್ರಿಕೆಟಿಗನಾದ ಪ್ರವೀಣ್ ಆಮ್ರೆ ಅವರಲ್ಲಿ ಕ್ರಿಕೆಟ್ ತರಬೇತಿಯನ್ನು ಪಡೆಯಲು ಆರಂಭಿಸಿದರು.[೨] ಎಸ್.ವಿ.ಜೋಶಿ ಶಾಲೆಯಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮುಗಿಸಿದ ನಂತರ ಕ್ರಿಕೆಟ್ ವೃತ್ತಿಯನ್ನು ಶುರುಮಾಡಿದರು.


ವೃತ್ತಿ ಜೀವನ[ಬದಲಾಯಿಸಿ]

ಅಂತರರಾಷ್ಟ್ರೀಯ ಕ್ರಿಕೆಟ್[ಬದಲಾಯಿಸಿ]

ಅಗಸ್ಟ್ ೩೧ ೨೦೧೧ರಲ್ಲಿ ಇಂಗ್ಲೆಂಡ್ ವಿರುಧ್ಧ ನಡೆದ ಟಿ-೨೦ ಪಂದ್ಯದ ಮೂಲಕ ಇವರು ಅಂತರರಾಷ್ಟ್ರೀಯ ಕ್ರಿಕೆಟ್ ಜಗತ್ತಿಗೆ ಪದಾರ್ಪನೆ ಮಾಡಿದರು. ವೆಲ್ಲಿಂಗ್ಟನ್ ನಲ್ಲಿ ನೂಜಿಲಂಡ್ ವಿರುದ್ಧ ನಡೆದ ಟೆಸ್ಟ್ ಪಂದ್ಯದಲ್ಲಿ ತಮ್ಮ ಪ್ರಥಮ ಶತಕವನ್ನು ಬಾರಿಸಿದರು. ಮಾರ್ಚ್ ೨೦೧೩ರಲ್ಲಿ ಬಾರ್ಡರ್-ಗವಾಸ್ಕರ್ ಪ್ರಶಸ್ತಿಯ ಸರಣಿಯಲ್ಲಿ ರಹಾನೆಯವರು ಟೆಸ್ಟ್ ಕ್ರಿಕೆಟ್ಗೆ ಪದಾರ್ಪನೆ ಮಾಡಿದರು.

ಐಪಿಎಲ್ ಕ್ರಿಕೆಟ್[ಬದಲಾಯಿಸಿ]

ಮುಂಬೈ ಇಂಡಿಯನ್ಸ್ ತಂಡದಿಂದ ಐಪಿಎಲ್ ಜಗತ್ತಿಗೆ ಪದಾರ್ಪನೆ ಮಾಡಿದ ರಹಾನೆಯವರು ನಂತರ ರಾಜಸ್ಥಾನ್ ರಾಯಲ್ಸ್ ತಂಡಕ್ಕೆ ಸೇರಿ ತಮ್ಮ ವೃತ್ತಿಯಲ್ಲಿ ಯಶಸ್ಸುಗಳಿಸಿದರು.ರಾಜಸ್ಥಾನ್ ರಾಯಲ್ಸ್ ತಂಡದಲ್ಲಿ ಇವರು ಅರಂಭಿಕನಾಗಿ ಆಡುವಾಗ ಇವರಿಗೆ ರಾಹುಲ್ ದ್ರಾವಿಡ್ ರವರ ಮಾರ್ಗದರ್ಶನ ಸಿಕ್ಕಿತು, "ರಾಹುಲ್ ದ್ರಾವಿಡ್ ಅವರು ನನ್ನ ಪ್ರತಿಭೆಯನ್ನು ತೋರಿಸಲು ನನಗೆ ಅವಕಾಶವನ್ನು ನೀಡಿದರು, ಅವರಿಂದ ಸಾಕಷ್ಟನ್ನು ಕಲಿತ್ತಿದ್ದೇನೆ."[೩]


ಸಾಧನೆಗಳು[ಬದಲಾಯಿಸಿ]

ಟೆಸ್ಟ್ ಕ್ರಿಕೆಟ್[ಬದಲಾಯಿಸಿ]

 • ಒಂದೇ ಪಂದ್ಯದ ಎರಡೂ ಇನ್ನಿಂಗ್ಸ್ ಗಳಲ್ಲಿ ಶತಕ ಬಾರಿಸಿದ ಭಾರತದ ೫ನೇ ಕ್ರಿಕೆಟಿಗ .[೪]
 • ಒಂದೇ ಪಂದ್ಯದಲ್ಲಿ ಅತ್ಯಧಿಕ ಕ್ಯಾಚ್ಗಳು (೮).[೫]

ಟಿ-೨೦ ಕ್ರಿಕೆಟ್[ಬದಲಾಯಿಸಿ]

 • ಒಂದೇ ಒವರಿನಲ್ಲಿ ಎಲ್ಲಾ ೬ ಎಸೆತಗಳನ್ನ ಬೌಂಡ್ರಿಗೆ ಬಾರಿಸಿದ ಮೊದಲ ಕ್ರಿಕೆಟಿಗ (ಆರ್.ಸಿ.ಬಿ ವಿರುದ್ಧದ ಪಂದ್ಯದಲ್ಲಿ).
 • ಟಿ-೨೦ ಪಂದ್ಯದಲ್ಲಿ ಗರಿಷ್ಠ ಸಂಖ್ಯೆಯ ಕ್ಯಾಚ್ಗಳಿಗಳನ್ನು ಪಡೆದ ಆಟಗಾರನಾಗಿ ಇತರೆ ಐದು ಆಟಗಾರರ ಜೊತೆ ಜಂಟಿ ದಾಖಲೆಯನ್ನು ಹೊಂದಿದ್ದಾರೆ.

ಶ್ರೇಯಾಂಕ[ಬದಲಾಯಿಸಿ]

 • ಪ್ರಸ್ತುತ ರಹಾನೆಯವರು ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಲಿ ಪ್ರಕಟಿಸುವ ಶ್ರೇಯಾಂಕಗಳಲ್ಲಿ,
  • ಟೆಸ್ಟ್ ಕ್ರಿಕೆಟ್ ಶ್ರೇಯಾಂಕದಲ್ಲಿ ೧೧ನೇ ಸ್ಥಾನವನ್ನು ಹೊಂದಿದ್ದಾರೆ.[೬]
  • ಏಕದಿನ ಕ್ರಿಕೆಟ್ ಶ್ರೇಯಾಂಕದಲ್ಲಿ ೨೩ನೇ ಸ್ಥಾನವನ್ನು ಹೊಂದಿದ್ದಾರೆ.[೭]


ಪಂದ್ಯಗಳು[ಬದಲಾಯಿಸಿ]

 • ಏಕದಿನ : ೭೮ ಪಂದ್ಯಗಳು.[೮]
 • ಟೆಸ್ಟ್ : ೩೭ ಪಂದ್ಯಗಳು.
 • ಟಿ-೨೦ : ೨೦ ಪಂದ್ಯಗಳು.
 • ಐಪಿಎಲ್ : ೧೧೧ ಪಂದ್ಯಗಳು.
 1. ಶತಕಗಳು
  1. ಏಕದಿನ ಪಂದ್ಯಗಳಲ್ಲಿ : ೦೩ ಶತಕಗಳು.
  2. ಟೆಸ್ಟ್ ಪಂದ್ಯಗಳಲ್ಲಿ : ೦೮ ಶತಕಗಳು.
  3. ಟಿ-೨೦ ಪಂದ್ಯಗಳಲ್ಲಿ : ೦೦
  4. ಐಪಿಎಲ್ ಪಂದ್ಯಗಳಲ್ಲಿ : ೦೧ ಶತಕ.
 2. ಅರ್ಧ ಶತಕಗಳು
  1. ಏಕದಿನ ಪಂದ್ಯಗಳಲ್ಲಿ : ೧೯
  2. ಟೆಸ್ಟ್ ಪಂದ್ಯಗಳಲ್ಲಿ : ೧೧
  3. ಟಿ-೨೦ ಪಂದ್ಯಗಳಲ್ಲಿ : ೦೧
  4. ಐಪಿಎಲ್ ಪಂದ್ಯಗಳಲ್ಲಿ : ೨೫


ಪ್ರಶಸ್ತಿಗಳು[ಬದಲಾಯಿಸಿ]

 1. ಸೀಯಟ್ ವರ್ಷದ ಕ್ರಿಕೆಟಿಗ ೨೦೧೪-೧೫[೯]
 2. ಎಂ.ಎ.ಚಿದಂಬರಂ ತ್ರೋಫಿ ೨೦೦೬-೦೭[೧೦]
 3. ಭಾರತೀಯ ಕ್ರಿಕೆಟ್ ಮಂಡಲಿಯು ೨೦೧೬ರಲ್ಲಿ ಅರ್ಜುನ ಪ್ರಶಸ್ತಿಗೆ ರಹಾನೆಯವರ ಹೆಸರನ್ನು ಶಿಫಾರಸು ಮಾಡಿತು.[೧೧]

ಉಲ್ಲೇಖಗಳು[ಬದಲಾಯಿಸಿ]

 1. http://www.cricbuzz.com/profiles/1447/ajinkya-rahane
 2. https://en.wikipedia.org/wiki/Ajinkya_Rahane#cite_note-1
 3. http://www.forbesindia.com/article/2014-celebrity-100/ajinkya-rahanes-steady-road-to-stardom/39207/0
 4. http://timesofindia.indiatimes.com/sports/2016-asia-cup/top-stories/4th-Test-Ajinkya-Rahane-becomes-fifth-Indian-to-score-twin-centuries/articleshow/50062034.cms?
 5. http://www.espncricinfo.com/sri-lanka-v-india-2015/content/story/909495.html
 6. https://www.icc-cricket.com/rankings/mens/player-rankings/test/batting
 7. https://www.icc-cricket.com/rankings/mens/player-rankings/odi/batting
 8. http://www.espncricinfo.com/ci/content/player/277916.html
 9. http://timesofindia.indiatimes.com/sports/india-in-australia/top-stories/Ajinkya-Rahane-Kumar-Sangakkara-conferred-with-CEAT-awards/articleshow/47419825.cms?
 10. http://www.rediff.com/cricket/report/awards/20071216.htm
 11. http://www.abplive.in/sports/virat-kohlis-name-recommended-for-khel-ratna-ajinkya-rahane-for-arjuna-award-334612