ಸದಸ್ಯ:Prakash D rampur/sandbox

ವಿಕಿಪೀಡಿಯ ಇಂದ
Jump to navigation Jump to search

ರಾಯಚೂರು ರಾಯಚೂರು ಜಿಲ್ಲೆಯು ಹಲವು ಐತಿಹಾಸಿಕ ಸ್ಥಳಗಳನ್ನು ಹೊಂದಿದೆ. ಇಲ್ಲಿ ಹಲವು ಕೋಟೆ, ಕೊತ್ತಲೆಗಳು, ಶಾಸನಗಳಿವೆ.ರಾಯಚೂರನ್ನು ೧೩ ನೇ ಶತಮಾನದಲ್ಲಿ ಕಾಕತೀಯರು, ವಿಜಯನಗರ ಸಮ್ರಾಜ್ಯದ ದೊರೆಗಳು, ಸೇರಿದಂತೆ ಹಲವು ರಾಜ ಮನೆತನಗಳು ರಾಯಚೂರು ಜಿಲ್ಲೆಯನ್ನು ಆಳ್ವಿಕೆ ಮಾಡಿವೆ. ಇಲ್ಲಿ ರಾಜ್ಯಕ್ಕೆ ಬೆಳಕು ನೀಡುವ ವಿದ್ಯುತ್ ಶಾಖೊತ್ಪನ್ನ ಕೇಂದ್ರವಿದೆ. ಮತ್ತು ಹಟ್ಟಿ ಚಿನ್ನದ ಗಣಿ ಹಾಗೂ ಏಷ್ಯಾ ಖಂಡದಲ್ಲಿಯೇ ಎರಡನೇ ಅತಿದೊಡ್ಡ ಹತ್ತಿ ಉತ್ಪನ್ನ ಮಾರುಕಟ್ಟೆಯಿದೆ. ಶತಮಾನಗಳ ಇತಿಹಾಸವಿರುವ ಈ ಜಿಲ್ಲೆಯ ತೆಲಂಗಾಣದ ಗಡಿ ಭಾಗದಲ್ಲಿ ಕುರುವಕಲ ಗ್ರಾಮದ ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನವಿದೆ.

ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನ:-
ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ದೇವಸ್ಥಾನವು ರಾಯಚೂರು ಜಿಲ್ಲೆಯಿಂದ ೩೦ ಕೀ.ಮೀ ದೂರದಲ್ಲಿದೆ. ಈ ದೇವಸ್ಥಾನವು ಸುಮಾರು ೨೦೦ ವಷ‍೯ಗಳ ಇತಿಹಾಸವಿದೆ.ಶ್ರೀಪಾದ ಶ್ರೀವಲ್ಲಭ ದತ್ತಾತ್ರೇಯ ಸ್ವಾಮಿಯು ಮೂರು ಅವತಾರಗಳನ್ನು ಹೊಂದಿ ಅವತಾರ ಪುರುಷವೆನಿಸಿಕೊಂಡಿದ್ದಾರೆ.ಈ ಸ್ವಾಮಿಯು ಏಕಾಂತ  ತಪಸ್ಸು ಮಾಡಲು ಗೊಕಣ‍೯, ಶ್ರೀಶೈಲ ಮಲ್ಲಿಕಾಜು೯ನ ದೇವಸ್ಥಾನಕ್ಕೆ ಹೋಗುತ್ತಾರೆ. ಆದರೆ ಅಲ್ಲಿ ಶಾಂತತೆ ಸಿಗುವುದಿಲ್ಲ. ಹೀಗಾಗಿ ಕ್ರುಷ್ಣ ನದಿಯ ಈ ತೀರಕ್ಕೆ ಬಂದು ಸುಮಾರು ೧೩ ವಷ‍೯ಗಳ ಏಕಾಂತ ಧ್ಯಾನದಲ್ಲಿ ನಿರತರಾಗುತ್ತಾರೆ. ಈ ಸ್ವಾಮಿಯು ಮೊದಲು  ದೇವಸ್ಥಾನವೆತ್ತಿದ್ದು ಈ ದೇವಸ್ಥಾನದಲ್ಲಿಯೇ ಎಂದು ಹೆಳುತ್ತಾರೆ ಈ ದೇವಸ್ಥಾನದ ಅಚ೯ಕರು. ಈ ದೇವಸ್ಥಾನವು ೧೩ ನೇ ಶತಮಾನದ ಪ್ರಾಚಿನ ದೇವಸ್ಥಾನ.

ಸಾರಿಗೆ:- ಈ ದೇವಸ್ಥಾನಕ್ಕೆ ದೂರದ ಮಹಾರಾಷ್ಟ್ರ, ಗೋವಾ, ಮುಂಬಯಿ, ಆಂದ್ರಪ್ರದೇಶ, ತೆಲಂಗಾಣ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆಗಳಿಂದ ಈ ದೇವಸ್ಥಾನಕ್ಕೆ ಬರುತ್ತಾರೆ. ಈ ಭಕ್ತಾಧಿಗಳು ರಾಯಚೂರು ಜಿಲ್ಲೆಯಿಂದ ಪ್ರತ್ಯೆಕ ಬಸ್ ವ್ಯವಸ್ಥೆಯು ಇದೆ. ಈ ದೇವಸ್ಥಾನಕ್ಕೆ ಬರಬೇಕಾದರೆ ಮೋದಲು ರಾಯಚೂರು ಜಿಲ್ಲೆಯಿಂದ ಚಂದ್ರಬಂಡಾ ಗ್ರಾಮದ ಮಾಗ‍೯ವಾಗಿ ಮೂಲಕ ಆತ್ಕೂರು ಗ್ರಾಮಕ್ಕೆ ಬರಬೇಕು. ಆತ್ಕೂರು ಗ್ರಾಮದಿಂದ ನದಿಯಲ್ಲಿ ತೆಪ್ಪದ ಮೂಲಕ ಈ ಗ್ರಾಮಕ್ಕೆ ಬರಬೇಕು.

ಪ್ರಸ್ತುತತೆ:- ಈ ದೇವಸ್ಥಾನದಲ್ಲಿ ದತ್ತ ಸಂಪ್ರದಾಯದಂತೆ ಪುಜೆ, ಪುನಸ್ಕಾರಗಳು ನಡೆಯುತ್ತದೆ. ಕುರುವಕಲ ಗ್ರಾಮದಲ್ಲಿ ನೆಲೆಸಿರುವ ಈ ಸ್ವಾಮಿಯು ಎರಡನೇ ಅವತಾರವೆತ್ತಿದ್ದು ಗುಲ್ಬಾಗ೯ ಜಿಲ್ಲೆಯ ಗಣಗಪುರದಲ್ಲಿ. ತೀ ದೇವಸ್ಥಾನಕ್ಕೆ ಬರುವ ಜನರ ಅನುಕೂಲತೆಗಾಗಿ ಇದೀಗಾ ಸೇತುವೆಯ ಕಾಮಗಾರಿಯು ಆರಂಭವಾಗಿದೆ. ಈ ಭಾಗದಲ್ಲಿ ಇಲ್ಲಿನ ಜನರು ಭತ್ತ, ಶೇಂಗಾವನ್ನು ಹೆಚ್ಚಾಗಿ ಬೆಳೆಯುತ್ತಾರೆ. ದೇವಸ್ಥಾನದ ಸುತ್ತ ಮುತ್ತ:- ಈ ದೇವಸ್ಥಾನವು ನದಿಯ ಮಧ್ಯೆ ಭಾಗದಲ್ಲಿದೆ.ದೇಗುಲ ಆಚೆ ತೆಲಾಂಗಣ ರಾಜ್ಯವಿದೆ. ಇಲ್ಲಿನ ಸ್ಥಳವು ಐತಿಹಾಸಿಕ ತಪೋಭೂಮುಯೆಂದು ಪ್ರಸಿದ್ದಿಯಾಗಿದೆ. ಈ ದೇಗುಲದ ಪಕ್ಕದಲ್ಲಿ ಕುವ೯ಕುದಾ೯,ಡಿ.ರಾಂಪೂರು ಎಂಬ ಗ್ರಾಮವಿದೆ.

ದತ್ತಾತ್ರೇಯ