ಸದಸ್ಯ:Prajwalrigvedi/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾಷಾವಿಜ್ಞಾನಾಂಗಗಳು[ಬದಲಾಯಿಸಿ]

ಭಾಷಾವಿಜ್ಞಾನ ವಿಜ್ಞಾನವೆ? ಅಥವಾ ಕಲೆಯೆ? - ಎಂಬ ಪ್ರಶ್ನೆ ಮಾಡುವುದೂ ಸಹಜವೆ. ಭಾಷಾವಿಜ್ಞಾನ ಎಂಬುದು ಅದರ ಹೆಸರೇ ಸೂಚಿಸುವಂತೆ ಶುದ್ಧರೂಪದಲ್ಲಿ ವಿಜ್ಞಾನವೆಂದು ಸ್ಪಷ್ಟವಾಗುತ್ತದೆ. ಆದರೂ ಯಥಾರ್ಥದಲ್ಲಿ ಇದು ಸರಿಯಾಗಲಾರದು. ವಿಶುದ್ಧ ಅಥವಾ ಸಮ್ಯೆಮಕ್ ಅಥವಾ ವಿಶೇಷ ಜ್ಞಾನ ಎಂಬುದಷ್ಟೆ ಇದರ ಅರ್ಥವಾದರೆ, ಆಗ ಭಾಷಾವಿಜ್ಞಾನವೆಂಬುದನ್ನು ವಿಜ್ಞಾನವೆಂದು ಕರೆಯಬಹುದು. ಆದರೆ ವಿಜ್ಞಾನದಲ್ಲಿ ಬೇರೆ ವಿಷಯಗಳೂ ಇವೆ. ಅಲ್ಲಿ ವಿಕಲ್ಪಕ್ಕೆ ಸ್ಥಾನವಿಲ್ಲ. ಅಲ್ಲಿ ನಿಯಮಗಳು ಸರ್ವತ್ರಸಮಾನ ಮತ್ತು ಫಲ ಕೂಡ ಒಂದೇ ರೀತಿ. ಇಲ್ಲಿ ವಿಕಾಸ ಮತ್ತು ವ್ಯತ್ಯಾಸಕ್ಕೆ ಅವಕಾಶವಿದೆ. ಆದರೆ ಇನ್ನೊಂದು ಕಡೆ ಭಾಷಾವಿಜ್ಞಾನ ಕಲೆಯೂ ಅಲ್ಲ. ಏಕೆಂದರೆ ಕಲೆ ವ್ಯಕ್ತಿಯ ಕೃತಿ. ಭಾಷೆ ಸಮಾಜದ ಕೃತಿ. ಕಲೆಯ ಕೆಲಸ ಪ್ರಧಾನವಾಗಿ ಮಾನವನಿಗೆ ಆನಂದವನ್ನು ತರುವುದು. ಭಾಷೆಯ ಕೆಲಸ ಮನರಂಜನೆಯಲ್ಲ. ಗಣಿತ, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರಗಳಲ್ಲಿ ನಿಯಮಗಳು ನಿಶ್ಚಿತ. ಅಲ್ಲಿ ವಿಕಲ್ಪಕ್ಕೆ ಅವಕಾಶವಿಲ್ಲ. ಭಾಷೆಯಲ್ಲಿಯೂ ಹಲವು ಕಡೆ ಹೀಗುಂಟು. ಮತ್ತೆ ಹಲವೆಡೆಗಳಲ್ಲಿ ವಿಕಲ್ಟಕ್ಕೆ ಅವಕಾಶವಿದೆ. ಹೀಗಾಗಿ ಭಾಷಾವಿಜ್ಞಾನವೆಂಬುದು ಸಂಪೂರ್ಣವಾಗಿ ಹಾಗು ಶುದ್ಧವಾಗಿ ವಿಜ್ಞಾನವೂ ಅಲ್ಲ, ಕಲೆಯೂ ಅಲ್ಲ.

  ಇನ್ನು ವ್ಯಾಕರಣ ಮತ್ತು ಭಾಷಾವಿಜ್ಞಾನಗಳಿಗೆ ಇರುವ ಸಂಬಂಧವನ್ನು ಸ್ಥೂಲವಾಗಿ ಇಲ್ಲಿ ನೋಡಬಹುದು. ವ್ಯಾಕರಣ ಎಂಬ ಶಬ್ದದ ಅರ್ಥ ವಿಶ್ಲೇಷಣೆ ಎಂಬುದು. ವಿಶ್ಲೇಷಣೆಯಿಂದ ಅದರ ಸರಿಯಾದ ರೂಪವನ್ನು ಅರಿಯುವುದು ಸಾಧ್ಯ. ಭಾಷೆಯಲ್ಲಿ ಶುದ್ದಾಶುದ್ಧ ಪ್ರಯೋಗದ ಜ್ಞಾನವುಂಟಾಗಲು ವ್ಯಾಕರಣದ ನೆರವು ಬೇಕು. ಭಾಷಾಶಾಸ್ತ್ರಾಭ್ಯಾಸದ ಪ್ರಾರಂಬದಲ್ಲಿ ವ್ಯಾಕರಣಕ್ಕೂ ಭಾಷಾವಿಜ್ಞಾನಕ್ಕೂ ಹೆಚ್ಚು ಅಂತರವಿರಲಿಲ್ಲ. ಇದರಿಂದ ಭಾಷಾವಿಜ್ಞಾನವನ್ನು ತುಲನಾತ್ಮಕ ವ್ಯಾಕರಣವೆಂದೂ ಕರಿಯುತ್ತಾರೆ.ವಾಕ್ಯ

ಇನ್ನು ಭಾಷಾವಿಜ್ಞಾನದ ಅಧ್ಯಯನದ ವಿಭಾಗವನ್ನು ಪರಿಶಿಇಲಿಸಬಹುದು. ಭಾಷೆಯ ವೈಜ್ಞಾನಿಕ ಅಧ್ಯಯನದಲ್ಲಿ ಭಾಷಾಸಂಬಂಧವಾಗಿ, ಸಾಮಾನ್ಯವಾಗಿ, ಎಲ್ಲ ಪ್ರಶ್ನೆಗಳನ್ನೂ ವಿವೇಚಿಸಬೆಕಾಗುತ್ತದೆ. ಅವುಗಳಲ್ಲಿ ಕೆಲವು ಮುಖ್ಯವಾದರೆ ಮತ್ತೆ ಕೆಲವು ಅಮುಖ್ಯವಾಗಿರುತ್ತವೆ. ಆದರೆ ಯಾವುದನ್ನು ಬಿಡುವಂತಿಲ್ಲ. ಈ ಪ್ರಶ್ನೆಗಳನ್ನು ಪ್ರಧಾನ ಮತ್ತು ಗೌಣವೆಂದು ಎರಡು ವರ್ಗವಾಗಿ ವಿಭಾಗಿಸಿಕೊಂಡು ವಿವೇಚಿಸಬೇಕಾಗುತ್ತದೆ. ಇಲ್ಲಿ ಕೆಲವು ಸಹಾಯಕ ವಿಭಾಗಗಳನ್ನಷ್ಟೇ ತುಂಬ ಸ್ಥೂಲವಾಗಿ ವಿವರಿಸಲಾಗಿದೆ.

  • ವಾಕ್ಯವಿಜ್ಞಾನ

ಭಾಷೆಯ ಪ್ರಧಾನಕಾರ್ಯ ವಿಚಾರವಿನಿಮಯ. ಅದು ವಾಕ್ಯಗಳಿಂದ ಆಗುತ್ತದೆ. ಆದುದರಿಂದ ವಾಕ್ಯವೇ ಭಾಷೆಯ ಸ್ವಾಭಾವಿಕವಾದ ಹಾಗೂ ಮಹತ್ವದ ಅಂಗವೆಂದು ಮಾನ್ಯವಾಗಿದೆ. ಭಾಷಾವಿಜ್ಞಾನದಲ್ಲಿ ಈ ವಾಕ್ಯಗಳನ್ನು ವಿವೇಚಿಸುವ ವಿಭಾಗಕ್ಕೆ ವಾಕ್ಯಜ್ಞಾನವೆಂದು ಹೆಸರು. ಇದರಲ್ಲಿ ವರ್ಣಾತ್ಮಕ ವಾಕ್ಯಜ್ಞಾನ, ಐತಿಹಾಸಿಕ ವಾಕ್ಯಜ್ಞಾನ ಹಾಗೂ ತುಲನಾತ್ಮಕ ವಾಕ್ಯಜ್ಞಾನವೆಂದು ಮೂರು ಬಗೆಯಿವೆ. ವಾಕ್ಯರಚನೆಯು ಮಾತನಾಡುವ ಜನರ ಮನೋವಿಜ್ಞಾನವನ್ನು ಅವಲಂಬಿಸಿರುತ್ತದೆ. ಅದುದರಿಂದ ಭಾಷಶವಿಜ್ಞಾನದ ಈ ಶಾಖೆ ತುಂಬ ಕಠಿಣತರ; ಇದನ್ನು ಕುರಿತು ಇನ್ನೂ ವಿಶೇಷವಾದ ಆಧ್ಯಯನ ಹೆಚ್ಚು ಹೆಚ್ಚು ಪ್ರಮಾಣದಲ್ಲಿ ನಡೆಯ ಬೇಕಾಗಿದೆ.

  • ರೂಪವಿಜ್ಞಾನ

ವಾಕ್ಯಗಳ ನಿರ್ಮಾಣ ಪದಗಳಿಂದ ಅಥವಾ ರೂಪಗಳಿಂದ ಸಾಧ್ಯವಾಗುತ್ತದೆ. ಆದುದರಿಂದ ವಾಕ್ಯದ ವಿವೇಚನೆಯ ತುರುವಾಯ ಅದರ ರೂಪದ ವಿಚಾರ ಅವಶ್ಯಕವಾಗಿ ಬರುತ್ತದೆ. ರೂಪದ ವಿಚಾರ ತಿಳಿಸುವ ವಿಭಾಗವೇ ರೂಪವಿಜ್ಞಾನ. ಈ ರೂಪವಿಜ್ಞಾನದಲ್ಲಿ ಅಂತರ್ಗತವಾಗಿರುವ ವ್ಯಾಕರಣರೂಪಗಳ ವಿಳಾಸವನ್ನು ಧಾತು, ಉಪಸರ್ಗ, ಪ್ರತ್ಯಯ ಮೊದಲಾದ ಎಲ್ಲ ಉಪಕರಣಗಳ ಸಹಾಯದಿಂದ ವಿಚಾರ ಮಾಡಬೇಕಾಗುತ್ತದೆ. ಏಕೆಂದರ ಇವುಗಳ ನೆರವಿನಿಂದಲೇ ರೂಪಸಿದ್ಧಿಯಾಗುತ್ತದೆ. ರೂಪವಿಜ್ಞಾನದ ಅಧ್ಯಯನವೂ ಕೂಡ ವರ್ಣನಾತ್ಮಕ, ಐತಿಹಾಸಿಕ ಹಾಗೂ ತುಲನಾತ್ಮಕವೆಂದು ತ್ರಿವಿಧವಾದ ವಿಭಾಗದಲ್ಲಿ ಅಳವಟ್ಟಿದೆ. ಎಂದೂ ಸೂ

  • ಶಬ್ದವಿಜ್ಞಾನ

ರೂಪ ಅಥವಾ ಪದದ ಅಧಾರ ಶಬ್ದ. ಶಬ್ದಗಳನ್ನು ಅದರ ರಚನೆ ಮತ್ತು ಇತಿಹಾಸ ಎಂಬ ಈ ಎರಡೂ ದೃಷ್ಟಿಗಳಿಂದ ವಿಚಾರ ಮಾಡುವರು. ಯಾವುದೇ ಭಾಷೆಯಲ್ಲಾಗಲಿ ಶಬ್ದವನ್ನು ಇದೇ ರೀತಿಯಲ್ಲಿ ವಿವೇಚಿಸಬೇಕು. ಕೋಶನಿರ್ಣಾಮ ಮತ್ತು ವ್ಯುತ್ಪತ್ತುಶಾಸ್ತ್ರ ಕೂಡ ಶಬ್ದವಿಜ್ಞಾನದ ಅಂಗಗಳೇ ಆಗಿವೆ. ಶಬ್ದಗಳ ತುಲನಾತ್ಮಕ ಅಧ್ಯಯನ ಕೂಡ ಮುಖ್ಯವಾಗಿ ವ್ಯುತ್ಪತ್ತಿಯನ್ನು ವಿವರಿಸುವ ಪ್ರಸಂಗದಲ್ಲಿ ಮಾಡಲಾಗುತ್ತದೆ. ಶಬ್ದಸಮೂಹವನ್ನು ಅಧ್ಯಯನ ಮಾಡುವುದರಿಂದ ಅನ್ನು ಹೇಳುವವರ ಸಾಂಸ್ಕ್ರತಿಕ ಇತಿಹಾಸವನ್ನು ತಿಳಿಯಬಹುದು.

  • ಧ್ವನಿವಿಜ್ಞಾನ

ಶಬ್ದದ ಆಧಾರ ಧ್ವನಿ. ಈ ಧ್ವನಿಗಳ ವಿಚಾರವನ್ನು ವಿವೇಚಿಸುವ ವಿಧಾಯವೇ ಧ್ವನಿವಿಜ್ಙಾನ. ಧ್ವನಿವಿಜ್ಞಾನದಲ್ಲಿ ಅಂತರ್ಗತವಾದ ಧ್ವನಿಗಳನ್ನು ಅನೇಕ ದೃಷ್ಟಿಯಿಂದ ವಿವೇಚಿಸಲಾಗಿದೆ. ಪ್ರಪಂಚದ ಯಾವುದೇ ಭಾಷೆಯಲ್ಲಿರುವ ಧ್ವನಿಗಳ ವರ್ಣನೆ ಮತ್ತು ವಿವೇಚನೆ ಧ್ವನಿವಿಜ್ಞಾನದ ವಿಷಯವಾಗಿರುತ್ತದೆ.

ಭಾಷೆ, ಸನ್ನೆ, ಸಂಕೇತ[ಬದಲಾಯಿಸಿ]

ನಮ್ಮ ಅಂತರಂಗದ ಅನ್ನಿಸುವಿಕೆಯನ್ನು, ಮನಸ್ಸಿನ ವಿವಿಧ ಭಾವನೆಗಳನ್ನು ಅಲೋಚನೆಯ ಸಾರವನ್ನು ಇತರರಿಗೆ ತಿಳಿಸಲು, ವಿವರಿಸಿ ಹೆಳಲು ಬಾಯಿಮಾತಿನಿಂದ ಮೊದಲುಗೊಂಡು ಬರವಣಿಗೆ (ಲಿಪಿ), ಕೈಸನ್ನೆ, ಸಂಜ್ಞೆ, ಸಂಕೇತಗಳವರೆಗೂ ಬಳಕೆಯಲ್ಲಿವೆ. ಚಿತ್ರಗಳೂ ಈ ಕಾರ್ಯದಲ್ಲಿ ನೆರವಾಗುತ್ತದೆ. ಮುಗಿನ ಮೇಲೆ ಬೆರಳಿಟ್ಟುಕೊಂಡರೆ ಆಶ್ಚರ್ಯವೂ, ಬಾಯಿಯ ಮೇಲೆ ಬೆರಳಿಟ್ಟು ತೋರಿಸಿದರೆ ಮಾತನಾಡಬಾರದೆಂದು, ಕಣ್ಣನ್ನು ಕೆಂಪಗೂ ಮುಖವನ್ನು ದಪ್ಪಗೂ ಮಾಡಿಕೊಂಡು ಮಕ್ಕಳು ಅಥವಾ ಚಿಕ್ಕವರ ಕಡೆಗೆ ನೋಡಿದರೆ 'ಮಾತನಾಡದೆ ಸುಮ್ಮನಿರಿ' ಎಂದೂ ಸೂಚನೆ, ಅರ್ಥ. ತಲೆಯನ್ನು ಮೇಲಿಂದ ಕೆಳಕ್ಕೆ ಆಡಿಸಿದರೆ ಹೌದೆಂದೂ, ಎಡದಿಂದ ಬಲಕ್ಕೂ ಬಲದಿಂದ ಎಡಕ್ಕೂ ಆಡಿಸಿದರೆ ಬೇಡವೆಂದೂ, ಅಲ್ಲವೆಂದೂ ಭಾವನೆ. ಪಂಪಭಾರತದಲ್ಲಿ ಒಂದು ಕಡೆ ಈ ಸನ್ನೆಯ ಪ್ರಸ್ತಾಪವಿದೆ.

                               ಪ್ರಾಯದಪೆಂಪೆ ಪೆಂಪೆಮಗೆ ಮೀರಿದಂ ತವೆಕೊಂದ ಪೆಂಪು ಕ
                               ಟ್ಟಾಯದ ಪೆಂಪು ಶುಕ್ರನೊಡನೇರುದ ಪೆಂಪಿವು ಪೆಂಪುವೆತ್ತು ನಿಹಾ
                               ಟ್ಟಾಯುಗಳಾಗಿ ನಿನ್ನೋಳಮರ್ದಿರ್ದುವು ನೀಂ ತಲೆವೀಸರ್ದುವರಾ 
                               ಶ್ರೀಯನಿದಾಗದೆನ್ನದೊಳಕೊಲಳ್ ಪರಮೋತ್ಸವದಿಂ ಗುಣಾರ್ಣವಾ ||

ಎಂದು ಹೇಳಿದಂತೆ. ಇಲ್ಲಿ 'ತಲೆವೀಸದೆ' ಅಂದರೆ 'ನನಗೆ ಬೇಡ ಎಮದು ತಲೆ ಅಲ್ಲಾಡಿಸದೆ' ಎಂಬರ್ಥ ಮಾತು ನಮಗೆ ಮುಖ್ಯವಾಗಿದ್ದು ಈ ಪದ್ದತಿ ಹಳೆಯದೆಂದು ಸಾರುತ್ತದೆ. ಪ್ರಾಚೀನ ಗ್ರೀಕರಲ್ಲೂ ಈ ಕ್ರಮ ಬಳಕೆಯಲ್ಲಿತ್ತು.ತಳಿರು ತೋರಣಗಳನ್ನು ಮನೆ ಮನೆಗೆ ಕಟ್ಟಿದರೆ ಹಬ್ಬ ಅಥವಾ ವಿಶೇಷ ಸಮಾರಂಭ- ಮದುವೆ, ಮುಂಜಿ ಇತ್ಯಾದಿ ಎದೆಯೆಂದೂ, ದಾರಿಗಳಲ್ಲಿ ದೊಡ್ಡ ದೊಡ್ಡ ಚಪ್ಪರಗಳನ್ನು ಹಾಕಿ ಶೃಂಗಾರಿಸಿದರೆ ಮಂತ್ರಿ, ರಾಜ್ಯಪಾಲರು ಇತ್ಯಾದಿ ಯಾರೋ ಉನ್ನತ ಅಧಿಕಾರಿ ಬರುವರೆಂದೂ, ಪುರಸಭ, ಛತ್ರ, ಪರಿಷನ್ಮಂದಿರ ಮೊದಲಾದ ಕಡೆಗಳಲ್ಲಿ ಸಾಮಾನ್ಯವಾಗಿ ಸಂಜೆಯ ಹೊತ್ತಿನಲ್ಲಿ ವಾದ್ಯಗೋಷ್ಠಿ ಅಥವಾ ಹಾಡುಗಳ ಧ್ವನಿಮುದ್ರಿಕೆಗಳನ್ನು ಹಾಕಿದರೆ ಯಾವುದೇ ಭಾಷಣ ನಾಟಕ ಮೊದಲಾದ ಕಾರ್ಯಕ್ರಮವಿದೆಯೆಂದೂ, ಇನ್ನೇನು ಸಮಾರಂಭ ಪ್ರಾರಂಭವಾಗಲಿದೆಯೆಂದೂ ನಾಗರೀಕರಿಗೊಂದು ತಿಳುವಳಿಕೆ. ಸರ್ಕಾರಿ ಅಥವಾ ಇತರ ಕಟ್ಟಡಗಳ ಮೇಲೆ ರಾಷ್ಟ್ರಧ್ವಜ ಅರ್ಧಮಟ್ಟದಲ್ಲಿ ಇಳಿಯಬಿಟ್ಟಿರುತ್ತಾರೆ.