ಸದಸ್ಯ:Poornima.Poorvi/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಂದಿ ಬಟ್ಲು[ಬದಲಾಯಿಸಿ]

ಸಂ: ನಂದ್ಯಾವರ್ತ

ಹಿಂ: ದೂದ್‍ಮೊಗ್ರ

ಮ: ಚಾಂದನಿ

ಗು: ಚಾಂದನಿ

ತೆ: ನಂದ್ಯಾವರ್ತಮು

ತ: ನಂದಿಯಾರ್‍ವಟ್ಟಂ

ವರ್ಣನೆ[ಬದಲಾಯಿಸಿ]

ಮನೆಗಳ ಮುಂದೆ,ಉದ್ಯಾವನಗಳಲ್ಲಿ ಮತ್ತು ಹೂದೋಟಗಳಲ್ಲಿ ಅಲಂಕಾರಕ್ಕಗಿ ಬಳೆಸುತ್ತಾರೆ. Åಗಳು ಬಿಳಿ ಹೂವುಗಳು ಅರಳಿದಾಗ ನೋಡಲು ಚಂದ, ಹೂವಿನ ಪರಿಮಳ ಮನಮೋಹಕ, ಎಲೆಗಳು ಹಸಿರು ಮತ್ತು ಮಾವಿನ ಎಲೆಗಳನ್ನು ಹೋಲುತ್ತವೆ. ನರಗಳು ಬಹಳ ಸ್ಪಷ್ಟವಾಗಿ ಕಾಣುತ್ತವೆ. ಎಲೆ ಮುರಿದರೆ ಬಿಳಿ ಬಣ್ಣದ ಹಾಲು ಬರುತ್ತದೆ. ಕವಲುಗಳು ನುಣುಪು, ಜುಲೈ,ಅಕ್ಟೋಬರ್ ತಿಮಗಳಲ್ಲಿ ಗಿಡದ ತುಂಬಾ ಮೊಗ್ಗು ಮತ್ತು ಹೂವುಗಳು ಬಿಡುತ್ತವೆ.

ಸರಳ ಚಿಕಿತ್ಸೆಗಳು[ಬದಲಾಯಿಸಿ]

ಮೂಗು ಬಾಯಿ ರಕ್ತ ಸುರಿಯುವುದು[ಬದಲಾಯಿಸಿ]

ಎರಡು ಟೀ ಚಮಚ ಸ್ವಚ್ಛ ಮಾಡಿದ ಜಿರಿಗೆ, ಎರಡು ಟೀ ಚಮಚ ಸಕ್ಕರೆ,ಎರಡು ನಂದಿ ಬಟ್ಲು ಹೂಗಳು ಎರಡು ಟೀ ಚಮಚ ಆಕಳ ಹಾಲು ಸೇರಿಸಿ ನುಣ್ಣಗೆ ಅರೆಯುವುದು. ಈ ಕಲ್ಕವನ್ನು ತೆಳು ಬಟ್ಟೆಯಿಂದ ಶೋಧಿಸಿ ವೇಳೆಗೆ ಒಂದೇ ಟೀ ಚಮಚ ಸೇವಿಸುವುದು. ಹೀಗೆ ಪ್ರತಿನಿತ್ಯ ಎರಡು ವೇಳೆ 7 ದಿನಗಳು ಕೊಡುವುದು.

ಕಣ್ಣಿನ ಪೊರೆ ಮತ್ತು ಕಣ್ಣಿ ಸಮಸ್ತ ವ್ಯಾಧಿಗಳಿಗೆ[ಬದಲಾಯಿಸಿ]

20 ಗ್ರಾಂ ತಾಜಾ ಅರಳಿದ ನಂದಿಬಟ್ಲು ಹೂವುಗಳು, 20 ಗ್ರಾಂ ಹಸುವಿನ ಬೆಣ್ಣೆ ಮತ್ತು ಎರಡು ಚಿಟಿಕಿ ಪಚ್ಚ ಕರ್ಪೂರವನ್ನು ಸೇರಿಸಿ ನುಣ್ಣಗೆ ಅರೆದು ಭರಣಿಯಲ್ಲಿ ಶೇಖರಿಸುವುದು. ಪ್ರತಿನಿತ್ಯ ನಾಲ್ಕೈದು ಸಾರಿ ಕಣ್ಣುಗಳಿಗೆ ಅಂಜನವಿಡುವುದು.

ಬಂಜೆತನದಲ್ಲಿ[ಬದಲಾಯಿಸಿ]

ಮುಟ್ಟಿನ ಅವಧಿಯಲ್ಲಿ 4 ನೇ ದಿವಸದ ಸ್ನಾನ ಮಾಡಿದ ನಂತರ ನಾಲ್ಕೈದು ತಾಜಾ ನಂದಿ ಬಟ್ಲು ಎಲೆಗಳನ್ನು ತಂದು ತೊಳೆದು ಎರಡು ಟೀ ಚಮಚ ಪಾಲೀಶ್ ಮಾಡದ ಅಕ್ಕಿಯಲ್ಲಿ ನುಣ್ಣಗೆ ಅರೆದು ಕಾಲು ಟೀ ಚಮಚ ತುಪ್ಪ ಮತ್ತು ಒಮದು ಟೀ ಚಮಚ ಶುದ್ದ ಜೇನು ಸೇವಿಸುವುದು. ಹೀಗೆ 3-4 ಮುಟ್ಟಿನಲ್ಲಿ ಚಿಕಿತ್ಸೆ ಮುಂದುವರಿಸುವುದು ಮತ್ತು ದಾನ, ಧರ್ಮ ಮಾಡಿ ಇಷ್ಟಾನುದೇವತೆಗಳನ್ನು ಪ್ರಾರ್ಥಿಸುವುದು. ಇರುಳಲ್ಲಿ ಗಂಡ ಹೆಂಡತಿ ಸುಖವಾಗಿರುವುದು.

ಸರ್ಪದ ವಿಷಕ್ಕೆ[ಬದಲಾಯಿಸಿ]

ಹಾವು ಕಚ್ಚಿ ವಿಷವೇರಿ ಪ್ರಜ್ಞೆ ತಪ್ಪಿದರೆ ನಂದಿ ಬಟ್ಲು ಗಿಡದ ಬೇರನ್ನು ತಂದು ಚೆನ್ನಾಗಿ ತೊಳೆದು ನೀರಿನಲ್ಲಿ ತೇದು ಮೂಗಿನ ಎರಡು ಹೊಳ್ಳೆಗಳಿಗೆ ತೊಟ್ಟು ತೊಟ್ಟಾಗಿ ಬಿಡುವುದು ಮತ್ತು ಇದೇ ಗಂಧವನ್ನು ಸ್ವಲ್ಪ ಸ್ವಲ್ಪವಾಗಿ ನೆಕ್ಕಿಸುವುದು.

ವ್ರಣ,ಕಜ್ಜಿ ಮತ್ತು ಹುಣ್ಣುಗಳಿಗೆ[ಬದಲಾಯಿಸಿ]

ಒಂದು ಹಿಡಿ ನಂದಿ ಬಟ್ಲು ಎಲೆಗಳನ್ನು ತಂದು ಕಲ್ಪತ್ತಿನಲ್ಲಿ ನುಣ್ಣಗೆ ಅರೆದು 5 ಗ್ರಾಂ ಆರತಿ ಕರ್ಪೂರವನ್ನು ಸೇರಿಸಿ ಚೆನ್ನಾಗಿ ಮಿಶ್ರ ಮಾಡಿ ವ್ರಣಗಳಿಗೆ ಲೇಪಿಸುವುದು. ವ್ರಣಗಳ ಮೇಲೆ ನಿರ್ಮಲವಾದ ಬಟ್ಟೆಯನ್ನು ಕಟ್ಟುವುದು.

ಹಲ್ಲು ನೋವಿಗೆ[ಬದಲಾಯಿಸಿ]

ನಂದಿ ಬಟ್ಲು ಗಿಡದ ಬಲಿತ ಬೇರನ್ನು ತಂದು ಜಜ್ಜಿ ಬಾಯಿಯಲ್ಲಿ ಹಾಕಿಕೊಂಡು ಚಪ್ಪರಿಸುವುದು. ಬಾಯಿಯಲ್ಲಿ ಬರುವ ನೀರನ್ನು ಉಗುಳುವುದು.

ಜ್ವರಕ್ಕೆ[ಬದಲಾಯಿಸಿ]

ನಂದಿ ಬಟ್ಲು ಗಿಡದ ಬಲಿತ ಬೇರನ್ನು ತಂದು ಚೆನ್ನಾಗಿ ತೊಳೆದು ಜಜ್ಜಿ ಅಷ್ಠಾಂಶ ಕಷಾಯ ಮಾಡಿ ಸ್ವಲ್ಪ ಕಟುಕರೋಹಿಣಿ ಚೂರ್ಣ ಸೇರಿಸಿ ದಿನಕ್ಕೆ ಎರಡು ವೇಳೆ ಎರಡೆರಡು ಟೀ ಚಮಚ ಸೇವಿಸುವುದು. ಹೀಗೆ ಐದು ದಿವಸ ಚಿಕಿತ್ಸೆ ಮುಂದುವರಿಸುವುದು.

ಉಲ್ಲೇಖ[ಬದಲಾಯಿಸಿ]

ಪುಸ್ತಕದ ಹೆಸರು: ಬಾಬಾ ಬುಡನ್ ಗಿರಿ ಮತ್ತು ಸಿದ್ದರ ಬೆಟ್ಟದ ಅಪೂವ‍ ಗಿಡಮೂಲಿಕೆಗಳು ಹಾಗೂ ಸರಳ ಚಿಕಿತ್ಸೆಗಳು

ಸಂಪಾದಕರು: ವೈದ್ಯ ಎ.ಆರ್.ಎಂ. ಸಾಹೇಬ್

ಪ್ರಕಾಶಕರು: ಮಠಾಧೀಶರು, ಸದ್ಗುರು ದಾದಾ ಹಯಾತ್ ಮೀರ್ ಖಲಂದರ್ ಪೀಠ, ಬಾಬಾಬುಡನ್ ಗಿರಿ, ಚಿಕ್ಕಮಗಳೂರು