ಸದಸ್ಯ:Phebe m/sandbox

ವಿಕಿಪೀಡಿಯ ಇಂದ
Jump to navigation Jump to search


'ಅಮಲನ' ಕಥೆ ಇಂದ "ಶ್ರೀ ರಾಮಾಮನಾ ದರ್ಶನಂ" ಮಹಾ ಕಾವ್ಯದವರೆಗಿನ ಶ್ರೀ ಕುವೆಂಪು ಅವರ ಸಾದನೆ ಅಪುರ್ವವಾದುದ್ದು. ರಾಷ್ರ್ಕಕವಿ ಎನಿಸಿ ಕೀರ್ತಿ ಪಡೆದ ಕವಿಚೇತನ ಮಕ್ಕಳ ಸಾಹಿತ್ಯವನ್ನು ಕಡೆಗಣಿಸಿಲ್ಲ. ಪ್ರೌಢರಿಗೆ ಬೇಕಾದ ಸಣ್ಣಕತೆ ,ನಾಟಕಾ, ಕಾವ್ಯ, ಕಾದಂಬರಿ, ಪ್ರಬಂಧ, ವಿಮರ್ಶೆ ಮುಂತಾದ ಕೃತಿಗಳಂತೆ ಕವಿ ಮನಸ್ಸು ಮಕ್ಕಳ ಸಾಹಿತ್ಯವನ್ನು ರಚಿಸುವಲ್ಲಿ ಸಂತೋಷಪಟ್ಟಿದೆ.ಮಕ್ಕಳ ಸಾಹಿತ್ಯ ರಚನೆ ಒಂದು ರೀತಿಯಲ್ಲಿ ಕ್ಲಿಷ್ಟವಾದದ್ದೇ.ಅದಕ್ಕೆ ವಿ‍‍ಶೇಷ ಶಕ್ತಿ ಬೇಕಾಗುತ್ತದೆ.ಮಕ್ಕಳ ಮನಶಾಸ್ತ್ರದ ಅರಿವಿರ ಬೇಕಾಗುತ್ತದೆ.ಮಕ್ಕಳಿಗೆಂದು ಬರೆದಾಗ ಸಂವಹನೆ ಕ್ರಮವೇ ಬೇರೆಯಾಗ ಬೇಕಾಗುತ್ತದೆ.ಇವೆಲ್ಲ ಅಂಶಗಳನ್ನು ಕುವೆಂಪು ಒಳಗೊಂಡಿದ್ದರು. ಕುವೆಂಪುರವರು ಮಕ್ಕಳ ಸಾಹಿತ್ಯಕ್ಕೆ ಸಂಬಂದಧಿಸಿದಂತೆ ಅಮಲನ ಕಥೆ-ನ್ನ್ನನ ಮನೆ, ಮೇಘಫುರ, ಹಾಳೂರು,ಬೊಮ್ಮನ ಹಳ್ಳಿ , ಕಿಂದರಿ ಜೋಗಿ, ನರಿಗಳಿಗೇಕೆ ಕೋಡಿಲ್ಲ ,ನ್ನನ ಗೋಪಾಲ ಹೀಗೆ ಒಟ್ಟು ಒಂಬತ್ತು ಕೃತಿಗಳನ್ನು ರಚಿಸಿದ್ದಾರೆ. ಮೋಡಣ್ಣನ ತಮ್ಮ ಕುವೆಂಪು ಬರೆದ ಮೊದಲ ನಾಟಕ (೧೯೨೬) ಹೀಗಾಗಿ ಇದಕೊಂದು ಚಾರಿತ್ರಿಕ ಮಹತ್ವವಿದೆ.ಇದೊಂದು ಹದಿನಾರು ಪುಟಗಳ ಚಿಕ್ಕನಾಟಕ. ನಾಟಕದ ಪಾತ್ರಗಳು:ಹುಡುಗ,ತಾಯಿ, ಮೋಡಣ್ಣ ,ಗಿರಿಯಣ್ಣ ,ಕಾಡು.ನಾಟಕದ ಮಹತ್ವ ಮಾನವ-ಪ್ರಕೃತಿಯ ಸಾವಯವ ಸಂಬಂಧ ಮತ್ತು ತಾಯಿ ಮಕ್ಕಳ ಸಂಬಂಧದಲ್ಲಿ ಚಿಕ್ಕ ಹುಡುಗನೊಬ್ಬ ಮನೆಯಿಂದ ಹೊರಬಂದು ವನದೆಡೆ ಹೊರಟು ಸುತ್ತಲೂ ನೋಡುತ್ತಾ ನೀಲಿ ಗಗನದ ಕಡೆಗೆ ನೋಡಿ ಮಂದನ್ಮೆತನಾಗಿ ಮೋಡದ ಕೂಡ ಆಟವಾಡಲು ಬಯಸುತ್ತಾನೆ.ಮೋಡ ಹುಡುಗನಿಗೆ ನೀ ಬರಬೇಡಣ್ಣ ಬಂದರೆ ಅವ್ವ ಬೈವಳು ಎಂಬ ಕಾರಣದಿಂದ ನಿರಾಕರಿಸುತ್ತಾನೆ.ಹುಡುಗ ಮೋಡದ ಜೋತೆ ತನ್ನನ್ನು ಕರೆದೊಯ್ಯುವಂತೆ 'ಗಿರಿ' ಮತ್ತು 'ಕಾಡು'ಗೆ ಶಿಫಾರಿಸು ಮಾಡಲು ಹೇಳುತ್ತಾನೆ.ಗಿರಿಯಣ್ಣ ಹುಡುಗನ ಕಡೆ ಶಿಫಾರಿಸು ಮಾಡುವುದರ ಬದಲು ಹುಡುಗನನ್ನು ಕುರಿತು ನಿಂದನೆ ಮಾಡುತ್ತದೆ.ಕೊನೆಗೆ ಮೋಡ ಹುಡುಗನಿಗೆ ಕೆಲವು ಹಿತವಚನಗಳನ್ನು ನೀಡಿ ಮತ್ತೋಮ್ಮೆ ಕರೆದೊಯ್ಯುತ್ತೇನೆ ಎಂದು ಹೇಳಿ ಹೊರಟು ಹೋಗುತ್ತಾನೆ.ಅಷ್ಟರಲ್ಲಿ ಹುಡುಗನ ತಾಯಿ ಮಗನನ್ನು ಕೂಗಿ ಮನೆಗೆ ಕರೆದೊಯ್ಯುತ್ತಾಳೆ.ಈ ನಾಟಕವನ್ನು ಓದಿದಾಗ ಮುಖ್ಯವೆನಿಸಿದ್ದು 'ಮೋಡಣ್ಣನ ತಮ್ಮ' ಒಂದು ಬಗೆಯ ಫ್ಯಾಂಟಸಿಯ ಮಟ್ಟದಲ್ಲಿ ಕೆಲಸಮಾಡುತ್ತದೆ. ಇಲ್ಲಿ ವಾಸ್ತವತೆಗಿಂತ ಸಂಭಾವನೀಯತೆ ಹೆಚ್ಚು ಮುಖ್ಯ್.ಮೋಡಣ್ಣ ಹುಡುಗನನ್ನು ಕುರಿತು ಹೀಳುವ ಮಾತು,ತಾಯಿ-ಮಕ್ಕಳ ಸಂಬಂಧವನ್ನು ಗುರುತಿಸ ಬಹುದು. ಹುಡುಗ: ಓ ಮೋಡಣ್ಣ ,ಓ ಮೋಡಣ್ಣ ,

     ನಾನು ಬರುವೆನೊ ಕೈ ನೀಡಣ್ಣಾ!

ಮೋಡ: ಬರಬೇಡಣ್ಣಾ! ಬರಬೇಡಣ್ಣಾ!

     ಆವ್ವನು ಬೈವಳು ನೀ ನೋಡಣ್ಣಾ!
     ಇಲ್ಲಿಗೆ ಬಂದರೆ ಹಾಲನು ಕೊಡುವರು,
     ಮೈಯನು ತೊಳೆವರು ನಿನಗಾರಣ್ಣಾ?

ವಾರ್ಗ:ಕುವೆಂಪುರವರು ೧೯೨೬ ಬರೆದಿರುವ

     ಹೆತ್ತವರಿಲ್ಲದೆ ಆಗದು,ಅಣ್ಣಾ.

'ಗಿರಿಯ' ಹುಡುಗನನ್ನು ಕರೆದೊಯ್ಯುಲು ಶಿಫಾರಿಸು ಮಾಡುತ್ತದೆ. ಶರದಿಯ ನೀರನ್ನೆ ಹೊರುವ ನಿನಗೆ ಹುದುಗ ಯಾವ ಭಾರ? ಗುಡುಗ-ಮಿಂಚನು ಆಳುವ ನೀನು ,ಹುಡುಗನ ಸಂತವಿಡಲಾರೆಯ? ರೈತರು ನಿಂಧನೆಯನ್ನು ಸಹಿಸುವ ನೆನಗೆ ತಾಯಿಯ ಶಾಪ ಸಹಿಸಲಾರೆಯ ಎಂಬ ಮಾತಿಗೆ ಮೋಡಣ್ಣಾಗಿರಿಗೆ ಕೊಡುವ ಪ್ರತ್ಯುತ್ತರ ಗಮನಿಸಿ

    ಎಲೆ ಗಿರಿಯಣ್ಣ ,ನಿನಗೇನಣ್ಣಾ?
    ಕುಳಿತುಪದೇಶವ ಮಾಡುವೆಯಣ್ಣ!
    ಹತ್ತು ಕಡಲುಗಳ ಹೊತ್ತರ ನಾನು 
    ಎತ್ತೆನು ಬಾಲಕ ನೋರ್ವನ ಕೇಳು
    ಸಿಡಿಲು-ಮಿಂಚುಗಳನಾಳಲು ಒಲ್ಲೆ,
    ಹುಡುಗರ ನಾಳುವುದಾದರೆ ಒಲ್ಲೆ!
    ರೈತರ ಗುಂಪೇ ಬೈದರು ಸೈರಿಪೆ
    ತಾಯಿಯ ಶಾಪವ ಸೈರಿಸೆ ನಾನು.

ಮಕ್ಕಳ ಲಾಲನೆ ಪಾಲನೆಯಲ್ಲಿ ತಾಯಿಯ ಮಹತ್ವವನ್ನು ಗುರುತಿಸುತ್ತಾ, ಪುರುಷ ಸಮಾಜದಲ್ಲಿ ಹೆಣ್ಣು ನಿರ್ವಹಿಸುವ ಜವಾಬ್ದಾರಿಯ ಕಾರ್ಯವನ್ನು ಕುವೆಂಪು ತೀರ ಸರಳವಾದ ಭಾಷೆಯಲ್ಲಿ ಹೇಳಿದ್ದಾರೆ.ಇಲ್ಲಿ ಒಬ್ಬ ಬಾಲಕನಿಗೆ ಇಂಥ ಎಲ್ಲ ಬೌದ್ದಿಕ ಕಲ್ಪನೆಗಳು ಬಂದಿರುವುದನ್ನು ಗಮನಿಸಬೇಕು.ಸ್ವತಂತ್ರವಾಗಿ ಬೆಳೆಯಲು ಬಿಟ್ಟರೆ ಮಕ್ಕಳು ಎಂಥ ಬುದ್ದಿವಂತರಿಗೇನು ಕಡಿಮೆ ಅಲ್ಲ.ಹುಡುಗ 'ಗಿರಿಯ' ಜೊತೆಗೆ 'ಕಾಡು'ಗೆ ಮೋಡಣ್ಣಾನಿಗೆ ಶಿಫಾರಿಸು ಮಾಡಲು ಪ್ರಯತ್ನ ಮಾಡುತ್ತಾನೆ.ಕಾಡು ಹುಡುಗನಿಗೆ ಹೇಳುವ ಮಾತು ಗಮನಿಸ ಬಹುದು.

   "ಬಿಡೊ ಬಿಡೊ ನಿನ್ನೀ ನುಣ್ಣನೆ ನುಡಿಗಳ
    ಕಡಿ ಕಡಿ ಏನ್ನುವೆ ತಂದೆಗೆ ಬುಡಗ!
   ಬೆಂಕಿಯ ಬುಡಗಳಿಗಿದಡಿಸುವನು,
   ಧಗ ಧಗ ಉರಿಸುನು!
   ಅಂಕೆಯ ಇಲ್ಲದ ಕಡಿಸುವನು,
   ಸೊಬಗನೆ ಕಡಿಸುವನು!!

ಮನುಷ್ಯನು ತನ್ನ ಸ್ವಾರ್ಥಕ್ಕಾಗಿ ಪ್ರಕೃತಿಯ ರೂಪವನ್ನೆ ಕಡಿಸುತ್ತಿರುವುದರ ಕಡೆಗೆ ಗಮನ ಸೆಳೆಯುವ ಸಾಲುಗಳು ಇವು.ಕುವೆಂಪು ಪ್ರಕೃತಿಯ ಆರಾಧಕರು, ಅದರ ಸೊಬಗಿನಲ್ಲಿ ದ್ವೆವತ್ವವನ್ನು ಕಂಡವರು,ಮಾನವನ ದ್ವೆವ ಆರಾಧನೆಯಲ್ಲಿ ಯಾರ ಸಹಾಯವಿಲ್ಲದ ನೇರವಾದ ಮುಕ್ತತೆಯನ್ನು ತೋರಿಸಿ ಕೊಟ್ಟವರು.ಮಾನವನ ದುರಾಶೆಯ ಫಲವಾಗಿ ಕಾಡೆಲ್ಲಾ ನಾಶಮಾಡುತ್ತಿದ್ದಾರೆ.ಕಾಡು-ನಾಡಾಗುತ್ತಿರುವ ಸಂದರ್ಬವು ಕೂಡ ಸೃಜನಶೀಲ ಮನಸ್ಸು ಸುಮಾರು ದಶಕಗಳ ಹಿಂದೆಯೆ ಕಂಡು ಕೊಂಡ ಸಂಗತಿ.ಮರಗಳನ್ನು ಕಡಿವರೆ ಹೊರೆತು ನೆಡುವರನೊಬ್ಬರ ಕಾಣೆ ಎಂಬ 'ಕಾಡು' ಹೇಳುವ ಮಾತು ವಿಷಾದದಿಂದ ಕೂಡಿದ ಮಾತು.ಅತೀನಾಗರೀಕತೆಯ ತುದಿಯಲ್ಲಿರುವ ಮಾನವ ನಿಸರ್ಗದ ಕೆಲವು ಸಾವಯವ ಪ್ರಕ್ರಿಯೆ ಸಂಬಂಡಧವನ್ನು ತಿಳಿದೊ ತಿಳಿಯದೆಯೊ ಮಾಡುತ್ತಿರುವ ವ್ಯವಹಾರದಲ್ಲಿ ನಿಸರ್ಗದ ಪ್ರಕ್ರಿಯೆಗೆ ದಕ್ಕ ಉಂಟಾಗಿರುವುದನ್ನು ನಾವು ಪ್ರಸ್ತುತ ಕಾಲದಲ್ಲಿ ಕಾಣುತಿರುವ ನಿಜವಾದ ಸಂಗತಿಯಾಗಿದೆ. ಕಾಡು::"ಎಲೆ ಮೋಡಣ್ಣಾ ;ಎಲೆ ಮೋಡಣ್ಣಾ

    ಸಾಯುತಲಿರುವೆನೊ ನೀ ನೋಡಣ್ಣಾ
    ನಾನಿರಲಲ್ಲಿಗೆ ಬಹೆ ಮೋಡಣ್ಣಾ,ನಾನಿಳಿಯಲು
    ನೀ ಓಡುವಿಯಣ್ಣಾ! ಗೆಳೆತನವೆಮ್ಮದ ಬಿಡಿಸುವರಣ್ಣಾ
    ಮನುಜರು ಹೋದೆಡೆಯಲ್ಲಾ ಹಾಳು
    ನೀ ನಿವನೊಯ್ದಿರೆ ತಪ್ಪದೊ ಗೋಳು.

ಸಕಲ ಜೀವಿಗೂ ಆಶ್ರಯವಾದ 'ಕಾಡು' ಇಂದು ವಿನಾಶದ ಅಂಚಿನಲ್ಲಿದ್ದು ಕಾಡಿಲ್ಲದೆ ಮಳೆ ಇಲ್ಲ, ನೀರಿಲ್ಲದೆ ಸಕಲ ಜೀವಿಗೆ ಉಳಿವಿಲ್ಲ.ಕಾಡು-ಮೋಡದ ಗೆಳೆತನಕ್ಕೆ ಚ್ಯುತಿ ಉಂಟಾಗಿದೆ.ಆದರಿಂದ ಮಾನವನಿಂದ ದಮನಕೆ ಒಳಗಾದ ಕಾಡು ಹುಡುಗನಿಗೆ ಯಾವುದೇ ಶಿಫಾರಸು ಮಾಡದೆ ತಿರಸ್ಕರಿಸುತ್ತದೆ.ಹುಡುಗ ಮೋಡಣ್ಣನಲ್ಲಿ ಮತ್ತೊಮ್ಮೆ ಅಂಗಲಾಚಿ ಬೇಡಿಕೊಳ್ಳುತ್ತಾನೆ.ಆಗ ಮೋಡಣ್ಣನ್ನು ಕರೆದೊಯ್ಯುವ ಬದಲು ಹುಡುಗನಿಗೆ ಕೆಲವು ಉಪದೇಶದ ಮಾತುಗಳನ್ನಾಡಿ ಸುಮ್ಮನಿರುಸುತ್ತಾನೆ.ಕೊನೆಗೆ ಹುಡುಗನ ತಾಯಿಯ ಆಗಮನದಿಂದ ಹುಡುಗ 'ಕಿಟ್ಟು ಮನೆಗೆ ತೆರೆಳುತ್ತಾನೆ.

ಉಲ್ಲೇಖ : ಕುವೆಂಪುರವರು ೧೯೨೬ರಲ್ಲಿ ಬರೆದಿರುವ "ಮೋಡಣ್ಣನ ತಮ್ಮ" ನಾಟಕ ಫುಸ್ತಕ