ಸದಸ್ಯ:Pavanssp21/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಶೃಂಗೇರಿ
Sringeri
ತಾಲ್ಲೂಕು
ಶೃಂಗೇರಿಯ ಶ್ರೀ ವಿದ್ಯಾಶಂಕರ ದೇವಾಲಯ
ಶೃಂಗೇರಿಯ ಶ್ರೀ ವಿದ್ಯಾಶಂಕರ ದೇವಾಲಯ
ದೇಶ ಭಾರತ
ರಾಜ್ಯ ಕರ್ನಾಟಕ
ಜಿಲ್ಲೆಚಿಕ್ಕಮಗಳೂರು
ಸರ್ಕಾರ
 • ಶಾಸಕಡಿ. ಎನ್. ಜೀವರಾಜ್
Elevation
೬೭೨ m (೨,೨೦೫ ft)
Population
 (2001)
 • Total೪,೨೫೩
ಭಾಷೆ
 • ಅಧಿಕೃತಕನ್ನಡ
 • ಪ್ರಾದೇಶಿಕಕನ್ನಡ
ಸಮಯ ವಲಯಯುಟಿಸಿ+5:30 (IST)
ಪಿನ್
577139
ದೂರವಾಣಿ ಕೋಡ್08265
ವಾಹನ ನೋಂದಣಿKA-18
ಶಾರದಾಂಬ ದೇವಸ್ಥಾನ
ಶಿಷ್ಯಂದಿರ ಜೊತೆ ಶ್ರೀ ಆದಿ ಶಂಕರಾಚಾರ್ಯರು, ರಾಜ ರವಿವರ್ಮರಿಂದ ೧೯೦೪
ತುಂಗಾ ನದಿಯಲ್ಲಿನ  ಮೀನುಗಳು 
ಶೃಂಗೇರಿಯ ಶ್ರೀ ಶಾರದಾಂಬೆ

ಶೃಂಗೇರಿಯು ,ಕರ್ನಾಟಕ ರಾಜ್ಯದ ಚಿಕ್ಕಮಗಳೂರು ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲುಕು.https://www.karnataka.com/sringeri/about-sringeri/ ೮ ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಸ್ಥಾಪಿಸಿದರು. ಶೃಂಗೇರಿಯು ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು.

ಶೃಂಗೇರಿ
ವಿದ್ಯಾಶಂಕರ ದೇವಸ್ಠಾನ
ಶಂಕರಾಚಾರ್ಯರು
ಶೃಂಗೇರಿ ಶಾರದಾಪೀಠ


                  ಶೃಂಗೇರಿ
      ಶೃಂಗೇರಿಯು ಕರ್ನಾಟಕ ರಾಜ್ಯದ ಚಿಕ್ಕಮಗಳೂರು
ಜಿಲ್ಲೆಯ ಪಶ್ಚಿಮ ಘಟ್ಟಗಳ ಮಡಿಲಿನಲ್ಲಿರುವ ಒಂದು ತಾಲೂಕು.ಶೃಂಗೇರಿ ನಗರದ ಭಾಷೆ ಕನ್ನಡ ಆಗಿದ್ದು, ೮ನೇ ಶತಮಾನದಲ್ಲಿ ಅದ್ವೈತ ವೇದಾಂತದ ಪ್ರತಿಪಾದಕರಾದ ಶಂಕರಾಚಾರ್ಯರು ಸ್ಥಾಪಿಸಿದ ನಾಲ್ಕು ಪ್ರಮುಖ ಮಠಗಳಲ್ಲಿ ಶೃಂಗೇರಿಯು ಪ್ರಪ್ರಥಮವಾದ್ದು. ಮತ್ತಿತರೆ ಮಠಗಳನ್ನು ಅವರು ಬದರಿ, ಪುರಿ ಮತ್ತು ದ್ವಾರಕೆಯಲ್ಲಿ ಸ್ಥಾಪಿಸಿದರು. ಶೃಂಗೇರಿಯು ತುಂಗಾ ನದಿ ತಟದಲ್ಲಿರುವ ಚಿಕ್ಕ ಊರು.
   ಶೃಂಗೇರಿ ನಗರದ ಪಿನ್ ಕೋಡ್ - ೫೭೭೧೩೯ ಮತ್ತು ದೂರವಾಣಿ ಕೋಡ್ - ೦೮೨೬೫
   ಶೃಂಗೇರಿಯ ಈಗಿನ ಶಾಸಕನ ಹೆಸರು ಬಿಜೆಪಿಯ ಡಿ.ಎನ್.ಜೀವರಾಜ್ ಅವರ ವಯಸ್ಸು ೫೦.
ಇತಿವೃತ್ತ:- [೧]
    * ಶೃಂಗೇರಿ ಎಂಬ ಹೆಸರು ಋಷ್ಯಶೃಂಗಗಿರಿ ಎಂಬ ಹೆಸರಿನಿಂದ ಬಂದಿದೆ-ಇದು ಸಮೀಪದಲ್ಲೇ ಇರುವ ಒಂದು ಬೆಟ್ಟದ ಹೆಸರು. ಪ್ರತೀತಿಗನುಸಾರವಾಗಿ ಈ ಬೆಟ್ಟದಲ್ಲೇ ಋಷಿ ವಿಭಾಂಡಕ ಮತ್ತು ಅವನ ಮಗ ಋಷ್ಯಶೃಂಗ ಇದ್ದದ್ದು. ಋಷ್ಯಶೃಂಗನ ಪ್ರಸ್ತಾಪ ರಾಮಾಯಣದ ಬಾಲಕಾಂಡದಲ್ಲಿ ಬರುತ್ತದೆ. ವಸಿಷ್ಠ ತಿಳಿಸುವ ಉಪಕಥೆಗಳಲ್ಲಿ ಒಂದರಲ್ಲಿ ಋಷ್ಯಶೃಂಗ ರೋಮಪಾದ ರಾಜ್ಯದಲ್ಲಿ ಮಳೆ ತರಿಸಿದ ಕಥೆ ಇದೆ.
    * ಶೃಂಗೇರಿಯಲ್ಲಿರುವ ತುಂಬಾ ದೇವಸ್ಥಾನಗಳಲ್ಲಿ ವಿದ್ಯಾಶಂಕರ ದೇವಸ್ಥಾನವು ಒಂದಾಗಿದೆ. ಈ ದೇವಸ್ಥಾನವು ೧೪ನೇ ಶತಮಾನದ ವಿಜಯನಗರದ ಸಂಸ್ಥಾಪಕರಾದ ಹಕ್ಕ-ಬುಕ್ಕರ ಗುರು ಮಹರ್ಷಿ ವಿದ್ಯಾರಣ್ಯರು ಕಟ್ಟಿಸಿದರು. ಈ ದೇವಾಲಯದ ಶಾಸನಗಳಲ್ಲಿ ನಂತರದ ಅನೇಕ ವಿಜಯನಗರದ ಅರಸರು ಈ ದೇವಾಲಯಕ್ಕೆ ಕೊಟ್ಟ ಕಾಣಿಕೆಗಳ ದಾಖಲೆಗಳಿವೆ. ವಿಜಯನಗರದ ಕಾಲದಲ್ಲಿ ಕಟ್ಟಿಸಿದ್ದಾದರು ಈ ದೇವಾಲಯ ಇನ್ನೂ ಹಿಂದಿನ ಹೊಯ್ಸಳ ದೇವಾಲಯದ ಸ್ಥಾನದಲ್ಲಿ ಕಟ್ಟಿದ್ದೆಂದು ನಂಬಲಾಗಿದೆ.
    * ವಿಜಯನಗರ ಕಾಲದ ಶಿಲ್ಪಕಲೆ ಮತ್ತು ಹೊಯ್ಸಳ ಶಿಲ್ಪಕಲೆ-ಎರಡರ ಸಮಾಗಮವನ್ನು ಈ ದೇವಸ್ಥಾನದಲ್ಲಿ ಕಾಣಬಹುದು. ವಿದ್ಯಾಶಂಕರ ದೇವಾಲಯದಲ್ಲಿ ಮೇಷಾದಿ ರಾಶಿ ಸೂಚಕ ಕಂಬಗಳಿವೆ. ಈ ರಾಶಿ ಕಂಬಗಳ ವೈಶಿಷ್ಟ್ಯವೆಂದರೆ ಸೂರ್ಯ ಯಾವ ರಾಶಿಯಲ್ಲಿ ಇರುತ್ತಾನೋ ಆ ರಾಶಿ ಸೂಚಕ ಕಂಬದ ಮೇಲೆ ಪ್ರಥಮ ಉಷಾ ಕಿರಣಗಳು ಬೀಳುತ್ತವೆ
    * ಶೃಂಗೇರಿಯ ಇತಿಹಾಸಕ್ಕೆ ನೇರವಾಗಿ ಸಂಬಂಧಿಸಿದ ಎರಡು ಪ್ರಮುಖ ದೇವಾಲಯಗಳಿವೆ. ಮೊದಲನೆಯದು, ಋಷ್ಯಶೃಂಗರ ತಂದೆಯವರಾದ ವಿಭಾಂಡಕ ಮಹರ್ಷಿಗಳು ತಾವು ಪೂಜಿಸುತ್ತಿದ್ದ ಶಿವಲಿಂಗದಲ್ಲಿ ಐಕ್ಯರಾದರೆಂಬ ಪ್ರತೀತಿ ಇದೆ. ಅದು ಶೃಂಗೇರಿಪಟ್ಟಣದ ಹತ್ತಿರದ ಒಂದು ಗುಡ್ಡದ ಮೇಲಿದೆ. ಇದಕ್ಕೆ ಮಲಹಾನಿಕರೇಶ್ವರ ಎಂಬ ಹೆಸರಿದ್ದು, ಈ ಸ್ಥಳದಲ್ಲಿ ಒಂದು ದೇವಾಲಯವನ್ನು ಕಟ್ಟಲಾಗಿದೆ. ಎರಡನೆಯದು, ಶೃಂಗೇರಿಯಿಂದ ೧೦ ಕಿ.ಮೀ. ದೂರದಲ್ಲಿ ಕಿಗ್ಗ ಅಥವಾ ಋಶ್ಯಶೃಂಗಪುರವೆಂಬ ಊರಿದೆ. ಇಲ್ಲಿ ಋಷ್ಯಶೃಂಗರ ಆತ್ಮಜ್ಯೋತಿ, ತಾವು ನಿತ್ಯವೂ ಆರಾಧಿಸುತ್ತಿದ್ದ ಶಿವಲಿಂಗದೊಳಗೆ ಐಕ್ಯವಾಯಿತೆಂಬ ಪ್ರತೀತಿ ಇದೆ. ಈ ದೇವಾಲಯಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ.
    * ಶೃಂಗೇರಿ ತಾಲೂಕು ಕೊಪ್ಪ, ನರಸಿಂಹರಾಜಪುರನ್ನೊಳಗೊಂಡ ಶೃಂಗೇರಿ ವಿಧಾನಸಭಾ ಕ್ಷೇತ್ರಕ್ಕೆ ಸೇರಿದೆ.
    * ಶೃಂಗೇರಿಯು ಜಿಲ್ಲೆಯ ಮುಖ್ಯ ಕೇಂದ್ರವಾಗಿದ್ದು, ಚಿಕ್ಕಮಗಳೂರಿನಿಂದ ೮೯ಕಿ.ಮೀ.ಗಳ ದೂರದಲ್ಲಿದೆ. ಬೀರೂರು ಮತ್ತು ಶಿವಮೊಗ್ಗದ ರೈಲ್ವೆ ಸ್ಥಾನಕದಿಂದ ಶೃಂಗೇರಿ ಸುಮಾರು ೯೬ ಕಿ.ಮೀ. ದೂರದಲ್ಲಿದೆ. ರಸ್ತೆಯಲ್ಲಿ ಪ್ರಯಾಣ ಮಾಡಿದರೆ, ಮಂಗಳೂರು ಇಲ್ಲಿಗೆ ೧೦೭ ಕಿ.ಮೀ. ದೂರದಲ್ಲಿದೆ.೩೨೦ ಕಿ.ಮೀ. ದೂರದ ಬೆಂಗಳೂರಿಗೆ ಹಗಲು-ರಾತ್ರಿಗಳ ಬಸ್ ಸೌಲಭ್ಯವಿದ್ದು, ಕಾಡು, ಕಣಿವೆ, ಗಿರಿಗಳ ಮಧ್ಯೆ ನಿಸರ್ಗದ ರುದ್ರರಮಣೀಯತೆಯನ್ನು, ಪ್ರಯಾಣಿಸುವಾಗ ನೋಡಿ ಅನುಭವಿಸಬಹುದಾಗಿದೆ.
    * ಇಲ್ಲಿನ ಬಹುಪಾಲು ಜನ ಜೀವನಕ್ಕೆ ಕೃಷಿಯನ್ನು ಅವಲಂಬಿಸಿದ್ದಾರೆ. ಅಡಿಕೆ ಹಾಗು ಭತ್ತ ಇಲ್ಲಿನ ಮುಖ್ಯ ಬೆಳೆಗಳಾಗಿವೆ. ಕಾಫಿ , ಬಾಳೆ ,ವೆನಿಲ್ಲಾ, ವೀಳ್ಯದೆಲೆ, ಕರಿಮೆಣಸು ಮತ್ತು ಏಲಕ್ಕಿಯನ್ನು ಅಡಿಕೆಯೊಂದಿಗೆ ಮಿಶ್ರಬೆಳೆಗಳಾಗಿ ಬೆಳೆಯಲಾಗುತ್ತದೆ.
ಪ್ರೇಕ್ಷಣೀಯ ಸ್ಥಳಗಳು:-[೨]
     ಶೃಂಗೇರಿ ಪಟ್ಟಣದಲ್ಲಿ ಅನೇಕ ದೇವಾಲಯಗಳಿದ್ದು ಅವುಗಳದ್ದೇ ಆದ ಮಹತ್ವ ಹೊಂದಿರುತ್ತದೆ. ಆವುಗಳಲ್ಲಿ ಕಾಳಿಕಾಂಬ ದೇವಸ್ತಾನ, ದುರ್ಗಾ    ದೇವಸ್ತಾನ, ಕೆರೆ ಆಂಜನೇಯ ದೇವಸ್ತಾನ, ಕಾಲ ಭೈರವ ದೇವಸ್ತಾನ (ಇವು ೪ ದಿಕ್ ಪಾಲಕ ದೇವರುಗಳಾಗಿದ್ದು, ಇವನ್ನು ಆದಿ ಶಂಕರರು ಸ್ತಾಪಿಸಿರುತ್ತಾರೆ).  ಇವಲ್ಲದೆ, ಬೆಟ್ಟದ ಮಲಹನಿಕೇಶ್ವರ ದೇವಾಲಯ(ಋಷ್ಯಶೃಂಗ ಮುನಿಗಳ ತಂದೆ), ಛಪ್ಪರದಾಂಜನೇಯ ದೇವಾಲಯ, ವೆಂಕಟರಮಣ ದೇವಾಲಯಗಳನ್ನೂಸಹ ನೋಡಬಹುದಾಗಿದೆ. ಶೃಂಗೇರಿ ಪಟ್ಟಣದ ಮಧ್ಯಭಾಗದಲ್ಲೇ ಪುರಾತನವಾದ ಪಾರ್ಶ್ವನಾಥ ತೀರ್ಥಂಕರರ ಜೈನ ಬಸದಿಯೊಂದಿದೆ. ಶೃಂಗೇರಿಯು ತುಂಗಾ ನದೀ ತೀರದಲ್ಲಿ ಇದೆ.
      ೧.ಸಿರಿಮನೆ ಜಲಪಾತ- ಇದೊಂದು ಸುಂದರ ನಿಸರ್ಗದ ಮಡಿಲಲ್ಲಿರುವ ಪುಟ್ಟ ಜಲಪಾತ. ಈ ಜಲಪಾತವು ಕಿಗ್ಗಾ ಋಷ್ಯಶೃಂಗೇಶ್ವರ ದೇವಸ್ಥಾನದಿಂದ ಕೇವಲ ಐದು ಕಿಲೋ ಮೀಟರುಗಳ ದೂರದಲ್ಲಿದೆ.
      ೨.ಮಘೇಬೈಲು ಜಲಪಾತ - ಇದು ಸಿರಿಮನೆಗೆ ಹತ್ತಿರವಿರುವ ಇನ್ನೊಂದು ಜಲಪಾತ.
      ೩.ನರಸಿಂಹ ವನ - ತುಂಗಾ ನದಿಯ ಇನ್ನೊಂದು ಪಕ್ಕದಲ್ಲಿ ನರಸಿಂಹ ವನವಿದೆ. ಇಲ್ಲಿ ಜಗದ್ಗುರುಗಳ ನಿವಾಸವಿದ್ದು ಪ್ರತಿ ದಿನ ಭಕ್ತರಿಗೆ ದರ್ಶನ ಕೊಡುತ್ತಾರೆ. ಇದಲ್ಲದೆ ವೇದ ಪಾಠಶಾಲೆ, ಸಂಸ್ಕ್ರುತ ಗ್ರಂಥಾಲಯವಿದೆ. ಇಲ್ಲಿಯೇ ಗೋಶಾಲೆ, ಗಜ ಶಾಲೆ ಕೂಡ ಇದೆ.
      ೪.ಕುದುರೆಮುಖ - ಕುದುರೆಮುಖ ಸುಂದರ ಗಿರಿಧಾಮವಾಗಿದ್ದು , ಕರ್ನಾಟಕದ ಅತ್ಯಂತ ಸುಂದರ ಪರಿಸರ ತಾಣಗಳಲ್ಲಿ ಒಂದಾಗಿದೆ. ಚಾರಣಿಗರ ಸ್ವರ್ಗವೆನಿಸಿದೆ. ಇದು ಶೃಂಗೇರಿಯಿಂದ ೫೦ ಕಿ.ಮೀ. ದೂರದಲ್ಲಿದೆ.
      ೫.ಗಂಗಾಮೂಲ - ತುಂಗಾ ಭದ್ರಾಹಾಗೂ ನೇತ್ರಾ ನದಿಗಳ ಉಗಮ ಸ್ಥಾನ.
      ೬.ನರಸಿಂಹ ಪರ್ವತ - ಚಾರಣಪ್ರಿಯರಿಗೆ ಇದೊಂದು ಸುಂದರ ಸ್ಥಳ. ಇದು ಕಿಗ್ಗಾ ಊರಿನ ಸಮೀಪವಿದೆ.
      ೭.ಹನುಮಾನ್ ಗುಂಡಿ (ಸೂತನಬ್ಬಿ) ಜಲಪಾತ- ಇದು ಗಂಗಾಮೂಲದ ಸಮೀಪವಿದೆ. ಕೆರೆಕಟ್ಟೆಯಿಂದ ಕುದುರೆಮುಖಕ್ಕೆ ಹೋಗುವ ಮಾರ್ಗದಲ್ಲಿದೆ.
ಶೃಂಗೇರಿ ಮತ್ತು ಸುತ್ತಮುತ್ತಲ ಕಡಲತೀರಗಳು:-
       ಪಾಂಡಿಚೆರಿ ಬೀಚ್ ೫೨೪ ಕಿಲೋಮೀಟರ್.
       ಸಿಲ್ವರ್ ಬೀಚ್ ೫೨೬.೬ ಕಿಲೋಮೀಟರ್.
       ಪಾರಂಕಿಪಟೈ ಬೀಚ್ ೫೩೪.೬ ಕಿಲೋಮೀಟರ್.
       ಮಹಾಬಲಿಪುರಮ್ ಬೀಚ್ ೫೪೩.೪ ಕಿಲೋಮೀಟರ್.
       ಗೋಲ್ಡನ್ ಬೀಚ್ ೫೪೪.೬ ಕಿಲೋಮೀಟರ್.
ಶೃಂಗೇರಿಗೆ ಹತ್ತಿರದ ಪಟ್ಟಣ / ನಗರ:-
      ಕೊಪ್ಪ - ೧೭.೯ ಕಿಲೋಮೀಟರ್.
      ಸೋಮೇಶ್ವರ - ೨೧.೪ ಕಿಲೋಮೀಟರ್.
      ಕುದುರೆಮುಖ - ೨೨.೨ ಕಿಲೋಮೀಟರ್.
      ತೀರ್ಥಹಳ್ಳಿ - ೩೧.೨ ಕಿಲೋಮೀಟರ್.
ಹೋಬಳಿಗಳು:- [೩]
      ೧.ಕಸಬ
      ೨.ಕಿಗ್ಗಾ
ಗ್ರಾಮ ಪಂಚಾಯಿತಿಗಳು:- [೪]
      ೧.ಅಡ್ಡಗದ್ದೆ ಗ್ರಾಮ ಪಂಚಾಯಿತಿ-(ಗ್ರಾಮಗಳು-ಬೆಳಂದೂರು,ಕಾವಡಿ)
      ೨.ಹೊಳೇಕೊಪ್ಪ 
      ೩.ಮರ್ಕಲ್ (ಕೋಗೋಡು, ಗಂಡಘಟ್ಟ, ಯಡದಳ್ಳಿ, ಯಡದಾಳು)
      ೪.ಕೂತಗೋಡು
      ೫.ಕೆರೆಕಟ್ಟೆ (ಕೆರೆ)
      ೬.ನೆಮ್ಮಾರು
      ೭.ವಿದ್ಯಾರಣ್ಯಪುರ
ತಲುಪಲು ಮಾರ್ಗಗಳು:-[೫]
            ಜಿಲ್ಲಾ ಕೇಂದ್ರವಾದ ಚಿಕ್ಕಮಗಳೂರಿನಂದ ರಸ್ತೆ ಮಾರ್ಗವಾಗಿ ಆಲ್ದೂರು, ಬಾಳೆಹೊನ್ನೂರು, ಜಯಪುರ ಮೂಲಕ ಶೃಂಗೇರಿಗೆ ( ಸುಮಾರು   ೯೦ ಕಿ. ಮೀ.).ಚಿಕ್ಕಮಗಳೂರಿನಂದ ಖಾಸಗಿ ಹಾಗು ಸರಕಾರಿ ಬಸ್ ಗಳ ನೇರ ಸಂಪರ್ಕವಿದೆ. ಸಮೀಪದ ರೈಲ್ವೆ ನಿಲ್ದಾಣ ಕಡೂರಿನಿಂದ ಚಿಕ್ಕಮಗಳೂರು ಮೂಲಕ ಶೃಂಗೇರಿಗೆ ತಲುಪಬಹುದು.
      ೧.ಉಡುಪಿಯಿಂದ ಹಿರಿಯಡಕ , ಹೆಬ್ರಿ, ಆಗುಂಬೆ , ಬಿದರಗೋಡು ,
      ೨.ಶಿವಮೊಗ್ಗದಿಂದ ,ನರಸಿಂಹರಾಜಪುರ ,ಕೊಪ್ಪ ಮಾರ್ಗವಾಗಿ ಶೃಂಗೇರಿಗೆ ತಲುಪಬಹುದು(ಅಂದಾಜು ೧೦೫ ಕಿ. ಮೀ.).
      ೩.ಶಿವಮೊಗ್ಗದಿಂದ ತೀರ್ಥಹಳ್ಳಿ,ಕೊಪ್ಪ ಮಾರ್ಗವಾಗಿಯೂ ಶೃಂಗೇರಿಯನ್ನು ತಲುಪಬಹುದು. ಇದು ರಾಷ್ಟ್ರೀಯ ಹೆದ್ದಾರಿ ೧೩ ವ್ಯಾಪ್ತಿಗೆ ಸೇರುತ್ತದೆ.
      ೪.ಸಮೀಪದ ವಿಮಾನ ನಿಲ್ದಾಣ ಮಂಗಳೂರಿನಲ್ಲಿದೆ. ಇಲ್ಲಿಂದ ಮೂಡಬಿದಿರೆ, ಕಾರ್ಕಳ, ಕೆರೆಕಟ್ಟೆ ಮೂಲಕ ಶೃಂಗೇರಿಗೆ ರಸ್ತೆ ಸಂಪರ್ಕವಿದೆ (ಅಂದಾಜು ೧೧೬ ಕಿ. ಮೀ.). ಬೆಂಗಳೂರು, ಮೈಸೂರು, ಮಂಡ್ಯ, ಮೇಲುಕೋಟೆ, ಕೋಲಾರ, ಮಡಿಕೇರಿ, ಹಾಸನ, ಚನ್ನರಾಯಪಟ್ಟಣ (ಶ್ರವಣಬೆಳಗೊಳ)ದಿಂದ ಶೃಂಗೇರಿಗೆ ಕರ್ನಾಟಕ ರಾಜ್ಯ ಸಾರಿಗೆ ಸಂಸ್ಥೆಯ ಬಸ್‌ ಸೌಕರ್ಯವಿದೆ. ಸಮೀಪದ ಪ್ರೇಕ್ಷಣೀಯ ಸ್ಥಳಗಳೆಂದರೆ ಹೊರನಾಡು (೬೦ ಕಿಮೀ), ಉಡುಪಿ (೮೫ ಕಿಮೀ), ಆಗುಂಬೆ (೨೫ ಕಿಮೀ) ಜೈನ ಯಾತ್ರಾ ಸ್ಥಳಗಳಾದ ನರಸಿಂಹರಾಜಪುರ (೫೫ ಕಿಮೀ), ಹುಂಚ (೮೦ ಕಿಮೀ).
ಶೃಂಗೇರಿಗೆ ಹತ್ತಿರವಾಗುವ ರೈಲ್ವೆ ನಿಲ್ದಾಣಗಳು:-          
           ಶೃಂಗೇರಿಗೆ ಸಮೀಪದ ರೈಲ್ವೇ ನಿಲ್ದಾಣವು ಉಡುಪಿಗೆ 52.6 ಕಿಲೋಮೀಟರ್ ದೂರದಲ್ಲಿದೆ. ಕೆಳಗಿನ ಕೋಷ್ಟಕವು ಇತರ ರೈಲು ನಿಲ್ದಾಣಗಳನ್ನು ಮತ್ತು ಮಾಮಕುಡಿಯಿಂದ ಅದರ ದೂರವವನ್ನು ತೋರಿಸುತ್ತದೆ. 
     ಉಡುಪಿ ರೈಲ್ವೆ ನಿಲ್ದಾಣ ೫೨.೬ ಕಿಲೋಮೀಟರ್.
     ಇಂದ್ರಾಬಿಲ್ ರೈಲ್ವೆ ನಿಲ್ದಾಣ ೫೨.೭ ಕಿಲೋಮೀಟರ್.
     ಬಾರೂರ್ ರೈಲ್ವೆ ನಿಲ್ದಾಣ ೫೩.೪ ಕಿಲೋಮೀಟರ್.
     ಪದುಬಿದ್ರಿ ರೈಲ್ವೆ ನಿಲ್ದಾಣ ೫೭.೮ ಕಿಲೋಮೀಟರ್.
  1. "ಇತಿವೃತ್ತ". Retrieved 2017-2018. {{cite web}}: Check date values in: |accessdate= (help)
  2. "ಪ್ರೇಕ್ಷಣೇಯ ಸ್ಠಳಗಳು". Retrieved 2017-2018. {{cite web}}: Check date values in: |accessdate= (help)
  3. "ಹೋಬಳಿಗಳು". Retrieved 2017-2018. {{cite web}}: Check date values in: |accessdate= (help)
  4. "ಗ್ರಾಮಪಂಚಾಯಿತಿಗಳು". Retrieved 2017-2018. {{cite web}}: Check date values in: |accessdate= (help)
  5. "ತಲುಪುವ ಮಾರ್ಗಗಳು". Retrieved 2017-2018. {{cite web}}: Check date values in: |accessdate= (help)