ಸದಸ್ಯ:Pavan kumar 163/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವ್ಯಯಕ್ತಿಕ ಜೀವನ[ಬದಲಾಯಿಸಿ]

thumb|ರಮಣ್ ಸಿಂಗ್ ರಮಣ್ ಸಿಂಗ್(ಜನನ:ಅಕ್ಟೋಬರ್ ೧೫,೧೯೫೨), ಇವರ ತಂದೆ ವಿಘ್ನಹರಣ್ ಸಿಂಗ್ ಠಾಕುರ್ ರವರು ಪ್ರಸಿದ್ದ ವಕೀಲ ಮತ್ತು ಸಾಮಾಜಿಕ ಕಾರ್ಯಕರ್ತರಾಗಿದ್ದರು ಹಾಗು ಇವರ ತಾಯಿ ಶ್ರೀಮತಿ ಸುಧಾ ಸಿಂಗ್.ಅವರು ತಮ್ಮ ಪದವಿಯನ್ನು ಸರ್ಕಾರಿ ವಿಜ್ಞಾನ ಕಾಲೇಜ್ ನಲ್ಲಿ ಮುಗಿಸಿದರು,ಇವರು ವೀಣಾ ಸಿಂಗ್ ರವರನ್ನು ವಿವಾಹವಾದರು ಹಾಗು ಇವರಿಗೆ ಅಸ್ಮಿತ ಮತ್ತು ಅಭಿಶೇಕ್ ಎಂಬ ಇಬ್ಬರು ಮಕ್ಕಳಿದ್ದಾರೆ. ಇವರು ಛತ್ತೀಸಘಡ್ ರಾಜ್ಯದ ಹಾಲಿ ಮುಖ್ಯಮಂತ್ರಿಗಳು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಡಿಸೆಂಬರ್ ೭,೨೦೦೩ರಿಂದ ಛತ್ತೀಸಘಡ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಇವರು ಆಯುರ್ವೇದಿಯ ವೈದ್ಯರು ಹೌದು. ೧೯೯೯ರಲ್ಲಿ ಇವರು ರಾಜನಂದಗಾವ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಮಂತ್ರಿಯಾಗಿದ್ದರು. ರಮಣ್ ಸಿಂಗ್(ಜನನ:ಅಕ್ಟೋಬರ್ ೧೫,೧೯೫೨) ಇವರು ಛತ್ತೀಸಘಡ್ ರಾಜ್ಯದ ಹಾಲಿ ಮುಖ್ಯಮಂತ್ರಿಗಳು. ಭಾರತೀಯ ಜನತಾ ಪಕ್ಷದ ಸದಸ್ಯರಾಗಿರುವ ಇವರು ಡಿಸೆಂಬರ್ ೭,೨೦೦೩ರಿಂದ ಛತ್ತೀಸಘಡ್ ರಾಜ್ಯದ ಮುಖ್ಯಮಂತ್ರಿಗಳಾಗಿದ್ದಾರೆ. ಇವರು ಆಯುರ್ವೇದಿಯ ವೈದ್ಯರು ಹೌದು. ೧೯೯೯ರಲ್ಲಿ ಇವರು ರಾಜನಂದಗಾವ್ ಕ್ಷೇತ್ರದಿಂದ ಲೋಕಸಭೆಗೆ ಆಯ್ಕೆಯಾಗಿದ್ದರು ಮತ್ತು ಅಟಲ್ ಬಿಹಾರಿ ವಾಜಪೇಯಿ ನೇತೃತ್ವದ ಸರಕಾರದಲ್ಲಿ ವಾಣಿಜ್ಯ ಮತ್ತು ಕೈಗಾರಿಕಾ ರಾಜ್ಯ ಮಂತ್ರಿಯಾಗಿದ್ದರು.[೧]


ರಾಜಕೀಯ ಜೀವನ[ಬದಲಾಯಿಸಿ]

ಇವರು ಡಿಸೆಂಬರ್ ೭,೨೦೦೩ರರಿಂದಲೂ ಛತ್ತಿಸ್ ಘಡ್ನ ಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ.ಇವರು ರಾಜಕೀಯದತ್ತ ಒಲವು ತೋರಿದರು ಇವರ ರಾಜಕೀಯ ಶೈಲಿಯೆ ವಿಭಿನ್ನವಾದದ್ದು ಹಾಗು ರಮಣ್ ಸಿಂಗ್ ರವರನ್ನು ಬಿ.ಜೆ.ಪಿಯ ಅಧ್ಯಕ್ಷರೆಂದೇ ಹೆಸರಿಸಲಾಯಿತು. ಇವರು ಜನಸಾಮಾನ್ಯರ ಕಷ್ಟಗಳನ್ನು ಅರಿತು ಅದನ್ನು ಸರಿಪಡಿಸುವುದರ ಬಗ್ಗೆ ಗಮನ ಹರಿಸಿದರು. ರಮಣ್ ಸಿಂಗ್ ರವರು ಛತ್ತಿಸ್ ಘಡ್ ನಲ್ಲಿ ಮುಖ್ಯಮಂತ್ರಿಯಾಗಿ ಸತತ ಮೂರು ಭಾರಿ ಗೆಲುವನ್ನು ಸಾಧಿಸಿದ್ದರೆ.ಇವರು ರಾಯಪುರ್ ನಲ್ಲಿ ನಡೆದ ಮೂರನೆ ಭಾರಿಯ ಪ್ರಮಾಣ ಪತ್ರ ಸ್ವೀಕರಣೆಗೆ ಬಹು ಜೋರಾಗಿ ಸಮಾರಂಭ ನಡೆಸಿದ್ದರು ಆ ಸಮಾರಂಭದಲ್ಲಿಅನೇಕ ದೊಡ್ಡ ರಾಜಕಾರಣಿಗಳು ಶಾಮೀಲಾಗಿದ್ದರು , ಅದರಲ್ಲಿ ಶುಶಮ್ ಸ್ವರಾಜ್ , ಅರುಣ್ ಜೇಟ್ಲ, ನರೇಂದ್ರ ಮೋದಿ, ಶಿವರಾಜ್ ಸಿಂಗ್ ಚೌಹಾನ್ ಮುಂತಾದ ಹೆಸರಾದವರು ಪಾಲುಗೊಂಡಿದ್ದರು. ಚುನಾವಣೆಯಲ್ಲಿ ರಮಣ್ ಸಿಂಗ್ ರವರು ತಮ್ಮ ಬುದ್ದಿವಂತಿಕೆಯಿಂದ ಬಹುಮತಗಳ ಅಂತರದಿಂದ ಜಯವನ್ನು ಸಾಧಿಸಿದ್ದರು. ರಾಜ್ಯವನ್ನು ನೋಡಿಕೊಳ್ಳುವ ರೀತಿಯಿಂದ ಇವರು ಅನೇಕರಿಗೆ ಮಾದರಿಯಾದರು , ರಮಣ್ ಸಿಂಗ್ ರವರು ಜನಗಳ ನೋವಿಗೆ ಮಿಡಿಯುವಂತಹ ರಾಜಕಾರಣಿಯಾಗಿದ್ದರು ಹಾಗೂ ಛತ್ತಿಸ್ ಘಡ್ ನ ಜನತೆಗೂ ಇವರು ಪ್ರೀತಿಯ ಜನನಾಯಕರಾಗಿದ್ದರು. ಹೀಗಾಗಿ ಇವರನ್ನು ಮೂರನೆ ಭಾರಿ ನಡೆದ ಚುನಾವಣೆಯಲ್ಲಿ ಜನರು ಇವರಿಗೆ ತಮ್ಮ ಅಮೂಲ್ಯವಾದ ಮತಗಳನ್ನು ನೀಡಿ ಅವರನ್ನು ಜಯಬೇರಿಯಾಗಿ ಮಾಡಿದರು ಮತ್ತು ಅವರ ಜಯದ ಸಂಭ್ರಮವನ್ನು ಇಡೀ ಛತ್ತಿಸ್ಘಡ್ ನಲ್ಲಿರುವ ಮಾರುಕಟ್ಟೆ ಮತ್ತು ಗಲ್ಲಿಗಳಲ್ಲಿ ಪಟಾಕಿಯನ್ನು ಸಿಡಿಸುತ್ತಾ , ಅವರ ಮೂರ್ತಿಯನ್ನು ಸ್ಥಾಪಿಸಿ ಸಿಹಿಯನ್ನು ಹಂಚುತ್ತಾ ಜಯವನ್ನು ಸಂಭ್ರಮಿಸಿದರು. ಇವರು ೧೦ ವರ್ಷ ನಿರಂತರವಾಗಿ ಛತ್ತಿಸ್ ಘಡ್ ನ ಮುಖ್ಯ ಮಂತ್ರಿಯಾಗಿ ಭಾರತೀಯ ಜನತಾ ಪಕ್ಷಕ್ಕೆ ಹೋರಾಡಿದರು, ಇವರು ಹಿಂದುಳಿದ ಜನರ ಅಭಿವೃದ್ದಿಯಲ್ಲಿ , ಬಡತನ ನಿರ್ಮೂಲನೆಗಾಗಿ , ಮತ್ತು ನಕ್ಸಲೈಟ್ ಸಂಪೂರ್ಣವಾಗಿ ನಿರ್ಮೂಲನೆ ಮಾಡುವ ಮಹಾ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದರು. ಇವರು ಮೊದಲಿಗೆ ಖರ್ವದ ವಾರ್ಡನ್ ಚಾನ್ಸೆಲರಾಗಿ ಆಯಿಕೆಯಾದರು, ಇವರು ಜನ ಸಂಘ ಎಂಬ ಯುವ ಸಂಘಟನೆಯ ಸ್ಥಾಪಕರಾಗಿ ಮತ್ತು ೧೯೯೦ರಲ್ಲಿ ಇವರು ಎಮ್.ಎಲ್.ಎ ಪಟ್ಟವನ್ನು ಸ್ವೀಕರಿಸಿದರು. ಇವರು ಅನೇಕ ದೇಶದೊಡನೆ ಬೆರೆತು ಇತರೆ ದೇಶಗಳೊಂದಿಗೆ ಸಂಭಂದವನ್ನು ಧೃಡಗೊಳಿಸಿಕೊಂಡರು, ಇವರು ನೇಪಾಲ್,ದುಬೈ ಇತರೆ ದೇಶದೊಡನೆ ಸಂಭಂದವನ್ನು ಧೃಡಗೊಳಿಸಿಕೊಂಡರು. ಇವರು ಎರಡನೆ ಬಾವೆ ಮಂತ್ರಿಯಾಗಿ ದಿಸೆಂಬರ್ ೭, ೨೦೦೩ರಲ್ಲಿ ಆಯ್ಕೆಯಾದರು. ಪ್ರಧಾನಿ ನರೇಂದ್ರ ಮೋದಿ ನಾಯಕತ್ವದಲ್ಲಿ ಛತ್ತಿಸ್ ಘಡ್ ನ ಮುಖ್ಯಮಂತ್ರಿಯಾದ ರಮಣ್ ಸಿಂಗ್ ರವರು ಎಮ್.ಡಿ.ಎ ಸರ್ಕಾರದ ಅಭಿವೃದ್ದಿಯನ್ನು ತರುವ ಮತ್ತು ಕಪ್ಪು ಹಣದ ಕಾಟವನ್ನು ತೊಲಗಿಸಲು ಹೋರಟವನ್ನು ನಡೆಸುವಿಕೆಯಲ್ಲಿ ಆಸಕ್ತಿಯನ್ನು ತೋರಿಸಿದರು. ರಮಣ್ ಸಿಂಗ್ ರವರು ಸಂಭಾಷಣೆಯನ್ನು ನೀಡುವಾಗ ವಿವಿದ ಯೋಜನೆಗಳ ಅಭಿವೃದ್ದಿಯ ಶಂಕುಸ್ಥಾಪನೆಗೆ ಮತ್ತು ಕರೆನ್ಸಿ ನೋಟುಗಳ ಬದಲಾವಣೆಗೆ ಪ್ರಧಾನಿ ನರೇಂದ್ರ ಮೋಧಿಗೆ ಇಡೀ ದೇಶದ ಬೆಂಬಲ ಇದೆ ಎಂದು ಹೇಳಿದರು. ಇಡೀ ದೇಶವು ಮೋದಿಯ ಕೇವಲ ಕಪ್ಪು ಹಣದ ನಿಗ್ರಹಿಸುವಿಕೆಯಲ್ಲದೆ ದೇಶದ ಆರ್ಥಿಕ ಅಭಿವೃದ್ದಿಗೂ ಕೂಡ ಸಹಕರಿಸಿದರು. ಅನಾಣ್ಯೀಕರದ ಸಮಸ್ಯೆಯನ್ನು ಲೋಕಸಭಾ ಮತ್ತು ರಾಜ್ಯಸಭಾ ಎರಡೂ ಮನೆಗಳಲ್ಲಿ ಚರ್ಚೆಯನ್ನು ಆರನೇ ದಿನ ಮಧ್ಯಾಹ್ನ ೩ ಗಂಟೆಯವರೆಗೂ ಮುಂದುವರೆಸಿ ಕೊನೆಯಲ್ಲಿ ನಿರ್ಧಾರವನ್ನು ಕೈಗೊಂಡರು. thumb|ರಮಣ್ ಸಿಂಗ್ ರವರ ರಾಜಕೀಯ ಜೀವನ [೨]

ಬಡವರ ಉದ್ದಾರಕ್ಕಾಗಿ ಕೈಗೊಂಡ ಯೋಜನೆಗಳು[ಬದಲಾಯಿಸಿ]

ಇಂಡಿಯಾ ಟುಡೆ ಎಂಬ ದಿನ ಪತ್ರಿಕೆಯ ಪ್ರಕಾರ ರಮಣ್ ಸಿಂಗ್ ರವರು ಭಾರತಾದ್ಯಂತ ಅತ್ಯುತ್ತಮ ಮುಖ್ಯಮಂತ್ರಿಗಳಲ್ಲಿ ಮೊದಲನೆ ಸ್ಥಾನವನ್ನು ಪಡೆದಿದ್ದಾರೆ.ಇದಕ್ಕೆಲ್ಲಾ ಕಾರಣವೇನೆಂದರೆ ಅವರು ಮಾಡಿರುವ ಕೆಲಸಗಳು ಹಾಗೂ ಅವರ ಪರಿಶ್ರಮ ಮತ್ತು ರಾಜ್ಯದ ಮೇಲೆ ಅವರಿಗಿರುವ ಒಲವನ್ನು ಪ್ರತಿಬಿಂಬಿಸುತ್ತದೆ.ಛತ್ತೀಸಗಡ್ ರಾಜ್ಯದ ಬೆಳವಣಿಗೆಗೆ ರಮಣ್ ಸಿಂಗ್ ರವರೇ ಮುಖ್ಯಕಾರಣವೆಂದರೆ ತಪ್ಪಾಗಲಾರದು ಏಕೆಂದರೆ ಇವರು ರಾಜ್ಯದ ಮುಖ್ಯಮಂತ್ರಿಯಾಗಿ ಹಲವಾರು ಯೋಜನೆಗಳನ್ನು ಜನರ ಅಭಿವೃದ್ದಿಗಾಗಿ ಕೈಗೊಂಡಿದ್ದಾರೆ.೨೦-೨೦ ಎಂಬ ಯೋಜನೆಯನ್ನು ಅವರು ಪ್ರಮುಖವಾಗಿ ಹಿಂದುಳಿದ ವರ್ಗದ ಜನರಿಗಾಗಿ ಮತ್ತು ಕೆಳ ವರ್ಗದ ಜನರ ಸುಧಾರಣೆಗಾಗಿ ಜಾರಿಗೆ ತಂದರು.ಇವರು ಪ್ರಧಾನ ಮಂತ್ರಿ ಗ್ರಾಮೀಣ ಸದಸ್ಯ ಎಂಬ ಯೋಜನೆಯನ್ನು ತಮ್ಮ ರಾಜ್ಯದಲ್ಲಿ ತಮ್ಮದೆಯಾದ ಅವದಿಯಲ್ಲಿ ಕೈಗೊಂಡರು.ರಮಣ್ ಸಿಂಗ್ ರವರು ರಾಜ್ಯದ ಎಲ್ಲಾ ಮೂಲೆಯಲ್ಲಿರುವ ಜನರಿಗೆ ಅನೂಕೂಲವಾಗುವಂತೆ ಕುಡಿಯುವ ನೀರನ್ನು ಸರಿಯಾದ ಪ್ರಮಾಣದಲ್ಲಿ ನೀಡಿ ಜನರ ಪಾಲಿಗೆ ದೊಡ್ಡ ವ್ಯಕ್ತಿಯಾದರು.ರಸ್ತೆಯ ವ್ಯವಸ್ತೆ ಸರಿಯಿಲ್ಲದ ಕಾರಣದಿಂದ ಒಡಾಡಲು ಜನರಿಗೆ ಕಷ್ಟವಾಗುತಿತ್ತು ಅದರಿಂದ ಅವರು ರಸ್ತೆಯನ್ನು ಸಹ ಹಾಕಿಸಿದರು ಮತ್ತು ರಾಷ್ಟ್ರೀಯ ಹೆದ್ದಾರಿಯ ಸುಧಾರಣೆಯ ಕೆಲಸದಲ್ಲಿಯು ತಮ್ಮನ್ನು ತಾವು ತೊಡಗಿಸಿಕೊಂಡರು. ಇದೆಲ್ಲದರ ನಡುವೆ ಅವರು ೨೦೦೪-೨೦೦೫ ರಲ್ಲಿ ಹೊರ ದೇಶಗಳಾದ ಯು.ಎಸ್.ಎ ಮತ್ತು ಕೆನಡಾ ದೇಶಗಳಿಗೆ ಹೋಗಿ ಅಲ್ಲಿನ ಪ್ರಜಾ ಪ್ರಭುತ್ವದ ಬಗ್ಗೆ ಮತ್ತು ಅಲ್ಲಿನ ಯೋಜನೆಗಳ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಂಡು ಅವುಗಳನ್ನು ತಮ್ಮ ರಾಜ್ಯದಲ್ಲಿಯೂ ಸಹ ಅಳವಡಿಸಲು ಮುಂದಾದರು.ರಮಣ್ ಸಿಂಗ್ ರವರು ಅಂತರಾಷ್ಟ್ರಿಯ ವಾರ್ಷಿಕ ಸೌತ್ ಆಫ್ರಿಕಾ ವಾಣಿಜ್ಯ ಸಮಿಥಿಯಲ್ಲಿ ಭಾಗವಹಿಸಿದ್ದರು. ಇವರಿಗೆ ಅತ್ಯುತ್ತಮ ಜನ ಪ್ರತಿನಿಧಿ ಎಂದು ಎನ್.ಅರ್.ಐ ಸಮಿಥಿಯವರು ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

ಉಲೇಖನಗಳು[ಬದಲಾಯಿಸಿ]

  1. http://www.elections.in/political-leaders/raman-singh.html
  2. http://timesofindia.indiatimes.com/topic/Raman-Singh