ಸದಸ್ಯ:Parijatha/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತೀಯ ಮಹಿಳೆಯರ ವಸ್ತ ಆಭರಣಗಳು ಮತ್ತು ಮೇಕಪ್

ಮದುವೆ ಎಂದರೆ ಕೇವಲ ಎರಡು ಜೀವಗಳ ನಡುವಿನ ಸಂಬಂಧವಲ್ಲ ಅದು ಎರಡು ಕುಟುಂಬಗಳನ್ನು ಬೆಸೆಯುತ್ತದೆ. ಹೊಸ ಸಂಬಂಧಗಳನ್ನು ಸ್ರಷ್ಟಿ ಮಾಡುತ್ತದೆ.ಮದುವೆಗಳು ಸ್ವರ್ಗದಲ್ಲಿ ನಿಶಯವಾಗುತ್ತದೆ ಎಂಬ ನಂಬಿಕೆ ಇದೆ. ಭಾರತೀಯ ಸಂಪ್ರಾದಾಯ ಅಥವಾ ಸಂಸ್ಕತಿಯಲ್ಲಿ ಮದುವೆಗೆ ಪವಿತ್ರವಾದ ಸ್ಥಾನವಿದೆ.ಹಾಗಾಗಿ ಮದುವೆ ಎಂಬುದು ನಮ್ಮ ಜೀವನದ ಅತ್ಯಂತ ಮಹತ್ವವಾದ ಭಾಗವಾಗಿದೆ. ಪ್ರತಿಯೊಂದು ಸಂಸ್ಕ್ರತಿಯಲ್ಲೂ  ಮದುವೆಯು ವಿಶೇಷವಾದ ಸ್ಥಾನವಿದೆ

ಮಾನವನ್ನು ಸಂಪಾದಿಸಿರುತ್ತದೆ. ಕಾಲಕ್ಕೆ ತಕ್ಕಂತೆ ಮದುವೆ ಮಾಡುವ ವಿಧಾನಗಳು

ಬದಲಾಗುತ್ತಿದ್ದರು ಹಿಂದೂ ಧರ್ಮದಲ್ಲಿ ಮದುವೆಯು ಅತ್ಯಂತ ಮಹತ್ವದ ವಿಧಿ

ವಿಧಾನಗಳನ್ನು ಹೊಂದಿರುವ ಕಾರ್ಯವಷ್ಷೆ ಅಲ್ಲದೇ ವ್ಯಕ್ತಿಯ ಬಾಳಿನ ಮಹತ್ವದ

ತಿರುವು ಸಹ ಆಗಿ ಗುರುತಿಸಿಕೊಂಡಿದೆ. ಏಕೆಂದರೆ ಮದುವೆಯ ನಂತರ ಗಂಡು

ಹೆಣ್ಣು ಜೀವನದ ಹೊಸ ಜೀವನಪದ್ದತಿಗೆ ಕಾಲಿರಿಸುತ್ತರೆ.

ಹಿಂದು ಧರ್ಮದ ಉಲ್ಲೇಖಗಳ ಪ್ರಕಾರ ಗಂಡು ಹೆಣ್ಣು ತಮ್ಮ ವಿದ್ಯಾಭ್ಯಾಸವನ್ನು

ಪೂರ್ಣಗೊಳಿಸಿದ ನಂತರವೇ ಮದುವೆಯಾಗಬೇಕಂತೆ. ಇದರರ್ಥ ಗಂಡು ಹೆಣ್ಣು

ಜವಾಬ್ದಾರಿಗಳನ್ನು ಹೊರಲು ಸಮರ್ಥರಾದಾಗ ಮಾತ್ರ ಮದುವೆಯನ್ನು ಮಾಡಬೇಕು.ಹಿಂದೂ ಧರ್ಮದಲ್ಲಿ ಅಷ್ಟ ವಿಧದ ವಿವಾಹ ಪದ್ಧತಿಗಳು ಇದೆ. ಆದರೆ ಆಚರಣೆಯಲ್ಲಿ ಇಲ್ಲ. ಪ್ರಾಚೀನ ಹಿಂದೂ ಗ್ರಂಥಗಳು ನಮಗೆ ಹಿಂದೂ ಧರ್ಮದಲ್ಲಿದ್ದ ಎಂಟು ಬಗೆಯ ವಿವಾಹ ಪದ್ದತಿಗಳ ಕುರಿತು ತಿಳಿಸುತ್ತವೆ. ಅವುಗಳೆಂದರೆ ಬ್ರಾಹ್ಮ ವಿವಾಹ, ದೈವ ವಿವಾಹ, ಆರ್ಷವಿವಾಹ, ಪ್ರಾಜಾಪತ್ಯವಿವಾಹ, ಅಸುರವಿವಾಹ. ಗಂಧರ್ವವಿವಾಹ, ರಾಕ್ಷಸವಿವಾಹ, ಪಿಶಾಚವಿವಾಹ.

ಭಾರತವು ವಿವಿಧತೆಯಲ್ಲಿ ಏಕತೆ ಹೊಂದಿದ ದೇಶ. ಅಲ್ಲಿ ವಿವಿಧ ಜಾತಿಗಳು

ಧರ್ಮಗಳು ಇವೆ.ಆ ಜಾತಿ ಹಾಗೂ ಧರ್ಮದಲ್ಲಿ ವಿಭಿನ್ನವಾದ ಸಂಸ್ರತಿ ಆಚರಣೆ ಕ್ರಮಗಳು ಇವೆ. ಭಾರತವು ಸಾಂಪ್ರದಾಯಿಕವಾಗಿ ಶ್ರೀಮಂತ  ಮತ್ತು ವೈವಿಧ್ಯಮಯ ರಾಷ್ರವಾಗಿದೆ. ಈ ನಾಡಿನಲ್ಲಿ ಹಲವು ನಾಗರಿಕತೆಗಳು ಹುಟ್ಟಿಕೊಂಡು ಪ್ರಚಲಿತ ನಾಗರಿಕತೆಯೊಂದಿಗೆ ವಿಲೀನಗೊಂಡಿದೆ. ಹಾಗಾಗಿ ಇದನ್ನು ಒಂದು ಸಂಪ್ರಾದಯದಿಂದ ಇನ್ನೊಂದು ಸಂಪ್ರಾದಯಕ್ಕೆ ಹೋಲಿಸುವುದು ಕಷ್ಷಕರವಾಗಿದೆ. ಭಾರತೀಯ ಸಂಪ್ರಾದಾಯದಲ್ಲಿ ಪ್ರಸಾಧನಕ್ಕೆ (ಮೇಕಪ್) ಪೂರಕವಾಗಿ ಸಾಂಪ್ರದಾಯಿಕ ಉಡುಗೆಗಳು ಮತ್ತು ಮದುವೆ ಸಮಾರಂಭಗಳು ವಿಶೇಷ ರೀತಿಯಲ್ಲಿ ನಡೆಯುತ್ತದೆ.

ಮದುವೆಯಲ್ಲಿ ಮದುಮಗನಿಗಿಂತ ಮದುಮಗಳ ಶ್ರಂಗಾರಕ್ಕೆ ಹೆಚ್ಚಿನ ಪ್ರಾಮುಖ್ಯತೆ ಇದೆ. ಅದರಲ್ಲೂ ಮದುಮಗಳ ಸೀರೆಗಳು, ಆಭರಣಗಳು, ವಿಶೇಷವಾಗಿ ಜುಮುಕಿ, ನೆತ್ತಿಬತ್ತಲೆ, ಸೊಂಟ ಪಟ್ಟಿ, ತೋಳು ಬಂದಿ, ಕಾಲಗೆಜ್ಜೆ, ಗಾಜಿನ ಬಳೆಗಳು, ಮತ್ತು ವಿವಿಧ ರೀತಿಯ ಚಿನ್ನ ಆಭರಣಗಳು

ಪ್ರಮುಖವಾಗಿದೆ. ಹಾಗೂ ಹೆಣೆಗೆ ಜಡೆಯನ್ನು ಕಟ್ಟಿ ವಿವಿಧ ರೀತಿಯ ಅಂದರೆ  ಹೂವುಗಳಿಂದ ಅಲಂಕರಿಸಲಾಗುತ್ತದೆ. ಮೇಕಪ್‍ನ ನಮೂನೆಯ ಉಡುಗೆಯ ಬಣ್ಣ, ಕಂಠರೇಖೇ,ಕಸೂತಿ,ಮತ್ತು ಕಂಟರೇಖೆಯ ಶೈಲಿಯನ್ನು ಅವಲಂಬಿಸಿರುತ್ತದೆ.ತುಂಬಾ ಆಳವಾಗಿರುವ ಕಂಠರೇಖೆಗೆ ಬೇರೆ ರೀತಿಯ ಮೇಕಪ್ ಹಾಕಬೇಕಾಗುತ್ತದೆ ಅದಕ್ಕೆ ಸರಿ ಹೊಂದುವ ಕೇಶವಿನ್ಯಾಸ ಮಾಡಬೇಕು. ಇಂತಹ ವಿನ್ಯಾಸದಲ್ಲಿ ಮುಖ್ಯವಾಗಿ ಕಂಠರೇಖೆ ಮತ್ತುಹೆಗಲಿನ  ಭಾಗವನ್ನು ತೋರ್ಪಡಿಸಲಾಗುತ್ತದೆ. ಸಾಧಾರಣವಾಗಿರುವ ಉಡುಗೆಗೆ ಅತಿಯಾದ ಪ್ರಸಾಧನ(ಮೇಕಪ್)ನ, ಅಗತ್ಯವಿರುವುದಿಲ್ಲ. ಉಡುಗೆ ಮತ್ತು ಪ್ರಸಾಧನಕ್ಕೆ (ಮೇಕಪ್)ಗೆ ಸಾಮ್ಯತೆ ಇರಬೇಕು.

ಕಾಸುಮಾಲ ಎಂಬುದು ಸಾಂಪ್ರಾದಯಿಕವಾದ ಮದುಮಗಳ ಆಭರಣವಾಗಿದೆ.ಇದನ್ನು (ಕಾಸುಮಾಲ) ಬಂಗಾರ ಅಥವಾ ಚಿನ್ನದ ನಾಣ್ಯದಿಂದ ಮಾಡಲ್ಪಟ್ಟಿದೆ.ಇದು ಹೆಚ್ಚಾಗಿ ದಕ್ಷಿಣ ಭಾರತದ ಸಂಪ್ರಾದಾಯಸ್ಥ ಮದುಮಗಳ ಒಂದು ನೇಕ್ಲೇಸ್ ಆಗಿದೆ. ಅಂತೆಯೇ ನವರತ್ನ ಆಭರಣವು ನವ ಅಂದರೆ (9) ಕಲ್ಲುಗಳಿಂದ ಕೂಡಿದೆ. ಈ ನವರತ್ನ ಆಭರಣ ಧರಿಸಿದರೆ

ಅದ್ರóಷ್ಷ ಒದಗಿ ಬರುತ್ತದೆ ಎಂಬ ನಂಬಿಕೆಯು ಇದೆ.ಇಂದು ದೈನಂದಿನ ಜೀವನದಲ್ಲಿ ಅನೇಕ ಬಗೆಯ ಆಭರಣಗಳನ್ನು ಮಹಿಳೆಯರು ಬಳಸುತ್ತಲೇ ಇದ್ದಾರೆ. ಅಂತಹ ಆಭರಣಗಳಲ್ಲಿ ಮತ್ತೊಂದು ಆಭರಣ ಮೂಗೂತಿ. ಮೂಗೂತಿ ಕೇವಲ ಒಂದು ಫ್ಯಾಷನ್ ಆಭರಣವಾಗಿರದೆ ತನ್ನದೇ ಆದ ವೈಜ್ಷಾನಿಕವಾದ ಕಾರಣದಿಂದ ಪ್ರಾಮುಖ್ಯತೆ ಪಡೆದಿದೆ. ಇವುಗಳು ಸಾಧರಣ ಸ್ಢಡ್ಗಳು, ಬಂಗಾರದ ವಿವಿಧ ಆಕೃತಿಯ ಡಿಸೈನುಗಳುಳ್ಳ ಮೂಗೂತಿಗಳು, ರಿಂಗ್‍ಗಳು, ಅರ್ಧರಿಂಗುಗಳು, ಕಲ್ಲುಗಳಿರುವ ಮೂಗುತಿಗಳು ಇತ್ಯಾದಿ ಬಗೆಯ ಮೂಗುತಿಗಳು ದೊರೆಯುತ್ತದೆ. ಸಾಂಪ್ರಾದಾಯಿಕ ಬ್ರೈಡಲ್ ಮೂಗುತಿಗಳು: ಸಾಂಪ್ರಾದಾಯಿಕ ಡಿಸೈನುಗಳನ್ನೊಳಗೊಂಡು ಮದುವಣಗಿತ್ತಿಯ ಅಲಂಕಾರಕ್ಕೇಂದೆ ತಯಾರಿಸುವ ಮೂಗುತಿಗಳಿವು. ಬಹಳ ವೈವಿದ್ಯಮಯವಾದ ಮಾದರಿಗಳಲ್ಲಿ ದೊರೆಯುವ ಇವುಗಳು ಮದುವಣಗಿತ್ತಿಯ ಅಲಂಕಾರವನ್ನು ಪರಿಪೂರ್ಣಗೊಳಿಸುತ್ತದೆ. ಬ್ರೈಡಲ್ ಮೂಗುತಿಗಳಲ್ಲಿ ಸದ್ಯದ ಟ್ರೆಂಡಿ ಮೂಗುತಿ ಎಂದರೆ ಚೈನ್ ಅನ್ನು ಒಳಗೊಂಡಿರುವ ರಿಂಗುಗಳು ಆಕರ್ಷಕವಾದ ಮಾದರಿಯಲ್ಲಿ ದೊರೆಯುವ ಇವುಗಳು ಬ್ರೈಡಲ್ ಧಿರಿಸನ್ನು ಆಕರ್ಷವನ್ನಾಗಿಸುತ್ತದೆ.

ಮೂಗುತಿಗಳು: ನಾಸ್ಟಿಲ್ ಭಾಗದ ಮೂಗುತಿಗಳು

ಒಂದು ರಂಧ್ರ ಮಾಡಿ ಬೇಕಾದ ಬಗೆಯ ಮೂಗುತಿಗಳನ್ನು ಧರಿಸುವಿಕೆ

ಡಬಲ್ ನಾಸ್ಟಿಲ್ ಮೂಗುತಿಗಳು;

  ಎರಡು ರಂಧ್ರಗಳನ್ನು ಮಾಡಿಕೊಂಡು ಮೂಗುತಿಗಳನ್ನು ಧರಿಸುವ ಕ್ರಮವಿದು.

ಟ್ರಿಪಲ್ ನಾಸ್ಟಿಲ್ ಮೂಗುತಿಗಳು;

ಇವು ಮೂರು ರಂಧ್ರಗಳ ಚುಚ್ಚಿಸಿಕೊಳ್ಳುವಿಕೆಯ ಮಾದರಿಯಿದು. ಬ್ಲಾಕ್ ಮೆಟಲ್ ಚಿಕ್ಕ ಚಿಕ್ಕ ಮೂಗುತಿಗಳನ್ನು ಮೂರು ರಂಧ್ರಗಳಲ್ಲಿ ಧರಿಸುವುದು.

ಇಂತಹ ಬಹಳ ಸೈಲಿಶ್ ಆಗಿ ಕಾಣುವ ಈ ಸ್ಟೈಲ್ ಬುಡಕಟ್ಟು ಜನಾಂಗದ ಮಹಿಳೆಯರು ತೊಡುವುದನ್ನು ಕಾಣಬಹುದು.

ಮದುವೆಯ ಉಡುಗೆಗಳು:

ಭಾರತೀಯ ಮದುವೆಯ ಸಂದರ್ಭದಲ್ಲಿ ವಿಶೇಷವಾಗಿ ಮೆಹೆಂದಿಯನ್ನು ಬಳಸುತ್ತಾರೆ. ಇದನ್ನು ಕೈಗೆ ಮತ್ತು ಕಾಲಿಗಳಿಗೆ ವಿವಿಧ ವಿನ್ಯಾಸಗಳಲ್ಲಿ ಮದರಂಗಿಯನ್ನು ಹಚ್ಚುತ್ತಾರೆ. ಇದರೊಂದಿಗೆ ಬಳೆಗಳು, ಹಣೆಗೆ ತಿಲಕ, ಮತ್ತು ಉದ್ದವಾದ ಚಿನ್ನದ ಹಾರವನ್ನು ಧರಿಸುತ್ತಾರೆ.

ಭಾರತೀಯ ಮಹಿಳೆಯ ಪ್ರಮುಖ ಉಡುಪೆಂದರೆ ಸೀರೆ.ಸೀರೆಯು ದಿನನಿತ್ಯದ ಉಡುವ ಉಡುಪಿಗಿಂತ ಭಿನ್ನವಾಗಿರುತ್ತದೆ. ಅದರೆ ಮದುವೆಯ ಸಂದರ್ಭದಲ್ಲಿ

ದುಬಾರಿ ಬೆಲೆಯ ರೇಷ್ಮೆ ಹಾಗೂ ವಿವಿಧ ಬಣ್ಣಗಳ ಸೀರೆಯನ್ನು  ಧರಿಸುತ್ತಾರೆ.

ಮೇಕಪ್ ಹಾಕುವ ವಿಧಾನ:

ಮೇಕಪ್‍ನಲ್ಲಿ ಮೊದಲಿಗೆ ಫೌಂಡೇಶನ್ ಕ್ರೀಮ್ ಅನ್ನು ಹಚ್ಚುತ್ತಾರೆ. ನಂತರ

ಮೇಕಪ್‍ನಲ್ಲಿ ಮಸ್ಕರ, ಬ್ಲಶ್, ಐಲೈನರ್, ಕೈಯ ಮತ್ತು ಕಾಲಿನ ಬೆರಳುಗಳಿಗೆ ನೈಲ್ ಪಾಲಿಶ್, ಪೌಡರ್, ಬಿಂದಿ, ಐ ಲ್ಯಾಶ್, ಮತ್ತುಲಿಪ್

ಸ್ಟಿಕ್, ಇತ್ಯಾದಿಗಳನ್ನು ವಿಶೇಷವಾಗಿ ಇದನ್ನು ಬಳಸುತ್ತಾರೆ. ಮುಖ್ಯವಾಗಿ ಧರಿಸಿದ ಉಡುಗೆಗೆ ಮೇಕಪ್ ಸರಿಯಾಗಿ ಹೊಂದುವಂತಿರಬೇಕು. ಇರುಳಿನಲ್ಲಿ

ನಡೆಯುವ ಮದುವೆಯು ಹೆಚ್ಚು ಔಪಚಾರಿಕತೆಯಿಂದ ಕೂಡಿರುತ್ತದೆ. ಮತ್ತು

ಹಗಲಿನಲ್ಲಿ ನಡೆಯುವ ಮದುವೆಗೆ ಜಾಸ್ತಿ ಮೇಕಪ್ ನ ಅಗತ್ಯ ಇರುವುದಿಲ್ಲ.

ಸ್ವಾಭಾವಿಕವಾಗಿದ್ದರೆ ಸಾಕಾಗುತ್ತದೆ. ಆದರೆ ರಾತ್ರಿ ವೇಳೆಯಲ್ಲಿ ನಡೆಯುವ ಮದುವೆಯ ಬೆಳಕಿಗೆ ತಕ್ಕಂತೆ ಮೇಕಪ್ ನ  ಅಗತ್ಯವಿದೆ.ಗಾಢವಾದ ದೀಪದ

ಬೆಳಕು ಇದ್ದರೆ ಕಡಿಮೆ ಮೇಕಪ್ ಸಾಕಗುತ್ತದೆ. ಕಡಿಮೆ ದೀಪದ ಬೆಳಕಿಗೆ ಗಾಢವಾದ ಮೇಕಪ್ ನ ಅವಶ್ಯಕತೆ ಇರುತ್ತದೆ.

ಅಂತೆಯೇ  ಭಾರತೀಯರಲ್ಲಿ ವಿವಾಹದ ಆಚರಣೆಗಳು ಮತ್ತು ಮೇಕಪ್ ನ ವಿಧಾನಗಳು ಬೇರೆ ಬೇರೆ ಧರ್ಮಗಳಿಗೆ ವ್ಯತ್ಯಾಸ ಹೊಂದುತ್ತದೆ. ಮುಖ್ಯವಾಗಿ

ಹಿಂದು ಮತ್ತು ಮುಸ್ಲಿಮರು ಏಷ್ಯಾ  ಮೂಲದ ಸಂಪ್ರಾದಾಯವನ್ನು  ಅನುಸರಿಸುತ್ತಾರೆ. ಕ್ರಿಶ್ಶಿಯನ್ನರು ಯುರೋಪಿನ ಮೇಕಪ್ ಸಂಸ್ಕøತಿಯನ್ನು ಅಳವಡಿಸುತ್ತಿದ್ದಾರೆ. ಮುಸ್ಲಿಂ ಮಹಿಳೆ ಸಲ್ವಾರನ್ನು ಧರಿಸುತ್ತಾಳೆ. ಹಿಂದೂ ಮಹಿಳೆ ಸೀರೆ ಅಥವಾ  ಗಾಗ್ರಚೋಲಿ ಧರಿಸುತ್ತಾಳೆ. ಆಭರಣಗಳ ವಿನ್ಯಾಸ ಮತ್ತು ವಸ್ರಗಳ ಬಣ್ಣಗಳು ಸಾಮಾನ್ಯವಾಗಿ ಒಂದೇ ರೀತಿ ಇರುತ್ತದೆ. ಆದರೆ ಕ್ರಿಶ್ಚಿಯನ್ ಮಹಿಳೆಯು ತುಂಬಾ ಸಾಧಾರಣದ ಬಿಳಿ ಬಣ್ಣದ ಗೌನ್ ಧರಿಸುತ್ತಾಳೆ. ಆದರೆ ಮೇಕಪ್ ತುಂಬಾ ಸರಳ ಹಾಗೂ ಕಡಿಮೆ ಮಾಡುತ್ತಾರೆ.         

ಎಲ್ಲರೊಳಗೊಂದಾಗು ಮಂಕುತಿಮ್ಮ