ಸದಸ್ಯ:Omkar R K/WEP 2018-19 dec

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Omkar R K/WEP 2018-19 dec
FRS
ಸರ್ ರೊನಾಲ್ಡ್ ಐಲ್ಮರ್ ಫಿಶರ್(೧೯೧೩)
ಸಂಸ್ಥೆಗಳು
ಅಭ್ಯಸಿಸಿದ ವಿದ್ಯಾಪೀಠಯೂನಿವರ್ಸಿಟಿ ಅಫ್ ಕೇಂಬ್ರಿಡ್ಜ್
ಪ್ರಸಿದ್ಧಿಗೆ ಕಾರಣಫಿಶರ್‍ಸ್ ಪ್ರಿನ್ಸಿಪಲ್
Fisher information
ಗಮನಾರ್ಹ ಪ್ರಶಸ್ತಿಗಳು

ಪರಿಚಯ ಮತ್ತು ಬಾಲ್ಯ[ಬದಲಾಯಿಸಿ]

ಸರ್ ರೊನಾಲ್ಡ್ ಐಲ್ಮರ್ ಫಿಶರ್ ಒಬ್ಬ ಬಹು ಜನಪ್ರಿಯವಾದ ಬ್ರಿಟಿಷ್ ಸಂಖ್ಯಾಶಾಸ್ತ್ರಜ್ಞ ಮತ್ತು ತಳಿವಿಜ್ಞಾನಿ[೧]. ಸಂಖ್ಯಾಶಾಸ್ತ್ರದಲ್ಲಿ ಅವರ ಕೆಲಸಕ್ಕಾಗಿ, "ಆಧುನಿಕ ಸಂಖ್ಯಾಶಾಸ್ತ್ರೀಯ ವಿಜ್ಞಾನದ ಅಡಿಪಾಯವನ್ನು ಬಹುತೇಕ ಏಕೈಕ-ಕೈಯಿಂದ ಸೃಷ್ಟಿಸಿದ ಒಬ್ಬ ಪ್ರತಿಭಾವಂತ ವ್ಯಕ್ತಿ" ಎಂದು ಕರಿಯಲಾಗಿದೆ. ಇವರು "೨೦ನೇ ಶತಮಾನದ ಅಂಕಿಅಂಶಗಳಲ್ಲಿ ಏಕೈಕ ಪ್ರಮುಖ ವ್ಯಕ್ತಿ". ರೊನಾಲ್ಡ್ ಫಿಶರ್‌ರವರು ೧೭ ಫ಼ೆಬ್ರವರಿ ೧೮೯೦ರಂದು ಲಂಡನ್‌ನ ಈಸ್ಟ್ ಫ಼ಿಂಚ್‌ಲಿ ಎಂಬ ಸ್ಥಳದಲ್ಲಿ ಇಂಗ್ಲೆಂಡ್‌ನಲ್ಲಿ ಒಂದು ಶ್ರೀಮಂತ ಕುಟುಂಬದಲ್ಲಿ ಜನಿಸಿದರು.[೨] ಇವರು ಇಂಗ್ಲೆಡ್‌ನಲ್ಲಿ ಒಂದು ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದರು. ಇವರ ತಂದೆ ಹರಾಜುದಾರರು ಮತ್ತು ಕಲಾ ವಿತರಕರಾದ ರಾಬಿನ್ಸನ್ ಮತ್ತು ಫ಼ಿಶರ್ ಎಂಬ ಒಂದು ಯಶಸ್ವಿ ಕಂಪನಿಯ ಪಾಲುದಾರರಾಗಿದ್ದರು. ಇವರು ತಮ್ಮ ಮೂರು ಸಹೋದರಿಯರು ಮತ್ತು ಒಬ್ಬ ಸಹೋದರನೊಂದಿಗೆ, ಅತೀ ಕಿರಿಯರಾಗಿ ಬೆಳೆದರು. ಇವರ ತಾಯಿ ಕೇಟ್‌ರವರನ್ನು ಫಿಶರ್‌ರವರು ೧೪ ವಯಸ್ಸಿನ ಹುಡುಗನಾಗಿದ್ದಾಗ ತೀಕ್ಷ್ಣವಾದ ಪೆರಿಟೋನಿಟಿಸ್‌ನಿಂದಾಗಿ ಕಳೆದುಕೊಂಡರು, ಈ ಘಟನೆಯಾದ ೧೮ ತಿಂಗಳುಗಳ ನಂತರ ಇವರ ತಂದೆ ತಮ್ಮ ವ್ಯಾಪಾರವನ್ನು ಕಳೆದುಕೊಂಡರು. ಇವರಿಗಿದ್ದ ಕಳಪೆ ಮಟ್ಟದ ದೃಷ್ಟಿಯಿಂದಾಗಿ ಇವರಿಗೆ ಬ್ರಿಟಿಷ್ ಸೇನೆಯನ್ನು ವಿಶ್ವ ಯುದ್ಧ ೧ರಲ್ಲಿ ಭಾಗಿಯಾಗಲು ಸಾಧ್ಯವಾಗಲಿಲ್ಲ, ಬ್ರಿಟಿಷ್ ಸೇನೆಯ ಪರವಾಗಿ ಯುದ್ಧ ಮಾಡುವುದು ಇವರ ಬಹು ದೊಡ್ಡ ಆಸೆಯಾಗಿತ್ತು.

ವೃತ್ತಿಜೀವನ[ಬದಲಾಯಿಸಿ]

೧೯೧೩ರಿಂದ ೧೯೧೯ರವರೆಗೆ, ಆರು ವರ್ಷಗಳ ಕಾಲ, ಫಿಶರ್‌ರವರು ಸಿಟಿ ಆಫ್ ಲಂಡನ್‌ನಲ್ಲಿದ್ದ ಸರಕಾರಿ ಶಾಲೆಗಳಲ್ಲಿ,ಥೇಮ್ಸ್ ನಾಟಿಕಲ್ ಟ್ರೈನಿಂಗ್ ಕಾಲೇಜಿನಲ್ಲಿ ಮತ್ತು ಬ್ರಾಡ್ಫೀಲ್ಡ್ ಕಾಲೇಜಿನಲ್ಲಿ ಭೌತಶಾಸ್ತ್ರ ಮತ್ತು ಸಂಖ್ಯಾಶಾಸ್ತ್ರದ ಶಿಕ್ಷಕರಾಗಿ ಕೆಲಸ ಮಾಡಿದರು. ಅಲ್ಲಿಯೇ ಅವರು ತಮ್ಮ ಹೊಸ ವಧು, ಐಲೀನ್ ಗಿನ್ನೆಸ್ಸ್‌ರವರನ್ನು ಕಂಡುಕೊಂಡರು. ಅವರನ್ನೇ ವಿವಾಹವಾದ ಮೇಲೆ, ಲಂಡನಲ್ಲಿಯೇ ಅವರು ನೆಲೆಸಿದರು, ಅವರೊಂದಿಗೆ ಅವರಿಗೆ ಇಬ್ಬರು ಪುತ್ರರು ಮತ್ತು ಆರು ಹೆಣ್ಣುಮಕ್ಕಳು ಜನಿಸಿದರು.

ಸಾಧನೆ[ಬದಲಾಯಿಸಿ]

ತಳಿವಿಜ್ಞಾನದಲ್ಲಿ, ಮೆಂಡೆಲಿಯನ್ ತಳಿಶಾಸ್ತ್ರ ಮತ್ತು ನೈಸರ್ಗಿಕ ಆಯ್ಕೆಗಳನ್ನು ಸಂಯೋಜಿಸಲು ಅವರು ಮಾಡಿದ ಸಂಶೋಧನ ಕಾರ್ಯ ಗಣಿತಶಾಸ್ತ್ರವನ್ನು ಬಳಸಿತು; ಆಧುನಿಕ ಸಂಶ್ಲೇಷಣೆ ಎಂದು ಕರೆಯಲ್ಪಡುವ ವಿಕಾಸದ ಸಿದ್ಧಾಂತದ ೨೦ನೇ ಶತಮಾನದ ಆರಂಭದ ಪರಿಷ್ಕರಣೆಗೆ ಇದು ಡಾರ್ವಿನಿಸಮ್‌ನ ಪುನರ್ ಜೀವನಕ್ಕೆ ಕಾರಣವಾಯಿತು. ಜೀವಶಾಸ್ತ್ರಕ್ಕೆ ನೀಡಿದ ಕೊಡುಗೆಗಳಿಗಾಗಿ, ಫಿಶರ್‌ರವರನ್ನು "ಡಾರ್ವಿನ್ ಉತ್ತರಾಧಿಕಾರಿಗಳ ಶ್ರೇಷ್ಠ" ಎಂದು ಕರೆಯುತ್ತಾರೆ. ಸಂಖ್ಯಾಶಾಸ್ತ್ರಕ್ಕೆ ನೀಡಿದ ಕೊಡುಗೆಗಳಲ್ಲಿ ಗರಿಷ್ಠ ಸಾಧ್ಯತೆ, ವಿಶ್ವಾಸಾರ್ಹ ನಿರ್ಣಯ, ವಿವಿಧ ಮಾದರಿ ವಿತರಣೆಗಳ ಹುಟ್ಟು, ಪ್ರಯೋಗಗಳ ವಿನ್ಯಾಸದ ಸ್ಥಾಪನೆಯ ತತ್ವಗಳು ಮತ್ತು ಮುಂತಾದವು. ಇವರು ಸಂಖ್ಯಾಶಾಸ್ತ್ರದ ಕ್ಷೇತ್ರಕ್ಕೆ ನೀಡಿದ ಕೊಡುಗೆಗಳಿಂದಾಗಿ ಇವರನ್ನು "ಆಧುನಿಕ ಸಂಖ್ಯಾಶಾಸ್ತ್ರದ ಪಿತಾಮಹಾ" ಎಂದು ಕರೆಯಲಾಗಿದೆ.

೧೯೨೯ರಲ್ಲಿ ಫಿಶರ್‌ರವರು ಲಂಡನ್‌ನ ರಾಯಲ್ ಸೊಸೈಟಿಗೆ ಚುನಾಯಿತರಾದರು. ೧೯೫೨ರಲ್ಲಿ ಕ್ವೀನ್ ಎಲಿಜಬೆತ್ ೨ರವರು ಫಿಶರ್‌ರವರನ್ನು ನೈಟ್ ಬ್ಯಾಚಲರ್ ಆಗಿ ನೇಮಕ ಮಾಡಿದರು ಮತ್ತು ೧೯೫೮ರಲ್ಲಿ ಲಿನ್ನಿಯನ್ ಸೊಸೈಟಿ ಆಫ್ ಲಂಡನ್ ಡಾರ್ವಿನ್-ವ್ಯಾಲೇಸ್ ಮೆಡಲ್ ಪ್ರಶಸ್ತಿಯನ್ನು ಪಡೆದರು. ಇವರು ಕೋಪ್ಲಿ ಮೆಡಲ್ ಮತ್ತು ರಾಯಲ್ ಪದಕವನ್ನು ಗೆದ್ದರು. ಅವರು ೧೯೨೪ರಲ್ಲಿ ಟೊರೊಂಟೊದಲ್ಲಿ ಮತ್ತು ೧೯೨೮ರಲ್ಲಿ ಬೊಲೊಗ್ನಾದಲ್ಲಿ ಐ.ಸಿ.ಎಂ.ನ ಆಹ್ವಾನಿತ ಸ್ಪೀಕರ್ ಆಗಿದ್ದರು. "ಆರ್. ಎ. ಫಿಶರ್ ಲೆಕ್ಚರಷಿಪ್" ಉತ್ತರ ಅಮೆರಿಕದ ವಾರ್ಷಿಕ ಉಪನ್ಯಾಸ ಪ್ರಶಸ್ತಿಯಾಗಿದೆ, ಇದನ್ನು ೧೯೬೩ರಲ್ಲಿ ಇವರ ಹೆಸರಿನೊಂದಿಗೆ ಸ್ಥಾಪಿಸಲಾಯಿತು. ೨೮ ಏಪ್ರಿಲ್ ೧೯೯೮ರಂದು ಮೈನರ್ ಗ್ರಹವಾದ, ೨೧೪೫೧ ಫಿಶರ್, ಅವರ ಹೆಸರಿನೊಂದಿಗೆ ನೇಮಿಸಲಾಗಿದೆ.

ಉಲ್ಲೇಖಗಳು[ಬದಲಾಯಿಸಿ]

  1. https://en.wikipedia.org/wiki/Ronald_Fisher
  2. https://www.famousscientists.org/ronald-fisher/