ಸದಸ್ಯ:Nrajashree/ಸುಧೀರ್ ಕಾಕರ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


ಸುಧೀರ್ ಕಾಕರ್ (ಜನನ 25 ಜುಲೈ 1938 [೧] ) ಒಬ್ಬ ಭಾರತೀಯ ಮನೋವಿಶ್ಲೇಷಕ ಮತ್ತು [೨] ಕಾದಂಬರಿಕಾರ. ಸಾಂಸ್ಕೃತಿಕ ಮತ್ತು ಧರ್ಮದ ಮನೋವಿಜ್ಞಾನ ಕ್ಷೇತ್ರಗಳಲ್ಲಿ ಲೇಖಕರಾಗಿದ್ದಾರೆ.

ಶಿಕ್ಷಣ ಮತ್ತು ವೈಯಕ್ತಿಕ ಜೀವನ[ಬದಲಾಯಿಸಿ]

ಕಾಕರ್ ತನ್ನ ಬಾಲ್ಯವನ್ನು ಈಗ ಪಾಕಿಸ್ತಾನದಲ್ಲಿರುವ ಸರ್ಗೋಧಾ ಬಳಿ, [೩] ಮತ್ತು ಭಾರತದ ರೋಹ್ಟಕ್‌ನಲ್ಲಿ ಕಳೆದರು. ಬ್ರಿಟಿಷ್ ರಾಜ್ ಮತ್ತು ಭಾರತದ ವಿಭಜನೆಯ ಸಮಯದಲ್ಲಿ ಅವರ ತಂದೆ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾಗಿದ್ದರು. ಕಾಲಕ್ರಮೇಣ ಅವರ ಕುಟುಂಬವು ನಗರದಿಂದ ನಗರಕ್ಕೆ ಸ್ಥಳಾಂತರಗೊಂಡಿತು. [೩] [೪] ಎಂಟನೇ ವಯಸ್ಸಿನಲ್ಲಿ ಅವರನ್ನು ನವದೆಹಲಿಯ ಮಾಡರ್ನ್ ಶಾಲೆಯ ವಸತಿನಿಲಯಕ್ಕೆ ಸೇರಿಸಲಾಯಿತು; [೩] ಅಲ್ಲಿ ಅವರು ಶಾಲೆಯ ನಿಲಯಗಳಲ್ಲಿನ ಸಲಿಂಗಕಾಮದ ಪ್ರತಿಭಟನೆಗಳ ಬಗ್ಗೆ ಬರೆಯುತ್ತಿದ್ದರು. [೩]

ನಂತರದ ವ್ಯಾಸಂಗವನ್ನು ಸೇಂಟ್ ಎಡ್ವರ್ಡ್ ಸ್ಕೂಲ್, ಶಿಮ್ಲಾದಲ್ಲಿ ಮಾಡಿದರು. [೩] ಅವರು ತಮ್ಮ ಮಧ್ಯಂತರ ಅಧ್ಯಯನವನ್ನು ಜೈಪುರದ ಮಹಾರಾಜ ಕಾಲೇಜಿನಲ್ಲಿ ಆರಂಭಿಸಿದರು. ಕಾಕರ್ ಅವರ ಕುಟುಂಬವು ಅವರನ್ನುಅಹಮದಾಬಾದ್‌ಗೆ ಕಳುಹಿಸಿತು. ಅಲ್ಲಿ ಕಾಕರ್ ತನ್ನ ಚಿಕ್ಕಮ್ಮ ಕಮಲಾ ಚೌಧರಿಯವರ ಮನೆಯಲ್ಲಿ ಆಶ್ರಯ ಪಡೆದು ತಾಂತ್ರಿಕ ಶಿಕ್ಷಣವನ್ನು ಮುಂದುವರಿಸಿದರು. [೩] 1958 ರಲ್ಲಿ ಗುಜರಾತ್ ವಿಶ್ವವಿದ್ಯಾಲಯದಿಂದ ಮೆಕ್ಯಾನಿಕಲ್ ತಾಂತ್ರಿಕ ಶಿಕ್ಷಣದಲ್ಲಿ ಬಿಇ ಪದವಿ ಪಡೆದ ನಂತರ, ಕಾಕರ್ ವ್ಯಾಪಾರ ಆಡಳಿತದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದರು (ಡಿಪಿಎಲ್. -ಕೆಎಫ್‌ಎಂ.) ಮ್ಯಾನ್‌ಹೀಮ್ ವಿಶ್ವವಿದ್ಯಾಲಯದಲ್ಲಿ (1960-64), ಮತ್ತು ವಿಯೆನ್ನಾ ವಿಶ್ವವಿದ್ಯಾಲಯದಲ್ಲಿ ಅರ್ಥಶಾಸ್ತ್ರದಲ್ಲಿ ಡಾಕ್ಟರೇಟ್ ಪದವಿ ಪಡೆದರು . [೫] ಅವರು 1971 ರಲ್ಲಿ ಫ್ರಾಂಕ್‌ಫರ್ಟ್ ವಿಶ್ವವಿದ್ಯಾಲಯದ ಸಿಗ್ಮಂಡ್-ಫ್ರಾಯ್ಡ್ ಇನ್‌ಸ್ಟಿಟ್ಯೂಟ್‌ನಲ್ಲಿ ಮನೋವಿಶ್ಲೇಷಣೆಯ ತರಬೇತಿಯನ್ನು ಪ್ರಾರಂಭಿಸಿದರು.

1975 ರಲ್ಲಿ ಸುಧೀರ್ ಕಾಕರ್ ತನ್ನ ಚಿಕ್ಕಮ್ಮ ಕಮಲಾಳೊಂದಿಗೆ ದೆಹಲಿಗೆ ತೆರಳಿದರು. [೩] ಪ್ರಸ್ತುತ ಕಾಕರ್ ಅವರು ಗೋವಾದಲ್ಲಿ ನೆಲೆಸಿದ್ದಾರೆ. ಜರ್ಮನ್ ಬರಹಗಾತಿ೯ ಮತ್ತು ತುಲನಾತ್ಮಕ ಧರ್ಮಗಳ ವಿದ್ವಾಂಸರಾದ ಕ್ಯಾಥರೀನಾಳನ್ನು ವಿವಾಹವಾಗಿದ್ದಾರೆ. [೬]

ವೃತ್ತಿ[ಬದಲಾಯಿಸಿ]

1975 ರಲ್ಲಿ ಭಾರತಕ್ಕೆ ಮರಳಿದ ನಂತರ, ಸುಧೀರ್ ಕಾಕರ್ ಅವರು ದೆಹಲಿಯಲ್ಲಿ ಮನೋವಿಶ್ಲೇಷಕರಾಗಿ ಅಭ್ಯಾಸವನ್ನು ಆರಂಭಿಸಿದರು, ಅಲ್ಲಿ ಅವರು ಭಾರತೀಯ ತಂತ್ರಜ್ಞಾನ ಸಂಸ್ಥೆಯ ಮಾನವಿಕ ಮತ್ತು ಸಾಮಾಜಿಕ ವಿಜ್ಞಾನ ವಿಭಾಗದ ಮುಖ್ಯಸ್ಥರಾಗಿದ್ದರು. ಅವರು ಹಾರ್ವರ್ಡ್ (2001-02) ನಲ್ಲಿ ವಿಶ್ವ ಧರ್ಮಗಳ ಅಧ್ಯಯನ ಕೇಂದ್ರದಲ್ಲಿ 40 ನೇ ವಾರ್ಷಿಕೋತ್ಸವದ ಹಿರಿಯ ಫೆಲೋ ಆಗಿದ್ದಾರೆ, ಚಿಕಾಗೊ ವಿಶ್ವವಿದ್ಯಾಲಯಗಳಲ್ಲಿ ಸಂದರ್ಶಕ ಪ್ರಾಧ್ಯಾಪಕರು (1989–93), ಮೆಕ್‌ಗಿಲ್ (1976-77), ಮೆಲ್ಬರ್ನ್ (1981), ಹವಾಯಿ (1998) ಮತ್ತು ವಿಯೆನ್ನಾ (1974–75), INSEAD, ಫ್ರಾನ್ಸ್ (1994-2013). ಅವರು ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ, ಪ್ರಿನ್ಸ್ ಟನ್, ವಿಸ್ಸೆನ್ಸ್ ಶಾಫ್ಟ್ಸ್ ಕೊಲ್ಲೆಗ್ (ಇನ್ಸ್ಟಿಟ್ಯೂಟ್ ಆಫ್ ಅಡ್ವಾನ್ಸ್ಡ್ ಸ್ಟಡಿ), ಬರ್ಲಿನ್, ಸೆಂಟರ್ ಫಾರ್ ಅಡ್ವಾನ್ಸ್ಡ್ ಸ್ಟಡಿ ಆಫ್ ಹ್ಯುಮಾನಿಟೀಸ್, ಕಲೋನ್ ವಿಶ್ವವಿದ್ಯಾಲಯದಲ್ಲಿ ಫೆಲೋ ಆಗಿದ್ದಾರೆ.

ಕಾಕರ್ ಅವರು ಅವರ ಪ್ರಸ್ತುತ ವಾಸಸ್ಥಳವಾದ ಭಾರತದ ಗೋವಾಕ್ಕೆ ತೆರಳುವ ಮುನ್ನ 25 ವರ್ಷಗಳ ಕಾಲ ನವದೆಹಲಿಯಲ್ಲಿ ಖಾಸಗಿ ಮನೋವಿಶ್ಲೇಷಣಾ ಅಭ್ಯಾಸದಲ್ಲಿದ್ದರು. [೬] ಅವರು ಪ್ರಸ್ತುತ ಗೋವಾ ವಿಶ್ವವಿದ್ಯಾಲಯದಲ್ಲಿ ಸಂದರ್ಶಕ ಪ್ರಾಧ್ಯಾಪಕರಾಗಿದ್ದಾರೆ. [೭] ಮಕ್ಕಳ ಅತ್ಯಾಚಾರದ ಅಪರಾಧಿಗಳ ವಿರುದ್ಧ ಮೃದುತ್ವವನ್ನು ಪ್ರತಿಪಾದಿಸುವ ಮತ್ತು ಕುಟುಂಬದ ಖ್ಯಾತಿಯ ರಕ್ಷಣೆ,ಮಕ್ಕಳ ಸುರಕ್ಷತೆಯ ಮೇಲೆ ಕುಟುಂಬದ ಬಾಂಧವ್ಯವನ್ನು ಒತ್ತಿಹೇಳುವ ಮೂಲಕ ಅವರು 2018 ರಲ್ಲಿ ಮಕ್ಕಳ ಅತ್ಯಾಚಾರದ ಮರಣದಂಡನೆಗೆ ಸಂಬಂಧಿಸಿದ ವಿಚಾರ ಸಂಕಿರಣದಲ್ಲಿ ವಿವಾದವನ್ನು ಸೃಷ್ಟಿಸಿದರು,. [೮]

ಮನೋವಿಶ್ಲೇಷಣೆ ಮತ್ತು ಅತೀಂದ್ರಿಯತೆ[ಬದಲಾಯಿಸಿ]

ಮನೋವಿಶ್ಲೇಷಣೆ ಮತ್ತು ಅತೀಂದ್ರಿಯತೆಯ ನಡುವಿನ ಸಂಬಂಧವು ಸುಧೀರ್ ಕಾಕರ್ ಅವರ ಕೆಲಸದ ಒಂದು ಭಾಗವಾಗಿದೆ. ಅವರ ವ್ಯಕ್ತಿತ್ವದ ವಿಶ್ಲೇಷಣೆಗಳೆಂದರೆ, ದಿ ಇನ್ನರ್ ವರ್ಲ್ಡ್ (1978) ನಲ್ಲಿ ಸ್ವಾಮಿ ವಿವೇಕಾನಂದ , ಇಂಟಿಮೆಟ್ ರಿಲೇ‌ಷ್ ನ್ಸ್ ಮೋಹನ್ ದಾಸ್ ಗಾಂಧಿ (1989), ಮತ್ತು ಅನಾಲಿಸ್ಫ ಆಂಡ್ ಮಿಸ್ಟಿಕ್ (1991) ನಲ್ಲಿ ರಾಮಕೃಷ್ಣ ಅವರ ವಿಶ್ಲೇಷಣೆ. [೯] [೧೦]

ಕಾಕರ್ ಅವರ ಕಾದಂಬರಿ ಎಕ್ಟಾಸಿಯಲ್ಲಿ (2003) "ಸಂದೇಹವಾದಿಗಳು ಮತ್ತು ಅತೀಂದ್ರಿಯ ಮನಸ್ಸುಗಳ ಬಗ್ಗೆ ಪ್ರತ್ಯೇಕವಾಗಿ ಬರೆಯಲಾಗಿದೆ. ಮತ್ತು "ಆಧ್ಯಾತ್ಮಿಕ ಭಾರತದ ಆತ್ಮಚಿತ್ರದ ಮೂಲಕ ಪ್ರಯಾಣದ ಆರಂಭ" [೧೧] ಕಥೆಯು ರಾಜಸ್ಥಾನದಲ್ಲಿ 1940 ಅಥವಾ 1960 ರ ದಶಕದಲ್ಲಿದೆ [೧೨]

ಕಾಕರ್ ತನ್ನ ಮನೋವಿಶ್ಲೇಷಣೆಯ ತಿಳುವಳಿಕೆಯನ್ನು ಈ "ಮೂರು ಆಧ್ಯಾತ್ಮಿಕ ವ್ಯಕ್ತಿಗಳಾದ ಸ್ವಾಮಿ ವಿವೇಕಾನಂದ, ಗಾಂಧಿ, ರಾಮಕೃಷ್ಣ ಅವರಿಗೆ ಅನ್ವಯಿಸಿದಾಗ, ಅವರ ವಿಶ್ಲೇಷಣೆಗಳು " ಜೆಫ್ರಿ ಮ್ಯಾಸನ್‌ನಂತೆಯೇ ಸಂಪೂರ್ಣ ಕಡಿತಗೊಂಡಿರುತ್ತದೆ ಎಂದು ಮನೋವಿಶ್ಲೇಷಕ ಅಲನ್ ರೋಲ್ಯಾಂಡ್ (2009)ಬರೆಯುತ್ತಾರೆ. ಮನೋವಿಶ್ಲೇಷಣೆಯ ದೃಷ್ಟಿಕೋನದಿಂದ ಕಾಕರ್‌ನ ಅತೀಂದ್ರಿಯತೆಯ ಸೈದ್ಧಾಂತಿಕ ತಿಳುವಳಿಕೆಯನ್ನು ರೋಲ್ಯಾಂಡ್ ವಿವಾದಿಸುತ್ತಾನೆ ಮತ್ತು "ಆಧ್ಯಾತ್ಮಿಕ ಆಕಾಂಕ್ಷೆಗಳು, ಅಭ್ಯಾಸಗಳು ಮತ್ತು ಅನುಭವಗಳು ಮುಖ್ಯವಾಗಿ ಹಿಂಜರಿಕೆಯನ್ನು ಒಳಗೊಂಡಿದೆಯೇ ಎಂಬುದು ಹೆಚ್ಚು ಪ್ರಶ್ನಾರ್ಹವಾಗಿದೆ" ಎಂದು ಬರೆಯುತ್ತಾರೆ. [೯]

ವೈಯಕ್ತಿಕ ಮಟ್ಟದಲ್ಲಿ, ಕಾಕರ್ ಅವರಿಗೆ ಆಧ್ಯಾತ್ಮಿಕತೆ ಎಂದರೆ ವ್ಯಕ್ತಿಯು, ನಿಸರ್ಗ, ಕಲೆ, ಸಂಗೀತ ಮತ್ತು ದೈವಿಕತೆಯೊಂದಿಗೆ ಆಳವಾಗಿ ಸಂಪರ್ಕಿಸುವ ಕ್ಷಣಗಳು. ಅವರ ಆಧ್ಯಾತ್ಮಿಕ ನಂಬಿಕೆಗಳು ವೈಚಾರಿಕವಾದಿ ತಂದೆ ಮತ್ತು ಧಾರ್ಮಿಕ ಮನೋಭಾವದ ತಾಯಿಯ ಸಮ್ಮಿಳಿತದಿಂದ ಪ್ರಭಾವಿತವಾಗಿದೆ.[೧೩]

ಪ್ರಶಸ್ತಿಗಳು ಮತ್ತು ಗೌರವಗಳು[ಬದಲಾಯಿಸಿ]

ಕಾಕರ್ ಅವರಿಗೆ 1987 ರ ಅಮೆರಿಕನ್ ಆಂಥ್ರೊಪೊಲಾಜಿಕಲ್ ಅಸೋಸಿಯೇಷನ್ನ ಸೈಕಾಲಾಜಿಕಲ್ ಆಂಥ್ರೋಪಾಲಜಿಗಾಗಿ ಬಾಯ್ಯರ್ ಪ್ರಶಸ್ತಿಯನ್ನು ನೀಡಲಾಯಿತು. [೧೪] ಅವರು ಆರ್ಡರ್ ಆಫ್ ಮೆರಿಟ್, ಫೆಡರಲ್ ರಿಪಬ್ಲಿಕ್ ಆಫ್ ಜರ್ಮನಿ, ಫೆಬ್ರವರಿ 2012, ವಿಶಿಷ್ಟ ಸೇವಾ ಪ್ರಶಸ್ತಿ, ಇಂಡೋ-ಅಮೇರಿಕನ್ ಸೈಕಿಯಾಟ್ರಿಕ್ ಅಸೋಸಿಯೇಷನ್, 2007, ಫೆಲೋ, ನ್ಯಾಷನಲ್ ಅಕಾಡೆಮಿ ಆಫ್ ಸೈಕಾಲಜಿ, ಭಾರತ, 2007, ಸದಸ್ಯ, ಅಕಾಡೆಮಿ ಯೂನಿವರ್ಸೆಲ್ ಡೆಸ್ ಕಲ್ಚರ್ಸ್, ಫ್ರಾನ್ಸ್, 2003, ಅಬ್ರಹಾಂ ಕಾರ್ಡಿನರ್ ಪ್ರಶಸ್ತಿ, ಕೊಲಂಬಿಯಾ ವಿಶ್ವವಿದ್ಯಾಲಯ, 2002, ರಾಕ್‌ಫೆಲ್ಲರ್ ರೆಸಿಡೆನ್ಸಿ, ಬೆಲ್ಲಾಜಿಯೊ. ಏಪ್ರಿಲ್ -ಮೇ 1999, ಗೊಥೆ ಇನ್ಸ್ಟಿಟ್ಯೂಟ್, ಜರ್ಮನಿ, 1998, ವಾಟುಮುಲ್ ಡಿಸ್ಟಿಂಗ್ವಿಶ್ಡ್ ಸ್ಕಾಲರ್, ಹವಾಯಿ ವಿಶ್ವವಿದ್ಯಾಲಯ, ಸ್ಪ್ರಿಂಗ್ ಸೆಮಿಸ್ಟರ್, 1998, ನ್ಯಾಷನಲ್ ಫೆಲೋ ಇನ್ ಸೈಕಾಲಜಿ, ಇಂಡಿಯನ್ ಕೌನ್ಸಿಲ್ ಆಫ್ ಸೋಶಿಯಲ್ ಸೈನ್ಸ್ ರಿಸರ್ಚ್, 1992–94, ಮ್ಯಾಕ್ಆರ್ಥರ್ ರಿಸರ್ಚ್ ಫೆಲೋಶಿಪ್, 1993– 94, ಜವಾಹರಲಾಲ್ ನೆಹರು ಫೆಲೋ, 1986-88, ಹೋಮಿ ಭಾಭಾ ಫೆಲೋ, 1979-80. ಯುವ ಬರಹಗಾರರಿಗೆ ಕರೋಲಿ ಫೌಂಡೇಶನ್ ಪ್ರಶಸ್ತಿ, 1963. ಫ್ರೆಂಚ್ ವಾರಪತ್ರಿಕೆಯಾದ ಲೆ ನೌವೆಲ್ ಅಬ್ಸರ್ವೇಟರ್ ಕಾಕರ್ ಅನ್ನು ವಿಶ್ವದ 25 ಪ್ರಮುಖ ಚಿಂತಕರಲ್ಲಿ ಒಬ್ಬನೆಂದು ವಿವರಿಸಿದರೆ, ಜರ್ಮನ್ ಸಾಪ್ತಾಹಿಕ ಡೈ ಜೀಟ್ ಕಾಕರ್ ಅವರನ್ನು 21 ನೇ ಶತಮಾನದ ಇಪ್ಪತ್ತೊಂದು ಚಿಂತಕರಲ್ಲಿ ಒಬ್ಬನೆಂದು ವಿವರಿಸಲಾಗಿದೆ. ದೆಹಲಿಯ ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್‌, ಆಧುನಿಕ ಏಷ್ಯಾದ ಶ್ರೇಷ್ಠ ಚಿಂತಕರ ಸರಣಿಯಲ್ಲಿನ ಪ್ರಬಂಧಗಳನ್ನು ಪ್ರಕಟಿಸುತ್ತಿದೆ. ಕಾಕರ್ ನ 4 ಸಂಪುಟಗಳನ್ನು ಇದು ಒಳಗೊಂಡಿದೆ.

ಕೆಲಸಗಳು[ಬದಲಾಯಿಸಿ]

  • ಮ್ಯಾಡ್ ಮತ್ತು ಡಿವೈನ್: ಸ್ಪಿರಿಟ್ ಮತ್ತುಸೈಕ್ ಇನ್ ದ ಮೊಡೆರ್ನ್ ವರ್ಡ್
  • ಇನ್ನರ್ ವರ್ಲ್ಡ್: ಎ ಸೈಕೋ-ಅನಾಲಿಟಿಕ್ ಸ್ಟಡಿ ಆಫ್ ಚೈಲ್ಢ್ ಹುಡ್ ಅಂಡ್ ಸೊಸೈಟಿ ಇನ್ ಇಂಡಿಯಾ: ಸೈಕೋಅನಾಲಿಟಿಕ್ ಸ್ಟಡಿ ಆಫ್ ಚೈಲ್ಡ್ ಹುಡ್ ಅಂಡ್ ಸೊಸೈಟಿ ಇನ್ ಇಂಡಿಯಾ, OUP ಇಂಡಿಯಾ, 2 ರೆವ್ ಎಡ್ (14 ಅಕ್ಟೋಬರ್ 1982)  (10),  (13)
  • ಶಾಮನ್ಸ್, ಮಸ್ಟಿಕ್ ಮತ್ತು ಡಾಕ್ಟರ್ಸ್
  • ಟೇಲ್ಸ್ ಆಪ್ ಲವ್, ಸೆಕ್ಸ್ ಮತ್ತು ಡೇಂಜರ್
  • ಇಂಟಿಮೇಟ್ ರಿಲೇಷನ್ಸ್
  • ದಿ ಕಲರ್ ಆಪ್ ವೈಲೆನ್ಸ್
  • ದಿ ಇಂಡಿಯ್ನ್ಸ್
    • ಡೈ ಇಂದರ್. ಪೋರ್ಟ್ರಾಟ್ ಐನರ್ ಗೆಸೆಲ್‌ಶಾಫ್ಟ್ (2006) [೧೫]
  • ಕಾಮಸೂತ್ರ
  • ಫ್ರೆಡೆರಿಕ್ ಟೇಲರ್
  • ಅಂಡರ್ ಸ್ಟಾಂಡಿಗ್ ಆರ್ಗ್ನೈಷ್ನ್ಲ್ ಬಿಹೇವಿಯರ್
  • ಕೊನಪ್ಲೀಕ್ಟ್ ಆಂಡ್ ಚಾಯ್ಸ್
  • ಐಡೆಂಟಿಟಿ ಆಂಡ್ ಅಡಲ್ಟ್ ಹುಡ್
  • ದಿ ಅನಾಲಿಸ್ಟ್ ಆಂಡ್ ದಿ ಮೈಸ್ಟಿಕ್
  • ಲಾ ಫೋಲೆ ಎಟ್ ಲೆ ಸೇಂಟ್
  • ಕಲ್ಚರ್ ಆಂಡ್ ಸೈಕ್
  • ದಿ ಇಂಡಿಯನ್ ಸೈಕ್
  • ದಿ ಎಸೆನ್ಸಿಯಲ್ ರೈಟಿಂಗ್ ಒಪ್ ಸುಧೀರ್ ಕಾಕರ್
  • ಅ ಬುಕ್ ಆಪ್ ಮೆಮೊರಿ, 2011

ಕಾಲ್ಪನಿಕ

  • ದಿ ಆಸ್ಟಿಕ್ ಆಪ್ ಡಿಸೈರ್
  • ಇಂಡಿಯನ್ ಲವ್ ಸ್ಟೋರಿಸ್
  • ಎಕ್ಟಾಸಿ
  • ಮೀರಾ ಆಂಡ್ ದಿ ಮಹಾತ್ಮ
  • ದಿ ಕ್ರಿಮಸನ್ ಥ್ರೋನ್
  • ದಿ ಡೆವಿಲ್ ಟೇಕ್ ಲವ್

ಮತ್ತಷ್ಟು ಓದುವಿಕೆ[ಬದಲಾಯಿಸಿ]

  • ಟಿಜಿ ವೈದ್ಯನಾಥನ್ ಮತ್ತು ಜೆಫ್ರಿ ಜೆ. ಕೃಪಾಲ್ (ಸಂಪಾದಕರು): ವಿಷ್ಣು ಒನ್ ಫ್ರೆಡ್ಸ್ ಡೆಸ್ಕ್‌ನಲ್ಲಿ : ಎ ರೀಡರ್ ಇನ್ ಸೈಕೋಅನಾಲಿಸಿಸ್ ಅಂಡ್ ಹಿಂದೂ ಧರ್ಮ, ಆಕ್ಸ್‌ಫರ್ಡ್ ಯೂನಿವರ್ಸಿಟಿ ಪ್ರೆಸ್, , ಪೇಪರ್‌ಬ್ಯಾಕ್ (ಆವೃತ್ತಿ: 2003)
  • ಗಿರೀಂದ್ರಶೇಖರ್ ಬೋಸ್

ಟಿಪ್ಪಣಿಗಳು[ಬದಲಾಯಿಸಿ]

 

ಉಲ್ಲೇಖಗಳು[ಬದಲಾಯಿಸಿ]

  • Singh, Khushwant (25 April 2011), "Me and my couch: A review of A Book of Memory—Confessions and Reflections By Sudhir Kakar, Penguin/Viking, Pages: 318, Rs. 499", Outlook

ಬಾಹ್ಯ ಕೊಂಡಿಗಳು[ಬದಲಾಯಿಸಿ]

[[ವರ್ಗ:ಜೀವಂತ ವ್ಯಕ್ತಿಗಳು]] [[ವರ್ಗ:೧೯೩೮ ಜನನ]]

  1. "A book of Memory: Confessions and Reflections" Sudhir Kakar, Viking Press
  2. Otta, Arvind. "Psychologs Magazine". Psychologs Magazine. Utsaah.
  3. ೩.೦ ೩.೧ ೩.೨ ೩.೩ ೩.೪ ೩.೫ ೩.೬ Singh 2011.
  4. Kakar, Sudhir. "Colors of Violence." Chapter 2, p25.
  5. "Sudhir Kakar".
  6. ೬.೦ ೬.೧ Katarina Kakar (2013). Moving to Goa. Viking.
  7. "Directorate of Visiting Research Professors Programme (DVRPP)".
  8. "Interview with Sudhir Kakar".
  9. ೯.೦ ೯.೧ Roland, Alan (2009). "Mysticism and Psychoanalysis". Encyclopedia of Psychology and Religion. US: Springer. pp. 594–596. doi:10.1007/978-0-387-71802-6_449. ISBN 978-0-387-71801-9.
  10. In The Indian Psyche, 125–188. 1996 New Delhi: Viking by Penguin. Reprint of 1991 book.
  11. "Agony of the ascetic". Living Media India Limited. 9 April 2001. Retrieved 22 January 2016.
  12. "The Rediff Interview/Psychoanalyst Sudhir Kakar". 2001. Retrieved 1 April 2008.
  13. Sudhir Kumar (2006). "Culture and Psychoanalysis: A Personal Journey". Social Analysis: The International Journal of Anthropology. Vol. 50, No. 2. Berghahn Books. pp. 25–44.
  14. "Boyer Prize for Contributions to Psychoanalytic Anthropology". Society for Psychological Anthropology.
  15. Renée Zucker (7 October 2006). "Das System der Klaglosigkeit". Die Tageszeitung: Taz (Book review). die tageszeitung. p. 1007. Retrieved 1 January 2008.