ಸದಸ್ಯ:Noorsamadabbalagere

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ನೂರ್ ಸಮದ್, ಎ.ಎಸ್(ನೂರ್ ಸಮದ್ ಅಬ್ಬಲಗೆರೆ ಎಂದು ಪ್ರಚಲಿತ), ಮೂಲತಃ ಶಿವಮೊಗ್ಗ ಜಿಲ್ಲೆಯವನು. ತಂದೆ : ಅಬ್ಬಾಸ್ ಅಬ್ಬಲಗೆರೆ, ತಾಯಿ : ರುಖಿಯಾಬಿ . ನನ್ನ ಹುಟ್ಟೂರು ಅಬ್ಬಲಗೆರೆ, ಶಿವಮೊಗ್ಗ ತಾಲ್ಲೂಕು. ವಿದ್ಯಾಭ್ಯಾಸ: ಎಂ. ಎಸ್ಸಿ(ಕೃಷಿ) ಕೀಟಶಾಸ್ತ್ರ. ಪ್ರಸ್ತುತ ಕೃಷಿ ಅಧಿಕಾರಿಯಾಗಿ , ಕೃಷಿ ಇಲಾಖೆಯ, ರಾಜ್ಯ ಪೀಡೆನಾಶಕ ಪರೀಕ್ಷಣಾ ಪ್ರಯೋಗಾಲಯದಲ್ಲಿ ಸೇವೆ ಸಲ್ಲಿಸುತ್ತಿದ್ದೇನೆ. ಕನ್ನಡ ಸಾಹಿತ್ಯದಲ್ಲಿ ಅಪಾರ ಪ್ರೀತಿಯುಳ್ಳವನಾಗಿದ್ದು ನಾಲ್ಕು ಕವನ ಸಂಕಲನಗಳು" ಅಂಕುರ"(ಚುಟುಕು ), "ಮರಣೋತ್ತರ ಸತ್ಕಾರ", ಹಾಡು ಪುಟಾಣಿ ಪದ, "ವರ್ಣ ಮಾಲೆ ನಾದಲೀಲೆ' ಹೊರ ತಂದಿದ್ದೇನೆ. " ಸಮಗ್ರ ಪೀಡೆ ನಿರ್ವ‍ಹಣೆ' ಎಂಬ ವೈಜ್ಞಾನಿಕ ಕೃತಿಯನ್ನ ಹೊರ ತಂದಿದ್ದೇನೆ. ಒಟ್ಟು ೬ ರಾಜ್ಯ ಪ್ರಶಸ್ತಿಗಳು ನನ್ನ ಸಾಹಿತ್ಯಕ್ಕೆ ದೊರಕಿದೆ. ಕಳೆದ ೩೪ ವಾರಗಳಿಂದ ಪ್ರಜಾವಾಣಿಯ "ಸಹಪಾಠಿ" ಪತ್ರಿಕೆಯಲ್ಲಿ ಪ್ರತೀ ಶನಿವಾರ " ಕೀಟ ಪ್ರಪಂಚ" ಅಂಕಣದಲ್ಲಿ ನನ್ನ ಲೇಖನ ಪ್ರಕಟವಾಗುತ್ತಿದೆ. ಛಾಯಾಚಿತ್ರದಲ್ಲಿ ಆಸಕ್ತಿ. ಸಾಕಷ್ಟು ವಿಸ್ಮಯ ಕೀಟಗಳನ್ನು ಸೆರೆ ಹಿಡಿದಿದ್ದೇನೆ. ಹಲವಾರು ನಾಟಕಗಳಲ್ಲಿ, ಚಲನ ಚಿತ್ರಗಳಲ್ಲಿ ಅಭಿನಯಿಸಿದ್ದೇನೆ.