ಸದಸ್ಯ:Noor Ayesha H S/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಚಿಕ್ಕೋಡಿ ರಸ್ತೆ
            ಗಣೇಶ್ ಹುಕ್ಕೇರಿ - ಶಾಸಕರು,ಸಡಲಗ ಕ್ಷೇತ್ರ, ಚಿಕ್ಕೋಡಿ ತಾಲ್ಲೂಕು, ಬೆಳಗಾವಿ ಜಿಲ್ಲೆ, ಕರ್ನಾಟಕ 

'ಕರಿಘನ ಅಂಕುಶ ಕಿರಿದೆ'ನ್ನಬಹುದೆ? ಬಾರದಯ್ಯಾ 'ಕಿರಿಘನ ವಜ್ರಕಿರಿದೆ'ನ್ನಬಹುದೆ? ಬಾರದಯ್ಯಾ,'ತಮ್ಮಂಥ ಘನ,ಜ್ಯೋತಿ ಕಿರಿದೆನ್ನಬಹುದೆ' ? ಬಾರದಯ್ಯಾ, 'ಮರೆಹು ಘನ ನಿಮ್ಮ ನೆನೆವ ಮನ ಕಿರಿದೆನ್ನಬಹುದೆ' ? ಬಾರದಯ್ಯಾ, ಕೂಡಲ ಸಂಗಮ ದೇವಾ

                  - ಬಸವ ವಚನ 

ಅಂಕುಶವು ಸಣ್ಣದಿದ್ದರು ಆನೆಯನ್ನು ಅಂಕಿತದಲ್ಲಿಡುತ್ತದೆ, ವಜ್ರಾಯುಧವು ಸಣ್ಣದಿದ್ದರು ಪರ್ವತವನ್ನು ಸೀಳುತ್ತದೆ, ದೀಪವು ಸಣ್ಣದಾದರೂ ಕಗ್ಗತ್ತಲೆಯನ್ನು ಓಡಿಸುತ್ತದೆ,ನಿಮ್ಮ ಚಿಂತನೆಯಲ್ಲಿ ಮಗ್ನವಾದ ಮನಸ್ಸು ಸಣ್ಣದಾದರೂ ನಿಮ್ಮ ಮರೆವಿನಿಂದ ಉಂಟಾದ ಮಹಾ ಮಾಯೆಯನ್ನು ಹೊಡೆದೋಡಿಸುತ್ತದೆ .

ರಾಜಕೀಯ ತಂದೆ[ಬದಲಾಯಿಸಿ]

ಜಗತ್ತಿನ ಬಲಹೀನರಿಗೆ ಸ್ಪೂರ್ತಿದಾಯಕ ಚಿಲುಮೆ ನೀಡುವಂತಹ ಸಂದೇಶ ನೀಡಿದ ಜಗತ್ಜ್ಯೋತಿ ಬಸವಣ್ಣನವರ ಲಿಂಗಾಯತ ಧರ್ಮದಲ್ಲಿ ಜನಿಸಿದ ಶ್ರೀ ಪ್ರಕಾಶ್ ಬಾಬಣ್ಣ ಹುಕ್ಕೇರಿ - ಸಂಸದರು, ಮುಂಬೈ ಕರ್ನಾಟಕದ ಅಗ್ರಗಣ್ಯ ನಾಯಕರು, ಹಲವು ಬಾರಿ ಶಾಸಕರಾಗಿ ಮತ್ತು ಸಣ್ಣ ಕೈಗಾರಿಕೆ,ಸಕ್ಕರೆ ಸಚಿವರಾಗಿ ಜನರ ಸೇವೆಯನ್ನು ಸಲ್ಲಿಸಿದ ಕೀರ್ತಿಮಾನರು,ಹಾಲಿ ಸಂಸದ್ ಸದ್ಯಸರೂ ಹೌದು .

ಜನನ[ಬದಲಾಯಿಸಿ]

ಇವರ ಮಗನಾಗಿ ದಿನಾಂಕ ೨೪ ಜೂಲೈ ೧೯೭೮ ರಂದು ಗಣೇಶ್ ಹುಕ್ಕೇರಿ ಜನಿಸಿದರು.

ತಾಯಿ[ಬದಲಾಯಿಸಿ]

ತಾಯಿ - ನೀಲಾಂಬಿಕಾ ಪ್ರಕಾಶ್ ಹುಕ್ಕೇರಿ ಇವರ ಮಡಿಲಲ್ಲಿ ಉದಯೋನ್ಮುಖ ಕಂದನಾಗಿ ಬೆಳೆದರು.

ರಾಜಕೀಯ ಆಸಕ್ತಿ[ಬದಲಾಯಿಸಿ]

ಕರ್ನಾಟಕದ ವಿಧಾನಸೌಧ

ಶ್ರೀಯುತ ಗಣೇಶ್ ಹುಕ್ಕೇರಿರವರು ಚಿಕ್ಕವಯಸ್ಸಿನಿಂದಲೇ ರಾಜಕೀಯದ ಆಸಕ್ತಿಯನ್ನು ಹೊಂದಿದ್ದರು. ತನ್ನ ತಂದೆಯವರಿಗೆ ರಾಜಕೀಯದಲ್ಲಿ ಸಹಾಯಕನಾಗಿ ಕಾರ್ಯ ನಿರ್ವಹಿಸುತ್ತಿದರು .೧೯೯೪ ರಿಂದಲೇ ತಮ್ಮ ತಂದೆಯವರ ಜೊತೆ ಚುನಾವಣಾ ಪ್ರಚಾರ ಕಾರ್ಯದಲ್ಲಿ ನಿಷ್ಠೆಯಿಂದ ತೊಡಗಿಕೊಳ್ಳುತ್ತಿದ್ದರು, ೫ ವಿಧಾನ ಸಭೆ ಹಾಗು ಎರಡು ಲೋಕಸಭೆ ಚುನಾವಣೆಗಳಲ್ಲಿ ತಂದೆಯವರ ಗೆಲುವಿಗೆ ಶ್ರಮಿಸಿ ತನ್ನ ಅಪಾರ ಕೊಡುಗೆಯನ್ನು ನೀಡಿದರು.

ವಿದ್ಯಾಭ್ಯಾಸ[ಬದಲಾಯಿಸಿ]

ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡ ಚಿಹ್ನೆ

ತನ್ನ ವಿದ್ಯಾಭ್ಯಾಸವನ್ನು ಪೂರ್ಣಗೊಳಿಸಲು ಧಾರವಾಡ ವಿಶ್ವವಿದ್ಯಾಲಯದಲ್ಲಿ ಎಂ, ಬಿ, ಎ ಅಭ್ಯಸಿಸಿ ಉನ್ನತ ಅಂಕಗಳಲ್ಲಿ ಪದವಿ ಪಡೆದರು.

ರಾಜಕೀಯ ಜೀವನದ ಆರಂಭ[ಬದಲಾಯಿಸಿ]

ಆರಂಭದಿಂದಲೇ ಸಮಾಜಸೇವಕರಾಗಿದ್ದ ಗಣೇಶ್ ಹುಕ್ಕೇರಿ ರವರು ತನ್ನ ರಾಜಕೀಯ ಜೀವನವನ್ನು ಜಿಲ್ಲಾ ಪಂಚಾಯತ್ ಚುನಾವಣೆಯಲ್ಲಿ ಸ್ಪರ್ಧಿಸಿ ಶಶಿಕಲಾ ಜೊಲ್ಲೆ ರವರ ವಿರುದ್ಧ ಜಯ ಸಾಧಿಸುವ ಮೂಲಕ ಆರಂಭಿಸಿದರು. ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ಸದ್ಯಸರಾಗಿಯು ಸೇವೆಸಲ್ಲಿಸಿದ್ದರು.

ರಾಜಕೀಯ ಜೀವನದ ಮುಖ್ಯ ತಿರುವು[ಬದಲಾಯಿಸಿ]

thumb|ಕಾಂಗ್ರೆಸ್ ಪಕ್ಷದ ಚಿಹ್ನೆ ತಂದೆಯವರಾದ ಶ್ರೀಯುತ ಪ್ರಕಾಶ್ ಹುಕ್ಕೇರಿರವರು ೨೦೧೪ ರ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸಿ ಜಯಗಳಿಸಿದಾಗ ತನ್ನ ವಿಧಾನ ಸಭೆ ಸ್ಥಾನಕ್ಕೆ ರಾಜೀನಾಮೆ ನೀಡಬೇಕಾಯಿತು, ಆ ಸ್ಥಾನವನ್ನು ತುಂಬಲು ಕಾಂಗ್ರೆಸ್ ಪಕ್ಷವು ಶ್ರೀ ಗಣೇಶ್ ಹುಕ್ಕೇರಿರವರಿಗೆ ಭಾರತೀಯ ಜನತಾ ಪಕ್ಷಮಹಾಂತೇಶ್ ಖವಟಗಿಮತ್ ರವರ ವಿರುದ್ಧ ಸಡಲಗದ ಮರು ಚುನಾವಣೆಯಲ್ಲಿ ಕಣಕ್ಕಿಳಿಸಿತು. ಸದಾಜನಾನುರಾಗಿ ರುವ ಶ್ರೀಯುತ ಗಣೇಶ್ ಹುಕ್ಕೇರಿಯವರು ಈ ಚುನಾವಣೆಯಲ್ಲಿ ೩೩,ooo ಕ್ಕೂ ಅಧಿಕ ಮತಗಳಿಂದ ಜಯಗಳಿಸಿದರು. ಇವರ ಕಾರ್ಯ ಕ್ಷಮತೆಯನ್ನು ಕಂಡ ಕಾಂಗ್ರೆಸ್ ಸರ್ಕಾರ ಇವರನ್ನು ಆದಾಯ ಇಲಾಖೆಯಲ್ಲಿ ಸಂಸದೀಯ ಕಾರ್ಯದರ್ಶಿಯಾಗಿ ನೇಮಿಸಿತು.

೨೦೧೮ ರ ವಿಧಾನಸಭೆ ಚುನಾವಣೆ[ಬದಲಾಯಿಸಿ]

ಮಿಷನ್ ೧೫೦ ಘೋಷಣೆಯೊಂದಿಗೆ ಕರ್ನಾಟಕದ ೨೦೧೮ ನೇ ಸಾಲಿನ ವಿಧಾನಸಭೆ ಚುನಾವಣೆಯಲ್ಲಿ ಭಾರತದ ಪ್ರಧಾನಮಂತ್ರಿಗಳಾದ ಶ್ರೀಯುತ ನರೇಂದ್ರ ಮೋದಿಜಿ ಹಾಗು ಭಾರತೀಯ ಜನತಾ ಪಕ್ಷದ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ ಶಾ ರವರು ಬಿರುಗಾಳಿಯಂತೆ ಕರ್ನಾಟಕದಾದ್ಯಂತ ಪ್ರಚಾರ ನಡೆಸಿದರು. ಈ ಕಾರಣದಿಂದ ಶ್ರೀಯುತ ಸಿದ್ದರಾಮಯ್ಯನವರ ನೇತೃತ್ವದ ಕಾಂಗ್ರೆಸ್ ಸರ್ಕಾರ ಹಲವು ಜನಪ್ರಿಯ ಯೋಜನೆಗಳನ್ನು ಜಾರಿಗೊಳಿಸಿ ಜನರ ವಿಶ್ವಾಸಕ್ಕೆ ಪಾತ್ರರಾಗಿದ್ದರೂ,ಆಡಳಿತ ವಿರೋಧಿ ಅಲೆ ಇಲ್ಲದಿದ್ದರೂ ಬಹುಮತ ಗಳಿಸಲಿಲ್ಲ.

ಚಿಕ್ಕೋಡಿ ಸಡಲಗ ಕ್ಷೇತ್ರ -ಚುನಾವಣೆ ಫಲಿತಾಂಶ[ಬದಲಾಯಿಸಿ]

ಇಂತಹ ಪರಿಸ್ಥಿತಿಯಲ್ಲೂ ಚಿಕ್ಕೋಡಿ-ಸಡಲಗ ಕ್ಷೇತ್ರದಿಂದ ಶ್ರೀಯುತ ಗಣೇಶ್ ಹುಕ್ಕೇರಿರವರು ತಮ್ಮ ಎರಡನೆಯ ಚುನಾವಣೆಯಲ್ಲಿ ಭಾರತೀಯ ಜನತಾ ಪಕ್ಷದ ಅಣ್ಣಾಸಾಹೇಬ್ ಜೊಲ್ಲೆ[೧] ರವರನ್ನು ೧೧,೦೦೦ ಕ್ಕಿಂತ ಹೆಚ್ಚು ಮತಗಳ ಅಂತರದಿಂದ ಸೋಲಿಸಿ ಜಯಸಾಧಿಸಿದರು. ಈ ಗೆಲುವಿನೊಂದಿಗೆ ತಂದೆಯವರಾದ ಪ್ರಕಾಶ್ ಬಾಬಣ್ಣ ಹುಕ್ಕೇರಿ ರವರ ರಾಜಕೀಯ ಮಾರ್ಗವನ್ನು ಅನುಸರಿಸಿದರು.

ಇತರೆ ರಾಜಕೀಯ ಸ್ಥಾನಗಳು ಮತ್ತು ಕೊಡುಗೆಗಳು[ಬದಲಾಯಿಸಿ]

ಶ್ರೀಯುತರು ಕರ್ನಾಟಕ ಸಕ್ಕರೆ ಫೆಡರೇಶನ್ ನಿರ್ದೇಶಕರಾಗಿ ಕಾರ್ಯನಿರ್ವಹಿಸುತ್ತಿದ್ದು ,ಫೆಡರೇಶನ್ ಉತ್ತಮ ರೀತಿಯಲ್ಲಿ ಕೆಲಸ ಮಾಡಲು ಉತ್ತಮ ಸಲಹೆಗಳನ್ನ ಹಾಗು ಸೂಚನೆಗಳನ್ನು ನೀಡುತ್ತಾ ತನ್ನ ಅನುಭವ ಹಾಗು ಪ್ರಭಾವವನ್ನು ವಿಯೋಗಿಸಿ ಅಭಿವೃದ್ಧಿ ಪಡಿಸುತ್ತಿದ್ದಾರೆ. ಬೆಳಗಾವಿ ಜಿಲ್ಲಾ ಸಹಕಾರಿ ಬ್ಯಾಂಕಿನ ನಿರ್ದೇಶಕರಾಗಿ ಶ್ರೀಯುತರು ಉತ್ತಮ ಸೇವೆ ಸಲ್ಲಿಸಿತ್ತಿದ್ದು ಬ್ಯಾಂಕಿನ ಅಭಿವೃದ್ಧಿ ಗಮನದಲ್ಲಿಟ್ಟಿಕೊಂಡು ಜನರ ಆರ್ಥಿಕ ಸ್ಥಿತಿಯನ್ನು ಸುಧಾರಿಸುವ ದಿಕ್ಕಿನಲ್ಲಿ ಉತ್ತಮ ಕೆಲಸ ಮಾಡುತಿದ್ದರೆ , ಶ್ರೀ ಹಲಸಿದ್ಧನಾಥ ಸಕ್ಕರೆ ಕಾರ್ಖಾನೆಯ ನಿರ್ದೇಶಕರಾಗಿ ರೈತರ ಮತ್ತು ಕಾರ್ಖಾನೆ ಹಿತಾಸಕ್ತಿಯನ್ನು ಕಾಪಾಡುತ್ತಾ ಸಕ್ಕರೆ ಕಾರ್ಖಾನೆಯನ್ನು ಅಭಿವೃದ್ಧಿ ಪಡಿಸಿದ್ದಾರೆ.ಸಡಲಗ ಪ್ರದೇಶದ ಮುಖ್ಯ ಬೆಳೆ ಕಬ್ಬು ಆಗಿದ್ದು , ಕೃಷಿಕರು ಕಬ್ಬಿನ ಕೃಷಿಯನ್ನೇ ಅವಲಂಬಿಸಿದ್ದಾರೆ . ಈ ಕಾರಣದಿಂದ ರೈತರ ಬೇಡಿಕೆಗಳಲ್ಲಿ ಒಂದಾದ ಕಬ್ಬಿಗೆ ಬೆಂಬಲ ಬೆಳೆ ಕೊಡಿಸುವ ಪಾತ್ರವನ್ನು ಸಮರ್ಪಕವಾಗಿ ಮಾಡುತ್ತಾ ಬಂದಿದ್ದಾರೆ.ಈ ರೀತಿಯ ಕಾರ್ಯಗಳನ್ನೂ ಮಾಡುವುದರ ಮೂಲಕ ತನ್ನ ಅನುಭವ ಹಾಗು ಕೌಶಲ್ಯಗಳನ್ನೂ ವೃದ್ಧಿಸಿಕೊಂಡ್ದಿದಾರೆ.

ಚಿಕ್ಕೋಡಿ ತಾಲ್ಲೂಕು -ಸಡಲಗ ಗ್ರಾಮ -ಒಂದು ನೋಟ[ಬದಲಾಯಿಸಿ]

ಭಾರತದ ಇತಿಹಾಸದ ವೀರ ಮಹಿಳೆ ರಾಣಿ ಚೆನ್ನಮ್ಮನವರ ಆಳ್ವಿಕೆ ಪ್ರದೇಶವಾಗಿದ್ದ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲ್ಲೂಕಿನ ಸಡಲಗ ಕ್ಷೇತ್ರ- ಇದು ಚಿಕ್ಕೋಡಿ ಲೋಕಸಭಾ ಕ್ಷೇತ್ರದ ಒಂದು ಭಾಗವಾಗಿದೆ. ಸಾಮಾನ್ಯ ಮತದಾರರು, ಏನ್ ಆರ್ ಐ ಮತದಾರರು ಮತ್ತು ಸೇವಾ ಮತದಾರರು ಸೇರಿದಂತೆ ಒಟ್ಟು ೨,ಒ೬,೨೬೨ ಮತದಾರರಿದ್ದಾರೆ. ಸಾಮಾನ್ಯ ಮತದಾರರಲ್ಲಿ ೧,೦೪,೩೫೫ ಪುರುಷರು, ೧,೦೧,೨೯೨ ಸ್ತ್ರೀ ಮತ್ತು ೧೨ ಇತರರು.ಕ್ಷೇತ್ರದ ಮತದಾರರ ಅನುಪಾತವು ೯೬.೫೨ ಮತ್ತು ಅಂದಾಜು ಸಾಕ್ಷರತೆಯು ೭೬% ಇದೆ ಈ ಕ್ಷೇತ್ರವು ಕನ್ನಡ, ಮರಾಠಿ ಮತ್ತು ಇಂಗ್ಲಿಷ್ ಮಾಧ್ಯಮದ ಶಾಲೆಗಳನ್ನು ಹೊಂದಿದೆ. ಕನ್ನಡವೂ ಮುಖ್ಯ ಮಾತನಾಡುವ ಭಾಷೆಯಾಗಿದ್ದು, ನಗರದ ೮೦% ಜನರ ಮಾತೃಭಾಷೆಯೂ ಆಗಿದೆ. ಈ ಕ್ಷೇತ್ರವು ಮುಂಬೈ ಕರ್ನಾಟಕ ಪ್ರದೇಶದಲ್ಲಿರುವ ಕಾರಣದಿಂದಾಗಿ ಮರಾಠಿಯು ಒಂದು ಮಾತನಾಡುವ ಭಾಷೆ ಆಗಿದೆ. ಇಂತಹ ವಿಭಿನ್ನತೆ ಹೊಂದಿರುವ ಕ್ಷೇತ್ರದಲ್ಲಿ ಐಕ್ಯತೆವನ್ನು ಕಾಪಾಡಿಕೊಂಡು ಅಭಿವೃದ್ಧಿಯಪಥದಲ್ಲಿ ಶ್ರೀಯುತರು ಸಾಗಿಸುತ್ತಿದ್ದಾರೆ .

ಇತರೆ ಒಳ್ಳೆಯ ಕಾರ್ಯಗಳು[ಬದಲಾಯಿಸಿ]

ಶೀಯುತ ಗಣೇಶ್ ಹುಕ್ಕೇರಿರವರು ಉತ್ತರ ಕರ್ನಾಟಕದ ಪ್ರಾದೇಶಿಕ ಕೂಗನ್ನು ತಿಳಿಗೊಳಿಸಿ , ಮಹಾರಾಷ್ಟ್ರದ ಪ್ರಭಾವ ಹೆಚ್ಚಿರುವ ಬೆಳಗಾವಿ ಜಿಲ್ಲೆಯಲ್ಲಿ ಎಂ ಈ ಎಸ ( ಮಹಾರಾಷ್ಟ ಏಕೀಕರಣ ಸಮಿತಿ) ಯ ಪುಂಡಾಟಿಕೆಯನ್ನು ಹಿಮ್ಮೆಟಿಸಿ, ಜನರಲ್ಲಿ ಕನ್ನಡತೆಯ ವಿಶ್ವಾಸವನ್ನು ವೃಧಿಸಿದ್ದಾರೆ.ಮಹದಾಯಿಯಂತಹ ಜ್ವಲಂತ ಸಮಸ್ಯೆ ಇದ್ದಾಗಿಯೂ ಅಶಾಂತಿ ಇಲ್ಲದೆ ಕ್ಷೇತ್ರವನ್ನು ಸಂರಕ್ಷಿಸಿದ್ದಾರೆ ಯುವಕರ ಕಣ್ಮಣಿಯಾಗಿರುವ ಶ್ರೀಯುತ ಗಣೇಶ್ ಹುಕ್ಕೇರಿರವರು ಶೇಕಡಾ ೬೦% ಇರುವ ಯುವಕರನ್ನು ಸನ್ಮಾರ್ಗಿಸುವ ದಿಶೆಯಲ್ಲಿ ಸಾಗಿದ್ದಾರೆ. ಇವರ ಮಾರ್ಗದರ್ಶನ ದಲ್ಲಿ ಯುವಕರು ತಮ್ಮ ಬಾಳನ್ನು ಹಸನ್ಮುಖಿಗೊಳಿಸಕೊಳ್ಳಬಹುದಾಗಿದೆ. ಶ್ರೀಯುತ ಗಣೇಶ್ ಹುಕ್ಕೇರಿರವರು ಸಚಿವನಾಗುವ ಎಲ್ಲ ಅರ್ಹತೆಯನ್ನು ಪಡೆದಿದ್ದು ಭವಿಷ್ಯದಲ್ಲಿ ಸಚಿವರಾಗಿ ಜನಪರ ಕೆಲಸಗಳನ್ನು ಮಾಡುವುದರ ಮೂಲಕ ತನ್ನ ಕ್ಷೇತ್ರ ಸಡಲಗ , ಚಿಕ್ಕೋಡಿ ಜಿಲ್ಲೆ ಹಾಗು ರಾಜ್ಯದ ಹಿತಾಸಕ್ತಿಯನ್ನು ಕಾಪಾಡುವಲ್ಲಿ ಸಫಲರಾಗುತ್ತಾರೆಂದು ಆಶಯಿಸಿಸೋಣ.

ಉಲ್ಲೇಖಗಳು[ಬದಲಾಯಿಸಿ]

[೨]https://en.wikipedia.org/wiki/Ganesh_Hukkeri

[೩]http://www.uniindia.com/ganesh-hukkeri-appointed-as-chief-whip-of-the-coalition-govt-in-karnataka/states/news/1279087.html

[೪]//www.news18.com/news/politics/chikkodi-sadalga-election-results-2018-live-updates-1748163.html

ಬಾಹ್ಯ ಕೊಂಡಿಗಳು[ಬದಲಾಯಿಸಿ]

[೫]https://www.deccanchronicle.com/nation/politics/180218/battleground-ktaka-belagavi-where-the-lingayats-and-mahadayi-brew-a.html

[೬]https://www.deccanchronicle.com/140811/nation-politics/article/%E2%80%98my-father%E2%80%99s-image-my-advantage%E2%80%99

[೭]mesofindia.indiatimes.com/india/belagavi-politicians-bank-on-sugar-rush-for-victory/articleshow/63794072.cms

 1. https://www.thehindu.com/todays-paper/tp-national/tp-karnataka/bjp-fields-jolle-couple/article23566545.ece
 2. https://en.wikipedia.org/wiki/Ganesh_Hukkeri
 3. https://www.news18.com/news/politics/chikkodi-sadalga-election-results-2018-live-updates-1748163.html
 4. //www.news18.com/news/politics/chikkodi-sadalga-election-results-2018-live-updates-1748163.html
 5. https://www.deccanchronicle.com/nation/politics/180218/battleground-ktaka-belagavi-where-the-lingayats-and-mahadayi-brew-a.html
 6. https://www.deccanchronicle.com/140811/nation-politics/article/%E2%80%98my-father%E2%80%99s-image-my-advantage%E2%80%99
 7. mesofindia.indiatimes.com/india/belagavi-politicians-bank-on-sugar-rush-for-victory/articleshow/63794072.cms