ಸದಸ್ಯ:Niroop97/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಾಸ್ಡ್ಯಾಕ್
ಸಂಸ್ಥೆಯ ಪ್ರಕಾರಸ್ಟಾಕ್ ಎಕ್ಸ್ಚೇಂಜ್
ಸ್ಥಾಪನೆStart date and age
ಮಾಲೀಕ(ರು)ನಾಸ್ಡ್ಯಾಕ್, Inc
ಜಾಲತಾಣBusiness.Nasdaq.com


ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ

ಇತಿಹಾಸ[ಬದಲಾಯಿಸಿ]

ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆಯನ್ನು ಸ್ತಾಪಿಸಿದಾಗ ಇದರ ಸಂಕ್ಷಿಪ್ತವು ನ್ಯಾಷನಲ್ ಅಸೋಸಿಯೇಷನ್ ಆಫ್ ಸೆಕ್ಯುರಿಟಿಸ್ ಡೀಲರ್ಸೆ ಆಟೋಮೇಟೆಡ್ ಕೊಟೆಶನ್ ಆಗಿತ್ತು. ನಾಸ್ಡ್ಯಾಕ್ ೧೯೭೧ ರಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸೆಕ್ಯುರಿಟಿಸ್ ಡೀಲರ್ಸ್ ಅನ್ನು ಸ್ಥಾಪಿಸದರು. ಸ್ಟಾಕ್ ಮಾರುಕಟ್ಟೆಯ ಒಡೆತನವನ್ನು ನಿರ್ವಹಿಸುತ್ತಿರುದು ನಾಸ್ಡ್ಯಾಕ್. ನಾಸ್ಡ್ಯಾಕ್ ತನ್ನ ಸ್ವಂತ ಸ್ಟಾಕ್ ವಿನಿಮಯವನ್ನು ಮಾರುಕಟ್ಟೆಯಲ್ಲಿ ಜುಲೈ ೨, ೨೦೦೨ರಂದು ಪಟ್ಟಿಮಾಡಿದರು. ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ಫೆಬ್ರವರಿ ೮, ೧೯೭೧ ರಲ್ಲಿ ವ್ಯಾಪಾರವನ್ನು ಆರಂಭ ಮಾಡಿತು. ಆ ಕಾಲದಲ್ಲಿ ಇದು ಮೊದಲನೆಯ ವಿದ್ಯುನ್ಮಾನ ಸ್ಟಾಕ್ ಮಾರುಕಟ್ಟೆಯಾಗಿತ್ತು. ಮೊದಲಿಗೆ, ಇದು ಕೇವಲ ಒಂದು ಕೊಟೆಶನ್ ಸಿಸ್ಟಮ್ ಆದ್ದುದರಿಂದ ವಿದ್ಯುನ್ಮಾನದ ವಹಿವಾಟು ನಿರ್ವಹಿಸಲು ಸಾದ್ಯವಾಗಲಿಲ್ಲ. ನಾಸ್ಡ್ಯಾಕ್ ತನ್ನ ಶೇರು ಮಾರುಕಟ್ಟೆ ಬಿಡ್ ಬೆಲೆ ಮತ್ತು ಸ್ಟಾಕ್ ವ್ಯಾಪಾರದ ಬೆಲೆಯನ್ನು ಕಡಿಮೆ ಮಾಡಿತ್ತು. ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆಯಲ್ಲಿ ಮುಂಚಿನಿಂದಲೆ ಒವರ್ ದಿ ಕೌಂಟರ್ ಎಕ್ಸ್ಚೇಂಜ್ ಪದತ್ತಿಯ ಮೂಲಕ ಜನರು ಅತಿ ಎಚ್ಚು ವ್ಯಾಪಾರವನ್ನು ಮಾಡುತ್ತಿದ್ದರು.೧೯೮೭ ರಲ್ಲಿ ನಾಸ್ಡ್ಯಾಕ್ ಸ್ಟಾಕ್ ಎಕ್ಸ್ಚೇಂಜ್ ಅನ್ನು ಒವರ್ ದಿ ಕೌಂಟರ್ ಎಕ್ಸ್ಚೇಂಜ್ ಎಂದೆ ಪರಿಗಣಿಲಾಗಿಸಲಾಯಿತು ಹಾಗು ಮಾಸಿಕ ಮಾರ್ಗದರ್ಶಿಯಲ್ಲಿ ಇದನ್ನು ಪ್ರಕಟಣ ಮಾಡಿದರು. ಇದನ್ನು ಸ್ಟ್ಯಾಂಡರ್ಡ್ ಅಂಡ್ ಪೂವ್ರ್ಸ್ ಕಾರ್ಪೋರೇಷನ್ ರವರು ಬಿಡುಗಡೆ ಮಾಡಿದರು. ಕೆಲವು ವರ್ಷಗಳ ನಂತರ ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ವ್ಯಾಪಾರ, ಪರಿಮಾಣ ವರದಿ ಮತ್ತು ಸ್ವಯಂಚಾಲಿತ ವ್ಯಾಪಾರ ವ್ಯವಸ್ಥೆಗಳು ಸೇರಿಸುವ ಮೂಲಕ, ಸ್ಟಾಕ್ ಮಾರುಕಟ್ಟೆಯನ್ನು ವಿಸ್ತರಿಸದರು.[೧]

ಪರಿಚಯ[ಬದಲಾಯಿಸಿ]

ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ಅಮೇರಿಕದ ಷೇರು ಮಾರುಕಟ್ಟೆ. ಇದು ವಿಶ್ವದ ಎರಡನೇ-ಅತಿದೊಡ್ಡ ವಿನಿಮಯವಾಗಿದೆ. ಯುನೈಟೆಡ್ ಸ್ಟೇಟ್ಸ್ ನಲ್ಲಿ ನಾಸ್ಡ್ಯಾಕು ತನ್ನಮೊದಲ ಆನ್ಲೈನ್ ವಹಿವಾಟನ್ನು ಆರಂಭಿಸಿದರು. ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ಮೈಕ್ರೋಸಾಫ್ಟ್, ಆಪಲ್, ಸಿಸ್ಕೋ, ಒರಾಕ್ಲ್ ಮತ್ತು ಡೆಲ್ ಹೊಸ ಬೆಳವಣಿಗೆಯ ಕಂಪನಿಗಳನ್ನು ಆಕರ್ಷಿಸಿದೆ ಹಾಗು ಐಪಿಒ ಅಲ್ಲಿ ಆಧುನೀಕರಿಸಲು ಸಹಾಯ ಮಾಡಿದೆ. ಇದರ ಮುಖ್ಯ ಸೂಚ್ಯಂಕ,ನಾಸ್ಡ್ಯಾಕ್ ಕಾಂಪೋಸೈಟ ಅನ್ನು ಆರಂಭದಿಂದಲೂ ಪ್ರಕಟಿಸಲಾಗಿದೆ. ೧೦೦ ಬೃಹತ್-ಬಂಡವಾಳದ ಕಂಪನಿಗಳನ್ನು ಇಂಡಿಕ್ಸಿನ ಲೆಕ್ಕಕೆ ತೆಗೆದುಕೊಳ್ಳುತ್ತಿದ್ದಾರೆ. ೧೯೯೨ ರಲ್ಲಿ ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ಮೊದಲ ಭದ್ರತಾ ಮಾರುಕಟ್ಟೆಯಾಗಿ ಖಂಡಾಂತರ ಸಂಪರ್ಕ ರೂಪಿಸಲು ಲಂಡನ್ ಷೇರು ವಿನಿಮಯದ ಜೊತೆ ಸೇರಿಕೊಂಡಿದರು. ೨೦೦೦ರಲ್ಲಿ ನ್ಯಾಷನಲ್ ಅಸೋಸಿಯೇಷನ್ ಆಫ್ ಸೆಕ್ಯುರಿಟಿಸ್ ಡೀಲರ್ಸ್ ಸಾರ್ವಜನಿಕ ಕಂಪೆನಿ ಗೆ ವ್ಯವಹಾರ ನಡೆಸಲು ಮಾರ್ಕೆಟನ್ನು ಹೊರಹೊಮ್ಮಿಸಿದರು. ೨೦೦೬ ರಲ್ಲಿ ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆಯ ಸ್ಥಿತಿಯ ಪರವಾನಕಾಗಿ ಇದನ್ನು ರಾಷ್ಟ್ರೀಯ ಭದ್ರತಾ ವಿನಿಮಯ ಸ್ಟಾಕ್ ಮಾರುಕಟ್ಟೆಯನ್ನಾಗಿ ಬದಲಯಿಸಿದರು. ೨೦೦೭ ರಲ್ಲಿ ನಾಸ್ಡ್ಯಾಕ್ ಒ.ಎಂ.ಎ‍‍ಕ್ಸ್ ರ ಜೋತೆ ವಿಲೀನಗೊಂಡಿತು, ಇದು ನಾರ್ಡಿಕ್ ದೇಶಗಳಲ್ಲಿ ಪ್ರಮುಕ ಸ್ಟಾಕ್ ಎಕ್ಸ್ಚೇಂಜ್ ಹಾಗು ಜಾಗತಿಕವಾಗಿ ಹರಡಿದೆ, ಹಾಗು ಇದರ ಹೆಸರು ನಾಸ್ಡ್ಯಾಕ್ ಒ.ಎಂ.ಎಕ್ಸ್ ಗ್ರೂಪ್ ಎಂದು ಬದಲಾಗಿದೆ.ಯಾವದಾದರು ಒಂದು ಕಂಪನಿಯ ಹೆಸರು ನಾಸ್ಡ್ಯಾಕ್ ಸ್ಟಾಕ್ ಎಕ್ಸ್ಚೇಂಜ್ ಅಲ್ಲಿ ಬರಬೇಕು ಅಂದರೆ ವಿನಿಮಯ ಪಟ್ಟಿಯಲ್ಲಿ ಅರ್ಹತೆಯನ್ನು ಪಡೆಯಬೇಕೆಂದರೆ ಆ ಸಂಸ್ಥೆಯು ಯುನೈಟೆಡ್ ಸ್ಟೇಟ್ಸ್ ಸೆಕ್ಯುರಿಟೀಸ್ ಮತ್ತು ವಿನಿಮಯ ಆಯೋಗದಲ್ಲಿ ದಾಖಲಿಸಿರ ಬೇಕು ಹಾಗು ಕನಿಷ್ಠ ಮೂರು ಮಾರ್ಕೇಟ್ ಮೇಕ್ರ್ಸ್ ಅವರ ಮತ್ತು ಸ್ವತ್ತುಗಳ, ಬಂಡವಾಳ, ಸಾರ್ವಜನಿಕ ಹಂಚಿಕೆಗಳಲ್ಲಿ ಕನಿಷ್ಠ ಅರ್ಹತೆಯನ್ನು ಪೂರೈಸಬೇಕು. ಫೆಬ್ರವರಿ ೨೦೧೧ ರಲ್ಲಿ, ಎನ್.ವೈ.ಎಸ್.ಯಿ ಯುರೋನೆಕ್ಸ್ಟ್ ಡಾಯ್ಚಿ ಬೋರ್ಸ್ ಜೊತೆ ವಿಲೀನವನ್ನು ಘೋಷಿತಸಿದರು. ಎನ್.ವೈ.ಎಸ್.ಯಿ ಯುರೋನೆಕ್ಸ್ಟ್ ಮಾರುಕಟ್ಟೆ ಮೌಲ್ಯ $ ೯.೭೫ ಬಿಲಿಯನ್. ನಾಸ್ಡಾಕ್ $ ೫.೭೮ ಶತಕೋಟಿ ಮಾಡಿತು. ಯುರೋಪಿಯನ್ ಅಸೋಸಿಯೇಷನ್ ಸೆಕ್ಯುರಿಟಿಸ್ ಡೀಲರ್ಸೆ ಆಟೋಮೇಟೆಡ್ ಕೊಟೇಶನ್ ಸಿಸ್ಟಮ್ ಇದು ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆಯ ಸಮವಾಗಿತ್ತು. ಇದನು ೨೦೦೧ ರಲ್ಲಿ ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ಖರೀದಿಸಿದರು ಆದರಿಂದ ಇದ್ದನು ನಾಸ್ಡ್ಯಾಕ್ ಯುರೋಪ್ ಎಂದು ಕರೆಯುತ್ತಾರೆ. ನವೆಂಬರ್ ೨೦೧೬ ರಲ್ಲಿ ನಾಸ್ಡ್ಯಾಕ್ ಮುಖ್ಯ ಕಾರ್ಯ ನಿರ್ವಹಣಾಧಿಕಾರಿಯಾಗಿ 'ಅಡೆನ ಫ್ರಿಡ್ಮೆನ್' ರನ್ನು ಸಿ.ಇ.ಒ ಯಾಗಿ ಆಯ್ಕೆ ಮಾಡಿದರು, ಇವರು ಯು ಎಸ್ ನ ಮೊಟ್ಟ ಮೊದಲನೆಯ ಮಹಿಳಾ ವಿನಿಮಯ ಕಾರ್ಯನಿರ್ವಹಕರಾದರು. ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆ ಪೂರ್ವ ಮಾರುಕಟ್ಟೆ ಅಧಿವೇಶನವಾಗಿದೆ.[೨]


ವ್ಯಾಪಾರ ವೇಳಾಪಟ್ಟಿ[ಬದಲಾಯಿಸಿ]

ನಾಸ್ಡ್ಯಾಕ್ ನಲ್ಲಿ ೪.೦೦ ಎ.ಎಂ ರಿಂದ ೯.೩೦ ಎ.ಎಂ ರವರಿಗು ಕೆಲಸ ನಡೆಯುತದೆ. ಮಾಮುಲಿ ಅಧಿವೇಶನ ೯.೦೦ ಎ.ಎಂ ರಿಂದ ೪.೦೦ ಪಿ.ಎಂ ರವರೆಗೆ ನಡಿಯುತದೆ.[೩]

ಉದ್ಧರಣ ಲಭ್ಯತೆ[ಬದಲಾಯಿಸಿ]

ಮಟ್ಟ ಒಂದು ಅತ್ಯಧಿಕ ಬಿಡ್ ಅನ್ನು ತೋರಿಸುತದೆ. ಮಟ್ಟ ಎರಡು ಮಾರುಕಟ್ಟೆ ತಯಾರಕರು ಎಲ್ಲಾ ಸಾರ್ವಜನಿಕ ಉಲ್ಲೇಖಗಳನದ ಜೊತೆಗೆ ಸ್ಟಾಕ್ ಮತ್ತು ಖರೀದಿ ಅಥವಾ ಮಾರಾಟ ಇಚ್ಚಿಸುವ ಮಾರುಕಟ್ಟೆ ಮಾರಾಟಗಾರರ ಮಾಹಿತಿಯನ್ನು ತೋರಿಸುತ್ತದೆ. ಮಟ್ಟ ಮೂರರನ್ನು ಮಾರುಕಟ್ಟೆ ತಯಾರಕರ ಆದೇಶಗಳನ್ನು ನಿರ್ವಹಿಸಲು ಹಾಗು ತಮ್ಮ ಉಲ್ಲೇಖಗಳನ್ನು ನಮೂದಿಸಲು ಅನುಮತಿಸುತ್ತದೆ.

ನಾಸ್ಡ್ಯಾಕ್ ಇಂಡೆಕ್ಸ್[ಬದಲಾಯಿಸಿ]

ಇದು ಒಂದು ಶೇರು ಮಾರುಕಟ್ಟೆ ಸೂಚ್ಯಂಕ.೧೦೦ ದೊಡ್ಡ ನಾನ್ ಫ಼ಿನಾಂಷಿಯಲ್ ಕಂಪನಿಗಳು ಇಕ್ವಿಟಿ ಷೇರುಗಳನ್ನು ಹೊರಡಿಸಿದೆ. ಇದು ಒಂದು ಮಾಡಿಫೈಡ್ ಬಂಡವಾಳ. ನಾಸ್ಡ್ಯಾಕ್ ಇಂಡೆಕ್ಸ್ ೧೦೦, ಜನವರಿ ೩೧, ೧೯೮೫ ರಲ್ಲಿ ಪ್ರಾರಂಭವಾಯಿತು. ನಾಸ್ಡ್ಯಾಕ್ ಅಲ್ಲಿ ಎರಡು ಇಂಡೆಕ್ಸ್ ಗಳಿವೆ, ಅದರಲ್ಲಿ ಮೊದನೆಯದು ನಾಸ್ಡ್ಯಾಕ್ ಇಂಡೆಕ್ಸ್ ೧೦೦, ಎರಡನೆಯದು ನಾಸ್ಡ್ಯಾಕ್ ಇಂಡೆಕ್ಸ್ ಫೈನಾನ್ಶಿಯಲ್೧೦೦. ಮೊದಲನೆ ಇಂಡೆಕ್ಸಿನಲ್ಲಿ ಕೈಗಾರಿಕ, ತಂತ್ರಜ್ಞಾನ, ಚಿಲ್ಲರೆ, ದೂರಸಂಪರ್ಕ ವ್ಯವಸ್ಥೆ, ಜೈವಿಕ ತಂತ್ರಜ್ಞಾನ, ಆರೋಗ್ಯ, ಸಾರಿಗೆ, ಮಾಧ್ಯಮ ಮತ್ತು ಸೇವೆ ಕಂಪನಿಗಳು ವ್ಯಾಪಾರ ಮಾಡುತ್ತದೆ ಹಾಗು ನಾಸ್ಡ್ಯಾಕ್ ಇಂಡೆಕ್ಸ್ ಫೈನಾನ್ಶಿಯಲ್೧೦೦ ಅಲ್ಲಿ ಬ್ಯಾಂಕಿಂಗ್ ಸಂಸ್ಥೆಗಳು, ವಿಮಾ ಸಂಸ್ಥೆಗಳು, ಬ್ರೋಕರೇಜ್ ಮನೆ ಹಾಗೂ ಅಡಮಾನ ಕಂಪನಿಗಳು ವ್ಯಾಪಾರ ಮಾಡುತ್ತದೆ.ಆರಂಭದಲ್ಲಿ ಸೂಚ್ಯಂಕ ಮೂಲ ಬೆಲೆ ೨೫೦ ಆಗಿತ್ತು. ನಂತರ ೧೯೯೩ ಅಲ್ಲಿ ೮೦೦ಗೆ ತಲುಪಿತು.ಜನವರಿ ೧೯೯೮ ರಲ್ಲಿ ವಿದೇಶಿ ಕಂಪನಿಗಳು ಮೊದಲು ಸೂಚ್ಯಂಕ್ಕೆ ದಾಖಲಿಸದರು.

ನಾಸ್ಡ್ಯಾಕ್ ಮಾರುಕಟ್ಟೆ ಶ್ರೇಣಿಗಳು[ಬದಲಾಯಿಸಿ]

೧.ಸ್ಮಾಲ್ ಕ್ಯಾಪ್ ಅಂದರೆ ಕ್ಯಾಪಿಟಲ್ ಮಾರ್ಕೆಟ್ ಕಂಪನಿಗಳಲ್ಲಿ ಷೇರು ಮಾರುಕಟ್ಟೆ ಇಂತಹ ಮಾರುಕಟ್ಟೆ ಬಂಡವಾಳ ಸಣ್ಣ ಮಟ್ಟದಲ್ಲಿವೆ. ಇಂತ ಸ್ಮಾಲ್ ಕ್ಯಾಪ್ ಕಂಪನಿ ಪಟ್ಟಿ ಅವಶ್ಯಕತೆಗಳು ಕಡಿಮೆ ಕಟ್ಟುನಿಟ್ಟಿಂದಾಗಿದೆ. ೨. ಮಿಡ್ ಕ್ಯಾಪ್ ಅಂದರೆ ಜಾಗತಿಕ ಮಾರುಕಟ್ಟೆಯಲ್ಲಿ ಸ್ಟಾಕ್ಸ್ ಅನ್ನು ವ್ಯಾಪಾರ ಮಾಡುತ್ತಾರೆ ಹಾಗು ಇದನ್ನು ನಾಸ್ಡಾಕ್ ಜಾಗತಿಕ ಮಾರುಕಟ್ಟೆಯಲ್ಲಿ ಪ್ರತಿನಿಧಿಸುತಾರೆ. ಜಾಗತಿಕ ಮಾರುಕಟ್ಟೆಯಲ್ಲಿ ಒಟ್ಟು ೧೪೫೦ ಸ್ಟಾಕ್ಸ್ ಇದೆ ಹಾಗು ಇದರಿಂದ ನಾಸ್ಡಾಕ್ ಕಠಿಣ ಆರ್ಥಿಕ ಮತ್ತು ದ್ರವ್ಯ ಅವಶ್ಯಕತೆಗಳನ್ನು ಪೂರೈಸುತದೆ. ಜಾಗತಿಕ ಮಾರುಕಟ್ಟೆಯು ಜಾಗತಿಕ ಆಯ್ಕೆ ಮಾರುಕಟ್ಟೆಗಿಂತ ಕಡಿಮೆ ವಿಶೇಷತ ಹೊಂದಿದೆ. ೩.ಲಾರ್ಜ್ ಕ್ಯಾಪ್ ಅಂದರೆ ಜಾಗತಿಕ ಆಯ್ಕೆ ಮಾರುಕಟ್ಟೆ ಒಂದು ಸೂಚ್ಯಂಕ ತೂಕದ ಬಂಡವಾಳ. ಇದರ ಸ್ಟಾಕ್ಸ್ ಯು.ಎಸ್ ನಿದಾಗಿದೆ ಹಾಗು ಇದರ ಅಂತರಾಷ್ಟ್ರೀಯ ಷೇರು ಗಳು ಜಾಗತಿಕ ಆಯ್ಕೆ ಮಾರುಕಟ್ಟೆ ಕಾಂಪೋಸಿಟ್ ಅನ್ನು ಪ್ರತಿನಿಧಿಸುತದೆ. ಜಾಗತಿಕ ಆಯ್ಕೆ ಮಾರುಕಟ್ಟೆಯಲ್ಲಿ ಒಟ್ಟು ೧೨೦೦ ಸ್ಟಾಕ್ಸ್ ಗಳಿವೆ ಹಾಗು ಈ ಸ್ಟಾಕ್ ಗಳು ಕಠಿಣ ಆರ್ಥಿಕ ಮತ್ತು ದ್ರವ್ಯ ಅವಶ್ಯಕತೆಗಳನ್ನು ಪೂರೈಸುತದೆ. ಜಾಗತಿಕ ಆಯ್ಕೆ ಮಾರುಕಟ್ಟೆಯು ಜಾಗತಿಕ ಮಾರುಕಟ್ಟೆಗಿಂತ ಹೆಚ್ಚು ವಿಶೇಷದಾಗಿದೆ.[೪]

ಸರಾಸರಿ ವಾರ್ಷಿಕ ಬೆಳವಣಿಗೆ ದರ[ಬದಲಾಯಿಸಿ]

ಜೂನ್ ೨೦೧೫ರ ಪ್ರಕಾರ ನಾಸ್ಡ್ಯಾಕ್ ಸ್ಟಾಕ್ ಮಾರುಕಟ್ಟೆಯಲ್ಲಿ ೯.೨೪% ದರ ಬೆಳವಣಿಗೆ ಇದೆ. ೨೦೦೭ ನ ರಿಸೆಶನ್ ನ ಕೊನೆಯಿಂದ ಮಾರು ಕಟ್ಟೆಯಲ್ಲಿ ೧೮.೨೯೫% ಪ್ರತಿ ವರ್ಷ ಏರಿಕೆ ಹಾಗಿದೆ.

ಉಲ್ಲೇಖಗಳು[ಬದಲಾಯಿಸಿ]