ವಿಷಯಕ್ಕೆ ಹೋಗು

ಸದಸ್ಯ:Nimitha vs

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೈವಿಕ ಇಂಧನ : ಇಥಾನೋಲ್ ಕಲ್ಲಿದ್ದಲು, ಪೆಟ್ರೋಲ್, ಡೀಸಿಲ್ ಮುಂತಾದ ಇಂಧನಗಳನ್ನು ಭೂಗರ್ಭದಿಂದ ತೆಗೆಯಲಾಗುತ್ತದೆ. ಇವುಗಳಿಗೆ ಪಳೆಯುಳಿಕೆ ಇಂಧನ ಎಂದು ಹೆಸರು. ಇಂಜಿನ್ ಗಳಲ್ಲಿ ಇವುಗಳನ್ನು ಉರಿಸಿ ವಾಹನಗಳು ನಡೆಯುತ್ತವೆ. ಇವುಗಳಿಂದ ಟರ್ಭೈನ್ ತಿರುಗಿಸಿ ವಿದ್ಯುತ್ ಉತ್ಪಾದನೆಯೂ ಆಗುತ್ತದೆ. ಪಳೆಯುಳಿಕೆ ಇಂಧನಗಳು ಉರಿಯುವಾಗ ವಿಪರೀತ ಪ್ರಮಾಣದಲ್ಲಿ ಕಾರ್ಬನ್ ಡೈಆಕ್ಸೈಡ್ ಅನಿಲ ಗಾಳಿಗೆ ಬಿಡುಗಡೆ ಆಗುವ ಕಾರಣ ವಾತಾವರಣ ಪ್ರದೂಷಣೆ ಆಗುತ್ತದೆ. ಭೂಮಿ ಬಿಸಿಯೇರುವಿಕೆ, ಓಝೋನ್ ಪದರದ ನಾಶ ಮುಂತಾದ ಅಪಾಯಗಳೂ ಇದರಿಂದ ಬರುತ್ತದೆ. ಈ ಸಮಸ್ಯೆಗೆ ವಿದೇಶಗಳಲ್ಲಿ ಕಂಡುಕಹಿಡಿದಿರುವ ಒಂದು ಪರಿಹಾರ ಬಯೋ ಫ್ಯುಯೆಲ್ ಅರ್ಥಾತ್ ಜೈವಿಕ ಅನಿಲ. ಇದಕ್ಕೆ ಬೇಕಾದ ವಸ್ತುಗಳನ್ನು ಹೊಲಗಳಲ್ಲಿ ಬೆಳೆಸಬಹುದು.