ಸದಸ್ಯ:Nileema monteiro/sandbox

ವಿಕಿಪೀಡಿಯ ಇಂದ
Jump to navigation Jump to search

ಸಂತ ವೆಲೆಂಟಾಯ್ನ್

  ಇವರು ರೊಮಾ ನಗರದಲ್ಲಿ, ಸುಮಾರು ೩ನೇ ಶತಮಾನದಲ್ಲಿ ಜನಿಸಿದರು ಎಂದು ಅನೇಕರು ಹೇಳುತ್ತಾರೆ. 

ಏಕೆಂದರೆ ಮೊದಲ ಕಾಲದಲ್ಲಿ ಜನ್ಮ ದಿನಾಂಕವನ್ನು ಬರೆಯಲು ಯಾರು ಇರಲಿಲ್ಲ. ಅಂದರೆ ಅಂದು ಜನ್ಮ ದಿನಾಂಕ ಅಗತ್ಯವಿರಲಿಲ್ಲ. ಆದರೆ ಅವರ ತಂದೆ-ತಾಯಿ ಜೊತೆಗೆ ಅವರ ಸಹೋದರ-ಸಹೋದರಿಯರು ಇದ್ದಾರೆಯೇ ಎಂದು ಇನ್ನೂ ಖಚಿತವಾಗಿರಲಿಲ್ಲ.

      ಕ್ರಿಸ್ತ ಶಕ ೨೬೯ನೇ ವರ್ಷದಲ್ಲಿ ರೊಮಾ ಸಮಾಜದ ಚಕ್ರವರ್ತಿಯಾದ ಕ್ಲೊಡಿಯಸಾನವರು ಒಂದು ಸೂಚನವನ್ನು ಜಾರಿಮಾಡಿದರು. 

ಅದು ಏನೆಂದರೆ ಯಾರೂ ಯುವಕರು ಕೂಡ ಮದುವೆಯಾಗುವಂತಿಲ್ಲ. ಏಕೆಂದರೆ ಅದಕ್ಕೆ ಒಂದು ಕಾರಣವಿತ್ತು. ಆದರೆ ವೆಲೆಂಟಾಯ್ನ್ ಅವರಿಗೆ ಗೊತ್ತಿದ್ರೂ ಅವರು ಯುವಕ ಯುವತಿಯರಿಗೆ ಕರೆದು ಮದುವೆ ಮಹತ್ವವನ್ನು ತಿಳಿಸಿ ಮದುವೆಯಾಗಲು ಮನಸ್ಸು ಇದ್ದವರಿಗೆ ಅವರು ಮದುವೆಯನ್ನು ಮಾಡಿಕೊಡುತ್ತಿದ್ದರು. ಇದೆಲ್ಲಾ ವಿಷಯ ಚಕ್ರವರ್ತಿಗೆ ತಿಳಿಯಿತು. ಇದೇ ಕಾರಣದಿಂದ ಚಕ್ರವರ್ತಿ ಸೈನಿಕರನ್ನು ಕಳಿಸಿ, ವೆಲೆಂಟಾಯ್ನ್ ನ್ನು ಹಿಡಿದು ಜೈಲಿಗೆ ಕಳುಹಿಸಲು ಆದೇಶಿಸಿದರು. ಇಷ್ಟೆಲ್ಲಾ ಆದರೂ ಅವರು ಜೈಲಿನಲ್ಲಿದ್ದಾಗ ಜನರು ಅವರ ಸಹಾಯವನ್ನು ಮರೆಯದೆ ಅವರನ್ನು ನೂರಾರು ಜನರು ಬಂದು ನೋಡುತ್ತಿದ್ದರು, ಮತ್ತು ಜನರಿಗೆ ದೇವರ ಶಿಕ್ಷಣವನ್ನು ಕಲಿಸುತ್ತಾ ಮನೆಗೆ ಕಳುಹಿಸಿ ಆಶೀರ್ವಾದವನ್ನು ಕೊಡುತ್ತಿದ್ದರು. ಇದನ್ನು ಕಂಡ ಜೈಲಿನ ಅಧಿಕಾರಿ ತನ್ನ ಮಗಳ ದೃಷ್ಟಿಯನ್ನು ನೀಡಲು ಬೇಡುತ್ತಾನೆ. ಅಧಿಕಾರಿಯ ಮಗಳು ಹುಟ್ಟಿನಿಂದ ಕುರುಡಿಯಾಗಿದ್ದಳು. ಆದ್ದರಿಂದ ಅಧಿಕಾರಿಯ ಮಗಳನ್ನು ವೆಲೆಂಟಾಯ್ನ್ ಯ ಜತೆಗೆ ಕರೆದು ಪ್ರಪಂಚದಲ್ಲಿರುವ ಅನೇಕ ದೃಶ್ಯವನ್ನು ಅವಳಿಗೆ ಹೇಳುವನು. ಆದರೆ ಅವಳ ದೃಷ್ಟಿಯನ್ನು ಹಾಕಲು ಅವನಿಗೆ ಸಾಧ್ಯವಾಗಲಿಲ್ಲ. ಒಳ್ಳೆಯ ಮಾತಿನಿಂದ ಅಧಿಕಾರಿಯೇ ತಮ್ಮ ಕುಟುಂಬ ಸಮೇತ ಕ್ರೈಸ್ತ ಧರ್ಮವನ್ನು ಸ್ವೀಕಾರ ಮಾಡುವನು. ಇದೆಲ್ಲಾ ಕಂಡು ಚಕ್ರವರ್ತಿ ಕ್ಲೊಡಿಯಸಾನು ಅವನನ್ನು ತನ್ನ ಕಡೆಗೆ ಕರೆದು ವಿಚಾರಿಸುವನು. ಆದರೆ ಚಕ್ರವರ್ತಿಯ ಪ್ರಶ್ನೆಯಿಂದ ಉತ್ತರ ಕೊಡುವ ಬದಲು ದೇವರ ಬಗ್ಗೆ ಅವನಿಗೆ ಕಲಿಸುತ್ತಾನೆ. ಇದರಿಂದ ಕೋಪಗೊಂಡ ಚಕ್ರವರ್ತಿಯು ಬೇರೆ ಕಡೆಯ ಅಧಿಕಾರಿಗೆ ಕರೆದು ಶಿಕ್ಷೆಯನ್ನು ನೀಡಲು ಆದೇಶಿಸುತ್ತಾನೆ. ಶಿಕ್ಷೆಯನ್ನು ನೀಡಿದರೂ ಕೂಡ ವೆಲೆಂಟಾಯ್ನ್ ಗೆ ದೇವರ ಕೃಪೆಯಿಂದ ಏನೂ ಆಗಲಿಲ್ಲ. ನಂತರ ಪುನ: ಜೈಲಿಗೆ ಕಳಿಸಿದನು. ಇದರ ಪ್ರತಿಯಾಗಿ ೩ನೇ ದಿನಕ್ಕೆ ಜೈಲಿನಲ್ಲಿಡಲು ಆಜ್ಞೆ ನೀಡಿದನು. ನಂತರ ಜೈಲಿನ ಅಧಿಕಾರಿಯ ಕುರುಡಿ ಮಗಳಿಗೆ ಒಂದು ಸುಂದರವಾದ ಹೂ ಮತ್ತು ಕಾರ್ಡನ್ನು ನೀಡುವನು. ಕಾರ್ಡಿನಲ್ಲಿ "ಪ್ರೀತಿಯ ತಂಗಿ, ನಿನಗೆ ವೆಲೆಂಟಾಯ್ನ್ ನೀಡುವ ಕಾಣುಕೆ" ಎಂದು, ಆ ಹೂವಿನ ದೃಷ್ಟಿಯನ್ನು ನೋಡಿದ ಕೂಡಲೇ ಆ ಹುಡುಗಿಗೆ ದೃಷ್ಟಿ ಬರುತ್ತದೆ. ಇದರಿಂದ ಚಕ್ರವರ್ತಿಯು ಅವನನ್ನು ಕೊಂದು ಹಾಕಿದನು.

  ಆದ್ದರಿಂದ ಪಾಶ್ಚಾತ್ಯ ರಾಷ್ಟ್ರದಲ್ಲಿ ಸಂತರಾದ ವೆಲೆಂಟಾಯ್ನ್ ಫೆಬ್ರವರಿ ೧೪ ತಾರೀಖಿಗೆ ಹುಟ್ಟುಹಬ್ಬವನ್ನು ಆಚರಿಸುತ್ತಾನೆ, ಮತ್ತು ಅದೇ 

ದಿನ ಪ್ರೀತಿಯ ಉಡುಗೊರೆಯನ್ನು ಕೊಡುತ್ತಾರೆ.

   ಆದ್ದರಿಂದ ಈ ದಿನವನ್ನು ವೆಲೆಂಟಾಯ್ನ್ ದಿನ ಎಂದು ಆಚರಿಸುತ್ತಾರೆ.
    ನಮ್ಮ ರಾಷ್ಟ್ರದಲ್ಲಿ ಯುವಕ ಯುವತಿಯರು ಬೇಧ ಭಾವವಿಲ್ಲದೆ ಈ ದಿನವನ್ನು ಸಂತಸದಿಂದ ಆಚರಣೆ ಮಾಡುತ್ತಾರೆ. ಆದರೆ ಈ ಹಬ್ಬದ 

ಮಹತ್ವದ ಹಿಂದೆ ಒಬ್ಬ ಸಂತನ ಜೀವನ ಚರಿತ್ರೆಯನ್ನು ಇನ್ನೂ ಜನರಿಗೆ ತಿಳಿಯಲಿಲ್ಲ. ಆದ್ದರಿಂದ ಆ ಸಂತನ ಫೆಬ್ರವರಿ ೧೪ ತಾರೀಖಿಗೆ ಪವಿತ್ರದ ಮಹತ್ವವನ್ನು ಆಚರಿಸುವರು. ಜನರು ಪ್ರೀತಿಯಿಂದ ಬಾಳಬೇಕೆಂಬ ಸಂತ ವೆಲೆಂಟಾಯ್ನ್ ನ ಪ್ರೇರಕವಾಗಿದೆ.