ಸದಸ್ಯ:Nikhilta0356/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಗುಲಾಮ್ ಅಬ್ಬಾಸ್ ಮೊಂತಾಸಿರ್[ಬದಲಾಯಿಸಿ]

ಗುಲಾಮ್ ಅಬ್ಬಾಸ್ ಮೊಂತಾಸಿರ್[೧]

ಪರಿಚಯ:[ಬದಲಾಯಿಸಿ]

ಗುಲಾಮ್ ಅಬ್ಬಾಸ್ ಮೊಂತಾಸಿರ್ ಮುಂಬೈಯಲಿ ಜನಿಸಿದ ಊರು.

ಗುಲಾಮ್ ಅಬ್ಬಾಸ್ ಮೊಂತಾಸಿರ್ ಅವರು ಭಾರತೀಯ ರಾಷ್ಟ್ರೀಯ ಬ್ಯಾಸ್ಕೆಟ್ಬಾಲ್ ಆಟಗಾರ. ಇವರು ಜನವರಿ ೭, ೧೯೪೨ ರ೦ದು ‍ಜನಿಸಿದರು. ಇವರು ಮುಂಬೈಯಲಿ ಜನಿಸಿದರು. ಮುಂಬಯಿಯಲ್ಲಿ ಜನಿಸಿದ ಅವರು, ಕೇಂದ್ರ ಮುಂಬಯಿಯಲ್ಲಿರುವ ನಗ್ಪಾಡಾದ ನ್ಯಾಯಾಲಯಗಳಲ್ಲಿ ಒಂಬತ್ತನೆಯ ವಯಸ್ಸಿನಲ್ಲಿ ಅಮೆರಿಕಾದ ಓಬ್ ಮಿಷನರಿ ಅವರು ಬ್ಯಾಸ್ಕೆಟ್ಬಾಲಗೆ ಪರಿಚಯಿಸಿದರು. ಮುಂಬಯಿಯ ಆಂಟೋನಿಯೊ ಡಿ'ಸೋಜಾ ಶಾಲೆ ಮತ್ತು ಡಿ.ಜಿ. ರೂಪೇಲ್ ಕಾಲೇಜಿನಲ್ಲಿ ಅವರು ತಮ್ಮ ಅಧ್ಯಯನ ಮುಗಿಸಿಧರು[೨][೩].

ವೃತ್ತಿಜೀವನ:[ಬದಲಾಯಿಸಿ]

ಗುಲಾಮರವರು ತಮ್ಮ ಶಾಲಾ, ಕಾಲೇಜು, ಬಾಂಬೆ ವಿಶ್ವವಿದ್ಯಾನಿಲಯ ಮತ್ತು ಮಹಾರಾಷ್ಟ್ರ ರಾಜ್ಯಕ್ಕಾಗಿ ಆಡಿದರು. ಇವರು ಭಾರತಕ್ಕಾಗಿ ೧೯೬೦ ರಲ್ಲಿ ಮುಂಬೈಯಲ್ಲಿ ಆಸ್ಟ್ರೆಲಿಯ ಮೇಲೆ ನಡೆದ ಪಂದ್ಯವೊಂದರಲ್ಲಿ ತಮ್ಮ ಅಂತರರಾಷ್ಟ್ರೀಯ ಚೊಚ್ಚಲ ಪಂದ್ಯವನ್ನು ಆಡಿದರು. ಇವರು ಕೊಲಂಬೊದಲ್ಲಿ ಭಾರತವನ್ನು ಪ್ರತಿನಿಧಿಸಿದರು ಮತ್ತು ಬ್ಯಾಂಕಾಕ್ನಲ್ಲಿ ೧೯೬೯ ಮತ್ತು ೧೯೭೫ ರಲ್ಲಿ ನಡೆದ ಏಶಿಯನ್ ಬ್ಯಾಸ್ಕೆಟ್ಬಾಲ್ ಚಾಂಪಿಯನ್ಷಿಪ್ನಲ್ಲಿ ಭಾರತೀಯ ತಂಡದ ನಾಯಕನಾಗಿದ್ದರು. ಬ್ಯಾಂಕಾಕ್ನಲ್ಲಿ ನಡೆದ ೧೯೭೦ ರ ಏಷ್ಯನ್ ಕ್ರೀಡಾಕೂಟದಲ್ಲಿ ಪಾಲ್ಗೊಂಡ ಅವರು ಆ ವರ್ಷದ ಏಶಿಯನ್ ಆಲ್-ಸ್ಟಾರ್ ತಂಡಕ್ಕೆ ಆಯ್ಕೆಯಾದರು[೨][೩].

ಮುಂಬೈ ವಿಶ್ವವಿದ್ಯಾನಿಲಯಕೆ ಅನೇಕ ಬಾರಿ ಆಡಿದಾರೇ

೨೨ ನೇ ವಯಸ್ಸಿನ ಹೊತ್ತಿಗೆ, ಮೊಂತಾಸಿರ್ ಭಾರತದ ಇತಿಹಾಸದಲ್ಲಿ ಅಗ್ರ ಆಟಗಾರನಾಗಿ, ಅಂತರಾಷ್ಟ್ರೀಯ ಪ್ರವಾಸಗಳಲ್ಲಿ, ಅವರು ವಿಭಿನ್ನ ಶೈಲಿಗಳ ಆಟದ ಬಗ್ಗೆ ಕಲಿತರು ಮತ್ತು ಭಾರತವು ಅಂತರರಾಷ್ಟ್ರೀಯವಾಗಿ ಸ್ಪರ್ಧಿಸಲು ಭಾರತಕೆ ಬೇಕಾದ ವಿವಿದ ಕೌಶಲ್ಯಗಳು ಅಗತ್ಯವೆಂದು ಗುರುತಿಸಿದರು. ಅವರು ಮೂರು ಪ್ರಮುಖ ಸಮಸ್ಯೆಗಳನ್ನು ಗುರುತಿಸಿದ್ದಾರೆ: ಅಸಹಜವಾದ ಅಟ, ಹಳತಾದ ವಿಧಾನ, "ಹಾಸ್ಯಾಸ್ಪದ" ತೀರ್ಪುಗಾರರು, ಇದರಲ್ಲಿ ತೀರ್ಪುಗಾರರು ತಮ್ಮ ಆಸನಗಳಿಂದ ಹೊರಗುಳಿದಿದ್ದರು ಮತ್ತು ಬಿ.ಎಫ್.ಐ.ನ ಆಡಳಿತ ಅಧಿಕಾರಿಗಳು ನಿರಂತರವಾಗಿ ಮೋಸ ಮಾಡುತ್ತಿದ್ದರು, ಈ ಆಟವನ್ನು ಮುಂದೆ ತರಲು ಮಾಡಿದ ಅವನ ಪ್ರಯತ್ನಗಳನ್ನು ಅಧಿಕಾರಿಗಳು ಚೆನ್ನಾಗಿ ಸ್ವೀಕರಿಸಲಿಲ್ಲ, ಅವರನ್ನು ಮೂರು ವರ್ಷಗಳ ಕಾಲ ಅಮಾನತುಗೊಳಿಸಿದರು.[೨] [೩]

ಅವರು ರಾಷ್ಟ್ರೀಯ ಕ್ರೀಡೆಯಲ್ಲಿ ಸಾಧನೆಗಾಗಿ ೧೯೭೦ ರಲ್ಲಿ ಅರ್ಜುನ ಪ್ರಶಸ್ತಿಯನ್ನು ಪಡೆದ ಮೊದಲ ಭಾರತೀಯ ಬ್ಯಾಸ್ಕೆಟ್ ಬಾಲ್ ಆಟಗಾರರಾದರು, ಅವರು ತಮ್ಮ ಕೊನೆಯ ರಾಷ್ಟ್ರೀಯ ಮಟ್ಟದ ಪಂದ್ಯವನ್ನು ೪೪ ನೇ ವಯಸ್ಸಿನಲ್ಲಿ ಅವರು ರೈಲ್ವೇಗಾಗಿ ೧೯೮೬ ರಲ್ಲಿ ಫೆಡರೇಶನ್ ಕಪ್ನಲ್ಲಿ ಅಡಿದರು.[೨]

ಅರ್ಜುನ ಪ್ರಶಸ್ತಿ

[೩]

ಚಲನಚಿತ್ರಗಳು:[ಬದಲಾಯಿಸಿ]

೧೯೮೧ ರ ಚಲನಚಿತ್ರ ಖೂನ್ ಕಿ ತಕ್ಕರ್ ಮತ್ತು ೧೯೮೬ ರ ಚಿತ್ರ ಅಶಿಯಾನಾ ಸೇರಿದಂತೆ ಹಲವಾರು ಚಲನಚಿತ್ರಗಳಲ್ಲಿ ಮೊಂತಾಸಿರ್ ಸಹ ಪಾತ್ರವಹಿಸಿದರು.[೨][೩]

ಬ್ಯಾಸ್ಕೆಟ್ಬಾಲ್ನನ ಬೆಳವಣಿಗೆ ಮತ್ತು ಪ್ರಭಾವ:[ಬದಲಾಯಿಸಿ]

ಗುಲಾಮ್ (ಎಡಕ್ಕೆ) ಆಡುವಾಗ[೪]

ಮೊಂತಾಸಿರ್ ಅವರು ಸಾಕಷ್ಟು ಒತ್ತಡಕ್ಕೆ ಒಳಗಾಗಿದ್ದರು, ಏಕೆಂದರೆ ಅವರು ಬೆಳೆದ ಪ್ರದೇಶದಲ್ಲಿ ಬಹಳಷ್ಟು ದರೋಡೆಕೋರರ ಮತ್ತು ಗೂ೦ಡಾಗಾರರ ಹಾವಳಿ ಇತ್ತು. ಬ್ಯಾಸ್ಕೆಟ್ ಬಾಲ್ ಆಡುವ ಮೂಲಕ ಇದರಿ೦ದ ಗುಲಾಮ್ ರವರು ದೂರವಾದರು. ತನ್ನ ಸಾಮರ್ಥ್ಯದಿ೦ದ ಅವರು ತಮ್ಮ ಕೌಶಲ್ಯಗಳನ್ನು ಸುಧಾರಿಸಿದರು ಮತ್ತು ಉತ್ತಮಗೊಳಿಸಿದರು ಅವರು ಶೀಘ್ರದಲ್ಲೇ ಮುಂಬೈಯಲ್ಲಿ ಖ್ಯಾತಿಯನ್ನು ಗಳಿಸಿದರು. ರೈಲ್ವೆ ಈ ಪ್ರತಿಭೆಯನ್ನು ಕಂಡಿತು ಮತ್ತು ಅವರನ್ನು ನೇಮಕ ಮಾಡಿಕೊಂಡರು.  ಆ ಸಮಯದಲ್ಲಿ ಭಾರತವು ನೋಡಿದ ಅತ್ಯುತ್ತಮ ಆಟಗಾರರಲ್ಲಿ ಒಬ್ಬ ಆಟಗಾರನಾಗಿ ಬೆಳೆಯಲು ಉತ್ತಮ ವೇದಿಕೆ ನೀಡಿತು.[೪] [೧]

  1. ೧.೦ ೧.೧ Scroll - Meet Abbas Moontasir, the Asian All-Star who rose from Mumbai’s basketball courts - https://scroll.in/field/861617/video-meet-abbas-moontasir-the-asian-all-star-who-rose-from-mumbais-basketball-courts - Dec 17, 2017 · 02:15 pm Abhijeet Kulkarni ,  Shashank Rajaram  & Crystelle Rita Nunes
  2. ೨.೦ ೨.೧ ೨.೨ ೨.೩ ೨.೪ Wikivisual - https://wikivisually.com/wiki/Gulam_Abbas_Moontasir
  3. ೩.೦ ೩.೧ ೩.೨ ೩.೩ ೩.೪ Wikipedia - https://en.wikipedia.org/wiki/Gulam_Abbas_Moontasir
  4. ೪.೦ ೪.೧ Deccan Chronicle - Basketball in the time of gang wars, Dawood Ibrahim - https://www.deccanchronicle.com/150318/sports-other-sports/article/basketball-time-gang-wars-dawood-ibrahim Mar 19, 2015, 2:12 am IST, WRIDDHAAYAN BHATTACHARYYA