ಸದಸ್ಯ:Neha khanum/ನನ್ನ ಪ್ರಯೋಗಪುಟ/1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
    '


ಹಿಲರಿ ಡೇವಿಸ್[ಬದಲಾಯಿಸಿ]

ಬ್ರೊಮ್‍ಲೇ ಹೈ ಸ್ಕೂಲ್
ಸೇಂಟ್ ಪೌಲ್ಸ್ ಗರ್ಲ್ಸ್ ಹೈ ಸ್ಕೂಲ್
   ಕವಿಯಿತ್ರಿ,ವಿಮರ್ಶಕರು ಮತ್ತು ಅನುವಾದಕರು.
     ಡೇವಿಸ್ ಲಂಡನ್ನಲ್ಲಿ ಆಂಗ್ಲೋ-ವೆಲ್ಷ್ ಪೋಷಕರಿಗೆ ಜನಿಸಿದರು.ಬ್ರೊಮ್‍ಲೇ ಹೈ ಸ್ಕೂಲ್ ಮತ್ತು ಆಕ್ಸ್ಫ಼ರ್ಡಿನ ವಿಶ್ವವಿದ್ಯಾನಿಲಯದ ವಢಾಮ್ ಕಾಲೇಜಿನಲ್ಲಿ ತಮ್ಮ ವಿದ್ಯಾಭ್ಯಾಸವನ್ನು ಮಾಡಿದರು.೧೯೭೪ ರಲ್ಲಿ,ಫ಼್ರೆಂಚ್ ಮತ್ತು ಜರ್ಮನ್ನಲ್ಲಿ ಪದವಿ ಪಡೆದ ಮೊದಲ ಮಹಿಳಾ ವಿದ್ಯಾರ್ಥಿಯಾಗಿದ್ದರು.ಇವರು ಕವಿ ಸೆಬಾಸ್ಟೀನ್ ಬಾರ್ಕರ್(೧೯೪೫-೨೦೧೪) ರನ್ನು ಮದುವೆಯಾದರು.
   ೧೯೮೩ ರಲ್ಲಿ ಡೇವಿಸ್ರವರು 'ಎರಿಕ್ ಗ್ರಿಗೋರಿ' ಎಂಬ ಪ್ರಶಸ್ತಿಯನ್ನು ಪಡೆದರು ಮತ್ತು ೧೯೯೨-೧೯೯೩ ರಲ್ಲಿ 'ಕವಿತೆ ಸಮುದಾಯ'ದ ಸಭಾಧ್ಯಕ್ಷರಾಗಿದ್ದರು.'ಚೆಲ್ಟೆನ್ಹಮ್ ಕವನ ಸಾಹಿತ್ಯ ಉತ್ಸವ(೧೯೮೭)ದಲ್ಲಿ ಮೊದಲ ಪ್ರಶಸ್ತಿಯನ್ನು ಪಡೆದರು.ಇವರು ೩೦ ವರ್ಶಗಳವರೆಗೆ ಸೇಂಟ್. ಪೌಲ್ಸ್ ಗರ್ಲ್ಸ್ ಸ್ಕೂಲಿನಲ್ಲಿ ಶಿಕ್ಷಕಿಯಾಗಿ ಮತ್ತು ೧೯ ವರ್ಷಗಳವರೆಗೆ 'ಆಧುನಿಕ ಭಾಷೆಗಳ' ಮುಖಂಡರಾಗಿದ್ದರು, ಸೃಜನಾತ್ಮಕ ಬರವಣಿಗೆಯ,ಆಂಗ್ಲ ಭಾಷಾಶಾಸ್ತ್ರ ಮತ್ತು ಟೆಫ಼್ಟ್ ಶಿಕ್ಷಣದ ಉಪನ್ಯಾಸಕರಾಗಿದ್ದರು.೨೦೧೨-೨೦೧೬ ರಲ್ಲಿ ಲಂಡನ್ನಿನ ಕಿಂಗ್ಸ್ ಕಾಲೇಜಿನಲ್ಲಿ ಇವರು 'ರಾಯಲ್ ಲಿಟರರಿ ಫ಼ಂಡ್ ಫ಼ೆಲೋಶಿಪ್ ನಡೆಸಿದರು.
    ಡೇವಿಸ್‍ರವರ ತಂದೆ-ತಾಯಿ ಇಬ್ಬರೂ ಶಿಕ್ಷಕರಾಗಿದ್ದರು.ಆದ್ದರಿಂದ ಇವರು ಬರಹಗಾರರಾಗಬೇಕೆಂದು ಬಯಸುತ್ತಿದ್ದರು.ಆದರೆ,ಪ್ಯಾರಿಸ್ನಲ್ಲಿ ಎರಡುವರೆ ವರ್ಷಗಳ ಕಾಲ ಇಂಗ್ಲೀಷ್ ಭಾಷೆಯನ್ನು ವಿದೇಶಿ ಭಾಷೆಯಾಗಿ ಕಲಿಸಿದರು.ಮತ್ತು ಬೋದನೆ ನಿಜವಾಗಿಯು ಬಹು ಲಾಭದಾಯಕವೆಂದು ಹೇಳಿದ್ದಾರೆ. ಪ್ಯಾರಿಸ್ನಿಂದ ಹಿಂತಿರುಗಿದ ನಂತರ ಹಿಲರಿ ಅವರು ಲಂಡನ್ನ ಸೇಂಟ್ ಪೌಲ್ಸ್ ಗರ್ಲ್ಸ್ ಸ್ಕೂಲಿನಲ್ಲಿ ೩೦ ವರ್ಷಗಳ ಕಾಲ ಹೆಡ್ ಆಫ಼್ ಮಾಡರ್ನ್ ಲಾಂಗ್ವೇಜಸ್ ಆಗಿ ಕೆಲಸ ಮಾಡಿದರು.ಯುವ ಮತ್ತು ಉತ್ತೇಜಕ ಮನಸ್ಸುಗಳೊಂದಿಗೆ ಕೆಲಸ ಮಾಡುವುದು ಮತ್ತು ಭವಿಷ್ಯದ ಪೀಳಿಗೆಗೆ ವಿಷಯಗಳನ್ನು ಕಲಿಸುವುದು ಮತ್ತು ಅವರಿಂದ ಕಲಿತುಕೊಳ್ಳುವುದು ಅತ್ಯಂತ ಸಂತೋಷಕರ ಎಂದು ಹೇಳಿದ್ದಾರೆ.
       ಸಮಯ ಸಾಹಿತ್ಯ ಪೂರಕ,ಕವನ ವಿಮರ್ಶೆ ಮತ್ತು ಟ್ಯಾಬ್ಲೆಟ್ ಮುಂತಾದ ಪ್ರಕಟಣೆಗಳಲ್ಲಿ ಇವರ ವಿಮರ್ಶಣೆ ಕಾಣಿಸಿಕೊಂಡಿದೆ.ಇವರು ೧೨ ವರ್ಷಗಳಿಂದ 'ಆರ್ಗೋ' ಕವನ ಮ್ಯಾಗ್ಜಿನ್ನನ್ನು ಸಹ-ಸಂಸ್ಥಾಪಿಸಿದ್ದಾರೆ ಮತ್ತು ಸಂಪಾದಿಸಿದ್ದಾರೆ.೧೯೯೨ ರಲ್ಲಿ ಆಕ್ಟೇರಿಯಸ್ನ ಮಹಿಳಾ ಸಮಸ್ಯೆಯನ್ನು ಅತಿಥಿ-ಸಂಪಾದಿಸಿದ್ದಾರೆ ಮತ್ತು ಆರ್ಟೆಮಿಸ್ಪೊಯಟ್ರಿಗಾಗಿ ಅಥಿತಿ ಕವಿತೆ ಸಂಪಾದಕರಾಗಿದ್ದಾರೆ.ಇವರು ವಿಶ್ವ ಕವನ ಉತ್ಸವ ,ಅಥೆನ್ಸ್,ಡ್ರೂಸ್ಕಿನಿನ್ಕೈ ಇಂಟರ್ನಾಷ್ನಲ್ ಫ಼ೆಸ್ಟಿವಲ್,ಲಿಥುವಾನಿಯಾ ಮತ್ತು ಸ್ಟೊಕೆಸ್ಟೌನ್,ಐರ್ನಲ್ಲಿ ಬ್ರಿಟನ್ನನ್ನು ಪ್ರತಿನಿಧಿಸಿದ್ದಾರೆ.

ಕವಿತೆಗಳ ಮೇಲೆ ಹೆಚ್ಚು ಸಮಯವನ್ನು ಕಳೆಯಲು ೨೦೧೧ ರಲ್ಲಿ ನಿವೃತ್ತಿಯನ್ನು ಹೊಂದಿದ್ದರು.

ಕೃತಿಗಳು[ಬದಲಾಯಿಸಿ]

  • ದಿ ಆಪ್ಟಮೊಲೊಜಿಸ್ಟ್(೧೯೮೭)
  • ದಿ ಶಂಘೈ ಒವ್ನರ್ ಆಫ಼್ ದಿ ಬೊನ್ಸೈ ಶಾಪ್(೧೯೯೧)
  • ಇನ್ ಅ ವ್ಯಾಲಿ ಆಫ಼್ ದಿ ರೆಸ್ಟ್ಲೆಸ್ ಮೈಂಡ್(೧೯೯೭)
  • ಇಮ್ಪೆರಿಯಂ(೨೦೦೫)
  • ಎಕ್ಸೈಲ್ ಅಂಡ್ ದಿ ಕಿಂಗ್ಡಮ್(೨೦೧೬)
    ದಿ ಶಂಘೈ ಒವ್ನರ್ ಆಫ಼್ ದಿ ಬೊನ್ಸೈ ಶಾಪ್(೧೯೯೧),ಇನ್ ಅ ವ್ಯಾಲಿ ಆಫ಼್ ದಿ ರೆಸ್ಟ್ಲೆಸ್ ಮೈಂಡ್(೧೯೯೭),ಇಮ್ಪೆರಿಯಂ(೨೦೦೫) ಈ ಮೂರು ಕವನ ಸಂಕಲನಗಳು ಎನಿಥಾರ್ಮನ್ನಿಂದ ಪ್ರಕಟಿಸಲಾಗಿದೆ.
    ಡೇವಿಸ್ರವರ ಕವಿತೆಗಳು ಅಗಾಗ್ಗೆ ತಮಾಷೆಯಾಗಿರುತ್ತವೆ ಮತ್ತು ಓದುಗರಿಗೆ ಸಂತೋಷಪಡಿಸುವಂತೆ ಇರುತ್ತವೆ. ಕವಿತೆಗಳಲ್ಲಿ ವಿಷಯಗಳನ್ನು ಅವುಗಳು ನಿಜವಾಗಿಯು ಇದ್ದಂತೆ ನೋಡಲು ಹೃದಯದಲ್ಲಿ ತಪ್ಪೊಪ್ಪಿಗೆಯಾದರೆ ಅದು ಹೇಗೆ ಕವಿ ಮತ್ತು ಓದುಗರಿಗೆ ಕಷ್ಟಕರವಾದ ಕೆಲಸವಾಗುತ್ತದೆ ಎಂದು ಡೇವಿಸ್‍ನವರು "ದಿ ಆಪ್ಟಮೊಲೊಜಿಸ್ಟ್" ನಲ್ಲಿ ಹೇಳಿದ್ದಾರೆ.
 'ಇನ್ ಅ ವ್ಯಾಲಿ ಆಫ಼್ ದಿ ರೆಸ್ಟ್ಲೆಸ್ ಮೈಂಡ್' ನಲ್ಲಿ ,೧೨ನೇ ಶತಮಾನದ ತತ್ವಜ್ನಾನ ಪೀಟರ್ ಅಬೆಲಾರ್ಡ್ ಮತ್ತು ಅವರ ಶಿಷ್ಯೆ ಹೆಲೊಯಿಸ್ ನಡುವಿನ ಪ್ರೇಮ ಬಾಂಧವ್ಯಗಳ ಬಗ್ಗೆ ಕವಿತೆಯ ಸರಣಿಯನ್ನು ಒಳಗೊಂಡಿದೆ.ಮತ್ತು ಸಮಾಜದ ಮನರಂಜನೆ ಮತ್ತು ದಕ್ಷಿಣ-ಪಶ್ಚಿಮ ಫ಼್ರಾನ್ಸ್ನ ಪಾಲಿಯೋಲಿಥಿಕ್ ಗುಹೆ ಕಲೆಗಳ ಸೃಷ್ಟಿಕರ್ತರ ನಂಬಿಕೆಯನ್ನು ಒಳಗೊಂಡಿದೆ.
    'ಇಮ್ಪೆರಿಯಂ' ನೆಪೋಲಿಯನ್ ಯುದ್ಧಗಳ ನೌಕಾ ಸಂಘರ್ಷದ ಉಚ್ಛಾಟನಯನ್ನು ಒಳಗೊಂಡಿದೆ.
    'ಎಕ್ಸೈಲ್ ಮತ್ತು ಕಿಂಗ್ಡಮ್' ಡೇವಿಸ್‍ರವರ ನಾಲ್ಕನೇ ಕವನ ಸಂಗ್ರಹವಾಗಿದೆ ಮತ್ತು ಇವರ ಬ್ಲೂಮ್ಸ್ಬರಿ ಉತ್ಸವದ ಪ್ರಕಟಣೆಯೊಂದಿಗೆ ಸೇರಿಕೊಳ್ಳುತ್ತದೆ.ಇದು ಆಧ್ಯಾತ್ಮಿಕ,ದೈಹಿಕ,ಭಾವನಾತ್ಮಕ ಮತ್ತು ಮಾನಸಿಕ ಅಂಶಗಳನ್ನು ಒಳಗೊಂಡ ತೀರ್ಥಯಾತ್ರೆಯಾಗಿದೆ.ಈ ಕೆಲವು ಕವಿತೆಗಳ ಮೂಲಗಳು ನನ್ನ ಸ್ವಂತ ಜೀವನದ ಹಲವು ದಶಕಗಳ ಹಿಂದೆ ಹೋಗುತ್ತದೆ ಎಂದು ಡೇವಿಸ್ ಹೇಳಿದ್ದಾರೆ."ರೈನ್ ಫ಼್ಯೂಗ್" ಬ್ರೆಸಿಟ್ ಮತವನ್ನು ಬಹಳ ಹಿಂದೆಯೇ ಕಲ್ಪಿಸಲಾಗಿತ್ತು,ಅವರ ಪ್ರೀತಿ ಮತ್ತು ಜರ್ಮನಿಯ ಅನುಭವದಿಂದ ಅದು ಕೆಲವೇ ದಿನಗಳಲ್ಲಿ ಪೂರ್ಣಗೊಂಡಿತು.ಜರ್ಮನ್ ಮತ್ತು ಫ಼್ರೆಂಚ್ನ ಶಿಕ್ಷಕಿಯಾಗಿ ಇವರ ವೃತ್ತಿಜೀವನವು ಇವರ ಕವಿತೆಗಳೊಂದಿಗೆ ಸಮನಾಂತರವಾಗಿ ಬೆಳೆಯಿತು."ರೈನ್ ಲ್ಯಾಂಡ್" ಇವರಿಗೆ ಮನೆಯಲ್ಲಿ ಒಂದು ಮನೆಯಾಗಿತ್ತು.ಇದು ಅವರಿಗೆ ಒಳಿತು ಮತ್ತು ಕೆಡುಕಿಗಾಗಿ ಯೂರೋಪಿನ ಡೆಸ್ಟಿನಿ ಆಕಾರದಲ್ಲಿದ್ದ ಆ ಮಹಾನ್ನದಿಯ ಮೇಲಿನ ಆಳವಾದ ಸ್ನೇಹದ ದೃಶ್ಯ ಮತ್ತು ಆಳವಾದ ಧ್ಯಾನಗಳ ದೃಶ್ಯವಾಗಿದೆ.ಈ ಅನುಕ್ರಮವನ್ನು ಬರೆಯಲು, ಡೇವಿಸ್ರವರು ಸಾಮ್ರಾಜ್ಯಶಾಹಿ ನಗರವಾದ ವರ್ಮ್ಸ್ನಲ್ಲಿ,ಮಧ್ಯಕಾಲೀನ ಯಹೂದ್ಯರ ಸಂಸ್ಕೃತಿಯ ವಿಸ್ಮಯಕಾರಿ ಶೀಮಂತಿಕೆಯನ್ನು ಸಂಶೋಧಿಸಿದರು ಮತ್ತು ವಾಟರ್ಲೂನಲ್ಲಿ ನೆಪೋಲಿಯನನ್ನು ಸೋಲಿಸಲು ರೈನ್ನ ಹಾದಿಯಲ್ಲಿದ್ದ ಬ್ಲಚರ್ನ ಸೇನೆ,ಉಣ್ಣೆಯ ಬೆನ್ನಿನಲ್ಲಿ ಮರೆಮಾಡಲಾಗಿದ್ದ ವಿಲ್ಲಿಯಮ್ ಟಿಂಡಲ್ನ ಕ್ರಾಂತಿಕಾರಿ ಅನುವಾದಗಳನ್ನು ಸಹ ಸಂಶೋಧಿಸಿದರು. ತೀರ್ಥಯಾತ್ರೆ ಕೂಡ ವೈಯಕ್ತಿಕ ಎಂದು ಡೇವಿಸ್‍ರವರು ಹೇಳುತ್ತಾರೆ.ಇವರ ಪತಿ ಕವಿ ಸೆಬಾಸ್ಟಿಯನ್ ಬಾರ್ಕರ್ರವರು 'ಲಾಟ್ ಕಣಿವಿ'ಗೆ ಪ್ರಾಯಣ ಮಾಡಿದ್ದರು.೨೦೧೩ ರಲ್ಲಿ ಇದ್ದಕ್ಕಿದ್ದಂತೆ ಬಾರ್ಕರ್ರವರು ಟರ್ಮಿನಲ್ ಶ್ವಾಸಕೋಶದ ಕಾನ್ಸರ್ ರೋಗನಿರ್ಣಯ ಮಾಡಿಕೊಂಡಾಗ ಡೇವಿಸ್ರವರು ಲಾಟ್ ಕಣಿವೆಗೆ ಪ್ರಾಯಣಿಸಿದರು.ಅನೇಕರು ಭಾವಿಸುವಂತೆ ಇದು ಚಟ,ನಷ್ಟ,ದುಃಖ ಮತ್ತು ನೋವನ್ನು ಸಾವಿನಿಂದ ಪಡಿದುಕೊಳ್ಳುತ್ತದೆ ಎಂದು ಹೇಳಿದ್ದಾರೆ.
    "ಸಾಂಗ್ಸ್ ಫ಼್ರಂ ಲೀ ವ್ಯಾಲೆ",ಇವರ ತಾಯಿನಾಡಿನ ಬಗ್ಗೆ ಹಾಡುತ್ತವೆ.ಈಸ್ಟ್ ಲಂಡನ್ನಿನ ಅಲ್ಪಪ್ರಮಾಣದ ಭಾಗವನ್ನು ಒಳಗೊಂಡ ಇವರ ತಾಯಿನಾಡು ಅನೇಕ ಸಮುದಾಯಗಳನ್ನು,ಸಂಸ್ಕೃತಿಗಳನ್ನು ಮತ್ತು ಭಾಷೆಗಳನ್ನು ಪ್ರತಿನಿಧಿಸುತ್ತದೆ.ಅಂತಿಮವಾಗಿ,ತೀರ್ಥಯಾತ್ರೆಯನ್ನು 'ಅಕ್ರಾಸ್ ಕಂಟ್ರಿ' ನಲ್ಲೂ ಕಾಣಬಹುದು.ಈ ಕವಿತೆಗಳು ಮತ್ತು 'ಎಕ್ಸೈಲ್ ಅಂಡ್ ದಿ ಕಿಂಗ್ಡಮ್' ಎರಡೂ ಸಂಕೀರ್ಣತೆಗಳು,ಪವಾಡಗಳು ಮತ್ತು ಪ್ರಪಂಚದ ನಂಬಿಕೆಯ ಕಡೆಗೆ ಇರುವ ಸಂಕಷ್ಟಗಳನ್ನು ಆಧರಿಸಿವೆ.ಇದು ಆಗಾಗ್ಗೆ ಆಧ್ಯಾತ್ಮಿಕ ಜೀವನದ ಸಾಧ್ಯತೆಗಳನ್ನು ನಿರಾಕರಿಸುತ್ತದೆ.

ರೆಫ಼ರೆನ್ಸ್:[ಬದಲಾಯಿಸಿ]

 [೧]
  [೨]
 [೩]

[೪]

  1. https://en.wikipedia.org/wiki/Hilary_Davies
  2. https://www.enitharmon.co.uk/.../exile-and-the-kingdom-hilary-davies
  3. https://www.rlf.org.uk/fellowships/hilary-davies
  4. https://www.wadham.ox.ac.uk/.../language-and-lyrics--alumni-profile