ಸದಸ್ಯ:Namitha nami/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search
ಪಾಲುದಾರಿಕೆ ಶಾಸನ

ಪಾಲುದಾರಿಕೆ ಶಾಸನ[ಬದಲಾಯಿಸಿ]

ಪಾಲುದಾರಿಕೆಗೆ ಸಂಬಂಧಿಸಿದ ನ್ಯಾಯವು, ೧೯೩೨ನೇ ಭಾರತೀಯ ಪಾಲುದಾರಿಕೆ ಶಾಸನದಲ್ಲಿ ಉಲ್ಲೇಖಿತವಾಗಿದೆ. ಪಾಲುದಾರಿಕೆ ಒಪ್ಪಂದವು ಒಂದು ವಿಶಿಷ್ಟ, ಒಪಂದವಾಗಿದ್ದು, ವ್ಯಾಪಾರೋದ್ಯಮಿಗಳಿಗೆ ಅತಿಮುಖ್ಯವಾಗಿದೆ.

ಪಾಲುದಾರಿಕೆ ನಿರೂಪಣೆ[ಬದಲಾಯಿಸಿ]

"ಎಲ್ಲರಿಂದ ಅಥವಾ ಎಲ್ಲರ ಪರವಾಗಿ ವರ್ತಿಸುವ ಅವರಲ್ಲಿ ಒಬ್ಬ ಅಥವಾ ಹಲವರಿಂದ ನಿರ್ವಹಿಸಲ್ಪಟ್ಟ, ಉದ್ಯಮದ ಲಾಭವನ್ನು ಹಂಚಿಕೊಳ್ಳಲು ಒಪ್ಪಂದಮಾಡಿಕೊಂಡ ವ್ಯಕ್ತಿಗಳ ಮಧ್ಯ ಇರುವ ಸಂಬಂಧವೇ ಪಾಲುದಾರಿಕೆ" ಎಂದು ಭಾರತೀಯ ಪಾಲುದಾರಿಕೆ ಶಾಸನದ ೪ನೇ ಪ್ರಕರಣವು ನಿರೂಪಿಸುತ್ತದೆ. ಅಲ್ಲದೆ ಆಲ್ಲದೆ ಆ ರೀತಿ ಪರಸ್ಪರ ಒಪ್ಪಂದ ಮಾಡಿಕೊಂಡ ವ್ಯಕ್ತಿಗಳನ್ನು ವೆಯಕ್ತಿಕವಾಗಿ ಪಾಲುದಾರರೆಂದೂ, ಸಾಮೂಹಿಕವಾಗಿ ಪಾಲುದಾರಿಕೆ ಸಂಸ್ಥೆ ಎಂದೂ, ಮತ್ತು ಯಾವ ಹೆಸರಿನ ಮೇಲೆ ಉದ್ಯಮವನ್ನು ನಿರ್ವಹಿಸಲಾಉತ್ತದೋ ಆ ಹೆಸರನ್ನು ಪಾಲುದಾರಿಕೆ ಸಂಸ್ಥೆಯ ನಾಮೆ ಎಂದೂ ಕರೆಯಲಾಗುತ್ತದೆ. ಪಾಲುದಾರಿಕೆ ನಿರೂಪಣೆಯು ಕೆಳೆಗೆ ಕಂಡ ಆಂಶಗಳನ್ನೊಳಗೊಂಡಿದೆ ೧.ಪಾಲುದಾರಿಕೆಯು ಒಂದು ಒಪ್ಪಂದದಿಂದ ಉದ್ಭವಿಸುವುದು. ೨.ಎರಡು ಅಥವಾ ಹೆಚ್ಚು ಜನರ ನಡುವೆ ಒಪ್ಪಂದವಾಗಬೇಕು. ೩.ಒಂದು ವ್ಯಾಪಾರ ಅಥವಾ ಉದ್ಯಮವನ್ನು ನಿರ್ವಹಿಸಲು ಒಪ್ಪಂದವಾಗಬೇಕು. ೪.ಅಂತಹ ವ್ಯಾಪಾರ ಅಥವಾ ಉದ್ಯಮದ ಲಾಭವನ್ನು ಹಂಚಿಕೊಳ್ಳುವುದೇ ಒಪ್ಪಂದದ ಗುರಿಯಾಗಿರಬೇಕು. ೫.ಆ ವ್ಯಾಪಾರ ಅಥವಾ ಉದ್ಯಮವನ್ನು ಎಲ್ಲರೂ ಅಥವಾ ಎಲ್ಲರ ಪರವಾಗಿ ಅವರಲ್ಲಿ ಒಬ್ಬ ಅಥವಾ ಹಲವರು ನಿರ್ವಹಿಸಬೇಕು. ಪಾಲುದಾರಿಕೆ ಸಂಸ್ಥೆ ಏರ್ಪಡಲು ಕನಿಸ್ ಪಶ್ ಇಬ್ಬರು ವ್ಯಕ್ತಿಗಳು ಬೇಕು. ಬ್ಯಾಂಕಿಂಗ್ ಉದ್ಯಮವನ್ನು ನಿರ್ವಹಿಸಬೇಕಾದ ಪಾಲುದಾರಿಕೆ ಸಂಸ್ಥೆಯಲ್ಲಿ ಪಾಲುದಾರರ ಅತ್ಯಧಿಕ ಸಂಖ್ಯೆಯು ಇಪ್ಪತ್ತಕ್ಕೂ ವಿಮಾರಿರಕೂಡದು.

ಪಾಲುದಾರಿಕೆಯ ಪರೀಕ್ಷೆ ಅಥವಾ ಕುರುಹು[ಬದಲಾಯಿಸಿ]

ಕೆಲುವು ವೇಳೆ ನಷ್ಟವನ್ನನುಭವಿಸುವುದು ಅನಿವಾರ್ಯವಾದರೂ, ನಷ್ಟವನ್ನನುಭವಿಸುವುದಕ್ಕೋಸ್ಕರವೇ, ಯಾರೂ ಸಹ ಇನ್ನೊಬ್ಬನೊಡನೆ ಒಂದು ಪಾಲುದಾರಿಕೆ ಸಂಬಂಧವನೇರ್ಪಡಿಸಿಕೊಳ್ಳುವುದಿಲ್ಲ. ಲಾಭದ ಹಂಚಿಕೆ ಇರದ, ಪಾಲುದಾರಿಕೆ ಇರಲು ಅಶಕ್ಯವಾದರೂ, ಲಾಭಹಂಚಿಕೆಯೇ ಪಾಲುದಾರಿಕೆ ಸಂಬಂಧದ ನಿರ್ಣಯಾತ್ಮಕ ರುಜುವಾತು ಅಗುವುದಿಲ್ಲ. ಭಾರತೀಯ ಪಾಲುದಾರಿಕೆ ಶಾಸನದ ೬ನೆಯ ಪ್ರಕರಣಕ್ಕಿರುವ ೨ನೆಯ ವಿವರಣೆಯು,"ಒಬ್ಬ ವ್ಯಕ್ತಿಯು ಒಂದು ಉದ್ಯಮದ ಲಾಭದಲ್ಲಿ ಒಂದು ಪಾಲನ್ನು ಪಡೆಯುವುದು ಮಾತ್ರವೇ ಉದ್ಯಮವು ಸಂಪಾದಿಸುವ ಲಾಭವನ್ನವಲಂಬಿಸಿ ಅಥವಾ ಲಾಭದ ಏರಿಳಿತಗಳನ್ನನುರಿಸಿ ಹಣವನ್ನು ಪಡೆಯುವುದು ಮಾತ್ರವೇ ಉದ್ಯಮವನ್ನು ನಡೆಸುವ ಇತರರೊಂದಿಗೆ ಅವನನ್ನು ಪಾಲುದಾರನನ್ನಾಗಿ ಮಾಡುವುದಿಲ್ಲ" ಎಂದು ಸ್ಪಷ್ಟಪಡಿಸುತ್ತದೆ. ಒಂದು ಗೊತ್ತಾದ ದರದ ಮೇಲೆ ಬಡ್ಡಿಯನ್ನಲ್ಲದೆ, ಪಾಲುದಾರಿಕೆ ಸಂಸ್ಥೆಯು ಸಂಪಾದಿಸುವ ಲಾಭದಲ್ಲಿ ಒಂದು ಪಾಲನ್ನೂ ಅಡೆಯುವ ಷರತ್ತಿನ ಮೇಲೆ, ಸಾಲಕೊಡುವ ಸಾಲಿಗನು ಒಬ್ಬ ಪಾಲುದಾರನಾಗುವುದಿಲ್ಲ. ಪಾಲುದಾರಿಕೆ ಉಂಟಾಗಲು, ವ್ಯಕ್ತಿಗಳಲ್ಲಿ ಪರಸ್ಪರ ಹಿತದ ಐಕ್ಯತೆ ಇರಬೇಕೇ ವಿನಾ ಸಾಲಗಾರ ನಡುವೆ ಇರುವಂಥ ಪರಸ್ಪರ ಹಿತಗಳ ವಿರೋಧವಿರಕೊಡದು. ಹಾಗೆಯೇ, ಒಂದು ಪಾಲುದಾರಿಕೆ ಸಂಸ್ಥೆಯ ಒಬ್ಬ ನವ್ಕಾರ ಅಥವಾ ಒಬ್ಬ ಕಾರ್ಯಭಾರಿಯು ತನ್ನ ಸಂಭಾವನೆಗೆ ಪ್ರತಿಯಾಗಿ ಅಥವಾ ಅದರ ಜೊತೆಗೆ,ಉದ್ಯಮದ ಲಾಭದಲ್ಲಿ ಒಂದು ಪಾಲನ್ನು ಪಡೆದರೆ, ಅವನ ಯಜಮಾನನೊಂದಿಗೆ ಅವನು ಪಾಲುದಾರನಾಗುವುದಿಲ್ಲ. ಗತಿಸಿದ ಒಬ್ಬ ಪಾಲುದಾರನ ಹೆಂಡತಿ ಅಥವಾ ಮಗುವು, ಪಾಲುದಾರಿಕೆ ಸಂಸ್ಥೆಯ ಲಾಭದಲ್ಲಿ ಒಂದು ಪಾಲನ್ನು ಅಥವಾ ಹಣವನ್ನು ವರ್ಷಾಶನ ರೂಪದಲ್ಲಿ ಪಡೆಯುವುದರಿಂದಲೇ ಒನ್ನ ಪಾಲುದಾರಳು ಅಥವಾ ಒಬ್ಬ ಪಾಲುದಾರನು ಆಗುವುದಿಲ್ಲ. ಒಬ್ಬ ವ್ಯಕ್ತಿಯು ತನ್ನ ವ್ಯಾಪಾರದ ಸುನಾಮವನ್ನು ಮಾರಿ ಅದ್ಕ್ಕೆ ಪ್ರತಿಫಲವಾಗಿ ಉದ್ಯಮದ ಲಾಭದಲ್ಲಿ ಒಂದು ಪಾಲನ್ನು ಪಡೆಯುತ್ತಾ ಇರುವುದರಿಂದಲೇ ಒನ್ನ ಪಾಲುದಾರನಾಗುವುದಿಲ್ಲ. "ಒಬ್ಬ ವ್ಯಕ್ತಿಯು ಒಬ್ಬ ಪಾಲುದಾರನೇ ಅಥವಾ ವ್ಯಕ್ತಿಗಳಾ ಒಂದು ಗುಂಪು ಪಾಲುದಾರಿಕೆ ಸಂಸ್ಥೆಯೇ ಎಂದು ಗೊತ್ತುಮಾಡುವಾಗ ಸಂಬಂಧ ಪಟ್ಟ ಎಲ್ಲಾ ಅಂಶಗಳ ಸಮಗ್ರ ಪರಿಗಣನೆಯಿಂದ ತೋರ್ಪಟ್ಟ, ಕಕ್ಷಿಗಳಾ ನಡುವಣಾ ನೈಜಸಂಬಂಧಕ್ಕೆ ಗಮನಕೊಡಬೇಕು" ಎಂಬುದಾಗಿ ಪಾಲುದಾರಿಕೆ ಶಾಸನದ ೬ನೇ ಪ್ರಕರಣವು ವಿಧಿಸುತ್ತದೆ. ಉದ್ಯಮದ ಲಾಭದಲ್ಲಿ ಪಾಲು ಪಡೆಯುವ, ಮೇಲೆ ಕಾಣಿಸಿದ ನಾಲ್ಕು ಬಗೆಯ, ವ್ಯಕ್ತಿಗಳ ಪರವಾಗಿ, ಉದ್ಯಮ ನಡೆಸುವವರು, ಉದ್ಯಮವನ್ನು ನ್ಡೆಸುವುದಿಲ್ಲ. ಅಂದರೆ, ಪರಸ್ಪರ ಕಾರ್ಯಭಾರ ಮತ್ತು ಅಧಿಕಾರ ನೀಡಿಕೆಯಿರುವುದಿಲ್ಲ. ಆದ್ದರಿಂದ (೧೮೬೧).೮.H.C.L.268 ಎಂಬ ವಿನಾದದಲ್ಲಿ ತಿಳಿಸಿರುವಂತೆ, ಪಾಲುದಾರಿಕೆಯ ಕುರುಹು, ಕಾರ್ಯಭಾರವೇ ವಿನಹ ಲಾಭದ ಹಂಚಿಕೆ ಮಾತ್ರವೇ ಅಲ್ಲ. ಪಾಲುದಾರಿಕೆ ಸಂಸ್ಥೆಯನ್ನೇ ಸ್ಥೂಲವಾಗಿ ಹೋಲುವಂಥ ಇನ್ನೊಂದು ಸಂಸ್ಥೆ ಎಂದರೆ, ಹಿಂದೂ ಅವಿಭಕ್ತ ಕುಟುಂಬದ ವ್ಯಾಪಾರೀ ಸಂಸ್ಥೆ. ಹಿಂದೂ ಶಾಸನದ ರೀತಿ. ಕುಟುಂಬದ ವ್ಯಾಪಾರಸಹ, ಇತರ ಆಸ್ತಿಗಳಂತೆ ವಾರಸು ಯೋಗ್ಯವಾಗಿದೆ. ಒಂದು ಹಿಂದೂ ಕುಟುಂಬವು, ಪೂರ್ವಿಕರು ಬಿಟ್ಟುಕೊಟ್ಟ ವ್ಯಾಪಾರವನ್ನು ನ್ಡೆಸಿಕೊಂಡು ಬಂದರೆ, ಒಂದು ವ್ಯಾಪಾರೀ ಕುಟುಂಬವಾಗುತ್ತದೆ. ವ್ಯಾಪಾರದಲ್ಲಿನ ಹಿತವು, ಉತ್ತರ-ಜೀವಿತ ತತ್ವ ಮುಂಖಾಂತರ, ಉಳಿದ ಸದಸ್ಯರಿಗೆ ವರ್ಗವಾಗುತ್ತದೆ ಮತ್ತು ಪ್ರತಿಯೊಬ್ಬ ಸದಸ್ಯನೂ ತಾನೂ ಜನ್ಮತಾಳಿದುದರಿಂದಲೇ, ವ್ಯಾಪಾರದ ಆಸ್ತಿ ಮತ್ತು ಲಾಭದಲ್ಲಿ ಒಂದು ಹಿತವನ್ನು ಸಂಪಾದಿಸುತ್ತಾನೆ. ಈ ಬಗೆಯ ಸಂಸ್ಥೆಯ ಪಾಲುದಾರಿಕೆ ಸಂಸ್ಥೆಯಲ್ಲ. ಇನ್ನೆರಡಕ್ಕೂ ಇರು ವ್ಯತ್ಯಾಸಗಳು ಕೆಳಗಿನಂತಿವೆ.

ಪಾಲುದಾರಿಕೆ ಸಂಸ್ಥೆ ಒಪ್ಪಂದ[ಬದಲಾಯಿಸಿ]

ಒಂದು ಪಾಲುದಾರಿಕೆ ಒಪ್ಪಂದದಲ್ಲಿ, ಒಂದು ನ್ಯಾಯಸಮ್ಮತವಾದ,ಒಪ್ಪಂದಕ್ಕೆ ಬೇಕಾದ,ಅ ಭಾದಿತ ಅಥವಾ ದೋಷರಹಿತ ಸಮ್ಮತಿ, ಪ್ರತಿಫಲ, ನ್ಯಾಯಸಮ್ಮತವಾದ ಉದ್ದೇಶ ಮತ್ತು ಕಕ್ಷಿಗಳು ಒಪ್ಪಂದಮಾಡಿಕೊಳ್ಳುವ ಅರ್ಹತೆ ಮುಂತಾದ ಅವಶ್ಯಕ ಅಂಶಗಳಿರಬೇಕು. ಅದರೆ ಪಾಲುದಾರಿಕೆ ಒಪ್ಪಂದವು, ಅವಶ್ಯಕವಾಗಿ ಬರಹ ಮೂಲ ಕವಾಗಿ ಇರಲೇಬೇಕೆಂಬ ನಿಯಮನೇನಿಲ್ಲ. ಬಾಯಿಮಾತಿನ ಒಪ್ಪಂದವಿರಬಹುದು ಅಥವಾ ಕಕ್ಷಿಗಳ ನಡೆನುಡಿಗಳಿಂದ ಪಾಲುದಾರಿಕೆ ಸಂಬಂಧವನ್ನು ಉಹಿಸಬಹುದು, ಬರಹ ಮೂಲಕ ಮಾಡಿಕೊಂಡ ಪಾಲುದಾರಿಕೆ ಒಪ್ಪಂದವನ್ನು "ಪಾಲುದಾರ ಸಂಸ್ಥೆಯ ಒಡಂಬಡಿಕೆ" ಅಥವಾ "ಪಾಲುದಾರ ಸಂಸ್ಥೆಯ ಕಟ್ಟಳೆಗಳು" ಎಂದು ಕರೆಯುತ್ತಾರೆ ಈ ಒಡಂಬಡಿಕೆಗೆ ಸ್ಟಾಂಪು ತೆರಿಗೆ ಶಾಸನದ ರೀತಿ ಸ್ಟಾಂಪು ಹಚ್ಚಿರಬೇಕು ಒಡಂಬಡಿಕೆಯಲ್ಲಿ ಸಾಧಾರಣವಾಗಿ ಕೆಳೆಗಿನ ಅಂಕಗಳನ್ನು ಕಾಣಿಸಿರಬೇಕು. ೧.ವ್ಯವಾಹರದ ಸ್ವಭಾವ ಮತ್ತು ಸ್ಥಳ ೨.ಪಾಲುದಾರಿಕೆ ಸಂಸ್ಥೆಯ ಹೆಸರು ಮತ್ತು ಪಾಲುದಾರರ ಹೆಸರುಗಳು. ೩.ಪಾಲುದಾರಿಕೆಯ, ಆರಂಭ ದಿನ ಮತ್ತು ಕಾಲಾವಧಿ. ೪.ಲಾಭ ಮತ್ತು ನಷ್ಟವನ್ನು ಯಾವ ರೀತಿ ಹಂಚಿಕೊಳ್ಳಬೇಕು ಎಂಬ ಅಂಶ. ೫.ಆಡಳಿತ ವಿಚಾರ. ೬.ಲೆಕ್ಕಗಳ ವಿಷಯ. ೭.ಪಾಲುದಾರಿಕೆ ಸಂಸ್ಥೆಯು,ಯಾವೊಬ್ಬ ಪಾಲುದಾರನ ಮರಣ ಅಥವಾ ದಿವಾಳಿಯ ನಂತರ, ಮುಂದುವರಿಯಬೇಕೇ ಇಲ್ಲವೇ ಎನ್ನುವ ವಿಷಯ. ೮.ತಮ್ಮ ತಮ್ಮಲ್ಲಿ ಉದ್ಭವಿಸುವ ವಿವಾದವನ್ನು ಮಧ್ಯಸ್ಥಗಾರಿಕೆಗೆ ಒಪ್ಪಿಸುವ ಕರಾಯ.

ಪಾಲುದಾರಿಕೆ ಸಂಸ್ಥೆಯ ರಿಜಿಸ್ಟೇಷನ್[ಬದಲಾಯಿಸಿ]

ಪಾಲುದಾರಿಕೆ ಸಂಸ್ಥೆಗಳನ್ನು ರಿಜಿಸ್ಟ್ರಾರ್ ಅಫ್ ಫಿರ್ಮ್ಸ್ರರವರಲ್ಲಿ, ರಿಜಿಸ್ಟೇಷನ್ ಫೀಯನ್ನು ಕೊಟ್ಟು ಎಲ್ಲಾ ಪಾಲುದಾರರೂ ರುಜು ಹಾಕಿರುವ ಒಂದು ಹೇಳಿಕೆ ರೂಪದಲ್ಲಿ, ರಿಜಿಸ್ಟ್ರರು ಮಾಡಿಕೊಳ್ಳಬಹುದು. ಈ ಹೇಳಿಕೆಯಲ್ಲಿ ಕೆಳಗೆ ಕಾಣಿಸಿರುವ ಅಂಶಗಳನ್ನು ವಿಶದಪಡಿಸಿರಬೇಕು. ೧.ಪಾಲುದಾರಿಕೆ ಸಂಸ್ಥೆಯ ಹೆಸರು. ೨.ಸಂಸ್ಥೆಯ ವ್ಯವಹಾರದ ಅಥವಾ ವ್ಯವಹಾರದ ಮುಖ್ಯ ಕಚೇರಿಯ ಸ್ಥಳ. ೩.ಸಂಸ್ಥೆಯು ವ್ಯವಹಾರ ನಡೆಸುವ ಇತರ ಸ್ಥಳಗಳು. ೩.ಪ್ರತಿಯೊಬ್ಬ ಪಾಲುದಾರರ ಪೂರ್ಣ ಹೆಸರು ಮತ್ತು ಖಾಯಂ ವಿಳಾಸ. ೪.ಸಂಸ್ಥೆಯ ಕಾಲಾವಧಿ. ಭಾರತೀಯ ಪಾಲುದಾರಿಕೆ ಶಾಸನವು ರಿಜಿಸ್ಟ್ರೇಷನ್ನನ್ನು ಕಡ್ಡಾಯ ಮಾಡಿಲ್ಲ ಮತ್ತು ರಿಜಿಸ್ಟ್ರೇಷನ್ ಆಗದಿರುವುದಕ್ಕೆ ದಂಡವನ್ನೂ ವಿಧಿಸಿಲ್ಲ. ಅದರೆ ರಿಜಿಸ್ಟ್ರೇಷನ್ ಮಾಡಿಸಿಕೊಳ್ಳದ ಸಂಸ್ಥೆಗಳ ಮೇಲೆ ಕೆಲವು ಅಶಕತ್ತೆಗಳನ್ನು ಹೇರಿದೆ.

ಪಾಲುದಾರಿಕೆಯ ಕಾಲಾವಧಿ[ಬದಲಾಯಿಸಿ]

ಪಾಲುದಾರರು, ಪಾಲುದಾರಿಕೆ ಸಂಸ್ಥೆಯ ಕಾಲಾವಧಿಯನ್ನು ನಿರ್ಧರಿಸಬಹುದು ಅಥವಾ ಅದರ ವಿಷಯವಾಗಿ ಏನನ್ನೂ ಹೇಳದಿರಬಹುದು. ಒಂದು ನಿರ್ದಿಷ್ಟ ಅವಧುಯವರೆಗೆ ಉದ್ಯಮವನ್ನು ನಡೆಸಬೇಕೆಂದು ಗೊತ್ತುಮಾಡಿರುವಾಗ ಅದನ್ನು "ಕ್ಲುಪ್ತ ಅವಧಿಯ ಪಾಲುದಾರಿಕೆ" ಎಂದು ಕರೆಯುತ್ತಾರೆ. ಅವಧಿಯು ಪೂರೆಸಿವಾಗ, ಪಾಲುದಾರಿಕೆಯು ಕೊನೆಗಾಣುತ್ತದೆ. ಅದರೆ, ಮುಂಚೆ ನಿರ್ಧರಿಸಿದ ಅವಧಿಯ ನಂತರವೂ, ಉದ್ಯಮವನ್ನು ಮುಂದುವರಿಸಿದರೆ, ಅದು "ಇಚ್ಛಾನುವರ್ತಿ ಪಾಲುದಾರಿಕೆ" ಆಗುತ್ತದೆ ಮತ್ತು ಕಕ್ಷಿಗಳ ಅರಸ್ಪರ ಹಕ್ಕು ಬಾಧ್ಯತೆಗಳು, ಇಚ್ಛಾನುವರ್ತಿ ಪಾಲುದಾರಿಕೆಗೆ ವಿರೋಧವಾಗಿರದ ಪಕ್ಷಕ್ಕೆ, ಮುಂಚಿನಂತೆಯೇಇರುತ್ತವೆ. ಒಂದು ನಿರ್ದಿಷ್ಟ ಉದ್ಯಮವನ್ನು ನಡೆಸಲು, ಒಂದು ಪಾಲುದಾರಿಕೆಯನ್ನು ಸ್ಥಾಪಿಸಿದರೆ, ಅದನ್ನು"ನಿರ್ದಿಷ್ಟ ಪಾಲುದಾರಿಕ" ಎಂದು ಕರೆಯುತ್ತಾರೆ. [೧],[೨],[೩]

ಉಲ್ಲೇಖನಗಳು[ಬದಲಾಯಿಸಿ]