ಸದಸ್ಯ:NAVEEN HEGDE 09/ನನ್ನ ಪ್ರಯೋಗಪುಟ
ಶಿರಸಿ ಉತ್ತರ ಕನ್ನಡ ಜಿಲ್ಲೆಯ ಒಂದು ತಾಲ್ಲೂಕು ಕೇಂದ್ರ. ಈ ಜಾಗವು ಪ್ರಶಾ೦ತ ಪರಿಸರ ಹಾಗೂ ಹಚ್ಚ ಹಸಿರಾದ ಕಾಡುಗಳಿಗೆ ಹೆಸರುವಾಸಿ. ಈ ಊರಿನಲ್ಲಿ ಅತಿ ಪ್ರಸಿದ್ಧವಾದ ಶ್ರೀ ಮಾರಿಕಾಂಬ ದೇವಸ್ಥಾನ ಸಹ ಇದೆ. ಶ್ರೀ ಮಾರಿಕಾಂಬ ಜಾತ್ರೆ ಶಿರಸಿ ಮಾರಿಕಾಂಬಾ ಜಾತ್ರೆ ಎರಡು ವರ್ಷಕ್ಕೊಮ್ಮೆ ಎ೦ಟು ದಿನಗಳ ಕಾಲ ನಡೆಯುತ್ತದೆ. ಊರಿನ ವಿಶೇಷತೆ
ಈ ಊರಿನ ಸನಿಹ ಇರುವ ಕೆಲವು ರಮಣೀಯ ಸ್ಥಳಗಳು ಯಾಣ, ಬನವಾಸಿ, ಸೊಂದಾ ಮಠ, ಸೊದೆ (ವಾದಿರಾಜ ಮಠ), ಸಹಸ್ರಲಿ೦ಗ, ಮೋರೆಗಾರ ಜಲಪಾತ, ಕುಮುಟಾಯಿಂದ ಶಿರಸಿಗೆ ಹೊಗುವ ದಾರಿಯಲ್ಲಿ ಸಿಗುವ ದೇವಿಮನೆ ಘಟ್ಟ ನೊಡಲು ಬಹಳ ಆಕರ್ಷಣೀಯ ವಾಗಿದೆ. ಇದು ಕಾಡಿನಿ೦ದ ಆವರಿಸಲ್ಪಟ್ಟಿದೆ. ಇಲ್ಲಿಯ ಸುತ್ತ ಮುತ್ತ ಹಳ್ಳಿಗಳ ಜನ ಅಡಿಕೆ ಬೆಳೆಗಾರರು. ತೆ೦ಗು, ಭತ್ತ, ವೆನಿಲ್ಲಾ, ಕೋಕಾಗಳನ್ನೂ ಸಹ ಇಲ್ಲಿ ಬೆಳೆಯುತ್ತಾರೆ. ಶಿರಸಿಯ ಮಾರಿಕಾಂಬಾ ದೇಗುಲವು ಬಹಳ ಪ್ರಸಿದ್ಧಿಯಾಗಿದೆ. ಸಿರಸಿ ಸಮುದ್ರ ಮಟ್ಟದಿಂದ ೫೯೦ ಮೀಟರ್ ಎತ್ತರದಲ್ಲಿ ಸಹ್ಯಾದ್ರಿ ಪರ್ವತ ಶ್ರೇಣಿಯ ಮಧ್ಯದಲ್ಲಿದೆ. ಇದು ಕರ್ನಾಟಕದ ರಾಜಧಾನಿ ಬೆಂಗಳೂರಿನಿಂದ ೪೨೫ ಕಿ.ಮಿ. ದೂರದಲ್ಲಿದೆ.
ಶಿರಸಿಯ ಸುತ್ತ ಮುತ್ತಲಿನ ಪ್ರೇಕ್ಷಣೀಯ ಸ್ಥಳಗಳು ಓಶೋರವರ , ಡ್ವನಾಮಕ್/ಕುಂಡಲಿನಿ/ಚಕ್ರ ಮತ್ತು ಇತರೆ ಧ್ಯಾನವನ್ನು ಶಿರಸಿಯಲ್ಲಿ ಪ್ರ್ಯಾಕ್ಟೀಸ್ ಮಾಡಲು ಇವರನ್ನು ಸಂಪರ್ಕಿಸಿ {ಜಯಪ್ರಕಾಶ 9164455598 ನಿಮ್ಮ ಹೆಸರನ್ನು ಸಂದೇಶ ಕಳುಹಿಸುವ ಮೂಲಕ ನೊಂದಾಯಿಸಬಹುದು) ಬನವಾಸಿ ರಿಸ್ತಶಕ ೩೪೫ – ೫೨೫ ವರೆಗೆ ಆಳಿದ ಕದಂಬ ಅರಸರ ರಾಜಧಾನಿಯಾಗಿದ್ದ ಬನವಾಸಿ ಸಿರಸಿಯಿಂದ ೨೪ ಕಿ.ಮಿ. ದೂರದಲ್ಲಿದೆ. ಇಲ್ಲಿ ಕದಂಬರು ಕಟ್ಟಿಸಿದ ಮಧುಕೇಶ್ವರ ದೇವಸ್ಥಾನ ತುಂಬ ಸುಂದರವಾಗಿದೆ. ಸಹಸ್ರಲಿಂಗ ಸಿರಸಿಯಿಂದ ೧೭ ಕಿ.ಮಿ. ದೂರದಲ್ಲಿರುವ ಸಹಸ್ರಲಿಂಗದಲ್ಲಿ, ನದಿಯ ಮಧ್ಯದಲ್ಲಿ ಕಲ್ಲುಗಳಲ್ಲಿ ಕೆತ್ತಲಾದ ನೂರಾರು ಶಿವಲಿಂಗಗಳಿವೆ. ಕಾಡಿನ ಮಧ್ಯ ಇರುವ ಸಹಸ್ರಲಿಂಗಕ್ಕೆ ಶಿವರಾತ್ರಿಯಂದು ಬಹಳ ಜನ ಬರುತ್ತಾರೆ. ಸೊಂದಾ ಸಿರಸಿಯಿಂದ ೧೫ ಕಿ.ಮಿ. ದೂರದಲ್ಲಿರುವ ಸೊಂದಾದಲ್ಲಿ ಪ್ರಸಿದ್ಧ ವಾದಿರಾಜ ಮಠವಿದೆ. ಮತ್ತು ಅಲ್ಲಿ ಕೆಲ ಶತಮಾನಗಳ ಹಿಂದಿನ ಸುಂದರವಾದ ಕೋಟೆಯಿದೆ. ಉಂಚಳ್ಳಿ ಜಲಪಾತ ಮಿಟರ್ ಎತ್ತರದಿಂದ ಧುಮುಕುವ ಈ ಜಲಪಾತ ರಮಣೀಯವಾಗಿದೆ. ಸಿರಸಿಯಿಂದ ೩೦ ಕಿ.ಮಿ. ದೂರದಲ್ಲಿರುವ ಈ ಜಲಪಾತದಲ್ಲಿ ವರ್ಷದ ಬಹು ಭಾಗದಲ್ಲಿ ನೀರು ಇರುತ್ತದೆ. ಯಾಣ ಉತ್ತರ ಕನ್ನಡ ಜಿಲ್ಲೆಯ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಲ್ಲೊಂದು. ಪಶ್ಚಿಮ ಘಟ್ಟಗಳ ಸಹ್ಯಾದ್ರಿ ಷ್ರೇಣಿಯಲ್ಲಿದೆ. ಇದು ಶಿರಸಿ ಇಂದ ೪೫ ಕಿ.ಮಿ. ದೂರದಲ್ಲಿದೆ. ಜನಸಂಖ್ಯೆ ೨೦೧೧ ಜನಗಣತಿಯ ಪ್ರಕಾರ ಈ ಊರಿನ ಜನಸಂಖ್ಯೆ ೧,೧೦,೨೧೫. ಇವರಲ್ಲಿ ೭೯ ಶೇಕಡಾ ಜನರು ಸಾಕ್ಷರರು. ಶಿರಸಿಯಲ್ಲಿ ಕನ್ನಡ, (ಹವ್ಯಕ ಕನ್ನಡ), ಕೊಂಕಣಿ, ಉರ್ದು, ಮರಾಠಿ ಭಾಷೆಗಳನ್ನು ಮಾತಾಡುವ ಜನರಿದ್ದಾರೆ. ಮುಖ್ಯ ವ್ಯಾವಹಾರಿಕ ಭಾಷೆ ಕನ್ನಡ ಮತ್ತು ಕೊ೦ಕಣಿ.