ಸದಸ್ಯ:N.Aishwarya/ನನ್ನ ಪ್ರಯೋಗಪುಟ
ಗೋವಾದ ಕೆಲವು ಪ್ರಸಿದ್ಧ ದೇವಾಲಯಗಳು
[ಬದಲಾಯಿಸಿ]ರಜೆಗಳೆ ಇರಲಿ ಅಥವಾ ಸಾಮಾನ್ಯ ದಿನಗಳೆ ಇರಲಿ ಗೋವಾ ಎಂದಾಕ್ಷಣ ಎಲ್ಲರಿಗೂ ನೆನಪಾಗುವುದು ಅತ್ಯದ್ಭುತ ಕಡಲ ತೀರಗಳು, ರಾತ್ರಿಯ ಜಗಮಗಿಸುವ ಔತಣಕೂಟಗಳು, ಪಾನ ಪ್ರೀಯರಿಗೆ ಹಲವು ತರಹದ ಮದ್ಯ ಪಾನಗಳು (ಮದ್ಯಗಳು), ಮೀನೂಟಾ ಇತ್ಯಾದಿ.
ಗೋವಾದ ಇನ್ನೊಂದು ಮುಖ
[ಬದಲಾಯಿಸಿ]ಒಮ್ಮೆಯಾದರೂ ನಾವು ಯಾರಾದರೊಡನೆ ಗೋವಾದಲ್ಲಿ ದೇವಸ್ಥಾನಗಳು ಎಂದರೆ ಸಾಕು ಒಂದು ಕ್ಷಣ ಅವರು ಅಚ್ಚರಿ ಪಡದೆ ಇರಲು ಸಾಧ್ಯವೇ ಇಲ್ಲ.
ಮೋಜು-ಮಸ್ತಿ ಎಲ್ಲಿ ಧಾರ್ಮಿಕತೆ ಎಲ್ಲಿ ಎಂಬ ಸಂಶಯ ಅವರ ಮನದಲ್ಲಿ ಹುಟ್ಟದೆ ಇರಲು ಸಾಧ್ಯವಿಲ್ಲ. ಆದರೆ ನಮಗೆ ಗೊತ್ತಿರಬೇಕಾದ ಸಂಗತಿಯೆಂದರೆ ಗೋವಾದಲ್ಲಿಯೂ ಸಹ ಕೆಲವು ವಿಶಿಷ್ಟ ಹಿಂದೂ ದೇವಸ್ಥಾನಗಳಿವೆ ಎಂಬುದು ಹಾಗೂ ಆ ದೇವಸ್ಥಾನಗಳು ಪ್ರವಾಸಿ ದೃಷ್ಟಿಯಿಂದಲೂ ಮಹತ್ವ ಪಡೆದಿವೆ ಎಂಬ ಅಂಶ.
ಗೋವಾದ ಪ್ರಮುಖ ಕಡಲ ತೀರಗಳು
[ಬದಲಾಯಿಸಿ]ಗೋವಾದ ರಾಜಧಾನಿ ಪಣಜಿ. ಕಾಣ್ಕೋನ್ ಹಾಗು ಕೋಲ್ವ ಕಡಲವು ಅತೀ ದೋಡ್ಡ ಕಡಲ ತೀರಗಳು. ವಾಸ್ಕೊ, ಮೀರಾಮರ್,ದೊನಾಪೊಲೋ ಇತ್ಯಾದಿ. ಕಡಲ ತೀರಗಳ ಜೊತೆ ಜೊತೆಗೆ ಈ ವಿಶಿಷ್ಟ ದೇವಾಲಯಗಳಿಗೂ ಸಹ ಭೇಟಿ ನೀಡಿದರೆ ನಮಗೆ ಹಾಗು ಕುಟುಂಬದವರಿಗೆ ಸಂತಸ, ಸಂತೃಪ್ತಿ ಸಿಗುತ್ತದೆ.
ಗೋವಾದ ಅದ್ಭುತ ದೇವಾಲಯಗಳು:
[ಬದಲಾಯಿಸಿ]ಶಾಂತಾದುರ್ಗಾ ದೇವಸ್ಥಾನ: ಗೋವಾದ ಪೊಂಡಾ ತಾಲೂಕಿನಲ್ಲಿರುವ ಕವಲೇಮ್ ಎಂಬ ಗ್ರಾಮದ ಬೆಟ್ಟದ ಬುಡದಲ್ಲಿ ಈ ದೇವಸ್ಥಾನವಿದೆ. ಗೋವಾ ರಾಜಧಾನಿ ಪಣಜಿಯಿಂದ 33 ಕಿ.ಮೀ ದೂರದಲ್ಲಿರುವ ಈ ದೇವಸ್ಥಾನವು ದುರ್ಗೆಯ ಅವತಾರವಾದ ಶಾಂತಾದುರ್ಗಾ ದೇವಿಗೆ ಮುಡಿಪಾಗಿದೆ. ಈ ದೇವಿಯನ್ನು ಶಾಂತೇರಿ ದುರ್ಗಾ ಎಂದು ಸಹ ಕರೆಯುತ್ತಾರೆ. ಈ ದೇವಿಯ ದೇವಸ್ಥಾನವು ಯಿಂದೆ ಮುಂಬೈನ ಒಂದು ದ್ವೀಪದಲ್ಲಿತ್ತು. ಇಲ್ಲಿಗೆ ಭೇಟಿ ನೀಡುವವರಿಗೆ ಸುಂದರ ಅನುಭವ ಕರುಣಿಸುತ್ತದೆ.
ಮಂಗೇಶಿ ದೇವಸ್ಥಾನ: ಗೋವಾದ ಪೊಂಡಾ ತಾಲೂಕಿನಲ್ಲಿನ ಮ೦ಗೇಶಿ ಗ್ರಾಮದಲ್ಲಿ ಶಿವನ ಈ ಸುಂದರ ಹಾಗೂ ದೊಡ್ಡ ದೇವಸ್ಥಾನವಿದೆ. ಈ ದೇವಸ್ಥಾನವು ಪಣಜಿಯಿಂದ 21 ಹಾಗೂ ಮರಗೋವಾ (ಮಡಗಾಂವ್) ದಿಂದ 26 ಕಿ.ಮೀ ಗಳಷ್ಟು ದೂರದಲ್ಲಿದೆ.ಇಲ್ಲಿ ಅತೀ ಹೆಚ್ಚು ಜನ ಪ್ರತಿ ದನ ಭೇಟಿ ನೀಡುತ್ತಾರೆ. ಎಲ್ಲ ದೇವಾಲಯಗಳಂತೆ ಇಲ್ಲಿಯೂ ಸಹ ಪ್ರತಿನಿತ್ಯ ಶಿವನ ಅವತಾರದ ಮಂಗೇಶ ಲಿಂಗಕ್ಕೆ ಶೋಡೋಪಚಾರ ಪೂಜೆಯನ್ನು ನೆರವೇರಿಸಲಾಗುತ್ತದೆ.
ಪುರಾಣದ ಪ್ರಕಾರ, ಒಮ್ಮೆ ಶಿವನು ಪಾರ್ವತಿಯನ್ನು ತಮಾಷೆಯಲ್ಲಿ ಹೆದರಿಸಲು ಭಯಂಕರವಾದ ಹುಲಿಯ ರೂಪವನ್ನು ಪಡೆದು ಅವಳ ಮುಂದೆ ಬಂದು ನಿಂತ. ಹುಲಿಯ ಕಂಡು ಬೆಚ್ಚಿ ಬಿದ್ದ ಪಾರ್ವತಿಯು ಶಿವನನ್ನು ಹುಡುಕುತ್ತ ಪರ್ವತಗಳ ಕುರಿತು "ತ್ರಾಹಿ ಮಾಂ ಗಿರೀಶ " ಎಂದು ಕೂಗಿದಳು.ಈ ರೀತಿ ಹೇಳುತ್ತಿದ್ದಂತೆಯೇ ಶಿವನು ನಿಜ ರೊಪಕ್ಕೆ ಬಂದು ಪಾರ್ವತಿ ಯನ್ನು ಸಂತೈಸಿದನು. ಈ ಕಾರಣ ದಿಂದಲೆ ಶಿವನನ್ನು ಮಾಂಗಿರೀಶ ಎಂದೊ ಸಹ ಕರೆಯಲಾಗುತ್ತಿತ್ತು, ನಂತರ ಅದು ಮಂಗೇಶಿ ಯಾಗಿ ಹೆಸರು ಪಡೆಯಿತು.
ಶ್ರೀಬೇತಾಳ ದೇವಸ್ಥಾನ: ಶಿವನ ಯೋಧ ರೂಪವಾದ ರುದ್ರನ ಅವತಾರವಾಗಿ ಪೂಜಿಸಲಾಗುವ ಬೇತಾಳನಿಗೆ ಮುಡಿಪಾದ ದೇವಸ್ಥಾನ ಇದಾಗಿದೆ. ಗೋವಾದ ಬೀಚೋಲಿಂ ತಾಲೂಕಿನಲ್ಲಿರುವ ಅಮೋನಾ ಹಳ್ಳಿಯಲ್ಲಿ ಈ ದೇವಸ್ಥಾನವಿದೆ. ಶಿನಾರಿ, ಗಾವಾ, ಫಡಾಟೆ ಮುಂತಾದ ಕುಟುಂಬಗಳಿಂದ ಪೂಜಿಸಲ್ಪಡುವ ಬೇತಾಳನು ಈ ಹಳ್ಳಿಯ ಗ್ರಾಮ ದೇವತೆಯೂ ಹೌದು.
ಸಪ್ತಕೋಟೇಶ್ವರ ದೇವಸ್ಥಾನ: ಗೋವಾದಲ್ಲಿರುವ ನರ್ವೆ ಎಂಬುದೊಂದು ಪುಟ್ಟ ಹಳ್ಳಿಯಾಗಿದೆ. ಈ ಹಳ್ಳಿಯು ಪಣಜಿ ನಗರದಿಂದ 35 ಕಿ.ಮೀ ಗಳಷ್ಟು ದೂರವಿದ್ದು ತನ್ನಲ್ಲಿರುವ ಸಪ್ತಕೋಟೇಶ್ವರ ದೇವಸ್ಥಾನದಿಂದಾಗಿ ಪ್ರಸಿದ್ಧಿ ಪಡೆದಿದೆ. ಕದಂಬ ದೋರೆಯೊಬ್ಬನಿಂದ ತನ್ನ ಪತ್ನಿ ಕಮಲಾದೇವಿಗಾಗಿ ನಿರ್ಮಿಸಿದ ದೇವಾಲಯ ಇದಾಗಿದೆ. ಈ ದೇಗುಲವನ್ನು ಮಾಂಡೋವಿ ನದಿಯಲ್ಲಿರುವ ದಿವರ್ ಎಂಬ ನಡುಗಡ್ಡೆಯಿಂದ ಫೆರ್‍ರಿ ದೋಣಿಯ ಮೂಲಕ ಮಾತ್ರವೆ ತಲುಪಬಹುದಾಗಿದೆ.
ಬಾಲಾಜಿ ದೇವಸ್ಥಾನ ಉತ್ತರ ಗೋವಾದ ಮರ್ದೋಲ್ ಪ್ರದೇಶದಲ್ಲಿ ಸ್ಥಿತವಿರುವ ಬಾಲಾಜಿ ದೇವಸ್ಥಾನ. ಇದು ಬೆಳಿಗ್ಗೆ 8 ರಿಂದ ರಾತ್ರಿ 8 ಘಂಟೆಯವರೆಗೂ ತೆರೆದಿರುತ್ತದೆ.
ಕಾಮಾಕ್ಷಿ ಅಮ್ಮನ ದೇವಸ್ಥಾನ : ಗೋವಾದಲ್ಲಿರುವ ಪೊಂಡಾ ತಾಲೂಕಿನ ಶಿರೋಡಾ ಗ್ರಾಮದಲ್ಲಿದೆ ಈ ದೇವಸ್ಥಾನ. ಸುತ್ತಮುತ್ತಲಿನ ಸಾಕಷ್ಟು ಹಿಂದೂ ಭಕ್ತಾದಿಗಳು ಈ ದೇವಸ್ಥಾನಕ್ಕೆ ನಿರಂತರವಾಗಿ ಭೇಟಿ ನೀಡುತ್ತಿರುತ್ತಾರೆ. ದೇವಸ್ಥಾನ ಸಮೀತಿಯು ದೇಗುಲಕ್ಕೆ ಬರುವ ಭಕ್ತಾದಿಗಳಿಗೆ ತಂಗಲು ವ್ಯವಸ್ಥೆ ಕಲ್ಪಿಸಿದೆ. ಇತ್ತೀಚಿಗಷ್ಟೆ ಈ ದೇವಸ್ಥಾನಕ್ಕೆ ವಿದೇಶಿಗರ ಪ್ರವೇಶವನ್ನು ನಿಷೇಧಿಸಲಾಗಿದ್ದು ಅವರ ಆಕ್ಷೇಪಾರ್ಹ ಉಡುಗೆಗಳೆ ಇದಕ್ಕೆ ಮುಖ್ಯ ಕಾರಣವಾಗಿದೆ. ಈ ದೇವಾಲಯ ಸಂಕೀರ್ಣದಲ್ಲಿ ಶಾಂತಾದುರ್ಗಾ ಹಾಗೂ ಲಕ್ಷ್ಮಿನಾರಾಯಣರ ದೇಗುಲಗಳನ್ನೂ ಸಹ ಕಾಣಬಹುದಾಗಿದೆ.
ಮಹಲ್ಸಾ ನಾರಾಯಣಿ ದೇವಸ್ಥಾನ: ಗೋವಾದ ಮಾರ್ದೋಲ್ ಎಂಬಲ್ಲಿ ಈ ದೇವಸ್ಥಾನವಿದೆ. ಮಾರ್ದೋಲ್ ಪೊಂಡಾ ತಾಲೂಕಿನಲ್ಲಿರುವ ಒಂದು ಗ್ರಾಮವಾಗಿದೆ. ಇಲ್ಲಿ ಮಹಲ್ಸಾಳನ್ನು ವಿಷ್ಣುವಿನ ಸ್ತ್ರೀ ಅವತಾರವಾದ ಮೋಹಿನಿಯನ್ನಾಗಿ ಪೂಜಿಸಲಾಗುತ್ತದೆ.
ಶಾಂತೇರಿ ದೇವಾಲಯ: ಗೋವಾದ ಬಾರ್ಡೇಜ್ ತಾಲೂಕಿನಲ್ಲಿರುವ ಸಿಯೋಲಿಮ್ ಎಂಬಲ್ಲಿ ಈ ದೇವಸ್ಥಾನವಿದೆ. ಹಬ್ಬ ಹರಿದಿನಗಳ ಸಂದರ್ಭದಲ್ಲಿ ಈ ದೇವಸ್ಥಾನಕ್ಕೆ ಜನರು ಗುಂಪು ಗುಂಪಾಗಿ ಬರುತ್ತಾರೆ. ವಿಶೇಷವಾಗಿ ಮಹಿಳೆಯರು ಎಣ್ಣೆಯ ದೀಪಗಳನ್ನು ತಮ್ಮ ಕೈಯಲ್ಲಿ ಹಾಗೂ ತಲೆ ಮೇಲೆ ಇಟ್ಟುಕೊಂಡು ಈ ದೇವಸ್ಥಾನದ ಪ್ರದಕ್ಷಿಣೆ ಹಾಕುವುದು ಸಾಮಾನ್ಯ. ಇದಲ್ಲದೆ ಇಲ್ಲಿ ಏಕ ಮುಖ ದತ್ತಾತ್ರೇಯ ದೇವಸ್ಥಾನವೂ ಸಹ ಇದೆ. ಈ ದೇವಸ್ಥನವು ಜನ ಚಟುವಟಿಕೆಯಿಲ್ಲದ ಶಾಂತವಾದ ಪರಿಸರದಲ್ಲಿದ್ದು ಧ್ಯಾನಕ್ಕೆ ಯೋಗ್ಯವಾದ ಸ್ಥಳವಾಗಿದೆ. ಏಕಮುಖಿ ದತ್ತಾತ್ರೇಯ ದೇಗುಲ ಅಪರೂಪದ್ದಾಗಿದ್ದು ಪವಿತ್ರವೆಂಬ ಭಾವನೆ ಹಿಂದೂಗಳಲ್ಲಿದೆ.
ನಾಗೇಶಿ ದೇವಸ್ಥಾನ: ಶಿವನಿಗೆ ಮುಡಿಪಾದ ಮಂಗೇಶಿಯ ಹಾಗೆಯೆ ಪೊಂಡಾದಲ್ಲಿ ನಾಗೇಶಿ ದೇವಸ್ಥಾನವೂ ಸಹ ಇರುವುದನ್ನು ಗಮನಿಸಬಹುದು. ಸಾಮಾನ್ಯವಾಗಿ ಗೋವಾದ ಬಹುತೇಕ ಹಿಂದೂ ದೇವಾಲಯಗಳು (ಮೂಲ ವಿಗ್ರಹಗಳು) ಬೇರೆಡೆಯಿಂದ ತರಲಾದ ವಿಗ್ರಹಗಳನ್ನು ಹೊಂದಿವೆ. ಆದರೆ ಈ ಒಂದು ದೇವಸ್ಥಾನದ ವಿಗ್ರಹ ಇಲ್ಲಿಯೆ ಮೊದಲಿನಿಂದ ಪ್ರತಿಷ್ಠಾಪಿಸಲ್ಪಟ್ಟದ್ದಾಗಿದೆ.
ಸಾವಿರ ಧ್ವಜಗಳ ದೇವಾಲಯ: ಗೋವಾದ ಬಳಿ ವೆಂಗುರ್ಲಾಗೆ ಹೋಗುವ ದಾರಿಯಲ್ಲಿ ಈ ವಿಚಿತ್ರ ದೇವಾಲಯವನ್ನು ಕಾಣಬಹುದು. ಯಾವುದೆ ದೊಡ್ಡ ಗೋಪುರವಾಗಲಿ, ಕಟ್ಟಡವಾಗಲಿ ಇಲ್ಲ. ಚಿಕ್ಕ ರಚನೆ ಹಾಗೂ ಅದರಲ್ಲಿ ನೂರಾರು ಸಂಖ್ಯೆ ಕೇಸರಿ ವರ್ಣದ ಬಟ್ಟೆಯ ಧ್ವಜಗಳು ಹಾರಾಡುತ್ತಿರುವುದನ್ನು ಕಾಣಬಹುದು. ಇಲ್ಲಿ ಬಂದು ನಿಮ್ಮ ಇಷ್ಟಾರ್ಥ ತಿಳಿಸಿದ್ದಲ್ಲಿ ಅದು ಶೀಘ್ರವೆ ನೆರವೇರುತ್ತದೆಂದು ಹೇಳಲಾಗುತ್ತದೆ. ಒಂದೊಮ್ಮೆ ನಿಮ್ಮ ಇಚ್ಛೆ ಈಡೇರಿದರೆ ಅದಕ್ಕೆ ಪ್ರತಿಫಲವಾಗಿ ಧ್ವಜವನ್ನು ಸಮರ್ಪಿಸಲಾಗುತ್ತದೆ. ಇನ್ನೊಂದು ವಿಶೇಷವೆಂದರೆ ಇಲ್ಲಿ ಯಾರ ವಿಗ್ರಹವೂ ಇಲ್ಲಿ ಒಂದು ರೀತಿಯ ಅಗೋಚರ ಶಕ್ತಿಯ ಅನುಭವ ಉಂಟಾಗುತ್ತದೆಂದು ಇಲ್ಲಿ ತಮ್ಮ ಇಷ್ಟಾರ್ಥಗಳು ಪುರ್ಣಗೊಂಡ ಭಕ್ತಾದಿಗಳು ಹೇಳುತ್ತಾರೆ.
ಉಲ್ಲೇಖ
http://www.transindiatravels.com/goa/temples-in-goa/ https://www.goa.gov.in/what_to_see/temples/ https://www.treebo.com/blog/famous-temples-in-goa/
*************************************************************************************************************************************