ಸದಸ್ಯ:MuralidharanR/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೇಮ್ಸ್ ಆರ್ಥರ್ ಗೊಸ್ಲಿಂಗ್ (ಜನನ ಮೇ ೧೯,೧೯೫೫) ಕೆನೆಡ ದೇಶದ ಒಬ್ಬ ಕಂಪ್ಯೂಟರ್ ವಿಜ್ಞಾನಿ.ಇವರು ಜಾವ ಪ್ರೋಗ್ರಾಮಿಂಗ್ ಭಾ‍ಷೆಯ ಸಂಸ್ಥಾಪನೆ ಮತ್ತು ಡಿಸೈನ್ ಗೆ ಖ್ಯಾತರು. ಜೇಮ್ಸ್ ಗೊಸ್ಲಿಂಗ್ ಅವರು ಬ್ಯಾಚುಲರ್ ಆಫ್ ಸೈನ್ಸ್ ಪದವಿಯನ್ನು ಕ್ಯಾಲ್ಗರಿ ವಿಶ್ವವಿದ್ಯಾಲಯದಿಂದ ಹಾಗೂ ಅವರ ಎಮ್.ಎ. ಮತ್ತು ಪಿ.ಹೆಚ್.ಡಿ. ಪದವಿಗಳನ್ನು ಕಾರ್ನೆಗೀ ಮೆಲ್ಲನ್ ವಿಶ್ವವಿದ್ಯಾಲಯದಿಂದ ಪಡೆದಿದ್ದಾರೆ.ತಮ್ಮ ಡಾಕ್ಟರೇಟ್ ಪದವಿಗಾಗಿ ಸಂಶೋಧನೆ ಮಾಡುವಾಗ ಗೋಸ್ಲಿಂಗ್ ಎಮ್ಯಾಕ್ಸ್ ಎಂಬ ಎಮ್ಯಾಕ್ಸ್ ಆವೃತ್ತಿಯೊಂದನ್ನು ಬರೆದಿದ್ದಾರೆ.

ಸನ್ ಮೈಕ್ರೋಸಿಸ್ಟಮ್ ಕಂಪನಿಗೆ ಸೇರ್ಪಡೆಗೊಳ್ಳುವ ಮೊದಲು ಅವರು ,ಕಾರ್ನೆಗೀ ಮೆಲಾನ್ ವಿಶ್ವವಿದ್ಯಾನಿಲಯದಲ್ಲಿ ,ಬಹು-ಪ್ರೊಸೆಸರ್ ಆವೃತ್ತಿಯ ಯುನಿಕ್ಸ್ ಆಪರೇಟಿಂಗ್ ಸಿಸ್ಟಂಮನ್ನು 16-ವೇ ಕಂಪ್ಯೂಟರ್ ಗಾಗಿ ಅಭಿವೃಧ್ಧಿಪಡಿಸಿದರು. ಜೊತೆಗೆ ಅವರು ಅನೇಕ ಕಂಪೈಲರ್ಸ್ ಮತ್ತು ಮೇಲ್ ವ್ಯವಸ್ಥೆಗಳನ್ನು ಕೂಡ ಅಭಿವೃದ್ಧಿಪಡಿಸಿದರು.ಇವರು ಜಾವ ಪ್ರೊಗ್ರಾಮಿಂಗ್ ನ ತಂದೆ ಎಂದೆ ಜನರಿಗೆ ಪ್ರಸಿಧ್ಧ. ೧೯೮೪ ರಿಂದ ೨೦೧೦ ರ ವರೆಗು ಸನ್ ಮೈಕ್ರೋಸಿಸ್ಟಮ್ ಕಂಪನಿಯಲ್ಲಿ ಕೆಲಸ ಮಾಡಿದರು.ಮಾರ್ಚ್ ೨೮,೨೦೧೧ ರಂದು ತಾವು ಗೂಗಲ್ ಕಂಪನಿಗೆ ನೇಮಕಗೊಂಡಿದನ್ನು ತಮ್ಮ ಬ್ಲಾಗ್ ನಲ್ಲಿ ಪ್ರಕಟಿಸಿದರು.ಐದು ತಿಂಗಳ ನಂತರ ತಾವು ಲಿಕ್ವಿಡ್ ರೋಬೋಟಿಕ್ಸ್ ಎಂಬ ಸ್ಟಾರ್ಟ್ ಅಪ್ ಕಂಪನಿಯೊಂದನ್ನು ಸೇರಿಕೊಂಡಿದ್ದಾಗಿ ಘೋಷಿಸಿದರು.ಮೇ ೨೨,೨೦೧೭ ರಂದು ಪ್ರಖ್ಯಾತ ಅಮೇಜಾನ್ ಕಂಪನಿಗೆ ಸೇರಿಕೊಂಡಿದನ್ನು ತಮ್ಮ ಫೇಸ್ಬುಕ್ ಖಾತೆಯ ಮೂಲಕ ತಿಳಿಸಿದರು,

ಕೊಡುಗೆಗಳು =

ಗೊಸ್ಲಿಂಗ್ ಅವರು ಆರಂಭದಲ್ಲಿ ಗೋಸ್ಲಿಂಗ್ ಇಮ್ಯಾಕ್ಸ್ನ ಸಂಶೋಧನೆಗಾಗಿ ಪ್ರಸಿಧ್ಧಿಯಾಗಿದ್ದರು, ನಂತರದ ದಿನಗಳಲ್ಲಿ ಅವರ ನಿವ್ಸ್ ಎಂಬ ಸಂಶೋಧನೆಯು ,ಸನ್ ಕಂಪನಿ ಮುಕ್ತ ಸಂಪನ್ಮೂಲ ಪರವಾನಗಿ ಕೊಡದ ಕಾರಣ , ಎಕ್ಸ್ ವಿಂಡೋಸ್ ಕಂಪನಿಯ ಪಾಲಾಯಿತು. ತದನ೦ತರ ಅವರು ೧೯೯೪ ರಲ್ಲಿ ಜಾವಾ ಪ್ರೋಗ್ರಾಮಿಂಗ್ ಭಾಷೆಯನ್ನು ಕಂಡುಹಿಡಿದರು.ಜಾವಾದ ಮೂಲ ವಿನ್ಯಾಸ ಹಾಗೂ ಭಾಷೆಯ ಮೂಲ ಕಂಪೈಲರ್ ಮತ್ತು ವರ್ಚುವಲ್ ಯಂತ್ರವನ್ನು ಸ್ವತಃ ತಾವೇ ಅಭಿವೃಧ್ಧಿ ಪಡಿಸಿದರು. ಗೊಸ್ಲಿಂಗ್ ರವರಿಗೆ ಜಾವ ಬಗ್ಗೆ ತಮ್ಮ ಕಾಲೇಜಿನ ಆರಂಭಿಕ ದಿನಗಳಲ್ಲಿ ಕಲ್ಪನೆ ಮೂಡಿತು, ಲ್ಯಾಬ್ನ ಡಿಇಸಿ ವ್ಯಾಕ್ಸ್ ಕಂಪ್ಯೂಟರ್ಗಾಗಿ ರಚಿಸಿದ ಪಿ-ಕೋಡ್ ವರ್ಚುವಲ್ ಯಂತ್ರವು ಜಾವ ಪ್ರೋಗ್ರಾಮಿಂಗ್ ಭಾಷೆಗೆ ತಳಹದಿಯಾಯಿತು.ಸನ್ ಕಂಪನಿಯಲ್ಲಿ ಜಾವ ಮೇಲೆ ಕೆಲಸ ಮಾಡುವಾಗ , ವಿವಿಧ ಪ್ರೊಗ್ರಾಮ್ ಗಳನ್ನು ಒಂದೇ ವೇದಿಕೆಯಲ್ಲಿ ಕಾರ್ಯಗತಗೊಳಿಸಬಹುದೆಂದು ತೋರಿಸಿಕೊಟ್ಟರು.

ಒರಾಕಲ್ ಕಾರ್ಪೋರೇಶನ್ ಸನ್ ಮೈಕ್ರೋಸಿಸ್ಟಮ್ ಕಂಪನಿಯನ್ನು ತನ್ನ ಸ್ವಾಧೀನಕ್ಕೆ ತೆಗೆದುಕೊಂಡ ನಂತರ ಏಪ್ರಿಲ್ ೨, ೨೦೧೦ ರಂದು ಅವರು ಸನ್ ಕಂಪನಿಯಿಂದ ಹೊರಬಂದರು.ಕಡಿತಗೊಂಡ ವೇತನ, ಕಂಪನಿಯಲ್ಲಿ ಅವರಿಗೆ ಸಿಗದ ಗೌರವ ಮತ್ತು ಅಧಿಕಾರ ಹಾಗೂ ಮುಂತಾದ ಕಾರಣಗಳಿಂದಾಗಿ ಅವರು ಹೊರ ಬರಬೇಕಾಯಿತು. ಅವರು ನಂತರದ ದಿನಗಳಲ್ಲಿ ಒರಾಕಲ್ ಕಂಪನಿಯನ್ನು ತಮಗೆ ಅವಕಾಶ ಸಿಕ್ಕ ಸಂದರ್ಭಗಳಲ್ಲಿ ಕಟುವಾಗಿ ಟೀಕಿಸುತ್ತಿದ್ದರು. ಅವರು ಆಂಡ್ರಾಯ್ಡ್ ಸಂಬಂಧ ಒರಾಕಲ್ ಮತ್ತು ಗೂಗಲ್ ನಡುವೆ ನೆಡೆದ ಕೋರ್ಟ್ ಕೇಸಿನ ಸಂದರ್ಭದಲ್ಲಿ ತಮ್ಮ ನಿಲುವನ್ನು ಸ್ಪಷ್ಟಪಡಿಸಿದರು: "ನಾನು ಒರಾಕಲ್ನೊಂದಿಗೆ ಭಿನ್ನಾಭಿಪ್ರಾಯ ಹೊಂದಿದ್ದರೂ, ಈ ಸಂದರ್ಭದಲ್ಲಿ ಅವರ ನಿಲುವು ಸರಿಯಾಗಿದೆ". ಆದರೆ, API ಗಳು ಹಕ್ಕುಸ್ವಾಮ್ಯ ಮಾಡಬಾರದು ಎಂಬ ನ್ಯಾಯಾಲಯದ ತೀರ್ಪನ್ನು ಅವರು ಕೊನೆಗೆ ಒಪ್ಪಿಕೊಂಡರು.


ಇವರಿಗೆ ದೊರಕಿರುವ ಪ್ರಶಸ್ತಿಗಳು =

2002: ಅವನಿಗೆ ಎಕನಾಮಿಸ್ಟ್ ಇನ್ನೋವೇಶನ್ ಪ್ರಶಸ್ತಿ ನೀಡಲಾಯಿತು.

2002: ಅವರಿಗೆ ಫ್ಲೇಮ್ ಅವಾರ್ಡ್ ಜೀವಮಾನ ಸಾಧನೆಯ ಪ್ರಶಸ್ತಿ ನೀಡಲಾಯಿತು.

2007: ಅವರು ಆರ್ಡರ್ ಆಫ್ ಕೆನಡಾದ ಅಧಿಕಾರಿ ಆಗಿದ್ದರು.( ಆರ್ಡರ್ ಕೆನಡಾದ ಎರಡನೇ ಅತ್ಯುನ್ನತ ನಾಗರಿಕ ಗೌರವವಾಗಿದೆ.)

2013: ಅವರು ಅಸೋಸಿಯೇಷನ್ ಫಾರ್ ಕಂಪ್ಯೂಟಿಂಗ್ ಮೆಷಿನರಿ ನ ಸಹವರ್ತಿಯಾದರು.

2015: ಐಇಇಇ ಜಾನ್ ವಾನ್ ನ್ಯೂಮನ್ ಮೆಡಲ್ ಪ್ರಶಸ್ತಿ .


http://nighthacks.com/jag/blog/400/index.html

https://www.infoq.com/presentations/gosling-jvm-lang-summit-keynote

http://www.eweek.com/development/the-life-and-times-of-java-and-james-gosling

https://twit.tv/shows/triangulation/episodes/245