ವಿಷಯಕ್ಕೆ ಹೋಗು

ಸದಸ್ಯ:Mogernagaraj

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

Bhatkal Taluk Moger Community

ಭಟ್ಕಳ ತಾಲೂಕಿನ ಮೊಗೇರ ಸಮುದಾಯ

ಮೊಗೇರ್ ಉತ್ತರ ಕನ್ನಡ ಜಿಲ್ಲೆಯಲ್ಲಿನ ಒಂದು ಸಣ್ಣ ಸಮುದಾಯ ಇಡೀ ಜಿಲ್ಲೆಯಲ್ಲಿ ಸಮುದಾಯದ ಜನಸಂಖ್ಯೆ ಸುಮಾರು 19,000 ಇದೆ. ಭಟ್ಕಳದಲ್ಲಿ ಸಮುದಾಯದ ಜನಸಂಖ್ಯೆ ಸುಮಾರು 13,000 ಇದೆ.

ಈ ಜನಾಂಗದ ಬಗ್ಗೆ ನಡೆಸಿದ ಅಧ್ಯಯನ ತೀರ ವಿರಳ  1985 ರಲ್ಲಿ ಕರ್ನಾಟಕ ಸರ್ಕಾರ ಪ್ರಕಟಿಸಿದ ಉತ್ತರ ಕನ್ನಡ ಜಿಲ್ಲಾ ಗೆಜೆಟಿಯರನಲಿ  ಸೂರ್ಯನಾಥ್ ಕಾಮತ್ ಮೊಗೇರ್ ಜಾತಿಯ ಬಗ್ಗೆ ಒಂದು ಚಿಕ್ಕ ಟಿಪ್ಪಣಿ ನೀಡಿದ್ದಾರೆ ಅವರ ಅಭಿಪ್ರಾಯ ಉತ್ತರಕನ್ನಡ ಜಿಲ್ಲೆ ಮೊಗೇರರ ಪೂರ್ವಜರು ಕರ್ನಾಟಕದ ದಕ್ಷಿಣ ಭಾಗದಿಂದ ವಲಸೆ ಬಂದವರು ಎಂದು ಉಲ್ಲೇಖಿಸಿದ್ದಾರೆ

     ಆಧುನಿಕ ಕಾಲದಲ್ಲಿ ಕೇರಳ ಆಂಧ್ರ ಪ್ರದೇಶ ತೆಲಂಗಾಣ ತಮಿಳುನಾಡು ಪ್ರದೇಶದಲ್ಲಿ ಕಂಡು ಬರುವ ಮೊಗೇರರು ಒಂದೇ ಮೂಲದವರಾಗಿದ್ದು ಮಧ್ಯ ಕಾಲದಲ್ಲಿ ಜೀವನೋಪಾಯ ಅರಸುತ್ತಾ ಈ ಪ್ರದೇಶಗಳಿಗೆ ವಲಸೆ ಹೋದವರು ಇಂದು ಈ ಗುಂಪುಗಳ ಮತ್ತೆ ಯಾವುದೇ ಸಂಪರ್ಕಗಳಿಲ್ಲದಿದ್ದರೂ ಸಹ ಈಗಲೂ ಇವರ ಸಾಮಾಜಿಕ ನಿಯಂತ್ರಣ ಪದ್ಧತಿ ಕುಲ ದೇವರ ಆರಾಧನೆ ಪದ್ಧತಿ ಮೊದಲಾದ ಕೆಲ ಆಚರಣೆಗಳನ್ನು ಹೋಲಿಕೆ ಕಾಣಬಹುದಾಗಿದೆ. ಇಂದು ಎಲ್ಲಾ ಗುಂಪುಗಳು ತಮ್ಮ ಹಳೆಯ ಪದನಾಮ  ಮೊಗೇರ ಎಂಬುದನ್ನು ಮುಂದುವರಿಸಿಕೊಂಡು ಬಂದಿದೆ

ಮೊಗೇರರ ಮೂಲ

ಮುಗೇರರು ಆದಿ ದ್ರಾವಿಡ ಜನಾಂಗ ಮೂಲದವರು ಕ್ರಿಸ್ತಶಕ 12 ನೇ ಶತಮಾನಕ್ಕೂ ಪೂರ್ವದಲ್ಲಿ ಈಗಿನ ತಮಿಳುನಾಡಿನ ಊಟಿ ಸುತ್ತಮುತ್ತಲಿನ ಇಳಿಜಾರು ಪ್ರದೇಶದಲ್ಲಿ ಮೊಲ ಮತ್ತಿತರ ಕಾಡು ಪ್ರಾಣಿಗಳನ್ನು ಬೇಟೆಯಾಡುತ್ತಿದ್ದರು. ಮೊಗೇರ ಎಂಬ ಹೆಸರು ಬರಲು ಸಹ ಮೊಲದ ಬೇಟೆಗಾರಿಕೆ ಕಾರಣವಾಯಿತು. 1894ರಲ್ಲಿ ದಕ್ಷಿಣ ಭಾರತದ ಎಲ್ಲಾ ಜಾತಿ ಮತ್ತು ಬುಡಕಟ್ಟು ಅಧ್ಯಯನ ನಡೆಸಲು ಒಂದು ಸಮಿತಿ ನೇಮಿಸಲಾಯಿತು ಮದ್ರಾಸ್ ಆಂಧ್ರ ಮೈಸೂರು ಭಾಗದಲ್ಲಿ ವಾಸಿಸುತ್ತಿರುವ ವಿವಿಧ ಜಾತಿಗಳ  ಮಾನವಶಾಸ್ತ್ರೀಯ ಸಂಶೋಧನೆಯಲ್ಲಿ ಊಟಿ ಪರ್ವತಶ್ರೇಣಿಗಳ ಇಳಿಜಾರು ಪ್ರದೇಶದಲ್ಲಿ ವಾಸಿಸುತ್ತಿರುವ ಕನ್ನಡಿಗರ ಗುಂಪು 12ನೇ ಶತಮಾನದಲ್ಲಿ ಕೊಳ್ಳೇಗಾಲ ಮತ್ತಿತರ ಕಡೆ ವಲಸೆ ಹೋದ ಬಗ್ಗೆ ಉಲ್ಲೇಖಿಸಿದ್ದಾರೆ.

        ಉದಕಮಂಡಲದಲ್ಲಿ ನ ಮುಗೇರರ ಒಂದು ಗುಂಪು ಕೊಳ್ಳೇಗಾಲಕ್ಕೆ ವಲಸೆ ಬಂದರೆ ಇನ್ನೊಂದು ಗುಂಪು ಆಂಧ್ರ ಪ್ರದೇಶ್ ತಮಿಳುನಾಡು ಕಡೆ ಹೋಯಿತು ಈ ಪ್ರದೇಶದಲ್ಲಿ ಈ ಜನರು ಕಂಡು ಬರುತ್ತಾರೆ ಕೊಳ್ಳೇಗಾಲಕ್ಕೆ ಬಂದ ಗುಂಪಿನವರು ಸಂಪೂರ್ಣವಾಗಿ ಆ ಪ್ರದೇಶ ತೊರೆದು ಕರ್ನಾಟಕದ ಸುಳ್ಯ ಸುತ್ತಮುತ್ತಲಿನ ಭಾಗಕ್ಕೆ ಮತ್ತು ಕೆಲವರು ಕೇರಳದ ಕಾಸರಗೋಡು ಭಾಗಕ್ಕೆ ವಲಸೆ ಹೋಗಿ ನೆಲೆಸುತ್ತಾರೆ.

    ವಿಜಯನಗರ ಕಾಲದಲ್ಲಿ ಕಾಸರಗೋಡು ಮತ್ತು ಸುಳ್ಯದ ಸುತ್ತಮುತ್ತ ನೆಲೆಸಿದ್ದ, ಮೊಗೇರರ ಬಗ್ಗೆ  ಪೋರ್ಚುಗೀಸ್ ಪ್ರವಾಸಿಗ ಬಾಬೊಸ ಪ್ರವಾಸ ಕಥನದಲ್ಲಿ ವಿವರಿಸುತ್ತಾನೆ. ಈ ಪ್ರದೇಶದಲ್ಲಿ ಜನರು ಕಾಲಾನಂತರದಲ್ಲಿ ಸ್ಥಳೀಯ ಭಾಷೆ ಮತ್ತು ಸಂಸ್ಕೃತಿಯ ಪ್ರಭಾವಕ್ಕೆ ಒಳಗಾದರು ದಕ್ಷಿಣ ಕನ್ನಡ ಮತ್ತು ಸುಳ್ಯ ಸುತ್ತಮುತ್ತಲ ಭಾಗದಲ್ಲಿ ನೆಲೆ ನಿಂತವರಲ್ಲಿ ಹಲವರು 18ನೇ ಶತಮಾನದ ಕೊನೆಯ ಭಾಗದಲ್ಲಿ ಮತ್ತು 19ನೇ ಶತಮಾನದ ಆದಿಭಾಗದ ವೇಳೆಗೆ ಇಂದಿನ ಉತ್ತರ ಕನ್ನಡ ಜಿಲ್ಲೆಗೆ ಜೀವನೋಪಾಯಕ್ಕೆ ವಲಸೆ ಬಂದರು ಕಾಲಕ್ರಮೇಣ ಇಲ್ಲಿಯೇ ನೆಲೆ ನಿಂತರು

  ಉತ್ತರ ಕನ್ನಡಕ್ಕೆ ವಲಸೆ

ಮಧ್ಯಕಾಲದಲ್ಲಿ ದಕ್ಷಿಣ ಕನ್ನಡ ಮತ್ತು ಅದರ ಸುತ್ತಮುತ್ತಲಿನ ಪ್ರದೇಶ ಹಾಗೂ ಕೇರಳ ಪ್ರದೇಶದಲ್ಲಿ ವಾಸಿಸುತ್ತಿದ್ದ ಮುಗೇರರ ಕುರಿತಂತೆ ಪೋರ್ಚುಗೀಸ್ ಪ್ರವಾಸಿಗ ನಾದ ಬೋಸ್ ತನ್ನ ಪ್ರವಾಸ ಕಥನದಲ್ಲಿ ಮಲಬಾರ್ ಪ್ರದೇಶದ ವಿವರಣೆ ನೀಡುವ ಸಸಂದರ್ಭದಲ್ಲಿ “ಇವರನ್ನು ಯಾರು ಮುಟ್ಟಿಸಿಕೊಳ್ಳುತ್ತಿರಲಿಲ್ಲ ಸಾಮ್ರಾಜ್ಯದಲ್ಲಿ ತಲೆ ಮೇಲೆ ಸರಕನ್ನು ಹೊತ್ತು ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಸಾಗಿಸುವ ಕೆಲಸ ಮಾಡುತ್ತಿದ್ದರು ವಿವಾಹದ ನಿಯಮವಾಗಲಿ ವಿಗ್ರಹಾರಾಧನೆ ಆಗಲಿ ಇವರಲ್ಲಿ ಇಲ್ಲ ಇವರು ತಮ್ಮ ಜನರೊಂದಿಗೆ ಊರಿಂದ ಹೊರಗಡೆ ಪ್ರತ್ಯೇಕವಾಗಿ ವಾಸಿಸುತ್ತಾರೆ” ಎಂದು ವಿವರಿಸಿದ್ದಾನೆ

18ನೇ ಶತಮಾನದಲ್ಲಿ ಮುಸ್ಲಿಂ ಅರಸರಾದ ಹೈದರಾಲಿ ಮತ್ತು ಟಿಪ್ಪು ಸುಲ್ತಾನನ ಕಾಲಕ್ಕೆ   ಭಟ್ಕಳಕ್ಕೆ ಬಂದ ಮೊಗೇರರು ಆರಂಭದಲ್ಲಿ ಭಟ್ಕಳ ಬಂದರಿನ ಅರಬರ ಹಡಗುಗಳಿಗೆ ಸರಕನ್ನು ಸಾಗಿಸುವ ಕೆಲಸ ಮಾಡಲು ಸೇರಿಕೊಂಡರು ಕೆಲವರು ಜಮೀನ್ದಾರ ಜಮೀನಿನಲ್ಲಿ ಜೀತಕ್ಕೆ ಕೆಲವರು ಹೊನ್ನಾವರ ಸಿರ್ಸಿ ಕಡೆ ವಲಸೆ ಹೋದರು ಇದರ ಕುರಿತು ಕೆಲವು ಹಾಡುಗಳು ಕಥೆಗಳು ಇಂದಿಗೂ  ಕೇಳ ಸಿಗುತ್ತದೆ

ಇಂದು ಭಟ್ಕಳದಲ್ಲಿ ಮೊಗೇರರು ವಾಸಿಸುವ ಮುಖ್ಯ ಊರುಗಳೆಂದರೆ  ಜಾಲಿ ಮುಂಡಳ್ಳಿ ಗೊರಟೆ ಕಾಯ್ಕಿಣಿ ತೆಂಗಿನಗುಂಡಿ ಬೈಲೂರು. ಇಂದು ಈ ಜನರು ಮೀನುಗಾರಿಕೆ ಮತ್ತು ಕೃಷಿ ಕೂಲಿ ಯ ಮೂಲಕ ಜೀವನ ಸಾಗಿಸುತ್ತಿದ್ದಾರೆ

ಮುಗೇರರಲ್ಲಿ ಕಂಡುಬರುವ ಸಾಮಾನ್ಯ ಉಪನಾಮ ಗಳೆಂದರೆ ಮೊಗೇರ್ ಕರಿಕಿ ಹಾದಿಮನಿ ಕಾರಿಮನಿ ಹೊಳೆ ಗೆದ್ದೆ ತಾಯಿ ಮನೆ ಮೊದಲಾದವುಗಳು ಮುಗೇರ ಜಾತಿಯ ಸದಸ್ಯರು ಇತಿಮಿತಿ ಉಳ್ಳ ಶೈಕ್ಷಣಿಕ  ಸಾಮಾಜಿಕ ಹಿನ್ನೆಲೆ ಉಳ್ಳವರಾಗಿದ್ದು ಮೊಗೇರರು ತಮ್ಮ ಳಗೆ ಚಿಕ್ಕ ಕುಟುಂಬ ಪದ್ಧತಿ ಜನಪ್ರಿಯ ಗಳಿಸಿಕೊಂಡರು ಇದರ ಪರಿಣಾಮವಾಗಿ ಜನಸಂಖ್ಯೆ ಇದುವರೆಗೆ 20000 ದಾಟಲಿಲ್ಲ