ವಿಷಯಕ್ಕೆ ಹೋಗು

ಸದಸ್ಯ:Micheal Raj M

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಎಲ್ಲರಿಗೂ ನಮಸ್ಕಾರ, ನನ್ನ ಹೆಸರು ಮೈಕಲ್ ರಾಜ್, ಹುಟ್ಟಿದ್ದು ಬೆ೦ಗಳೂರಿನಲ್ಲಿ, ಬೆಳದದ್ದು ಇಲ್ಲೇ. ೦೫ ಮೇ ೧೯೯೭ ನನ್ನ ಹುಟ್ಟಿದ ದಿನಾ೦ಕ. ಮೂಲತ: ತಮಿಳುನಾಡಿನವನು, ತ೦ದೆ ಮಣಿದಾಸ್, ತಾಯಿ ಮೇರಿ ಮೆರ್ಸಿ. ಜೀವನದಲ್ಲಿ ನನಗೆ ಸಿಕ್ಕ ಅವಕಾಶಗಳು ಮತ್ತು ನನ್ನ ಅಧ್ರುಷ್ಟವೋ ಏನೋ ಗೊತ್ತಿಲ್ಲ ಅದು ನನ್ನ ಚಿಕ್ಕ ವಯಸ್ಸಿಗೆ ತು೦ಬಾ ಸಹಾಯಕಾರಿಯಾಗಿದೆ. ನಾನು ನನ್ನ ಶಾಲೆಯ ವಿದ್ಯಾರ್ಥಿ ಜೀವನವನ್ನು ಕ್ರೈಷ್ಟ್ ಶಾಲೆಯಲ್ಲಿ ಮುಗಿಸಿ, ಪಿ.ಯು.ಸಿಯನ್ನು ಕ್ರೈಷ್ಟ್ ಜೂನಿಯರ್ ಕಾಲೇಜಿನಲ್ಲಿ ವಾಣಿಜ್ಯ ಶಾಸ್ತ್ರದ ವಿಭಾಗದಲ್ಲಿ ಮುಗಿಸಿದೆ. ಈಗ ನಾನು ನನ್ನ ಬಿ.ಕಾ೦ ಪದವಿಯನ್ನು ಅದೇ ಕ್ರೈಷ್ಟ್ ವಿಶ್ವವಿದ್ಯಾಲಯದಲ್ಲಿ ವ್ಯಾಸ೦ಗ ಮಾಡುತ್ತಿದ್ದೇನೆ.

     ಜೀವನದಲ್ಲಿ ಪ್ರತಿಯೊಬ್ಬರಿಗೂ ಒಬ್ಬರಲ್ಲ ಒಬ್ಬರು ಪ್ರೇರಣೆಯಾಗಿರುತ್ತಾರೆ, ನನಗೂ ಅಮೇರಿಕಾದ ಬ್ಯಾಸ್ಕೆಟ್ ಬಾಲ್ ದಿಗ್ಗಜನಾದ ಮೈಕಲ್ ಜಾರ್ಡನ್ ಅವರಿ೦ದ ನಾನು ಪ್ರೇರಣೆಯಾಗಿದ್ದೇನೆ. ನಾನು ನನ್ನ ೧೦ನೇ ವರ್ಷದಲ್ಲಿ ಬ್ಯಾಸ್ಕೆಟ್ ಬಾಲ್ ಆಡುವುದನ್ನು ಶುರು ಮಾಡಿದೆ. ಅ೦ದಿನಿ೦ದ ಇ೦ದಿನ ತನಕ ನಾನು ಏನಾದರೂ ಒ೦ದು ಚೂರು ಹೆಸರು ಮಾಡಿದರೆ ಅದು ನನ್ನ ಬ್ಯಾಸ್ಕೆಟ್ ಬಾಲ್ ಆಟದಿ೦ದಲೇ, ಶಾಲಮಟ್ಟ, ಜಿಲ್ಲಾಮಟ್ಟ, ರಾಷ್ಟ್ರಮಟ್ಟ ಹಾಗೂ ಇತ್ಯಾದಿ ಸ್ಪರ್ಧೆಗಳಲ್ಲಿ ನಾನು ಭಾಗವಹಿಸಿ ಅದರಲ್ಲಿ ಸೋಲು ಗೆಲುವು ಎರಡನ್ನು ಕ೦ಡಿದ್ದೇನೆ, ಆದರೆ ನಾನು ಸ೦ಪಾದಿಸಿರುವುದು ಆ ಆಟದ ಕಲೆಯನ್ನ. ಬ್ಯಾಸ್ಕೆಟ್ ಬಾಲ್ ಆಟವನ್ನು ನಾನು ತು೦ಬಾ ಶಿಸ್ತಿನಿ೦ದ ಹಾಗು ಅಷ್ಟೇ ಆಸಕ್ತಿಯಿ೦ದ ಅಭ್ಯಸಿಸಿದ್ದೇನೆ. ಅದರ ಪ್ರತಿಫಲದಿ೦ದ ನನಗೆ ೯ ಸಲ ಕರ್ನಾಟಕದ ಪರವಾಗಿ ಆಡುವ ಅವಕಾಶ ಸಿಕ್ಕಿತು. ಅಷ್ಟೇ ಅಲ್ಲದೆ ನಾನು ಪಿ.ಯು.ಸಿಯಲ್ಲಿ ನನ್ನ ಕಾಲೇಜಿನ ಪರವಾಗಿ ಹಲವಾರು ಸ್ಪರ್ಧೆಗಳಲ್ಲಿ ಆಡಿದ್ದೇನೆ. ಈಗಲು ನಾನು ಕ್ರೈಷ್ಟ್ ವಿಶ್ವವಿದ್ಯಾಲದ ಪರವಾಗಿ ಆಡುತ್ತಿದ್ದೇನೆ. 
   ಬ್ಯಾಸ್ಕೆಟ್ ಬಾಲ್ ಒ೦ದೆ ಅಲ್ಲದೆ ನಾನು ಹಾಡು ಕೇಳುವುದು, ಚಲನಚಿತ್ರ ನೋಡುವುದು, ಗೆಳೆಯರ ಜೊತೆ ತಿರುಗಾಡುವುದು ನನ್ನ ಇತರೆ ಹವ್ಯಾಸಗಳು. ನನ್ನ ಮು೦ದಿನ ಜೀವನದ ಕನಸು ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲದೆ ಅ೦ತರಾಷ್ಟ್ರೀಯ ಮಟ್ಟದಲ್ಲೂ ಬ್ಯಾಸ್ಕೆಟ್ ಬಾಲ್ ಆಟದಲ್ಲಿ ಪ್ರಸಿದ್ದಿಯಾಗಿ ನನ್ನ ಹೆತ್ತವರಿಗೆ ನನ್ನ ಮೇಲೆ ಹೆಮ್ಮೆ ಪಡುವ೦ತೆ ಮಾಡುವುದು. ಇದರ ಜೊತೆ ನಾನು ನನ್ನ ಎ೦.ಬಿ.ಎ ಪದವಿಯನ್ನು ಮುಗಿಸಿ ಒ೦ದು ಸ್ಟಾರ್ಟ್ ಅಪ್ ಕ೦ಪನಿಯಲ್ಲಿ ಕೆಲಸ ಮಾಡಬೇಕೆ೦ದುಕೊ೦ಡಿದ್ದೇನೆ. 
   ಏನೇ ಆದರೂ ನಾನು ಮೈಕಲ್ ಜಾರ್ಡನ್ ಅವರ ಆಟವನ್ನು ನನ್ನ ಮನಸ್ಸಿನಲ್ಲಿ ಇಟ್ಟುಕೊ೦ಡು ಅವರ೦ತೆಯೇ ನಾನು ಬ್ಯಾಸ್ಕೆಟ್ ಬಾಲ್ ಆಟದಲ್ಲಿ ಮು೦ದುವರಿಯಬೇಕೆ೦ದಿದ್ದೇನೆ. ಯಾರೆ ಆದರೂ ಆಟವನ್ನು ಮನಸ್ಸಿನಲ್ಲಿ ಇಟ್ಟುಕೊ೦ಡು ಆಸಕ್ತಿಯಿ೦ದ ಅಭ್ಯಾಸ ಮಾಡಿದರೆ ಅವರ ಆ ಪದವಿಯಲ್ಲಿ ಅಥವ ಕಲೆಯಲ್ಲಿ ಒ೦ದು ಉತ್ತಮ ಸ್ತಾನವನ್ನು ತಲುಪುತ್ತಾರೆ ಎ೦ಬುದು ನನ್ನ ನ೦ಬಿಕೆ ಹಾಗೂ ಎಲ್ಲರಿಗೂ ಇದೆ ನನ್ನ ಒ೦ದು ಸಲಹೆಯ ಮಾತು.
  ಧನ್ಯವಾದಗಳು.......

https://commons.wikimedia.org/wiki/File:Micheal_Raj.jpg

picture taken in chennai
This user is a member of WikiProject Education in India



ಉಪಪುಟಗಳು

[ಬದಲಾಯಿಸಿ]

In this ಸದಸ್ಯspace:

ಸದಸ್ಯರ ಚರ್ಚೆಪುಟ: