ವಿಷಯಕ್ಕೆ ಹೋಗು

ಸದಸ್ಯ:Melita martin/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

‘ಜಾಗತಿಕ ತಾಪಮಾನ, ಪ್ರಕೃತಿ ವಿಕೋಪ, ಪರಿಸರ ನಾಶದಿಂದ ಆಗುತ್ತಿರುವ ಅಪಾಯಗಳ ಬಗ್ಗೆ ಇಡೀ ವಿಶ್ವವೇ ತಲ್ಲಣಗೊಂಡಿದೆ. ಈ ಎಲ್ಲ ಅನಾಹುತಗಳ ತಡೆಯಬೇಕಾದರೆ ಪ್ರತಿಯೊಬ್ಬರೂ ಗಿಡ ಬೆಳೆಸಬೇಕು, ಕಾಡುಗಳನ್ನು ಸಂರಕ್ಷಿಸಬೇಕು’


‘ಮಳೆ ಕೊರತೆ, ಬರಗಾಲ, ಕುಡಿಯುವ ನೀರಿನ ಸಮಸ್ಯೆ, ತಾಪಮಾನ ಹೆಚ್ಚಳದಂತಹ ಸಮಸ್ಯೆಗಳು ಉಲ್ಭಣಗೊಳ್ಳುತ್ತಿವೆ. ಈ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ನಿಟ್ಟಿನಲ್ಲಿ ಇಲಾಖೆಯು ರಾಜ್ಯದಲ್ಲಿ 8 ಕೋಟಿಗೂ ಅಧಿಕ ಸಸಿಗಳನ್ನು ನೆಡುವ ಕಾರ್ಯಕ್ರಮ ಹಮ್ಮಿಕೊಂಡಿದೆ. ಹಸಿರು ಗ್ರಾಮ, ಹಸಿರು ಶಾಲೆ ಹಾಗೂ ಹಸಿರು ಪ್ರದೇಶಗಳನ್ನು ಅಭಿವೃದ್ಧಿಪಡಿಸಲು ಈ ಕಾರ್ಯಕ್ರಮ ಪ್ರಯೋಜನಕ್ಕೆ ಬರಲಿದೆ’

ಜಾಗತಿಕ ತಾಪಮಾನದಲ್ಲಿನ ಏರಿಕೆಯು ಸಮುದ್ರಮಟ್ಟದ ಏರಿಕೆಗೆ ಕಾರಣವಾಗಲಿದ್ದು, ಅವಕ್ಷೇಪನದ ಪ್ರಮಾಣ ಮತ್ತು ಮಾದರಿಗಳಲ್ಲಿ ವ್ಯತ್ಯಾಸವನ್ನುಂಟು ಮಾಡಲಿದ್ದು, ಉಪೋಷ್ಣವಲಯದ ಮರಳುಗಾಡುಗಳ ಸಂಭಾವ್ಯ ವಿಸ್ತರಣೆಗೆ ಕಾರಣವಾಗಲಿದೆ.ಆರ್ಕ್‌ಟಿಕ್‌ ವಲಯದಲ್ಲಿ ಉಷ್ಣಾಂಶದ ಅತೀವ ಹೆಚ್ಚಳದೊಂದಿಗೆ ಶೀತ ಕೆಳ ಭೂಸ್ತರ, ಸಮುದ್ರ ನೀರ್ಗಲ್ಲುಗಳು ಹಾಗೂ ಹಿಮನದಿಗಳ ಹಿಂಜರಿತದ ಮುಂದುವರಿಕೆಯನ್ನು ನಿರೀಕ್ಷಿಸಲಾಗಿದೆ. ಇನ್ನಿತರ ಸಂಭಾವ್ಯ ವೈಪರೀತ್ಯಗಳೆಂದರೆ ಹವಾಮಾನದ ವೈಪರೀತ್ಯಗಳ ತೀಕ್ಷ್ಣತೆಯ ಹೆಚ್ಚಳ, ಪ್ರಾಣಿ ಸಂಕುಲಗಳ ಅಳಿವು ಮತ್ತು ಕೃಷಿ ಉತ್ಪಾದನೆಗಳಲ್ಲಿನ ಬದಲಾವಣೆಗಳು. ವಾತಾವರಣ ಬದಲಾವಣೆಯ ಬಗೆಗೆ ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಕೈಗೊಳ್ಳಬೇಕಾದ (ಯಾವುದಾದರೂ ಇದ್ದರೆ) ಕಾರ್ಯಗಳ ಬಗ್ಗೆ ರಾಜಕೀಯ ಮತ್ತು ಸಾರ್ವಜನಿಕ ಚರ್ಚೆಗಳು ನಡೆಯುತ್ತಲಿವೆ. ಲಭ್ಯವಿರುವ ಸಾಧ್ಯತೆಗಳೆಂದರೆ ತಾಪ ನಿವಾರಣೆ ಮಾಡಲು ಭವಿಷ್ಯದ ಹೊರಸೂಸುವಿಕೆಯ ನಿಯಂತ್ರಣ, ಉಷ್ಣತೆ ಹೆಚ್ಚಳದಿಂದಾದ ಹಾನಿಯನ್ನು ಕಡಿಮೆಗೊಳಿಸಲು ಹೊಂದಾಣಿಕೆಗಳನ್ನು ಮಾಡಿಕೊಳ್ಳುವುದು ಹಾಗೂ ಜಾಗತಿಕ ಉಷ್ಣತೆಯ ಹೆಚ್ಚಳವನ್ನು ನಿರರ್ಥಕಗೊಳಿಸಲು ಊಹಾತ್ಮಕವಾಗಿ ಭೂ-ವಾಸ್ತುಶಿಲ್ಪ ಬಳಕೆ. ಬಹಳಷ್ಟು ರಾಷ್ಟ್ರೀಯ ಸರಕಾರಗಳು ಹಸಿರುಮನೆ ಅನಿಲ ಹೊರಸೂಸುವಿಕೆಯನ್ನು ತಗ್ಗಿಸುವ ಗುರಿ ಹೊಂದಿರುವ ಕ್ಯೋಟೋ ನಿಯಮಾವಳಿಗಳಿಗೆ ಸಹಿ ಮಾಡಿ ತಮ್ಮ ಅನುಮೋದನೆಯನ್ನು ವ್ಯಕ್ತಪಡಿಸಿವೆ.

ಜಾಗತಿಕ ತಾಪಮಾನ ಏರಿಕೆ ಯೆಂದರೆ 20ನೇ ಶತಮಾನದ ಮಧ್ಯಭಾಗದಲ್ಲಿ ಭೂಮಿಯ ಮೇಲ್ಮೈ-ಸಮೀಪದಲ್ಲಿರುವ ವಾಯು ಮತ್ತು ಸಾಗರ ಪ್ರದೇಶಗಳಲ್ಲಿ ಆದ ಸರಾಸರಿ ತಾಪಮಾನದ ಏರಿಕೆ ಹಾಗೂ ಅದರ ಪ್ರಕ್ಷೇಪಿತ ಮುಂದುವರಿಕೆ. ಜಾಗತಿಕ ಮೇಲ್ಮೈ ಉಷ್ಣತೆಯು ಕಳೆದ ಶತಮಾನ[A]ದಲ್ಲಿ 0.74 ± 0.18 °C (1.33 ± 0.32 °F)ರಷ್ಟು ಹೆಚ್ಚಿದೆ. ಹವಾಮಾನ ಬದಲಾವಣೆಯ ಕುರಿತಾದ ಅಂತರ-ಸರಕಾರಿ ಮಂಡಳಿಯು (IPCC) ಅಗೆದು ತೆಗೆದ ಇಂಧನಗಳು ಮತ್ತು ಅರಣ್ಯನಾಶಗಳಂತಹಾ ಮಾನವ ಚಟುವಟಿಕೆಗಳಿಂದಾದ ಹಸಿರುಮನೆ ಅನಿಲಗಳ ಸಂಗ್ರಹದ ಹೆಚ್ಚಳವು 20ನೇ ಶತಮಾನ ದ ಮಧ್ಯಕಾಲದ ನಂತರದ ತಾಪಮಾನ ಏರಿಕೆಗೆ ಕಾರಣವೆಂದು ತೀರ್ಮಾನಕ್ಕೆ ಬಂದಿದೆ. ಸೌರ ವಿಕಿರಣಗಳ ಪ್ರಸರಣ ಮತ್ತು ಅಗ್ನಿಪರ್ವತಗಳಂತಹಾ ನೈಸರ್ಗಿಕ ವೈಪರೀತ್ಯಗಳು ಕೈಗಾರಿಕಾ ಯುಗಕ್ಕೂ ಹಿಂದಿನ ಕಾಲದಿಂದ 1950ರವರೆಗಿನ ತಾಪಮಾನ ಹೆಚ್ಚಳಕ್ಕೆ ಕಾರಣವಾಗಿದ್ದುದಲ್ಲದೇ, ನಂತರ ಅಲ್ಪ ಪ್ರಮಾಣದಲ್ಲಿ ತಂಪಾಗಲೂ[೨][೩] ನೆರವಾಯಿತು ಎಂದೂ IPCC ವಿಶ್ಲೇಷಿಸಿದೆ. ಈ ಪ್ರಾಥಮಿಕ ತೀರ್ಮಾನಗಳನ್ನು ಎಲ್ಲಾ ಪ್ರಮುಖ ಕೈಗಾರಿಕಾ ರಾಷ್ಟ್ರಗಳ[೪] ರಾಷ್ಟ್ರೀಯ ವಿಜ್ಞಾನ ಅಕಾಡೆಮಿಗಳೂ ಸೇರಿದಂತೆ 40ಕ್ಕೂ ಹೆಚ್ಚು ವೈಜ್ಞಾನಿಕ ಸಮುದಾಯಗಳು ಮತ್ತು ವೈಜ್ಞಾನಿಕ ಅಕಾಡೆಮಿಗಳು[B] ಅನುಮೋದಿಸಿವೆ. ಅಲ್ಪ ಸಂಖ್ಯೆಯ ಕೆಲ ವಿಜ್ಞಾನಿಗಳು ಈ ಬಹುಮತ ಅಭಿಪ್ರಾಯದ ಬಗ್ಗೆ ಭಿನ್ನಮತ ಹೊಂದಿದ್ದಾರೆ. ಇತ್ತೀಚಿನ IPCC ವರದಿಯಲ್ಲಿನ ಹವಾಮಾನದ ಮಾದರಿ ಪ್ರಕ್ಷೇಪಗಳ ಪ್ರಕಾರ ಜಾಗತಿಕ ಮೇಲ್ಮೈ ಉಷ್ಣತೆಯು ಬಹುಶಃ ಇನ್ನೂ 1.1 to 6.4 °C (2.0 to 11.5 °F)ರಷ್ಟು ಇಪ್ಪತ್ತೊಂದನೇ ಶತಮಾನ[೧] ದಲ್ಲಿ ಹೆಚ್ಚಳವಾಗಲಿದೆ. ಆದರೆ ಈ ಅಂದಾಜಿನಲ್ಲಿನ ಅನಿಶ್ಚಿತತೆಯು ವಿಶ್ಲೇಷಣೆಗೆ ಬಳಸಿದ ವಿವಿಧ ಮಾದರಿಗಳಲ್ಲಿನ ಹಸಿರುಮನೆ ಅನಿಲಗಳ ಸಂಗ್ರಹದ ಬಗೆಗಿನ ಸಂವೇದನೆಗಳಲ್ಲಿನ ವ್ಯತ್ಯಾಸಗಳು ಮತ್ತು ಭವಿಷ್ಯದ ಹಸಿರುಮನೆ ಅನಿಲಗಳ ಉತ್ಪಾದನೆಯ ಪ್ರಮಾಣದ ಅಂದಾಜುಗಳಲ್ಲಿನ ವ್ಯತ್ಯಾಸದಿಂದುಂಟಾಗಿದೆ. ಇನ್ನಿತರ ಅನಿಶ್ಚಿತತೆಗಳೆಂದರೆ ವಿಶ್ವದಾದ್ಯಂತ ತಾಪಮಾನ ಹೆಚ್ಚಳ ಹಾಗೂ ಸಂಬಂಧಿತ ಬದಲಾವಣೆಗಳು ಪ್ರದೇಶದಿಂದ ಪ್ರದೇಶಕ್ಕೆ ಎಷ್ಟರಮಟ್ಟಿಗೆ ವ್ಯತ್ಯಾಸವಾಗಬಹುದು ಎಂಬುದು. ಹೆಚ್ಚಿನ ಅಧ್ಯಯನಗಳು 2100ನೇ ಇಸವಿಯವರೆಗಿನ ಅವಧಿಯನ್ನು ಗುರಿಯಾಗಿಸಿಕೊಂಡಿವೆ. ಈ ಹೊರಸೂಸುವಿಕೆಯು ನಿಂತರೂ ಕೂಡಾ 2100ರ ನಂತರವೂ ತಾಪಮಾನ ಹೆಚ್ಚಳವು ಮುಂದುವರೆಯಲಿದ್ದು ಅದಕ್ಕೆ ಮುಖ್ಯ ಕಾರಣ, ಸಾಗರಗಳ ಅಗಾಧ ಉಷ್ಣತೆಯನ್ನು ಕಾಪಿಟ್ಟುಕೊಳ್ಳಬಲ್ಲ ಹಾಗೂ ಇಂಗಾಲದ ಡೈಆಕ್ಸೈಡ್‌ನ ವಾತಾವರಣದಲ್ಲಿ ದೀರ್ಘಕಾಲ ಇರಬಲ್ಲ ಸಾಮರ್ಥ್ಯಗಳು.