ಸದಸ್ಯ:Mebinchacko333/ರಾಬರ್ಟ್ ಸೊಲೊ

ವಿಕಿಪೀಡಿಯ ಇಂದ
Jump to navigation Jump to search

600*800px|thumb|right|ರೊಬರ್ಟ್ ಸೊಲೊ

ಜನನ ಮತ್ತು ಜೀವನ[ಬದಲಾಯಿಸಿ]

ರಾಬರ್ಟ್ ಸೊಲೊ ಅವರು ಆಗಸ್ಟ್ ೨೩, ೧೯೨೪ರಲ್ಲಿ ಜನಿಸಿದರು.ಈತ ಅಮೇರಿಕದ ಪ್ರಮುಖ ಅರ್ಥಶಾಸ್ತ್ರಜ್ಞ.ಎ‍‍ಕ್ಸೊಜಿನಸ್ ಗ್ರೊತ್ ಮೊಡೆಲ್ ಎಂಬ ಅಭಿವೃದ್ಧಿ ಮಾದರಿಯು ಇತನ ಮುಖ್ಯ ಕೊಡುಗೆ ಆಗಿದೆ.ಸೊಲೊ ಅವರಿಗೆ ಅರ್ಥಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಕಿದೆ.ರಾಬರ್ಟ್ [೧]ಸೊಲೊ ಅವರು ಸಾರ್ವಜನಿಕ ಶಾಲೆಯಲ್ಲಿ ಅತ್ಯುತ್ತಮ ರೀತಿಯಲ್ಲಿ ತನ್ನ ಶಾಲಾ ವಿದ್ಯಭ್ಯಾಸವನ್ನು ಪೂರ್ತಿಗೊಳಿಸಿದರು ಮುಂದೆ ಸೆಪ್ಟೆಂಬರ್ ೧೯೪೦ರಲ್ಲಿ ಹಾರ್ವರ್ಡ್ ಕಾಲೇಜಿಗೆ ಸೇರಿದರು.ಇಲ್ಲಿ ಈತ ಸಮಾಜಶಾಸ್ತ್ರ,ಮಾನವಶಾಸ್ತ್ರ ಹಾಗು ಅರ್ಥಶಾಸ್ತ್ರ ಅಭ್ಯಾಸ ಮಾಡಲು ಪ್ರಾರಂಬಿಸಿದರು.೧೯೪೨ರಲ್ಲಿ ಸೊಲೊ ಅವರು ವಿಶ್ವವಿದ್ಯಾಲಯವನ್ನು ಬಿಟ್ಟು ಯು.ಎಸ್ ಸೇನೆಯನ್ನು ಸೇರಿದರು.ಈತ ನೊರ್ತ್ ಆಫ್ರಿಕಾ ಹಾಗು ಸಿಲಿಸಿಯಲ್ಲಿ ಸೇವೆ ಸಲ್ಲಿಸಿದಾರೆ ಮತ್ತು ಎರಡನೇಯ ಮಹಾಯುದ್ಧದಲ್ಲಿ ಭಾಗವಹಿಸಿದರು.೧೯೯೫ ರಲ್ಲಿ ಸೇನೆಯಿಂದ ನಿವೃತ್ತಿ ಪಡೆದರು.ಇದರ ನಂತರ[೨]ಕ್ಕೆ ಹಿಂದಿರುಗಿ ಬಂದರು.ಇದರ ನಂತರ ವಾಸ್ಸಿಲಿ ಲಿಯೋನಿಫ್ನು ಅವರ ಬಳಿಯಲ್ಲಿ ಸಂಶೋಧನೆಗೆ ಸಹಾಯಕ್ಕನಾಗಿ ಕೆಲಸ ಮಾಡಿದರು.ಮುಂದೆ ಸೊಲೊ ಅವರು ವಾಸ್ಸಿಲಿ ಅವರನ್ನು ಮದುವೆ ಮಾಡಿದರು.ಆ ಸಮಯದಲ್ಲಿ ಆತನಿಗೆ ಅಂಕಿಅಂಶ ಮತ್ತು ಸಂಭವನೀಯತೆಯಲ್ಲಿ ಆಸಕ್ತಿ ಮೂಡಿತು.೧೯೪೯-೫೦ ಕಾಲ ಸೊಲೊ ಅವರು ಕೊಲಂಬಿಯ ವಿಶ್ವವಿದ್ಯಾಲಯದ ಫೆಲೊಷಿಪನಲ್ಲಿ ಭಾಗವಹಿಸಿದರು ಈ ಕಾಲದಲ್ಲಿ ಅಂಕಿಅಂಶದಲ್ಲಿ ಹೆಚ್ಚಿನ ರೀತಿಯಲ್ಲಿ ಅಭ್ಯಾಸ ಮಾಡಿದರು.ಇದೇ ಸಮಯದಲ್ಲಿ ಪಿಎಚ್ಚ್.ಡಿ ಪ್ರಬಂದವನ್ನು ತಯಾರು ಮಾಡಿದರು.ಇದರ ನಂತರ ಮ್ಯಾಸಚೂಸೆಟ್ಸ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯಲ್ಲಿ ಅಸ್ಸಿಸ್ಟಂಟ್ ಪ್ರೊಫೆಸರಾಗಿ ಕೆಲಸ ಮಾಡಲು ಪ್ರಾರಂಬಿಸಿದರು ಇಲ್ಲಿ ಅವರು ಅಂಕಿಅಂಶಗಳು ಮತ್ತು ಅರ್ಥಶಾಸ್ತ್ರ ಶಿಕ್ಷಣ ಕಲಿಸಿದರು. ಆ ಸಮಯದಲ್ಲಿ ಸೊಲೊ ಅವರ ಆಸಕ್ತಿಯು ಕ್ರಮೇಣ ಬೃಹದರ್ಥಶಾಸ್ತ್ರಕ್ಕೆ ಬದಲಾಯಿತು.ಸುಮಾರು ೪೦ ವರ್ಷಗಳ ಕಾಲ ಸೊಲೊ ಹಾಗು ಪಾಲ್ ಸ್ಯಾಮುಯೆಲ್ಸನ್ ಇಬ್ಬರು ಸೇರಿ ಹಲವಾರು ಸಿದ್ಧಾಂತಗಳನ್ನು ರಚಿಸಿದರು ಅದರಲ್ಲಿ ವಾನ್ ನ್ಯೂಮನ್ ಬೆಳವಣಿಗೆ ಸಿದ್ಧಾಂತ(೧೯೫೩),ತಿಒರಿ ಆಫ್ ಕ್ಯಾಪಿಟಲ್(೧೯೫೬),ಲೀನಿಯರ್ ಪ್ರೊಗ್ರಾಮಿಂಗ್(೧೯೫೮) ಮತ್ತು ಫಿಲಿಪ್ಸ್ ರೇಖೆ(೧೯೬೦) ಇವು ಪ್ರಸಿದ್ದವಾದದ್ದು.

ಉದ್ಯೋಗ ಮತ್ತು ಪ್ರಶಸ್ತಿಗಳು[ಬದಲಾಯಿಸಿ]

ಸೊಲೊ ಅವರು ಹಲವಾರು ಸರ್ಕಾರಿ ಕೆಲಸಗಳನ್ನು ಮಾಡಿದ್ದಾರೆ, ಅವರು ಸಲಹೆಗಾರರ ​​ಮಂಡಳಿಯ ಹಿರಿಯ ಅರ್ಥಶಾಸ್ತ್ರಜ್ಞರಾಗಿದ್ದರು.೧೯೬೧ರಲ್ಲಿ ಅವರಿಗೆ ಅಮೇರಿಕನ್ ಎಕನಾಮಿಕ್ ಅಸೋಸಿಯೇಶನ್ನ ಜಾನ್ ಬೇಟ್ಸ್ ಕ್ಲಾರ್ಕ್ ಪ್ರಶಸ್ತಿ ದೊರಕಿತ್ತು(ನಲವತ್ತು ವರ್ಷದೊಳಗಿನ ಅತ್ಯುತ್ತಮ ಅರ್ಥಶಾಸ್ತ್ರಜ್ಞನಿಗೆ ನೀಡುವ ಪ್ರಶಸ್ತಿ).೧೯೮೭ರಲ್ಲಿ ರಲ್ಲಿ ಆರ್ಥಿಕ ಬೆಳವಣಿಗೆಯೆಂಬ ತಮ್ಮ ವಿಶ್ಲೇಷಣೆಗೆ ನೊಬೆಲ್ ಪ್ರಶಸ್ತಿ ದೊರಕಿತ್ತು.೧೯೯೯ ರಲ್ಲಿ ಅವರು ನ್ಯಾಷನಲ್ ಮೆಡಲ್ ಆಫ್ ಸೈನ್ಸ್ ಪ್ರಶಸ್ತಿ ಪಡೆದರು.೨೦೧೧ ರಲ್ಲಿ ಟಫ್ಟ್ಸ್ ವಿಶ್ವವಿದ್ಯಾಲಯದಿಂದ ಡಾಕ್ಟರ್ ಆಫ್ ಸೈನ್ಸ್ ಗೌರವ ಪದವಿಯನ್ನು ನೀಡಲಾಯಿತು.ಸೊಲೊ ಅವರು ಕೋರ್ನಾಟ್ನ ಫೌಂಡೇಶನ್ ಮತ್ತು ಕೋರ್ನಾಟ್ನ ಕೇಂದ್ರದ ಸ್ಥಾಪಕರಾಗಿದ್ದಾರೆ.ತನ್ನ ಸಹೋದ್ಯೋಗಿ ಫ್ರಾಂಕೊ ಮೊಡಿಗ್ಲಿಯನಿ ಅವರ ಮರಣದ ನಂತರ ಸೊಲೊ ಅವರು ಐ.ಎಸ್.ಇ.ಒ ಇನ್ಸ್ಟಿಟ್ಯೂಟ್ನ ಹೊಸ ಅಧ್ಯಕ್ಷರಾಗಿ ನೇಮಿತರಾದರು.ಸೊಲೊ ಅವರ ವಿದ್ಯಾರ್ಧಿಗಳಲ್ಲಿ ಪ್ರಮುಖರು ೨೦೧೦ ನೊಬೆಲ್ ಪ್ರಶಸ್ತಿ ವಿಜೇತ ಪೀಟರ್ ಡೈಮಂಡ್, ಹಾಗೂ ಮೈಕೆಲ್ ರಾಥ್ಸ್ಚೈಲ್ಡ್, ಹ್ಯಾಲ್ಬರ್ಟ್ ವೈಟ್ ಚಾರ್ಲಿ ಬೀನ್,ಮತ್ತು ಹಾರ್ವೆ ವ್ಯಾಗ್ನರ್ ಸೇರಿವೆ.

ಸೊಲೊ ಮಾದರಿ[ಬದಲಾಯಿಸಿ]

ಆರ್ಥಿಕ ಬೆಳವಣಿಗೆಯ [೩]ಯನ್ನು ಸ್ವತಂತ್ರವಾಗಿ ಟ್ರೆವರ್ ಡಬ್ಲ್ಯೂ ಸ್ವಾನ್ ಕಂಡುಹಿಡಿದು ಅದನ್ನು "ಧ ಎಕನಾಮಿಕ್ ರೆಕಾರ್ಡ್"ನಲ್ಲಿ ಪ್ರಕಟಿಸಲಾಯಿತು.ಇಂದು ಸೊಲೊ ಅವರ ಮೂಲಗಳನ್ನು ಅರ್ಥಶಾಸ್ತ್ರಜ್ಞರು ತಾಂತ್ರಿಕ ಬದಲಾವಣೆ, ಬಂಡವಾಳ, ಮತ್ತು ಕಾರ್ಮಿಕರ ಆರ್ಥಿಕ ಪ್ರಗತಿಯ ಮೇಲೆ ಪ್ರತ್ಯೇಕ ಪರಿಣಾಮಗಳ ಅಂದಾಜನ್ನು ಕಂಡು ಇಡಿಯಲು ಉಪಯೊಗಿಸುತಿದ್ದಾರೆ.ಸೊಲೊ ಅವರ ಬೆಳವಣಿಗೆ ಮಾಡೆಲ್ ಹಾರೊಡ್-ದೊಮರ್ ಬೆಳವಣಿಗೆ ಮಾದರಿಯ ಒಂದು ಆವೃತ್ತಿಯಾಗಿದೆ ಇವು ಎರಡರ ನಡುವಿನ ಮುಖ್ಯ ವ್ಯತ್ಯಾಸವೇನೆಂದರೆ ವೇತನದಲ್ಲಿ ಮಾಡುವ ವ್ಯತ್ಯಾಸದಿಂದ ಸಂಪೂರ್ಣ ಜನರಿಗೆ ಉದ್ಯೊಗ ನೀಡಬಹುದು ಎಂಬ ಸೊಲೊ ಅವರ ಊಹೆ ಆಗಿದೆ.ಸೊಲೊ ಹೇಳುವುದೇನೆಂದರೆ ಬಂಡವಾಳ ಕ್ರೋಢೀಕರಣದಿಂದ ಹಾಗು ಕಾರ್ಮಿಕರನ್ನು ಹೆಚ್ಚಿಸುವುದರಿಂದ ರಾಷ್ಟ್ರದ ಬೆಳವಣಿಗೆ ಸುಗಮವಾಗಿ ಹಾಗುತದೆ.ಈಗ ಸೊಲೊ ಅವರು ಎಂ.ಐ.ಟಿ ಅರ್ಥಶಾಸ್ತ್ರ ವಿಭಾಗದಲ್ಲಿ ಎಮಿರಿಟಸ್ ಇನ್ಸ್ಟಿಟ್ಯೂಟ್ ಪ್ರೊಫೆಸರ್ ಆಗಿ ಸೇವೆ ಮಾಡುತಿದ್ದಾರೆ.

ಪುಸ್ತಕಗಳು[ಬದಲಾಯಿಸಿ]

ರಾಬರ್ಟ್ ಸೊಲೊ ಅವರ ಪ್ರಮುಖ ಪುಸ್ತಕಗಳು ಯಾವುದೆಂದರೆ ಕ್ರಿಯೆಟಿನ್ಗ್ ಎ ಲೆರ್ನಿಂಗ್ ಸೊಸ್ಯಟಿ:ಎ ನ್ಯೂ ಅಪ್ರೊಚ್ ಟು ಗ್ರೊತ್,ಡೆವಲಪ್ಮೆಂಟ್ ಆಂಡ್ ಸೊಸ್ಯಲ್ ಪ್ರೊಗ್ರೆಸ್, ಲಿನಿಯರ್ ಪ್ರೊಗ್ರಾಮ್ಮಿಂಗ್ ಆಂಡ್ ಎಕೊನೊಮಿಕ್ ಅನಾಲಿಸಿಸ್, ಮೇಡ್ ಇನ್ ಅಮೇರಿಕ:ರಿಗೆಯ್ನಿಂಗ್ ಧ್ ಪ್ರೊಡಕ್ಟಿವ್ ಎಡ್ಜ್, ಸಿಕ್ರೆಟ್ಸ್ ಆಫ್ ಎಕನಾಮಿಕ್ಸ್ ಎಡಿಟರ್ಸ್, ಪ್ರೊಡಕ್ಟಿವಿಟಿ ಗ್ರೊತ್,ಇನ್ಫ್ಲೆಷನ್ ಆಂಡ್ ಅನೆಂಮ್ಪ್ಲೊಯ್ಮೆಂಟ್, ಧ ಅಕಾಡಮಿಕ್ ಸ್ಕ್ರಿಬ್ಲರ್ಸ್, ಎಕನಾಮಿಕ್ಸ್ ಫ಼ೊರ್ ಧ ಕ್ಯೂರಿಯಸ್:ಇನ್ಸ್ಯಡ್ ಧ ಮೈಂಡ್ ಆಫ್ ೧೨ ನೊಬೆಲ್ ಲಾಉರಿಯೆಟ್ಸ್, ಮೊನೊಪೊಲಿಸ್ಟಿಕ್ ಕೊಂಪಟಿಷನ್ ಆಂಡ್ ಮಾಕ್ರೊ ಎಕನಾಮಿಕ್ ತಿಒರಿ, ಲಾಂಡ್ಮಾರ್ಕ್ ಪೆಪರ್ಸ್ ಇನ್ ಎಕನಾಮಿಕ್ ಗ್ರೊತ್, ಧ ಶೇಪ್ ಆಫ್ ಧ ಡಿವಿಶನ್ ಆಫ್ ಲೇಬರ್:ನೆಶನ್,ಇನ್ಡಸ್ಟ್ರಿಸ್ ಆಂಡ್ ಒಹ್ಶೊಲ್ಡ್ಸ್, ಧ ರೇಟ್ ಆಫ್ ರಿಟರ್ನ್ ಆಂಡ್ ಧ ರೇಟ್ ಆಫ್ ಇನ್ಟ್ರೆಸ್ಟ್, ವಾಟ್ ಇಸ್ ರೈಟ್ ವಿತ್ ಮಾಕ್ರೊ ಎಕನಾಮಿಕ್ಸ್?, ಪ್ರೈಸ್ ಎಕ್ಸ್ಪೆಕ್ಟೆಶನ್ಸ್ ಆಂಡ್ ಧ ಬಿಹೆವಿಯರ್ ಆಫ್ ಧ ಪ್ರೈಸ್ ಲೆವಲ್, ಧ ಲೇಬರ್ ಮಾರ್ಕೆಟ್ ಆಸ್ ಎ ಸೊಸ್ಯಲ್ ಇನ್ಸ್ಟಿಟ್ಯೂಷನ್, ಸ್ಟ್ರಕ್ಚುರಲ್ ರಿಫ಼ೊರ್ಮ್ ಆಂಡ್ ಎಕನಾಮಿಕ್ ಪೊಲಿಸಿ, ಯುರೊಪ್ಸ್ ಎಕನಾಮಿಕ್ ಕ್ರೈಸಿಸ್:ಟ್ರನ್ಸ್ಲಾನ್ಟಿಕ್ ಪರ್ಸ್ಪೆಕ್ಟಿವ್ಸ್, ಆನ್ ಒಲ್ಮೊಸ್ಟ್ ಪ್ರಾಕ್ಟಿಕಲ್ ಸ್ಟೆಪ್ ಟುವರ್ಡ್ ಸಸ್ಟ್ಯೇನಬಿಲಿಟಿ, ಗ್ರೊತ್ ತಿಒರಿ:ಆನ್ ಎಕ್ಸ್ಪೊಸಿಶನ್, ಕ್ರಿಟಿಕಲ್ ಎಸ್ಸೇ ಆನ್ ಮೊರ್ಡರ್ನ್ ಮಾಕ್ರೊ ಎಕನಾಮಿಕ್ ತಿಒರಿ, ರಿತಿನ್ಕಿಂಗ್ ಧ ಫ಼ಿನಾನ್ಸಿಯಲ್ ಕ್ರೈಸಿಸ್, ಇನ್ಫ್ಲೆಶನ್,ಅನೆಂಪ್ಲೊಯಿಮೆಂಟ್ ಆನ್ಡ್ ಮೊನಿಟರಿ ಪೊಲಿಸಿ, ಎಕನಾಮಿಕ್ ಗ್ರೊತ್:ಎ ಯುನಿಫೈಡ್ ಅಪ್ರೊಚ್, ಧ ಕೊನ್ಸಿಕ್ವೆನ್ಸಸ್ ಆಫ್ ಎಕನಾಮಿಕ್ ರೆಟೋರಿಕ್, ಮಾಕ್ರೊ ಎಕನಾಮಿಕ್ ರಿಡಿಂಗ್ಸ್, ವರ್ಕ್ ಆನ್ಡ್ ವೆಲ್ಫೆರ್, ಫುಲ್ ಎಮ್ಪ್ಲೊಯಿಮೆಂಟ್ ರಿಗೆಯಿನ್ಡ್?, ಧ ಇಲ್ಲ್ಯೂಶನ್ ಆಫ್ ಎಕನಾಮಿಕ್ ಸ್ಟೆಬಿಲಿಟಿ, ರಿತಿನ್ಕಿನ್ಗ್ ಧ ಫಿನಾನ್ಸಿಯಲ್ ಕ್ರೈಸಿಸ್.ಸೊಲೊ ಅವರು ಅರ್ಥಶಾಸ್ತ್ರಕ್ಕೆ ಕೊಟ್ಟ ಕೊಡುಗೆಗಳು ಆವರ್ಣನಿಯವಾಗಿದೆ ಈಗಲು ಸಹ ಸೊಲೊ ಅವರು ತಮ್ಮ ಕೊಡುಗೆಗಳನ್ನು ಹೆಚ್ಚಿಸುತಿದ್ದಾರೆ.

  1. "ರಾಬರ್ಟ್ ಸೊಲೊ". Retrieved 6 ಫೆಬ್ರುವರಿ 2017.  Check date values in: |access-date= (help)
  2. "ಹಾರ್ವರ್ಡ್ ವಿಶ್ವವಿದ್ಯಾಲಯ". Retrieved 6 ಫೆಬ್ರುವರಿ 2017.  Check date values in: |access-date= (help)
  3. "ಸೊಲೊ ಮಾದರಿ". Retrieved 6 ಫೆಬ್ರುವರಿ 2017.  Check date values in: |access-date= (help)