ಸದಸ್ಯ:Manoj MJ471
ನನ್ನ ಜೀವನ
[ಬದಲಾಯಿಸಿ]ನನ್ನ ಹೆಸರು ಮನೋಜ್. ನನ್ನ ಹುಟ್ಟೂರು ಬೆಂಗಳೂರು. ನನಗೆ ಈಗ ೧೮ ವರ್ಷ. ನನ್ನ ಈ ೧೮ ವರ್ಷಗಳ ಕಾಲ ಬೆಂಗಳೂರಿನಲ್ಲಿಯೇ ಕಳೆದಿದ್ದೇನೆ. ನಾನು ವಾಸಿಸುತ್ತಿರುವುದು ಜೆಪಿ ನಾಗರಿನಲ್ಲಿ. ನಮ್ಮದೊಂದು ಚಿಕ್ಕ ಕುಟುಂಬ,ನನ್ನ ತಾಯಿ ರೇಖಾ, ನನ್ನ ತಂದೆ ಜಯಪ್ಪ ಮತ್ತು ನನ್ನ ತಮ್ಮ ತೇಜಸ್. ನಮ್ಮ ಪೋಷಕರು ನಮ್ಮಿಬ್ಬರನ್ನು ಒಳ್ಳೆ ದಾರಿಯಲ್ಲಿ, ಒಳ್ಳೆ ರೀತಿಯಲ್ಲಿ ಬೆಳೆಸಿದ್ದಾರೆ ,ಹಾಗೆಯೇ ನಾವು ನಡೆದುಕೊಂಡುಬಂದಿದ್ದೇವೆ . ಹಾಗಾಗಿ ನನ್ನ ಪೋಷಕರನ್ನು ಕಂಡರೆ ನನಗೆ ತುಂಬಾ ಪ್ರೀತಿ ಮತ್ತು ಗೌರವ .
ಶಾಲಾ ದಿನಗಳು
[ಬದಲಾಯಿಸಿ]ನನ್ನ ಶಾಲೆಯ ದಿನಗಳನ್ನು ಬೆಂಗಳೂರಿನಲ್ಲಿಯೇ ಕಳೆದೆ. ನಾನು ಹೋದ ಶಾಲೆಯ ಹೆಸರು ಸುದರ್ಶನ್ ವಿದ್ಯಾ ಮಂದಿರ್. ನಾನು ನನ್ನ ಪ್ಲೇ ಹೋಂ ನಿಂದ ಹಿಡಿದು ನನ್ನ ಹತ್ತನೇ ತರಗತಿಯವರೆಗು ಅಲ್ಲಿಯೇ ಶಿಕ್ಷಣ ಪಡೆದೆ . ನನಗೆ ಶಾಲೆಗೆ ಹೋಗಲು ಚಿಕ್ಕವನಿದ್ದಾಗಿಂದಲು ತುಂಬಾ ಆಸಕ್ತಿ ಇರುತಿತ್ತು, ಕೇವಲ ಓಡುವುದಕ್ಕಲ್ಲ, ಬದಲಾಗಿ ಅಲ್ಲಿ ಡಾ.ವಿಷ್ಣುವರ್ಧನ್ ನವರನ್ನು ನೋಡಲು ಹೋಗುತಿದ್ದೆ. ಅವರ ಮನೆ ನಮ್ಮ ಶಾಲೆಯ ಸಮೀಪದಲ್ಲೇ ಇತ್ತು. ಹಾಗಾಗಿ ಈ ಒಂದು ಅವಕಾಶ ನನಗೆ ದೊರಕುತಿತ್ತು. ನಾನು ಅನರ ದೊಡ್ಡ ಅಭಿಮಾನಿ .ನನ್ನ ಶಾಲೆಯ ದಿನಗಳು ತುಂಬಾ ಸೊಗಸಾಗಿದ್ದವು . ನನಗೆ ನನ್ನ ಹವ್ಯಾಸಗಳ ಬಗ್ಗೆ ಅರಿವೆಯಿರಲಿಲ್ಲ. ನನ್ನ ಶಾಲೆಯು ನಾನು ಏನು ಮಾಡಬಲ್ಲೆ ಎಂದು ನನಗೆ ತೋರಿಸಿತು. ಚಿತ್ರ ಬಿಡಿಸುವುದು ಹಾಗು ಕ್ರಿಕೆಟ್ ಆಡುವುದು ನನ್ನ ಹವ್ಯಾಸವಿವಾದವು . ನಾನು ಕ್ರಿಕೆಟಿನಲ್ಲಿ ಒಳ್ಳೆಯ ಆಟಗಾರನಾಗಿದ್ದೆ. ನನ್ನ ಹೆಸರು ಪತ್ರಿಕೆಗಳಲ್ಲಿಯೂ ಬಂದಿವೆ. ಈ ನನ್ನ ಶಾಲೆಯು ನನಗೆ ಅವಕಾಶಗಳನ್ನು ಕೊಟ್ಟಿದಕ್ಕೆ ನಾನು ಸದಾ ಚಿರಋಣಿಯಾಗಿರುತ್ತೇನೆ. ಶಾಲೆಯ ದಿನಗಳ ಬಗ್ಗೆ ಹೇಳಬೇಕಾದುದು ತುಂಬಾ ಇದೆ .ನನ್ನ ಬಾಲ್ಯದ ಶಾಲಾ ದಿನಗಳಲ್ಲಿ ನಾನು ತುಂಬಾ ಚೇಷ್ಟೆ ಮಾಡುವವನಾಗಿದ್ದೆ. ಶಾಲೆಯಲ್ಲಿ ತುಂಬಾ ಗೆಳೆಯರನ್ನು ಮಾಡಿಕೊಂಡಿದ್ದೆ. ಆಟ ಆಡುವುದು, ಓದುವುದು, ತಿನ್ನುವುದು ಇವೆಲ್ಲರ ಮಧ್ಯೆ ನನ್ನ ಬಾಲ್ಯದ ಶಾಲಾ ದಿನಗಳನ್ನು ಕಳೆದೆ. ಆ ದಿನಗಳಲ್ಲಿ ನನಗೆ ನನ್ನ ಅಂತಿಮ ಪರೀಕ್ಷೆ ಮುಗಿದರೆ ಸಾಕು ಆನಂದವೋ ಆನಂದ. ಏಕೆಂದರೆ ಬೇಸಿಗೆ ರಜೆಗಳಲ್ಲಿ ನನ್ನ ಮತ್ತು ನನ್ನ ತಮ್ಮ ಇಬ್ಬರನ್ನು ಊರಿಗೆ ಕಳುಹಿಸಿಬಿಡುತಿದ್ದರು. ನಮ್ಮ ಊರು ಚಿತ್ರದುರ್ಗ.ಅಲ್ಲಿನ ಕೋಟೆಯ ವೈಭವ ಅಪಾರ .ಅಲ್ಲಿನ ವಾತಾವರಣವನ್ನು ವಿವರಿಸಲು ಅಸಾಧ್ಯ. ಊರಿಗೆ ಬಂದ ಕೂಡಲೇ ನಮ್ಮ ಸಹೋದರರೊಂದಿಗೆ ಆಟವಾಡಲು ಪ್ರಾರಂಭಿಸುತಿದ್ದೆವು. ನಮ್ಮ ದಿನ ಹೇಗಿತ್ತೆಂದರೆ, ಮುಂಜಾನೆ ವೇಳೆ ಎದ್ದು ತೋಟಕ್ಕೆ ಹೋಗಿ ಅಲ್ಲಿ ಸ್ವಲ್ಪ ಕಾಲವನ್ನು ಕಳೆದು ಮನೆಗೆ ಹಿಂದಿರುಗಿ ತಿಂಡಿ ಮಾಡಿ ಆಟವಾಡಲು ಹೋದರೆ ಮರಳಿ ಸಂಜೆ ಬರುತ್ತಿದ್ದೆವು. ಅದಾದ ನಂತರ ಹಸು ಕಾರುಗಳನ್ನು ನೋಡಲು ಹೋಗುತಿದ್ದೆವು . ಈ ರಜೆಗಳು ಮುಗಿಯುತ್ತಿದ್ದಂತೆಯೇ ಬೇಸರವಾಗುತ್ತಿತ್ತು. ವರ್ಷಗಳು ಕಳೆಯುತ್ತಿದ್ದಂತೆ ಊರಿನ ಕಡೆ ಹೋಗಲು ಕಮ್ಮಿಯಾಗತೊಡಗಿತು, ಓದುವುದರ ಬಗ್ಗೆ ಗಮನ ಹೆಚ್ಚಾಗತೊಡಗಿತು. ಅಷ್ಟರಲ್ಲಿ ನಾನು ೧೦ನೇ ತರಗತಿಗೆ ಬಂದಿದ್ದೆ. ಓದುವುದರ ಕಡೆ ಗಮನ ಇನ್ನು ಹೆಚ್ಚಾಯಿತು. ಆದರೆ ನನ್ನ ಮನಸಿನಲ್ಲಿ ಉಳಿಯುವ ಸಂಗತಿ ,ನನ್ನ ಗೆಳೆಯರೊಡನೆ ಪ್ರವಾಸಕ್ಕೆ ಹಂಪಿಗೆ ಹೋದ ಘಳಿಗೆ. ಹಂಪಿಯಲ್ಲಿ ನಾವು ಕೃಷ್ಣ ಮತ್ತು ವಿರೂಪಾಕ್ಷ ದೇವಸ್ಥಾನವನ್ನು ನೋಡಿ ಅಲ್ಲಿಂದ ಜೋಗಕ್ಕೆ ಹೋದೆವು. ನನ್ನ ಜೀವನದಲ್ಲಿ ಕಂಡ ಅತಿ ಸುಂದರವಾದ ದೃಶ್ಯ!ಈ ಘಳಿಗೆಗಳನ್ನು ಮತ್ತೆ ಪಡೆಯಲು ಸಾಧ್ಯವಿಲ್ಲ. ಈ ಒಂದು ೫ ದಿನಗಳ ಪ್ರವಾಸ ನನಗೆ ತುಂಬಾ ಹತ್ತಿರವಾದದ್ದು. ೧೦ ನೇ ತರಗತಿಯ ಪರೀಕ್ಷೆ ಮುಗಿಸಿದ ನಂತರ ನನ್ನ ಗೆಳೆಯರನ್ನು ಬಿಟ್ಟು ಹೊಸ ಪಯಣಕ್ಕೆ ಕಾಲಿಡಬೇಕಾಗಿತ್ತು. ಈ ಒಂದು ಘಳಿಗೆ ತುಂಬಾ ನೋವುಂಟುಮಾಡುವಂತದ್ದು. ಆದರೆ ಬೇರೆ ದಾರಿ ಇಲ್ಲ. ನನ್ನ ಪರೀಕ್ಷೆಯಲ್ಲಿ ಒಳ್ಳೆ ಅಂಕಗಳನ್ನು ಪಡೆದಿದ್ದೆ. ಇದನ್ನು ಕಂಡು ನನ್ನ ಪೋಷಕರು ತುಂಬಾ ಖುಷಿಯಾಗಿದ್ದರು.
ಕಾಲೇಜು ದಿನಗಳು
[ಬದಲಾಯಿಸಿ]ಈಗ ನನ್ನ ಮುಂದಿನ ಜೀವನ ಶುರುವಾಗಿತ್ತು .ನಾನು ನನ್ನ ಪಿಯುಸಿಯನ್ನು ಜೈನ ಕಾಲೇಜಿನಲ್ಲಿ ಅಭ್ಯಾಸಮಾಡಿದೆ . ಅಲ್ಲಿಯ ವಾತಾವರಣ ನಮ್ಮ ಶಾಲೆಗಿಂತ ತುಂಬಾ ಭಿನ್ನವಾಗಿತ್ತು. ಅಲ್ಲಿನ ವಿದ್ಯಾರ್ಥಿಗಳಿಗೆ ಜೀವನದಲ್ಲಿ ಮುಂದೆ ಬರಲು ತುಂಬಾ ಆಸಕ್ತಿಇತ್ತು. ಅಲ್ಲಿ ನನಗೆ ತಿಳಿಯಿತು ಅಂಕಗಳು ಮಾತ್ರ ನಮ್ಮ ವ್ಯಕಿತ್ವವನ್ನು ಬಿಂಬಿಸುವುದಿಲ್ಲ ಬದಲಾಗಿ ನಾವು ಹೇಗೆ ಜ್ಞಾನವನ್ನು ಪಡೆದು ಅದನ್ನು ಹೇಗೆ ಬಳಸಬೇಕೆಂಬ ಪರಿಜ್ಞಾನ ಅರಿವಾಗಿ, ಜನರ ಜೊತೆ ಹೀಗೆ ಬೇರೆಯಬೇಕೆಂಬುದು ತುಂಬಾ ಮುಖ್ಯವಾಗುತ್ತದೆ ಎಂಬುದು .ಆದ್ದರಿಂದ ನಾನು ಅವರಂತೆಯೇ ಆಗಬೇಕೆಂಬ ಗುರಿಇತ್ತು. ಅಲ್ಲಿನ ಹಲವಾರು ವಾಣಿಜ್ಯ ಸ್ಪರ್ಧೆಗಲ್ಲಿ ಭಾಗವಹಿಸಿದಕ್ಕೆ ನನಗೆ ತಿಳಿಯಲು ತುಂಬಾ ಸಿಕ್ಕಿತು. ಈ ಅವಕಾಶಗಳಿಂದ ನನಗೆ ವಾಣಿಜ್ಯದ ಮೇಲೆ ಆಸಕ್ತಿ ಇನ್ನು ಹೆಚ್ಚಾಗತೊಡಗಿತು. ಮೆಟ್ರೋ ಮೊದಲಬಾರಿ ಬಂದಾಗ ನಾನು ಅದರಲ್ಲಿ ಒಂದು ಬಾರಿ ಪ್ರಯಾಣ ಮಾಡಬೇಕೆಂಬ ಆಸೆಯಿತ್ತು. ನಮ್ಮ ಕಾಲೇಜು ಬದಿಯಲ್ಲೇ ಇದ್ದರಿಂದ ಅದರಲ್ಲಿ ದಿನಾ ಪ್ರಯಾಣ ಮಾಡಲು ಅವಕಾಶ ಸಿಕ್ಕಿತು. ಬೆಂಗಳೂರು ತುಂಬಾ ಬದಲಾಗಿತ್ತು. ನನ್ನ ಬಾಲ್ಯದ ಸಮಯದಿಂದ ಇಲ್ಲಿಯವರೆಗೆ ತುಂಬಾನೇ ಬದಲಾವಣೆ ಕಾಣಿಸುತಿತ್ತು. ಇಲ್ಲಿನ ಗೆಳೆಯರೊಂದಿಗೆ ನಾನು ಬಹಳಷ್ಟು ಸಮಯವನ್ನು ಕಳೆದಿದ್ದೆ. ಅವರೊಂದಿಗೆ ಕ್ರಿಕೆಟ್ ಮ್ಯಾಚ್ ನೋಡುವುದಕ್ಕೆ ಹೋಗುವುದೋ ಇಲ್ಲ ಸಿನಿಮಾಗಳಿಗೆ ಹೋಗುವುದೋ ಮಾಡುತಿದ್ದೆ. ಈ ದಿನಗಳು ಸುಂಬ ಸೊಗಸಾಗಿದ್ದವು. ಅಂತಿಮ ಪರೀಕ್ಷೆಯು ಸಮ್ಮೇಪದಲ್ಲಿಯೇ ಇದ್ದವು. ಪರೀಕ್ಷೆಯಲ್ಲಿ ಒಳ್ಳೆಯ ಅಂಕಗಳನ್ನು ಪಡೆದೆ. ನನಗೆ ವಾನೈಜ್ಯದಲ್ಲಿ ಆಸಕ್ತಿ ಇರುವುದರಿಂದ ನಾನು ಕ್ರೈಸ್ಟ್ ಕಾಲೇಜಿನಲ್ಲಿ ಬಿಬಿಎಗೆ ಸೇರಿಕೊಂಡೆ. ಇಲ್ಲಿ ನನ್ನ ಹಲವಾರು ಸಹೋದರರು ಓದಿದ್ದರು ಆದರಿಂದ ಅಲ್ಲಿಯ ವಾತಾವರಣ ನನಗೆ ಮೊದಲೇ ಪರಿಚಯವಾಗಿತ್ತು . ಈ ಘಳಿಗೆಯಿಂದ ನನ್ನ ಜವಾಬ್ದಾರಿಗಳು ಹೆಚಾಗುತದ್ದೆ. ನಾನು ಮುಂದೆ ಒಬ್ಬ ಎಂಟ್ರೆಫ್ರೆನ್ಸ್ರ್ ಆಗಬೇಕೆಂದು ಕನಸನ್ನು ಕಾಣುತಿದ್ದೇನೆ. ಹಾಗಾಗಿ ಕ್ರೈಸ್ಟ್ ಕಾಲೇಜಿಗೆ ಬಂದು ನನ್ನ ಕನಸನ್ನು ಪೂರಹಿಸಬೇಕೆಂದುಕೊಂಡಿದ್ದೇನೆ. ಇಲ್ಲಿನವರಿಗೆ ನಾನು ಮಾಡಿದ್ದಕ್ಕಿಂತ ಇನ್ನು ಹೆಚ್ಚುವರಿ ಕಷ್ಟ ಪಡಬೇಕೆಂದುಕೊಂಡಿದ್ದೇನೆ ಏಕೆಂದರೆ ಈಗಿನ ಕಾಲದಲ್ಲಿ ಅದು ತುಂಬಾ ಅಗತ್ಯ. ಹೊರಗಿನ ಪ್ರಪಂಚ ತುಂಬಾ ವೇಗನೇ ಬದಲಾಗುತ್ತಿದೆ. ಅದಕ್ಕೆ ಹೊಂದು ಕೊಂಡು ನಡೆಯಬೇಕು .ನನ್ನ ಈ ಕಳೆದ ವರ್ಷಗಳಲ್ಲಿ ನನಗೆ ಸಹಾಯ ಮಡಿದ ಎಲ್ಲರಿಗೂ ನಾನು ಧನ್ಯವಾದಗಳವೀನ್ನು ತಿಳಿಸಬೇಕು ಏಕೆಂದರೆ ಅವರಿಂದಲೇ ನನ್ನ ಈ ಬೆಳವಣಿಗೆಗೆ ಕರಣ. ಮುಖ್ಯವಾಗಿ ನನ್ನ ಪೋಷಕರಿಗೆ ಹಾಗು ನನ್ನ ಗುರುಗಳಿಗೆ. ಇವರಿಂದಲೇ ನಾನು ನನ್ನ ಜೀವನದ ಶೈಲಿಯನ್ನು ರೂಪಿಸಿಕೊಂಡಿದ್ದು. ಹಾಗಾಗಿ ನಾನು ಮುಂದೆ ಒಳ್ಳೆಯಾ ಪ್ರಜೆಯಾದರೆ ಇವರೇ ಮುಖ್ಯ ಕಾರಣಎಂದರೆ ತಪ್ಪಾಗುವುದಿಲ್ಲ.