ಸದಸ್ಯ:Manohar Prasad salyan

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನನ್ನ ಹೆಸರು ಮನೋಹರ್ ಪ್ರಸಾದ್.ನಾನು ನೇತ್ರಾವತಿ ನದಿಯ ದಡದಲ್ಲಿರುವ ಪುಟ್ಟ ಊರು ಫರಂಗಿಪೇಟೆಯ ಮೇರಮಜಲಿನಲ್ಲಿ ೧೯೯೯ ಮಾರ್ಚ್ ೨ ರಂದು ವಸಂತ ಮತ್ತು ತೀರ್ಥ ದಂಪತಿಗಳ ಪ್ರಥಮ ಪುತ್ರನಾಗಿ ಜನಿಸಿದೆ.ಪ್ರಾಥಮಿಕ ಮತ್ತು ಪ್ರೌಢಶಿಕ್ಷಣವನ್ನು ಫರಂಗಿಪೇಟೆಯಲ್ಲಯೇ ಮುಗಿಸಿದ ನಾನು, ನನ್ನ ಪದವಿ ಪೂರ್ವ ಶಿಕ್ಷಣವನ್ನು ಮಂಗಳೂರಿನ ಸಂತ ಅಲೋಶಿಯಸ್ ಪದವಿ ಪೂರ್ವ ಕಾಲೇಜಿನಲ್ಲಿ ಮುಗಿಸಿ ಈಗ ಸಂತ ಅಲೋಶಿಯಸ್ ಕಾಲೇಜು (ಸ್ವಾಯತ್ತ) ನಲ್ಲಿ ಪ್ರಥಮ ಬಿಎಸ್ಸಿ ಶಿಕ್ಷಣವನ್ನು ಪಡೆಯುತ್ತಿದ್ದೇನೆ. ನಾನು ನನ್ನನ್ನು ಶೈಕ್ಷಣಿಕವಾಗಿ ಅಲ್ಲದೆ ಹಲವು ಹವ್ಯಾಸಗಳಲ್ಲಿ ತೊಡಗಿಸಿಕೊಂಡಿದ್ದು ಚಿತ್ರಕಲೆ,ಸಂಗೀತವನ್ನು ಆಲಿಸುವುದು,ಪುಸ್ತಕಗಳನ್ನು ಓದುವುದರಲ್ಲಿ ಆಸಕ್ತಿಯನ್ನು ಹೊಂದಿದ್ದೇನೆ.ಉನ್ನತ ಶಿಕ್ಷಣವನ್ನು ಮುಗಿಸಿ ಪ್ರಾಧ್ಯಾಪಕನಾಗಬೇಕೆಂಬುದು ನನ್ನ ಗುರಿಯಾಗಿದೆ.