ಸದಸ್ಯ:Manjudaskodasoge/sandbox1

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವೀರ ಮಕ್ಕಳ ಕುಣಿತ[ಬದಲಾಯಿಸಿ]

'ವೀರ ಮಕ್ಕಳ ಕುಣಿತ' ಮಾರೀ ಹಬ್ಬದಂದು ಅಥವಾ ಕೊಂಡದ ಹಬ್ಬದಂದು ನಡೆಯುತ್ತದೆ.ಇದು ಮೈಸೂರು ಮತ್ತು ಮಂಡ್ಯ ಜಿಲ್ಲೆಯ ಕೆಲವು ಕಡೆ ಮೇಲು ಸಕ್ಕರೆ ಶೆಟ್ಟರು ಅಥವಾ ವಾಯಕ ಮತ್ತಕ್ಕೆ ಸೇರಿದವರು ಮಾಡಲೇಬೇಕಾದ ಸಂಪ್ರದಾಯ. ವರ್ಷಕೊಮ್ಮೆ ಹಬ್ಬವನ್ನು ಆಚರಿಸಿ 'ಮಾರೀ ದೇವತೆ ಶಾಂತಿ ಮಾಡುವುದಕ್ಕೋಸ್ಕರ ಈ ಕುಣಿತ ಮಾಡುತ್ತೇವೆಂದು ಅಲ್ಲಿನ ಕಲಾವಿದರು ಹೇಳುತ್ತಾರೆ. ಕೊಂಡದ ಹಬ್ಬ ಅಥಾವಾ ಮಾರೀ ಹಬ್ಬ ಬರುವುದು ಯುಗಾದಿ (ಉಗಾದಿ) ಹಬ್ಬದ ಹಿಂದಿನ ಅಥವಾ ಮಾರನೇಯ ತಿಂಗಳ ಬೇಸಿಗೆ ಕಾಲದಲ್ಲಿ. ವೀರ ಮಕ್ಕಳ ಕುಣಿತವು ರಂಗದ ಕುಣಿತ,ಸುಗ್ಗಿಯ ಕುಣಿತ, ಮಾರೀ ಕುಣಿತಳ ಸಾಲಿಗೇ ಬರುವ ಕಲೆ. ಸಾಮಾನ್ಯವಾಗಿ ಕೆಂಪುಬಣ್ಣದ ಪೈಜಾಮ, ತಲೆಗೆ ರುಮಾಲು, ಜುಬ್ಬ, ನಡುವಿಗೆ ಒಂದು ವಿಧವಾದ ಡಾಬು ಅಥವಾ ವಸ್ತ್ರದ ಕಟ್ಟು, ಕಾಲಿಗೆ ಗೆಜ್ಜೆ-ಇವು ಕುಣಿತದವರ ವೇಷದಂತೆಯೇ ಕಾಣಿಸುತ್ತದೆ. ಈಚೆಗೆ ಕೆಲವು ಹಳ್ಳಿಗಳಲ್ಲಿ ಕಲಾವಿದರು ಯಾವ ವಿಧವಾದ ವೇಷಭೂಷಗಳನ್ನೂ ಉಪಯೋಗಿಸದೇ ನಿತ್ಯದ ಉಡುಪುಗಳಲ್ಲೇ ಕುಣಿತ ನಡೆಸುತ್ತಾರೆ. ಅನುಕೂಲ ಇರುವವರು ತಮ್ಮ ತಮ್ಮ ವೇಷವನ್ನು ತಾವೇ ಹೊಂದಿಸಿಕೊಳ್ಳುತ್ತಾರೆ. ವೀರ ಮಕ್ಕಳ ಕುಣಿತಕ್ಕೆ ಹಿನ್ನೆಲೆ ವಾದ್ಯವಿಶೇಷವೆಂದರೆ 'ಚಕ್ರಾದಿಬಳೆ'. ರಚನೆ ಚಕ್ರದ ಆಕಾರವಾಗಿರುವುದರಿಂದ ಇದನ್ನು 'ಚಕ್ರಾದಿ ಬಳೆ' ಎಂದು ಕರೆಯುತ್ತಾರೆ. ಈ ಬಳೆಯನ್ನು ಬೀರದೇವರ ಕುಣಿತದವರೂ ಉಪಯೋಗಿಸುತ್ತಾರೆ. ಈ ಚಕ್ರಾದಿ ಬಳೆ ವೃತ್ತಾಕಾರದಲ್ಲಿ ತಮಟಿಯಂತೆಯೇ ಇದ್ದು ಮಣ್ಣಿನಿಂದ ಮಾಡಲ್ಪಟ್ಟಿರುತ್ತದೆ. ಅರ್ಧ ಮಡಕೆಯ ಬಾಯಿಗೆ ಹದ ಮಾಡಿದ ಆಡಿನ ಚರ್ಮವನ್ನು ಅಂಟಿಸುತ್ತಾರೆ. ಇದನ್ನು ಅಂಟಿಸಲು ಒಂದು ವಿಧವಾದ ಸೊಪ್ಪಿನ ರಸವನ್ನು ಉಪಯೋಗಿಸುತ್ತಾರೆ. ಬಳೆಯ ಎರುಡು ಪಕ್ಕದಲ್ಲಿಯೂ ಎರುಡು ರಂಧ್ರ ಮಾಡಿ ಆ ರಂಧ್ರದ ಮೂಲಕೊಂದು ಹಗ್ಗವನ್ನು ಕಟ್ಟಿ ಹೆಗಲಿಗೆ ನೇತು ಹಾಕಿಕೊಳ್ಳುತ್ತಾರೆ. ಮುಂಭಾಗ ದಲ್ಲಿನೋಡಲು ತಮಟೆಯಂತೆಯೇ ಇದ್ದರೂ ಹಿಂಭಾಗದ ರಚನೆ ಮತ್ತು ಆಕಾರಗಳಲ್ಲಿ ಇದು ಭಿನ್ನವಾಗಿರುತ್ತದೆ. ತಮಟೆಯನ್ನು ಬೆಂಕಿಯಲ್ಲಿ ಕಾಯಿಸಿದರೆ ಇದನ್ನು ಬಿಲಿನಲ್ಲಿ ಕಾಯಿಸುತ್ತಾರೆ. ಇದನ್ನು ಬಡಿಯುವುದು ಕೈಯಲ್ಲಿಯೇ ಹೊರತು ಕೋಲು ಬಳಸುವುದಿಲ್ಲ. ಕೆಲವು ಕಡೆ ಕಂಚಿನನಿಂದ ತಯಾರು ಮಾಡಿದ ಚಕ್ರಾದಿ ಬಳೆಯನ್ನೂ ಉಪಯೋಗಿಸುತ್ತಾರೆ. ಆದರೆ ಮಣ್ಣಿನ ಚಕ್ರಾದಿ ಬಳ ಹೆಚ್ಚು ಬಳಕೆಯಲ್ಲಿದೆ. ಏಕೆಂದರೆ ಬಿಸಿಲಿನಲ್ಲಿಟ್ಟಾಗ ಕಂಚು ಕಾದು ಕೈ ಸುಡುವ ಸಂಭವವಿದೆ. ಈ ಕುಣಿತದಲ್ಲಿ ಕುಣಿಯುವ ಕಲಾವಿದರ ಸಂಖ್ಯೆನಿಗದಿಯಾಗಿರುವುದಿಲ್ಲ. ಇದರಲ್ಲಿ ಎರಡಷ್ಟು ಜನರು ಬೇಕಾದರೂ ಸೇರಿಸಿಕೊಳ್ಳಬಹುದು. ಬೇಕಾಗಿರುವುದು ನಿಯಮಬದ್ಧವಾಗಿ ಹೆಜ್ಜೆ ಹಾಕುವುದು. ಇಂತಹ ವರೆಸೆಗೆ ಇಷ್ಟೆ ಹೆಜ್ಜೆ ಮತ್ತು ಹೀಗೆಯೇ ಹೆಜ್ಜೆ ಹಾಕಿಕೊಂಡು ಕುಣಿಯಬೇಕೆಂಬ ನಿಯಮವಿದೆ. ಚಕ್ರಾದಿಬಳೆಯ ಬಡಿತ, ಅಂದರೆ ಗಸ್ತು (ಗತ್ತು), ಬದಲಾವಣೆಯಾದಂತೆ ಕಲಾವಿದರೂ ತಮ್ಮ ಹೆಜ್ಜೆಬದಲಾಯಿಸುತ್ತಾರೆ. ಕೆಲವು ಕಡೆ ಕೊಂಡದ ಹಬ್ಬದಲ್ಲಿ ವೀರ ಮಕ್ಕನ್ನು ಬೇರೆ ಊರಿನಿಂದ ವೀಳ್ಯ ಕೊಟ್ಟು ಕರೆಯಿಸಿ ಕುಣಿಸುತ್ತಾರೆ. ಶನಿವಾರ ಪ್ರಾರಂಭವಾದ ಕುಣಿತ ಬಧುವಾರದವರೆಗೂ ನಡೆಯುತ್ತದೆ. ಕೊಂಡದ ಸೌದೆಯನ್ನು ಊರ ಒಳಗಡೆ ತರುವಾಗ ಕೊಂಬು ಕಹಳೆಯೊಂದಿಗೆ ಪೂಜೆಪುನಸ್ಕಾರ ಮಾಡಿ ತರುತ್ತಾರೆ. ಊರಿನಲ್ಲಿ ಹೆಂಗಸು ಮನೆಕೆಲಸದಲ್ಲಿ ತೊಡಗಿದರೆ, ಗಂಡಸರು ಕೊಂಡದ ಸೌದೆಯನ್ನು ಜೋಡಿಸುವುದರಲ್ಲಿ ಮಗ್ನರಾಗುತ್ತಾರೆ. ಮೂರು ಅಥವಾ ನಾಲ್ಕು ಅಡಿ ಆಳ, ನಾಲ್ಕು ಅಡಿ ಆಗಲ, ಉದ್ದದ ಗುಂಡಿ ತೆಗೆದು ಕೊಂಡು ಸಿದ್ದ ಮಾಡುತ್ತಾರ. ಕೆಲವುಕಡೆ ಗುಂಡಿ ತೆಗೆಯದೆ ಹಾಗೆಯೇ ನೆಲದಮೇಲೆ ೨೪ ಅಡಿಉದ್ದ ೪ ಅಡಿ ಅಗಲವಾಗಿ ಕೊಂಡದ ಸೌದೆಯನ್ನು ಜೋಡಿಸುವು ಪದ್ದತಿಯಿದೆ.

ವಿಷಯದ ಉಲ್ಲೇಖ[ಬದಲಾಯಿಸಿ]

  1. ' ' ' ಗೊ.ರು.ಚನ್ನಬಸಪ್ಪ ' ' ', ಕರ್ನಾಟಕ ಜನಪದ ಕಲೆ ( ಪುಟ ಸಂಖ್ಯೆ ೧೬೧ ಮತ್ತು ೧೬೨)