ವಿಷಯಕ್ಕೆ ಹೋಗು

ಸದಸ್ಯ:Manasakshi

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ನಮ್ಮೂರು / Nammooru :

ಕೋಟಿ ಕನಸುಗಳನ್ನು ಕಾಣುತ್ತಾ ಯಾಂತ್ರಿಕ ಜೀವನಕ್ಕೆ ಅಳವಡಿಸಿಕೊಂಡು ಮಕ್ಕಳು ಇಂದು ತಮ್ಮನ್ನು ತಾವು ಮರೆತಿದ್ದಾರೆ.

ಹಳ್ಳಿ ಸೊಗಡಿನ ಬದುಕು,ಹಳ್ಳಿಯ ಜೀವನ, ಬೆಳದಿಂಗಳು, ಕೈತುತ್ತು, ಹುಣ್ಣಿಮೆ ಹಬ್ಬ, ವ್ಯವಸಾಯ, ದೇಸಿ ಆಟಗಳು, ಸುಂದರ ಪ್ರಕೃತಿಯ ನಡುವಿನ ಜೀವನವನ್ನು ನಮ್ಮೂರು ಕಲ್ಪಿಸುತ್ತದೆ.

ನಗರದಲ್ಲಿ ಬೆಳೆದ ಯುವಕರು ಸಾವಿರಾರು ಕನಸುಗಳನ್ನು ಹೊತ್ತು, ನಮ್ಮೂರನ್ನು ಸ್ಥಾಪಿಸಿದ್ದಾರೆ. ಶಾಲಾ ಮಕ್ಕಳಿಗೆ ತಮ್ಮ ಕನಸುಗಳನ್ನು ನನಸು ಮಾಡುವ ವಿಧಾನವನ್ನು ತಿಳಿಸುತ್ತಾ, ಪರೀಕ್ಷಾ ತಯಾರಿ ಬಗ್ಗೆ ಸುಲಭ ದಾರಿಯನ್ನು ತೋರಿಸುತ್ತಾ, ಹಲವಾರು ಬೀದಿ ನಾಟಕಗಳು ಇತ್ಯಾದಿಗಳಲ್ಲಿ ತಮ್ಮನ್ನು ತಾವು ಯುವಕರು ತೊಡಗಿಸಿಕೊಂಡಿದ್ದಾರೆ.

ನಮ್ಮೂರು ಒಂದು 10 ಎಕ್ಕರೆಯ ಕನಸಿನ ಕೂಸು. ಸುತ್ತಲೂ ಮರಗಳು, ಹಳ್ಳಿ ಸೊಗಡಿನ ಮನೆಗಳು, ರಾತ್ರಿ ಓಡಾಟ, ರಾತ್ರಿ ಹಾಡುಗಳು, ಜಾನಪದ ನೃತ್ಯಗಳು , ದೇಸಿ ನಾಟಕಗಳನ್ನು ಇಲ್ಲಿ ಕಾಣಬಹುದು.

ಈಗಾಗಲೇ ನಮ್ಮೂರು ಟ್ರಸ್ಟ್ ಮೂಲಕ ಸಾವಿರಾರು ಮಕ್ಕಳು ಉಪಯೋಗ ಪಡೆದಿದ್ದಾರೆ.