ಸದಸ್ಯ:Manasa Idyadka/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಸ್ಯ ಅಂಗಾಂಶಗಳು

ಹೂಬಿಡುವ ಸಸ್ಯಗಳ ದೇಹದಲ್ಲಿ ಬೇರು ಕಾಂಡ ಎಲೆಗಳೆಂಬ ಭಾಗಗಳನ್ನು ಬರಿಗಣ್ನಲ್ಲೇ ನಾವು ಕಾಣಬಹುದಷ್ಟೆ. ಆದರೆ ಸಸ್ಯ ದೇಹದ ಈ ಅಂಗಗಳ ಒಳರಚನೆ ಎಂತಹುದು? ಸಸ್ಯಗಳ ಎಲ್ಲಾ ಅಂಗಗಳು ಚಿಕ್ಕದಾದ ಜೀವ ಕೋಶಗಳಿಂದಾದವು. ಆದರೆ ಈ ಜೀವಕೋಶಗಳು ಬೆಳೆದ ಸಸ್ಯ ದೇಹದ ಎಲ್ಲಾ ಅಂಗಗಳಲ್ಲೂ ಒಂದೇ ತೆರನಾಗಿಲ್ಲ. ಸಸ್ಯ ದೇಹವು ಮಾಡಬೇಕಾದ ಹಲವಾರು ಕೆಲಸಗಳನ್ನು ಸರಿಯಾಗಿ ನಿರ್ವಹಿಸಲು ತಕ್ಕುದಾದ ವಿಶಿಷ್ಟವಾದ ವಿವಿಧ ಗಾತ್ರ, ರಚನೆಗಳನ್ನು ಪಡೆದ ಜೀವಕೋಶಗಳ ಗುಂಪುಗಳು ಈ ಅಂಗಗಳಲ್ಲಿದೆ. ಇವುಗಳಿಗೆ ಅಂಗಾಂಶಗಳೆಂದು ಹೆಸರು.

ಸಸ್ಯದ ಬೇರು, ಕಾಂಡ ಹಾಗೂ ಎಲೆಗಳಲ್ಲಿ ಹೊರಪದರ, ಆಧಾರ ಮತ್ತು ನಾಳೀಯ ಎಂಬ ಊತಕ ವ್ಯವಸ್ಥೆಗಳಿವೆ. ಡರ್ಮಲ್ ವ್ಯವಸ್ಥೆಯಲ್ಲಿ ಎಪಿಡರ್ಮಿಸ್ ಇದೆ. ಇದು ರಕ್ಷಣೆ ಕೊಡುವ ಊತಕ. ಎಲೆಗಳ ಎಪಿಡರ್ಮಿಸ್ ನಲ್ಲಿ ಪತ್ರರಂಧ್ರಗಳಿವೆ ಇವು ಆಕ್ಸೀಜನ್, ಕಾರ್ಬನ್ ಡೈಆಕ್ಸೈಡ್ ಗಳ ವಿನಿಮಯ ಭಾಷ್ಟೀಕರಣ ಕ್ರಿಯೆಗಳಲ್ಲಿ ಭಾಗಿಯಾಗುತ್ತವೆ. ಆಧಾರ ಊತಕ ವ್ಯವಸ್ಥೆಯು ಪ್ಯಾರೆಂಕೈಮಾ, ಕೋಲೆಂಕ್ಕ್ರೈಂಮಾ ಮತ್ತು ಸ್ಕ್ಲೀರೆಂಕೈಮಾ ಎಂಬ ಊತಕಗಳಿಂದಾಗಿದೆ. ಕಾಂಡ ಮತ್ತು ಬೇರುಗಳ ಮಧ್ಯದಲ್ಲಿ ನಾಳೀಯ ಊತಕಗಳು ವ್ಯವಸ್ಥಿತವಾಗಿದೆ. ಎಲೆಗಳಲ್ಲಿ ಇವು ನರಗಳಂತೆ ಕಾಣುತ್ತದೆ.

ನೀರು ಕೊಳವೆ ಮತ್ತು ಆಹಾರ ಕೊಳವೆ ಎಂಬ ೨ ರೀತಿಯ ನಾಳೀಯ ಊತಕಗಳು ಸಸ್ಯಗಳಲ್ಲಿ ಇರುತ್ತದೆ. ಕಾಂಡ, ಬೇರುಗಳ ಬೆಳವಣಿಗೆಗೆ ಮೆರಿಸ್ಟೆಮ್ ಎಂಬ ವರ್ಧನ ಊತಕದಿಂದಾಗುವುದು. ಬೇರು ಕಾಂಡಗಳ ಬೆಳೆಯುವ ತುದಿಗಳಲ್ಲಿ ಮೆರಿಸ್ಟೆಮ್ ಊತಕವಿರುತ್ತದೆ.

ಸಸ್ಯದ ಅಂಗಗಳ ಒಳರಚನೆ : ಸಸ್ಯದ ಅಂಗಗಳ ಒಳರಚನೆಯನ್ನು ಅಭ್ಯಸಿಸಲು ಇವುಗಳ ತೆಳು ಅಡ್ಡ ಸೀಳಿಕೆಗಳನ್ನು ಸೂಕ್ಷ್ಮದರ್ಶಕಗಳಲ್ಲಿ ಪರಿಶೀಲಿಸಬೇಕು. ಬೇರು ಕಾಂಡಗಳ ತುತ್ತ ತುದಿಯ ಅಡ್ಡ ಸೀಳಿಕೆ ನಮಗೆ ಮೆರಿಸ್ಟೆಮ್ ಊತಕವನ್ನಷ್ಟೇ ತೋರಿಸುವುದು. ಈ ಊತಕಗಳೇ ಭಿನ್ನ ಲಕ್ಷಣಗಳಿಂದ ಬೆಳೆದು ಇತರ ಊತಕಗಳಾಗುತ್ತದೆ. ಕಾಂಡಗಳ ನಾಳ ಕೂರ್ಚಗಳಲ್ಲಿ ಕ್ಸೈಲಮ್ ಮತ್ತು ಪ್ಲೋಯಮ್ ನಡುವೆ ಕೇಂಬಿಯಂ ವರ್ಧನ ಊತಕವಿರುತ್ತದೆ. ಬೇರಿನ ಅಡ್ಡಸೀಳಿಕೆಯಲ್ಲು ಎಪಿಡರ್ಮಿಸ್, ಕಾರ್ಟೆಕ್ಸ್ ಮತ್ತು ಸ್ಟೀಲ್ ಎಂಬ ಭಾಗಗಳನ್ನು ಕಾಣಬಹುದು. ದ್ವಿದಳ ಸಸ್ಯಗಳ ಬಲಿತ ಕಾಂಡ ಬೇರುಗಳ ಅಂಗರಚನೆ ಬಹಳ ಸಂಕೀರ್ಣವಾಗಿದೆ. ನಾವು ಉಪಯೋಗಿಸುವ ಕಾಗದ ಮತ್ತು ಮರದ ಪೀಠೋಪಕರಣಗಳೆಲ್ಲಾ ಕಾಂಡದ ಅನುಷಂಕಿಕ ಕ್ಸೈಲಮ್ ನಿಂದಲೇ ತಯಾರಿತವಾದವು.