ಸದಸ್ಯ:Maddy 17
ಜನನ
[ಬದಲಾಯಿಸಿ]ನನ್ನ ಹೆಸರು ಮದನ್ ಕುಮರ್.ನಾನು ೧೯೯೯ ಅಪ್ರಿಲ್ ೨೬ ರಂದು ಬೆಂಗಳೂರಿನ ಕೋರಮಂಗಲ ಸರ್ಕಾರಿ ಆಸ್ಪತ್ರೆಯಲ್ಲಿ ಜನಿಸಿದೆ.ನನ್ನ ತಂದೆಯ ಹೆಸರು ಶಿವಕುಮಾರ್ ತಾಯಿಯ ಹೆಸರು ಜಯಲಕ್ಶ್ಮಿ.ನನಗೆ ಇಬ್ಬರು ಅಕ್ಕಂದಿರು ದಿವ್ಯ ಮತ್ತು ಬಿಂದು ಇದ್ದಾರೆ.ನಾವು ಐದು ಜನ ಬೆಂಗಳೂರಿನ ಕೋರಮಂಗಲದಲ್ಲಿ ವಾಸಿಸುತ್ತಿದ್ದೇವೆ.
ಪರಿಚಯ
[ಬದಲಾಯಿಸಿ]ನಾನು ಜನಿಸಿದ್ದು ಕೋರಮಂಗಲದಲ್ಲಿಯಾದರು ಎರಡು ವರ್ಷ ವಯಸ್ಸಿನವನಾಗಿದ್ದಾಗ ಆಡುಗೋಡಿಯಲ್ಲಿ ನಮ್ಮ ಕುಟುಂಬ ಬಂದು ನೆಲೆಸಿತು.ನಾನು ನಾಯ್ದು ಜಾತಿಗೆ ಸೇರಿದವನಾಗಿದ್ದೇನೆ.ನಮ್ಮದು ಐದು ಜನರ ಕುಟುಂಬ ನಾನು,ನನ್ನ ತಂದೆ-ತಾಯಿ ಹಾಗೂ ಅಕ್ಕಂದಿರ ಜೊತೆ ವಾಸವಾಗಿದ್ದೇನೆ.ನಮ್ಮ ತಂದೆಯವರು ಮೂಲತ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನಲ್ಲಿ ಬೆಳೆದು ಬೆಂಗಳೂರಿಗೆ ಕೆಲಸದ ಅವಕಾಶಕಾಗಿ ಬಂದರು.ಅವರು ನಿಮ್ಹಾನ್ಸ್ ಆಸ್ಪತ್ರೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ.ನಮ್ಮ ತಾಯಿ ಗೃಹಿಣಿ.ನನ್ನ ಅಕ್ಕ ಇಂಜಿನಿಯರಿಂಗ್ ಮುಗಿಸಿ ಸದ್ಯ ಕೆಲಸ ಮಾಡುತಿದ್ದಾರೆ.
ಶಿಕ್ಷಣ
[ಬದಲಾಯಿಸಿ]ನಾನು ಮೂರು ವರ್ಷದವನಾದ ಮೇಲೆ ನನ್ನನ್ನು ಶಾಲೆಗೆ ಸೇರಿಸಿದರು. ನಾನು ನರ್ಸರಿಯಿಂದ ಹಿಡಿದು ೧೦ನೇ ತರಗತಿಯವರೆಗೂ ಅದೇ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿದೆ.ನಾನು ಶಾಲೆಯಲ್ಲಿ ಓದುವುದರಲ್ಲಿ ಮತ್ತು ಆಟವಾದುವುದರಲ್ಲಿ ಯಾವಾಗಲು ಮುಂದಿದ್ದೆ. ನಾನು ನನ್ನ ಶಾಲೆಯ ದಿನಗಳಿಂದಲು ಸಹ ಕ್ರಿಕೆಟ್ ಆಟದಲ್ಲಿ ಮುಂದಿದ್ದೆ. ನಾನು ಶಾಲಾ ಕ್ರಿಕೆಟ್ ತಂಡವನ್ನು ಹಲವಾರು ಬಾರಿ ಪ್ರತಿನಿದಿಸಿದ್ದೇನೆ. ಇನ್ನು ಇತರೆ ಚಟುವಟಿಕೆಗಳಲ್ಲೂ ನಾನು ಮುಂದಿದ್ದೆ. ನಾನು ೧೦ನೇ ತರಗತಿಯಲ್ಲಿ ಶೇಖಡ ೮೯ ರಷ್ಟು ಅಂಕ ಗಳಿಸಿದೆ ನಂತರ ನಾನು ಸಂತ ಜೋಸೆಫರ ಪದವಿ ಪೂರ್ವ ಕಾಲೇಜಿಗೆ ನನ್ನ ಮುಂದಿನ ವಿದ್ಯಾಭ್ಯಾಸಕ್ಕೆ ಸೇರಿಕೊಂಡೆ ಅಲ್ಲಿಯೂ ಕೂಡ ಒಳ್ಳೆಯ ಗೆಳೆಯರನ್ನು ಪಡೆದು ಎರಡು ವರ್ಷ ಮುಗಿಸಿದೆ. ನಾನು ಕ್ರಿಕೆಟ್ ಆಟದಲ್ಲಿ ನನ್ನ ಕಾಲೇಜಿನ ತಂಡವನ್ನು ಪ್ರತಿನಿದಿಸಿದ್ದೇನೆ. ದ್ವಿತೀಯ ಪಿ.ಯು.ಸಿಯಲ್ಲಿ ಶೇಖಡ ೮೭ ರಷ್ಟು ಅಂಕ ಗಳಿಸಿ ಉತ್ತೀರ್ಣನಾದೆ.ಪ್ರಸಕ್ತ ನಾನು ಕ್ರೈಸ್ಟ್ ವಿಶ್ವವಿದ್ಯಾಲಯದಲ್ಲಿ ಬಿ.ಕಾಂ ಪ್ರಥಮ ವರ್ಷ ವ್ಯಾಸಂಗ ಮಾಡುತ್ತಿದ್ದಾನೆ.
ಆಸಕ್ತಿ
[ಬದಲಾಯಿಸಿ]ನನಗೆ ಹಲವಾರು ವಿಷಯದಲ್ಲಿ ಆಸಕ್ತಿ ಇದೆ. ಅದರಲ್ಲಿ ಮೊದಲನೆಯದ್ದು ಗೆಳೆಯರ ಜೊತೆ ಕ್ರಿಕೆಟ್ ಆಡುವುದು. ಕೇವಲ ಕ್ರಿಕೆಟ್ ಅಲ್ಲದೆ ಕಾಲ್ಚೆಂಡು ಆಟ ಆಡುವುದು ನನಗೆ ಬಹಳ ಇಷ್ಟ. ಇನ್ನು ಗೆಳೆಯರ ಜೊತೆ ಸಿನಿಮಾ ನೋಡಲು ಹೋಗುವುದು, ಕುಟುಂಬದವರೊಡನೆ ಪ್ರವಾಸಿ ತಾಣಕ್ಕೆ ಹೋಗುವುದು ತುಂಬ ಇಷ್ಟ. ಇನ್ನು ಹಾಡು ಕೇಳುವುದು ನನಗಿರುವ ಆಸಕ್ತಿಗಳಲ್ಲಿ ಒಂದು.