ಸದಸ್ಯ:Maadhavapriyaa/ಭಾರತದ ನೈಋತ್ಯ ಕರಾವಳಿ ಪ್ರದೇಶ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಾರತದ ನೈಋತ್ಯ ಕರಾವಳಿ ಯು ಭಾರತ ಉಪಖಂಡದ ಒಂದು ಭೌಗೋಳಿಕ-ಸಾಂಸ್ಕೃತಿಕ ಪ್ರದೇಶವಾಗಿದೆ. ಇದು ಸಂಪೂರ್ಣ ನೈಋತ್ಯ ಕರಾವಳಿ ಪ್ರದೇಶವನ್ನು ವ್ಯಾಪಿಸಿದೆ. ಸ್ಕಂದ ಪುರಾಣದಲ್ಲಿ ಈ ಪ್ರದೇಶವನ್ನು ಸಪ್ತ ಕೊಂಕಣ ಪ್ರದೇಶ ಎಂದು ಉಲ್ಲೇಖಿಸಲಾಗಿದೆ. [೧]

ಭಾರತದ ನೈಋತ್ಯ ಕರಾವಳಿ ಪ್ರದೇಶ

ಪ್ರದೇಶ[ಬದಲಾಯಿಸಿ]

ಭಾರತದ ನೈಋತ್ಯ ಕರಾವಳಿಯು ತನ್ನ ಪಶ್ಚಿಮದ ಮೂಲೆಯಲ್ಲಿ ಕಚ್ ಕೊಲ್ಲಿಯಿಂದ ಭಾರತ ಉಪಖಂಡದ ಸಂಪೂರ್ಣ ಅರಬ್ಬೀ ಸಮುದ್ರದುದ್ದಕ್ಕೂ ವ್ಯಾಪಿಸಿದೆ ಹಾಗೂ ಖಂಭಾತ್ ಕೊಲ್ಲಿಯ ಉದ್ದಕ್ಕೂ ವಿಸ್ತರಿಸಿದೆ. ಸಾಲ್ಸೆಟ್ ದ್ವೀಪ ಹಾಗೂ ಮುಂಬಯಿ ಮೂಲಕ ಕೊಂಕಣದುದ್ದಕ್ಕೂ ಹರಡಿದೆ. ದಕ್ಷಿಣಕ್ಕೆ ರಾಯಘಡ ಪ್ರದೇಶ, ಕೆನರಾ ಪ್ರದೇಶ, ಮಂಗಳೂರು, ಮಲಬಾರಿನ ಮೂಲಕ ವ್ಯಾಪಿಸಿ, ದಕ್ಷಿಣದ ತುತ್ತತುದಿಯಾದ ಕನ್ಯಾಕುಮಾರಿ (ಕೊಮೊರಿನ್ ಭೂಶಿರ) ವರೆಗೆ ವಿಸ್ತರಿಸಿದೆ. ಪ್ರಾಚೀನ ಕಾಲದಲ್ಲಿ ಭಾರತೀಯ ಉಪಖಂಡದ ನೈಋತ್ಯ ಕರಾವಳಿಯು ಸಿಲೋನ್ ವರೆಗೆ ಹರಡಿತ್ತು.

ಜನಾಂಗ[ಬದಲಾಯಿಸಿ]

ಅರೇಬಿಯನ್ ಸಮುದ್ರ ಕರಾವಳಿಯುದ್ದ ಪಶ್ಚಿಮ ಏಷ್ಯಾದ ಮೆಡಿಟೇರಿಯನ್ ವ್ಯಾಪಾರಿಗಳೊಂದಿಗೆ ದೀರ್ಘಾವಧಿಯ ವ್ಯಾಪಾರ ಸಂಬಂಧವನ್ನು ಈ ಪ್ರದೇಶ ಹೊಂದಿತ್ತು. ಇದರ ಫಲಿತಾಂಶವಾಗಿ ನೈಋತ್ಯ ಕರಾವಳಿ ಪ್ರದೇಶದಲ್ಲಿ ವಾಸಿಸುವ ಜನರ ಸಂಸ್ಕೃತಿಯಲ್ಲಿ ವಿವಿಧತೆಯಲ್ಲಿ ಏಕತೆಯನ್ನು ಕಾಣಬಹುದು.

ನೈಋತ್ಯ ಕರಾವಳಿ ಪ್ರದೇಶವು ಪಶ್ಚಿಮದಲ್ಲಿ ಗುಜರಾತಿಗರನ್ನು, ಪಶ್ಚಿಮ ಕರಾವಳಿಯಲ್ಲಿ ಮಹಾರಾಷ್ಟ್ರಿಗರನ್ನು ಹಾಗೂ ಗೋವಾವಾಸಿಗಳನ್ನು, ತನ್ನ ನೈಋತ್ಯ ಭಾಗದಲ್ಲಿ ಕನ್ನಡಿಗರನ್ನು ಹಾಗೂ ದಕ್ಷಿಣ ಭಾರತದ ದಕ್ಷಿಣ ತುದಿಯಲ್ಲಿ ತುಳುವರನ್ನು ಹಾಗೂ ಮಲೆಯಾಳಿಗಳನ್ನು ಒಳಗೊಂಡಿದೆ.

ಪೆರಿಪ್ಲಸ್ ಮೆರಿಸ್ ಎರಿತ್ರೈ ಪ್ರಕಾರ CE ೧ನೇ ಶತಮಾನದಲ್ಲಿ ಪ್ರಾಚೀನ ಭಾರತ ನೈಋತ್ಯ ಕರಾವಳಿಯೊಂದಿಗೆ ರೋಮನ್ ವ್ಯಾಪಾರ

ಪಶ್ಚಿಮ ಏಷ್ಯಾದೊಂದಿಗೆ ಒಡನಾಟ[ಬದಲಾಯಿಸಿ]

ಮೆಡಿಟೆರೇನಿಯನ್ ಪ್ರದೇಶ ಹಾಗೂ ಅರೇಬಿಯನ್ ಸಮುದ್ರದ ಉದ್ದಕ್ಕೂ ಭಾರತದ ನೈಋತ್ಯ ಕರಾವಳಿಯ ನಡುವೆ ವೃದ್ಧಿಯಾಗುತ್ತಿರುವ ವ್ಯಾಪಾರ ವಹಿವಾಟಿನ ಪರಿಣಾಮವಾಗಿ [೨] [೩] , ಪಶ್ಚಿಮ ಏಷ್ಯಾ ಹಾಗೂ ಭಾರತದ ನೈಋತ್ಯ ಕರಾವಳಿಯ ಜನರ ನಡುವೆ ಗಮನಾರ್ಹವಾಗಿ ಒಡನಾಟ ಬೆಳೆದಿದೆ. ಪಶ್ಚಿಮ ಏಷ್ಯಾದ ಹಲವಾರು ಸಮುದಾಯಗಳು ಸಹ ಇಲ್ಲಿಯೇ ನೆಲೆಸಿ, ಭಾರತದ ನೈಋತ್ಯ ಕರಾವಳಿಯ ಭಾಗವಾಗಿವೆ. ಪಶ್ಚಿಮ ತುದಿಯಲ್ಲಿ ಪಾರ್ಸಿಗಳು, [೪] ಬೊಹ್ರಾಗಳು [೫] ಮತ್ತು ಬಾಗ್ದಾದಿನ ಯಹೂದಿಗಳು [೬], ನೈಋತ್ಯ ಪ್ರದೇಶದಲ್ಲಿ ಬೆನೆ ಇಸ್ರೇಲಿಗರು, ಕೂರ್ಗ್ ಮತ್ತು ಮಂಗಳೂರಿನ ಮೆಡಿಟೆರೇನಿಯನ್ ವ್ಯಾಪಾರಿಗಳ ವಂಶಸ್ಥರು, ಮಲಬಾರ್ ಪ್ರದೇಶದಲ್ಲಿ ಜೊನಕನ್ ಮಾಪ್ಪಿಲಾಸ್ [೭], ಮತ್ತು ಕೊಚ್ಚಿನ್ ಯಹೂದಿಗಳು [೨] [೮] [೩] [೭] [೯] [೧೦] ಮತ್ತು ದಕ್ಷಿಣ ಭಾರತದ ದಕ್ಷಿಣ ತುದಿಯ ಸಿರಿಯಾಕ್ ನಸ್ರಾನಿಸ್ [೨] [೮] [೩] [೭] [೯] [೧೦] [೧೧] ಇವರಲ್ಲಿ ಸೇರಿದ್ದಾರೆ.

ಪರಂಪರೆ[ಬದಲಾಯಿಸಿ]

ಭಾರತದ ನೈಋತ್ಯ ಕರಾವಳಿಯು ಭಾಷಾ ವೈವಿಧ್ಯತೆಯಿಂದ ಕೂಡಿದೆ. ಮಲಯಾಳಂ, ತುಳು ಮತ್ತು ಕನ್ನಡ ಸೇರಿದಂತೆ ದ್ರಾವಿಡ ಕುಟುಂಬದ ಭಾಷೆಗಳನ್ನು ಒಳಗೊಂಡಿದೆ. ಇಂಡೋ ಇರಾನಿಯನ್ ಭಾಷಾ ಕುಟುಂಬದ ಪಶ್ಚಿಮ ವಲಯಕ್ಕೆ ಸೇರಿದ ಭಾಷೆಗಳಾದ ಗುಜರಾತಿ, ಮರಾಠಿ, ಕೊಂಕಣಿ ಭಾಷೆಗಳನ್ನೂ, ಇಂಡೋ ಇರಾನಿಯನ್ ಭಾಷಾ ಕುಟುಂಬದ ಕೇಂದ್ರ ವಲಯದ ಉರ್ದೂ ಮತ್ತು ಪರ್ಷಿಯನ್ ಭಾಷೆಗಳನ್ನೂ ಹೊಂದಿದೆ. ಅಲ್ಲದೇ ಈ ಪ್ರದೇಶದಲ್ಲಿ ಅರೆಬಿಕ್, ಹೀಬ್ರೂ ಮತ್ತು ಅರಮಿಕ್ ನಂತಹ ಸೆಮಿಟಿಕ್ ಭಾಷೆಗಳನ್ನು ಮಾತನಾಡುವವರೂ ಇದ್ದಾರೆ. ಭಾರತದ ನೈಋತ್ಯ ಕರಾವಳಿಯ ಜನರ ಆಹಾರ ಪದ್ಧತಿಯಲ್ಲಿ ಕೃಷಿ ಮತ್ತು ಕರಾವಳಿ ಉತ್ಪನ್ನಗಳಿಂದ ತಯಾರಿಸಲಾದ ವಿಶೇಷ ತಿನಿಸುಗಳು ಸೇರಿವೆ ಹಾಗೂ ಇಲ್ಲಿನ ತೇವಭರಿತ ಮತ್ತು ಬೆಚ್ಚಗಿನ ವಾತಾವರಣಕ್ಕೆ ಸೂಕ್ತವಾಗುವಂತೆ ಪುರುಷರು ಮತ್ತು ಮಹಿಳೆಯರು ಪರದೆಯಂತಹ ಉದ್ದನೆಯ ಬಟ್ಟೆಯನ್ನು ಧರಿಸುತ್ತಾರೆ. ಈ ಪ್ರದೇಶದಾದ್ಯಂತ ಮಹಿಳೆಯರು ವಿವಿಧ ಶೈಲಿಗಳಲ್ಲಿ ಸೀರೆ ಯನ್ನು [೧೨] ಉಡುತ್ತಾರೆ. ಈ ಪ್ರದೇಶದ ಪಶ್ಚಿಮ ಭಾಗದಲ್ಲಿ ಪುರುಷರು ಧೋತಿ [೧೨] ಯನ್ನು ಮತ್ತು ಮಹಿಳೆಯರು ಚನಿಯ ಚೋಲಿ [೧೨] ಯನ್ನು ಹಾಗೂ ದಕ್ಷಿಣ ಭಾಗದಲ್ಲಿ ಪುರುಷರು ಲುಂಗಿ ಅಥವಾ ಮುಂಡು [೧೨] ವನ್ನು ಮತ್ತು ಮಹಿಳೆಯರು ವೇಷ್ಟಿ [೧೨] ಯನ್ನೂ ಧರಿಸುತ್ತಾರೆ. ಸಾಮಾಜಿಕ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ತುಲನಾತ್ಮಕವಾಗಿ ಹೆಚ್ಚಿನ ಪಾತ್ರವನ್ನು ನೀಡಿರುವುದು ಭಾರತದ ನೈಋತ್ಯ ಕರಾವಳಿಯ ಮತ್ತೊಂದು ಸಾಮಾನ್ಯ ಸಾಂಸ್ಕೃತಿಕ ಅಂಶ. [೧೨] ಭಾರತದ ನೈಋತ್ಯ ಕರಾವಳಿಯ ದಕ್ಷಿಣ ತುದಿಯಲ್ಲಿನ ಸಾಮಾಜಿಕ ವ್ಯವಸ್ಥೆಯಲ್ಲಿ ಗಣನೀಯವಾಗಿ ಮಾತೃ ಪ್ರಧಾನ ವ್ಯವಸ್ಥೆ ಹೆಚ್ಚಾಗಿರುವುದನ್ನು ಕಾಣಬಹುದು. ಉದಾಹರಣೆಗೆ ತುಳುವಬಂಟ ಸಮುದಾಯ, ನಾಯರ್ಗಳ ಮರುಮಕ್ಕಥಾಯಮ್ ಮತ್ತು ಮಾಪ್ಪಿಳಾ ಮುಸ್ಲಿಮರ ಒಂದು ವಿಭಾಗ. [೧೩] ಇದು ಗುಜರಾತಿಗರು ಆಚರಿಸುವ ನವರಾತ್ರಿ ಹಬ್ಬ ಮತ್ತು ಮಲಯಾಳಿ ಜನರು ಆಚರಿಸುವ ತಿರುವತಿರ ಹಬ್ಬಗಳಂತಹ ಸ್ತ್ರೀ ದೇವತೆ ಆಧಾರಿತ ಹಬ್ಬಗಳ ಹಾಗೂ ಶಕ್ತಿ ಅಥವಾ ಸ್ತ್ರೀ ಶಕ್ತಿಯನ್ನು ಪೂಜಿಸುವ ಆಚರಣೆಗಳಲ್ಲಿಯೂ ವ್ಯಕ್ತವಾಗುತ್ತದೆ.[೧೪]

ಉಲ್ಲೇಖಗಳು[ಬದಲಾಯಿಸಿ]

  1. ಉಲ್ಲೇಖ ದೋಷ: Invalid <ref> tag; no text was provided for refs named ref1
  2. ೨.೦ ೨.೧ ೨.೨ Bjorn Landstrom (1964) "The Quest for India", Double day English Edition, Stockholm.
  3. ೩.೦ ೩.೧ ೩.೨ Thomas Puthiakunnel, (1973) "Jewish colonies of India paved the way for St. Thomas", The Saint Thomas Christian Encyclopedia of India, ed. George Menachery, Vol. II., Trichur.
  4. Hodivala, S. (1920), Studies in Parsi History, Bombay
  5. The Dawoodi Bohras: an anthropological perspective, by Shibani Roy. Published by B.R. Publishing, 1984.
  6. Sargon, J(1987) 'Baghdadi Jews of India and the Sassoons' in Jewish Daily Israel Today, Perspectiv/Opinion; Tuesday 25 August
  7. ೭.೦ ೭.೧ ೭.೨ Bindu Malieckal (2005) Muslims, Matriliny, and A Midsummer Night's Dream: European Encounters with the Mappilas of Malabar, India; The Muslim World Volume 95 Issue 2
  8. ೮.೦ ೮.೧ ಉಲ್ಲೇಖ ದೋಷ: Invalid <ref> tag; no text was provided for refs named Miller
  9. ೯.೦ ೯.೧ Koder S. "History of the Jews of Kerala". The St. Thomas Christian Encyclopaedia of India, Eg . G. Menachery,1973.
  10. ೧೦.೦ ೧೦.೧ Leslie Brown, (1956) The Indian Christians of St. Thomas. An Account of the Ancient Syrian Church of Malabar, Cambridge: Cambridge University Press 1956, 1982 (repr.)
  11. ಉಲ್ಲೇಖ ದೋಷ: Invalid <ref> tag; no text was provided for refs named menachery
  12. ೧೨.೦ ೧೨.೧ ೧೨.೨ ೧೨.೩ ೧೨.೪ ೧೨.೫ ಉಲ್ಲೇಖ ದೋಷ: Invalid <ref> tag; no text was provided for refs named Boulanger
  13. Smith R.T. (2002) Matrifocality, in International encyclopedia of the social and behavioral sciences (eds) Smelser & Baltes, vol 14, pp 9416.
  14. Dikshitar, V. R. Ramachandra, The Lalita Cult, Motilal Banarsidass Publishers Pvt. Ltd. (Delhi, 1942, 2d ed. 1991, 3d ed. 1999).