ವಿಷಯಕ್ಕೆ ಹೋಗು

ಸದಸ್ಯ:MOHAN RM/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶನೇಶ್ವರ ಸ್ವಾಮಿ ದೇವಸ್ಥಾನ ಹುಣಸೂರು

[ಬದಲಾಯಿಸಿ]

ಶನೇಶ್ವರ ಸ್ವಾಮಿ ದೇವಸ್ಥಾನ ಮೈಸೂರು ಜಿಲ್ಲೆಯ ಹುಣಸೂರು ಹೊರವಲಯದಲ್ಲಿದೆ. ಈ ದೇವಸ್ಥಾನವು ಸುತ್ತಲೂ ಹಸಿರಿನ ಗಿಡಮರಗಳಿಂದ ಕೂಡಿದ್ದು ಇದು ಹುಣಸೂರು ಪಟ್ಟಣ ದಿಂದ ಕೆ ಆರ್ ನಗರಕ್ಕೆ ಹೋಗುವ ರಸ್ತೆ ಪಕ್ಕದಲ್ಲಿ ಇದೆ. ಈ ದೇವಸ್ಥಾನವು ಹುಣಸೂರು ಪಟ್ಟಣದಿಂದ ಸುಮಾರು ಒಂದು ಕಿಲೋಮೀಟರ್ ದೂರದಲ್ಲಿದೆ. ಈ ದೇವಸ್ಥಾನದಲ್ಲಿ ಪ್ರತಿ ಶನಿವಾರ ವಿಶೇಷವಾದ ಪೂಜೆಯನ್ನು ನಡೆಸಲಾಗುತ್ತದೆ ಶ್ರೀ ಶನೇಶ್ವರ ದೇವಸ್ಥಾನದಲ್ಲಿ ನಡೆಸುವ ವಿಶೇಷ ಪೂಜೆ ವಿವರ.

ಬ್ರಹ್ಮಅರ್ಚನೆ, ಕುಂಕುಮಾರ್ಚನೆ, ಪಂಚವೃತ ಅಭಿಷೇಕ, ನವಗ್ರಹ ಪೂಜೆ, ರುದ್ರಾಭಿಷೇಕ, ಗಣಪತಿ ಹೋಮ, ಶನಿ ಶಾಂತಿಹೋಮ, ಶನಿವಾರದಂದು ಎಲ್ಲಾ ಭಕ್ತದಿಗಳಿಗೂ ಅನ್ನಸಂತರ್ಪಣೆ ಇರುತ್ತದೆ.

ಶನಿ ದೇವರ ಪಕ್ಕದಲ್ಲಿ ಗಣಪತಿ ಮತ್ತು ದುರ್ಗಾ ಪರಮೇಶ್ವರಿ ದೇವಾಲಯಗಳನ್ನು ನಾವು ಕಾಣಬಹುದು. ಈ ದೇವಸ್ಥಾನವನ್ನು ಇದಾಗಿ ನಿರ್ಮಿಸಲಾಗಿದ್ದು ಪ್ರತಿವರ್ಷ ವಾರ್ಷಿಕೋತ್ಸವವನ್ನು ನಡೆಸಲಾಗುತ್ತದೆ.