ಸದಸ್ಯ:MENE JACK/sandbox

ವಿಕಿಪೀಡಿಯ ಇಂದ
Jump to navigation Jump to search

ಇ-ಕಾಮರ್ಸ್ ಪ್ರಕಾರಗಳು

ಆಧುನಿಕ ಇಲೆಕ್ಟ್ರಾನಿಕ್ ವ್ಯವಹಾರವು ತಕ್ಷಣದ ಆನ್ಲೈನ್ ಬಳಕೆಯಾದ(ಡಿಜಿಟಲ್ ) "ಅಂಕೀಯ" ವಸ್ತುಗಳ ಬೇಡಿಕೆಯಿಂದ ಹಿಡಿದು ಸಾಂಪ್ರದಾಯಿಕ ಸರಕುಗಳು ಹಾಗು ಸೇವೆಗಳ ಬೇಡಿಕೆಯವರೆಗೆ ಹಾಗು ಇಲೆಕ್ಟ್ರಾನಿಕ್ ವ್ಯವಹಾರದ ಇತರ ವಿಧಾನಗಳನ್ನು ಸುಲಭಗೊಳಿಸುವ "ಮೆಟಾ" ಸೇವೆಗಳೆಲ್ಲವನ್ನು ಒಳಗೊಂಡಿದೆ. ಗ್ರಾಹಕ ಮಟ್ಟದಲ್ಲಿ, ಇಲೆಕ್ಟ್ರಾನಿಕ್ ವ್ಯವಹಾರವನ್ನು ಸಾಮಾನ್ಯವಾಗಿ ವರ್ಲ್ಡ್ ವೈಡ್ ವೆಬ್ ನಲ್ಲಿ ನಡೆಸಲಾಗುತ್ತದೆ. ಒಬ್ಬ ವ್ಯಕ್ತಿಯು ಆನ್ಲೈನ್ ನಲ್ಲಿ ಪುಸ್ತಕಗಳಿಂದ ಹಿಡಿದು ದಿನಸಿಯವರೆಗೆ, ದುಬಾರಿ ವಸ್ತುಗಳಾದ ರಿಯಲ್ ಎಸ್ಟೇಟ್ ತನಕ ಯಾವುದನ್ನಾದರೂ ಖರೀದಿಸಬಹುದಾಗಿದೆ. ಮತ್ತೊಂದು ಉದಾಹರಣೆಯೆಂದರೆ ಆನ್ಲೈನ್ ಬ್ಯಾಂಕಿಂಗ್, ಅದೆಂದರೆ ಆನ್ಲೈನ್ ನಲ್ಲಿ ಬಿಲ್ ಪಾವತಿ, ಸಾಮಾನು ಖರೀದಿ, ಒಂದು ಅಕೌಂಟ್ ನಿಂದ ಮತ್ತೊಂದಕ್ಕೆ ಹಣದ ವರ್ಗಾವಣೆ, ಹಾಗು ಮತ್ತೊಂದು ದೇಶಕ್ಕೆ ತಂತಿಯ ಮೂಲಕ ಹಣವನ್ನು ಪಾವತಿಸಲು ಉಪಕ್ರಮಿಸುವುದು ಸೇರಿದೆ. ಈ ಎಲ್ಲ ಚಟುವಟಿಕೆಗಳನ್ನು ಕೀಬೋರ್ಡ್ ನ ಮೂಲಕ ಕೆಲವೇ ಕ್ಷಣದಲ್ಲಿ ಮಾಡಬಹುದಾಗಿದೆ. ಸಾಂಘಿಕ ಮಟ್ಟದಲ್ಲಿ, ದೊಡ್ಡ ಸಂಸ್ಥೆಗಳು ಹಾಗು ಹಣಕಾಸು ಸಂಸ್ಥೆಗಳು, ರಾಷ್ಟ್ರೀಯ ಹಾಗು ಅಂತಾರಾಷ್ಟ್ರೀಯ ವ್ಯವಹಾರಗಳನ್ನು ಸುಲಭಗೊಳಿಸುವ ಸಲುವಾಗಿ ಅಂತರ್ಜಾಲದಲ್ಲಿ ಹಣಕಾಸಿನ ಡಾಟಾವನ್ನು(ಅಂಕಿಅಂಶ) ವಿನಿಮಯ ಮಾಡಿಕೊಳ್ಳುತ್ತವೆ. ಡಾಟಾ ಸಮಗ್ರತೆ ಹಾಗು ಭದ್ರತೆಗೆ ಇಂದಿನ ಇಲೆಕ್ಟ್ರಾನಿಕ್ ವ್ಯವಹಾರದಲ್ಲಿ ತುಂಬಾ ಗಾಢವಾದ ಹಾಗು ಒತ್ತುಕೊಡುವಂತಹ ವಿಷಯವಾಗಿದೆ.