ಸದಸ್ಯ:MAHALAKSHMI/WEP 2018-19

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಪರಿಚಯಗಳು[ಬದಲಾಯಿಸಿ]

[ಭಾರತ]
[ಭಾರತ]

ನಾನು ಇಂದು ಹಾಕಿ ಆಟಗಾರರಾದ ವಿ ಜೆ ಪೀಟರ್ ಅವರ ಕುರಿತು ನಿಮಗೆಲ್ಲ ಪರಿಚಯಿಸುತ್ತಿದ್ದೇನೆ, ವೀ ಜೆ ಪೀಟರ್ ಜೂನ್ ೧೯ ೧೯೩೭ ರಲ್ಲಿ ಜನಿಸಿದರು ಇವರು ತಮಿಳ್ನಾಡು ಮೂಲದವರೂ ಇವರ ಪೂರ್ಣ ಹಸರು ವಿಕ್ಟರ್ ಜಾನ್ ಪೀಟರ್ ಹಾಗೂ ಇವರ ತಮ್ಮ ವಿಜ ಫಿಲಿಪ್ಸ್ ಅವರು ಸಹ ಉನ್ನತ ಹಾಕಿ ಆಟಗಾರರಾಗಿದ್ದರು ಅವರು ಸಹ ದೇಶವನ್ನು ರಾಷ್ಟ್ರೀಯ ಮಟ್ಟ ಹಾಗೂ ಅಂತರಾಷ್ಟ್ರೀಯ ಮಟ್ಟದಲ್ಲಿ ಪ್ರತಿನಿಧಿಸಿದರು ಅವರು ಅವರ ಪಟ್ಟಣದಲ್ಲಿ ಹಾಕಿ ಆಟವನ್ನು ಆಡಲು ಪ್ರಾರಂಭಿಸಿದ್ದರು[೧]

ಕೆಲಸ[ಬದಲಾಯಿಸಿ]

ಅನಂತರ ಅವರು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಬೆಂಗಳೂರಿಗೆ ಬಂದ ನಂತರ ತಮ್ಮ ಮೊದಲ ಪಂದ್ಯದಲ್ಲಿ ಅವರು ಮೈಸೂರಿನ ಪ್ರತಿನಿಧಿಸಿದರು ಅವರು ಪಶ್ಚಿಮ ಆಫ್ರಿಕಾಗೆ ಭಾರತದ ತಂಡದ ಪರವಾಗಿ ಮೊದಲ ಭೇಟಿ ನೀಡಿದ ನಂತರ ೧೯೬೦,೧೯೬೪,೧೯೬೮ರಲ್ಲಿ ನಡೆದ ಒಲಂಪಿಕ್ ಪಂದ್ಯಗಳಲ್ಲಿ ಭಾರತವನ್ನು ಮುಂಚೂಣಿಯಲ್ಲಿ ಇರಿಸಿದರು ಬ್ಯಾಂಕಾಕ್ನ್ ಏಷ್ಯನ್ ಗೇಮ್ಸ್ ನಲ್ಲಿ ಭಾಗವಹಿಸಿದ ಭಾರತ ತಂಡದ ಸದಸ್ಯ ರಲ್ಲಿ ಒಬ್ಬರಾಗಿದ್ದರು ಹಾಗೂ ಆ ಪಂದ್ಯದಲ್ಲಿ ಚಿನ್ನದ ಪದಕವನ್ನು ಗೆದ್ದರು. ಇವರಿಗೆ ಒಂದು ಬೆಳ್ಳಿಯ ಪದಕ ಒಂದು ಕಂಚಿನ ಪದಕ ಹಾಗೂ ಚಿನ್ನದ ಪದಕ ಒಲಂಪಿಕ್ಸ್ ನಲ್ಲಿ ದೊರೆತಿದೆ ಹಾಗೂ ಇವರಿಗೆ ಏಷ್ಯನ್ ಗೇಮ್ಸ್ ಅಲ್ಲಿ ಒಂದು ಚಿನ್ನದ ಪದಕ ದೊರೆತಿದೆ ೧೯೬೦ರಲ್ಲಿ ರೋಮ್ ನಲ್ಲಿ ನಡೆದ ಸಮ್ಮರ್ ಒಲಂಪಿಕ್ಸ್ ನಲ್ಲಿ ಇವರು ಭಾರತವನ್ನು ಪುರುಷರ ಹಾಕಿಯಲ್ಲಿ ಪ್ರತಿನಿಧಿಸಿ  ಬೆಳ್ಳಿ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ ೧೯೬೪ರಲ್ಲಿ ಟೋಕಿಯೋ ದಲ್ಲಿ ನಡೆದ ಸಮ್ಮರ್ ಒಲಿಂಪಿಕ್ಸ್ ನಲ್ಲಿ ಭಾರತವನ್ನು ಪ್ರತಿನಿಧಿಸಿ ಪುರುಷರ ಹಾಕಿಗಾಗಿ ಚಿನ್ನದ ಪದಕವನ್ನು ಪಡೆದುಕೊಂಡಿದ್ದರು ೧೯೬೮ರಲ್ಲಿ ಮೆಕ್ಸಿಕೋ ಸಿಟಿಯಲ್ಲಿ ನಡೆದ ಭಾರತದ ಪ್ರತಿನಿಧಿಯಾಗಿ ಭಾಗವಹಿಸಿ ಮೂರನೇ ಸ್ಥಾನವನ್ನು ಪಡೆದು ಕೊಂಡಿದ್ದರು ಇವರು ೧೯೮೩ರಲ್ಲಿ ಕೋಚ್ ಆಗಿ ಕೆಲಸ ನಿರ್ವಹಿಸುತ್ತಿದ್ದರು ಹಾಗೂ ಇಂಜಿನಿಯರಿಂಗ್ ಕಾಲೇಜಿನಲ್ಲಿ ದೈಹಿಕ ಶಿಕ್ಷಕರಾಗಿ ಕೆಲಸ ನಿರ್ವಹಿಸಿದರು.ಸ್ಯಾಮ್ಯುಯೆಲ್ ಮ್ಯಾನ್ಯೂಯಲ್, ಗೋವಿಂದರಾಜು ರವರ ಜೊತೆ ಇವರು ಹೊಂದಾಣಿಕೆ ಶ್ಲಾಘನೀಯ.ಇವರು ಜೂನ್ ೩೦ ೧೯೯೮ರಲ್ಲಿ ಚೆನ್ನೈನಲ್ಲಿ ನಿಧನ ಹೊಂದಿದರು ಇವರ ಹೆಂಡತಿ ಶಾಂತಿ ಮೇರಿ ಹಾಗೂ ಇವರಿಗೆ ೫ ಮಕ್ಕಳಿದ್ದರು ಅವರ ನಿಧನವಾದ ನಂತರ ನೆಹರು ಹಾಕಿ ಟೂರ್ನಮೆಂಟ್ ಸೊಸೈಟಿ ಅವರಿಗೆ ಎರಡು ಲಕ್ಷ ರೂಗಳನ್ನು ಕೊಟ್ಟು ಸಹಕರಿಸಿತ್ತು ಭಾರತ ತಂಡದ ಹಾಕಿ ಕೋಚ ಮೋಹತ್ ರಿಯಾಜ್ ರವರು ಪೀಟರ್ ರವರ ನಿಧನವಾದ ನಂತರ  ಅವರ ಕುಟುಂಬಕ್ಕೆ ಸಹಾಯ ಮಾಡಿದ್ದರು ೧೯೬೮ರಲ್ಲಿ ನಡೆದ ಮೆಕ್ಸಿಕೋನಲ್ಲಿ ನಡೆದ ಒಲಂಪಿಕ್ಸ್ ನಲ್ಲಿ ಪೀಟರ್ ಅವರ ಜೊತೆ ಭಾಗಿಯಾಗಿದ್ದ ಗುರು ಬಾಕ್ಸಿಂಗ್ ಸಹಾಯ ಮಾಡಿದರು.[೨]

ಸಾಧನೆ[ಬದಲಾಯಿಸಿ]

ಪೀಟರ್ ಅವರನ್ನು ೧೯೬೭ರಲ್ಲಿ ಅರ್ಜುನ ಪ್ರಶಸ್ತಿ ಯನ್ನು ನೀಡಿ ಗೌರವಿಸಲಾಗಿತ್ತು ಇದು ಭಾರತ ಸರ್ಕಾರ ಉತ್ತಮ ಆಟಗಾರರಿಗೆ ನೀಡುವ ಪ್ರಶಸ್ತಿ ಇದನ್ನು ಗೆದ್ದವರಿಗೆ ೫ ಲಕ್ಷ ರೂಗಳನ್ನು ನೀಡಲಾಗುತ್ತದೆ ಹಾಗೂ ಅರ್ಜುನನ ಒಂದು ಕಂಚಿನ ಮೂರ್ತಿ ಮತ್ತು ಒಂದು ಸುತ್ತೋಲೆ ನೀಡಲಾಗುತ್ತದೆ ಪೀಟರ್ ಅವರು ಬದುಕಿದ್ದಾಗ ಭಾರತ ಸರ್ಕಾರವು ಎರಡು ಸಾವಿರ ರೂಗಳನ್ನು ಅರ್ಜುನ ಪ್ರಶಸ್ತಿ ಗೆದ್ದಿದ್ದ ರಿಂದ ಪ್ರತಿ ತಿಂಗಳು ನೀಡುತ್ತಿತ್ತು ಇವರನ್ನು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ಹಾಕಿ ಟೀಮಿನ ಎಂದೆ ಕರೆಯಲಾಗುತ್ತಿತ್ತು ಮದ್ರಾಸ್ ಇಂಜಿನಿಯರಿಂಗ್ ಗ್ರೂಪ್ ನ ಆಟದ ಮೈದಾನಕ್ಕೆ ಇವರ ಹೆಸರನ್ನು ಇಡಲಾಗಿದೆ.[೩]

ಕೊಡುಗೆ[ಬದಲಾಯಿಸಿ]

ಇವರು ತಮ್ಮ ಹಾಕಿ ಕ್ರೀಡೆಯನ್ನು ತಮ್ಮ ಮನೆ ಹತ್ತಿರ ಇರುವ ಮಕ್ಕಳಿಗೂ ಸಹ ಹೇಳಿ ಕೊಡುತ್ತಿದ್ದರು ಅವರು ಹಾಕಿ ಬ್ಯಾ ಟ ತರಲು ಹಣ ಸಾಲದೇ ಕಟ್ಟಿಗೆಯ ಬ್ಯಾಟು ಹಾಗೂ ಚಂಡು ಗಳನ್ನು ಬಳಸಿ ಆಟವನ್ನು ಹೇಳಿಕೊಡುತ್ತಿದ್ದರು ಇವರ ಈ ಕಾರ್ಯಕ್ಕೆ ಅವರ ತಮ್ಮನಾದ ವಿಜೆ ಪೀಟರ್ ಅವರು ಸಹ ಸಾಧನೆ ಮಾಡುತ್ತಿದ್ದರು.ಇವರು ಹಣವನು ಆಶಿಸದೆ ಆಟವನು ಮನಸಿನೋ೦ದಿಗೇ ಆಡಿದರು ಎ೦ಬ ಹಿರಿಮೆ ಎ೦ದಿಗೂ ಅಮರ.[೪]

ಉಲ್ಲೇಖ[ಬದಲಾಯಿಸಿ]

  1. https://timesofindia.indiatimes.com/.../hockey/.../hockey...arjuna-award/.../64013341.c... Retrieved 6 ಸೆಪ್ಟೆಂಬರ್ 2018. {{cite web}}: Missing or empty |title= (help)
  2. [hockeyindia.org/hall-of-fame-arjuna-award-2 hockeyindia.org/hall-of-fame-arjuna-award-2]. Retrieved 6 ಸೆಪ್ಟೆಂಬರ್ 2018. {{cite web}}: Check |url= value (help); Missing or empty |title= (help)
  3. https://timesofindia.indiatimes.com/.../hockey/.../hockey...arjuna-award/.../64013341.c... Retrieved 6 ಸೆಪ್ಟೆಂಬರ್ 2018. {{cite web}}: Missing or empty |title= (help)
  4. [hockeyindia.org/hall-of-fame-arjuna-award-2 hockeyindia.org/hall-of-fame-arjuna-award-2]. Retrieved 6 ಸೆಪ್ಟೆಂಬರ್ 2018. {{cite web}}: Check |url= value (help); Missing or empty |title= (help)