ಸದಸ್ಯ:Lohithn646/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Lohithn646/ನನ್ನ ಪ್ರಯೋಗಪುಟ
Titleಹೊಸ ಸಂಪ್ರದಾಯ ಪಂಥದ ಸಮಗ್ರ ಆರ್ಥಿಕ ವಿಶ್ಲೇಷಣೆ

ಹೊಸ ಸಂಪ್ರದಾಯ ಪಂಥದ ಸಮಗ್ರ ಆರ್ಥಿಕ ವಿಶ್ಲೇಷಣೆ ಸಾಂಪ್ರದಾಯಕ/ಸಂಪ್ರದಾಯ ಪಂಥದ ಅರ್ಥಶಾಸ್ತ್ರವು ನವೀನ ಅರ್ಥಶಾಸ್ತ್ರದ ಶಾಲೆಗೆ ಉಪಯೋಗಿಸುವ ಮತ್ತೊಂದು ಪದವಾಗಿದೆ.ಆಡೆಮ್ ಸ್ಮಿತ್ ಎನ್ನುವವರ "ದವೆಲ್ತ್ ಆಫ್ ನೇಷನ್ಸ್" ಎಂಬ ಪ್ರಕಟಣೆಯು ಈ ಅರ್ಥಶಾಸ್ತ್ರದ ಹುಟ್ಟು ಎಂದು ಭಾವಿಸಲಾಗಿದೆ.ಇದು ವ್ಯಾಪಾರವು ತನ್ನ ಸ್ವತಿದ್ದುಪಡಿ ಮಾಡಿಕೊಳ್ಳುವಲ್ಲಿ ಮತ್ತು ಸಂಪನ್ಮೂಲಗಳನ್ನು ವಿತರಣೆ ಮಾಡುವ ಬಗ್ಗೆ ಮಾಹಿತಿಯನ್ನು ನೀಡುತ್ತದೆ.ಎಲ್ಲಾ ನಾಗರಿಕರು ತಮ್ಮ ಆರ್ಥಿಕ ಚಟುವಟಿಕೆಯನ್ನು ವೃದ್ಧಿ ಮಾಡಿಕೊಳ್ಳುವುದೇ ಇದರ ಕೇಂದ್ರಬಿಂದುವಾಗಿದೆ.ಕಾರ್ಲ್ ಮಂಜರ್,ವಿಲಿಯಮ್ ಸ್ವಾನ್ ಲೀ ಜೆಮನ್ಸ್ ಮತ್ತು ಲಿಯೋನ್ ವಾಲಸ್ ಎನ್ನುವವರು ಹೊಸ ಸಂಪ್ರದಾಯ ಪಂಥದ ಆರ್ಥಿಕ ವಿಶ್ಲೇಷಣೆಗೆ ಪ್ರಮುಖ ಪಾತ್ರರಾಗಿರುವವರು ಡಿ ಜನರಲ್ ಧಿಯರಿಆಢ್ ಎಂಡ್ಲಾಯ್ ಮಂಟ್,ಇಂಟರೆಸ್ಟ್ ಅಂಡ್ ಮನಿ ಎಂಬ ಜಾನ್ ಮಾಯಾನಾರ್ಡ್ ಕೀನ್ಸ್ ರವರ ಪ್ರಕಟಣೆಯು ಹೊಸ ಸಂಪ್ರದಾಯ ಪಂಥದ ಕೆಲವೊಂದು ಅಭಿಪ್ರಾಯಗಳನ್ನು ಹಿಂಜರಿಸಿತು.

ಪೀಠಿಕೆ[ಬದಲಾಯಿಸಿ]

ಹೊಸ ಸಂಪ್ರದಾಯ ಪಂಥದ ಸಮಗ್ರ ಆರ್ಥಿಕ ವಿಶ್ಲೇಷಣೆ ಇದರ ವಿಭಜನೆ ಸಂಪೂರ್ಣವಾಗಿ ಹೊಸ ಸಂಪ್ರದಾಯದ ರಚನೆಯಮೇಲೆ ನಿಂತಿದೆ.ಇದು ಮುಖ್ಯವಾಗಿ ತರ್ಕಬದ್ದವಾದ ನಿರೀಕ್ಷಣೆಯ ಮೇಲೆ ತನ್ನ ಕಠಿಣವಾದ ತಳಪಾಯವನ್ನು ಹೊಂದಿದೆ.ಕೇನ್ಸರವರ ಆರ್ಥಿಕ ಚಿಂತನೆಯ ವಿಶ್ಲೇಷಣೆಯಲ್ಲಿ ಅವರ ವಿಚಾರಗಳಿಗೆ ಪ್ರತಿಯಾಗಿ ಮೂಡಿಬಂದ ವಿಷಯವೇ ಹೊಸ ಸಂಪ್ರದಾಯ ಪಂಥದ ಆರ್ಥಶಾಸ್ತ್ರ.ಈ ಪಂಥದ ಬಗ್ಗೆ ಅಧ್ಯಯನ ಮಾಡಿದವರು ಕೇನ್ಸ್ ಬಹಳ ಬಾವನೆಗಳನ್ನು ಅಥವಾ ಅವರ ಅಭಿಪ್ರಾಯಗಳನ್ನು ಒಪ್ಪಲಿಲ್ಲ.ಇದರ ಬದಲಿಗೆ ಅವರು ಸಂಪ್ರದಾಯ ಪಂಥದ ವಿಷಯಗಳಿಗೆ ಹೊಸರೂಪವನ್ನು ನೀಡಿ,ಅದಕ್ಕೆ ಸಂಬಂದಿಸಿದ ಕೆಲವು ಅಭಿಪ್ರಾಯಗಳನ್ನು ಪಕ್ಟವಾಗಿ ಅನುಸರಿಸಲು ಯತ್ನಿಸಿದರು.ಇದು ತನ್ನ ಚಿಂತನೆಯನ್ನು ಎಲ್ಲಾ ಆರ್ಥಿಕ ಚಟುವಟಿಕೆಗಳ ಹಾಗೂ ಆರ್ಥಿಕ ನಿರ್ವಹಣೆಯ ವಿಷಯಗಳ ಬಳಿಯೇ ಕೇಂದ್ರಿಯಗೊಂಡಿತ್ತು.ಆದ್ದರಿಂದ ಇದನ್ನು ಹೊಸ ಸಂಪ್ರದಾಯ ಪಂಥದ ಸಮಗ್ರ ಆರ್ಥಿಕ ವಿಶ್ಲೇಷಣೆ ಎಂದು ಕರೆಯಲಾಗಿದೆ.

ಹೊಸ ಸಂಪದಾಯ ಪಂಥದ ಪ್ರಮುಖ ಭಾವನೆಗಳು[ಬದಲಾಯಿಸಿ]

ಈ ಪಂಥದ ಪ್ರಮುಖ ಭಾವನೆಗಳು ೧೯೩೦ ರಿಂದ ೧೯೭೦ರ ವರೆಗೆ ಕೇನ್ಸರವರ ಅರ್ಥಿಕ ಚಿಂತನೆಯು ತನ್ನದೇ ಆದ ಪ್ರಾಮುಖ್ಯತೆಯನ್ನು ಕಂಡುಕೊಂಡಿತ್ತು.ಆದರೆ ಆನಂತರ ನಡೆದ ಕೆಲವು ಆರ್ಥಿಕ ಘಟನೆಗಳಿಂದ ಇವರ ಚಿಂತನೆಯು ಪ್ರಾಮುಖ್ಯತೆ ಕ್ಷೀಣವಾಗತೊಡಗಿತು.ಆರ್ಥಿಕತೆಯ ಸ್ಥಿಮಿತತೆ,ಅಭಿವೃಧಿ ಹಾಗೂ ನಿರ್ವಹಣೆಗೆ ಕೇನ್ಸರವರ ಚಿಂತನೆಯು ಸರಿಹೊಂದದ್ದು ಎಂದು ಹೊಸ ಸಂಪ್ರದಾಯ ಪಂಥದ ಆರ್ಥಿಕ ಚಿಂತಕರು ಪ್ರತಿವಾದಿಸಿದರು.೧೯೭೦ ರಿಂದಲೂ ಅಮೇರಿಕ ಸೇರಿದಂತೆ ಹಲವಾರು ದೇಶಗಳಲ್ಲಿ ನಿರುದ್ಯೋಗದ ಸಮಸ್ಯೆ ಕಾಣತೊಡಗಿತು.ಇದರ ಜೊತೆಗೆ ಆತಿಪ್ರಸರಣದ ಪ್ರಮಾಣವೂ ಅಧಿಕವಾಯಿತು.ಅಧಿಕದರವೇ ಕೂಡಿದ ನಿರುದ್ಯೊಗ ಸಮಸ್ಯೆಯನ್ನು ಎದುರಿಸಲು ಕೇನ್ಸರವರ ವಿಚಾರಗಳು ವಿಫಲವಾದವು.ಇದರ ಜೊತೆಗೆ ಬಂದ ಮತ್ತೊಂದು ಮುಖ್ಯ ಸಮಸ್ಯೆಯೇ ಜಡದುಬ್ಬರ.ಉತ್ಪಾದನೆ ಹೆಚ್ಚಾಗದೆ ಜಡವಾಗಿ ಉಳಿಯುವ ಹಾಗೂ ಅತಿಪ್ರಸರಣದ ದರವು ಅಗಾಧವಾಗಿ ಹೆಚ್ಚುವ ಸ್ಥಿತಿಯೇ ಜಡದುಬ್ಬರ.ಇಂಥಹ ಸಮಯದಲ್ಲಿ ಉತ್ಪಾದನೆಯ ಜಡತ್ವ ಹಾಗೂ ಹಣದ ಹೆಚ್ಚಳ ಕಂಡು ಬರುತ್ತದೆ.ಇದನ್ನು ಎದುರಿಸುವಲ್ಲಿಯೂ ಕೇನ್ಸರ ವಿಚಾರಗಳು ವಿಫಲವಾದವು.ಕೇನ್ಸರ ವಿಚಾರ/ಸಿದ್ದಾಂತದಲ್ಲಿ ಕೆಲವು ಮೂಲಭೂತ ದೋಷಗಳಿವೆ ಎಂದು ಹೊಸ ಸಂಪ್ರದಾಯದ ತಜ್ಜರು ನಿರ್ಧರಿಸಿದರು.ಇವರು ಹಣಕಾಸಿನ ನಿರ್ವಹಣೆಗೆ ಪ್ರಾಮುಖ್ಯತೆಯನ್ನು ನೀಡಿದರು ನಮ್ಮ ದೇಶದಲ್ಲಿ ಕಾಣುವ ಹಣದ ಏರಿಳಿತಗಳು ಹಲವು ದೇಶೀಯ ಉತ್ಪನ್ನಗಳು ಹಾಗೂ ಬೆಲೆಏರಿಳಿತಗಳಿಗೆ ಕಾರಣ ಎಂದು ತಿಳಿಸಿದರು.ಹಾಗೂ ಸರಿಯಾದ ಹಣಕಾಸಿನ ಕ್ರಮಗಳಿಂದ ಆರ್ಥಿಕ ವಿಚಾರದಲ್ಲಿ ಸ್ಥಿರತೆಯನ್ನು ಹೊಂದಬಹುದು.ಎಂದು ತಿಳಿಸುವುದೇ ಆಧುನಿಕ ಹಣಕಾಸತ್ವ ಬೆಡಿಕೆಯನ್ನು ನಿರ್ವಹಿಸುವ ಬದಲಾಗಿ ಸರಕುಗಳನ್ನು ವೂರೈಸುವಲ್ಲಿ ನಿರುದ್ಯೊಗ ಹಾಗೂ ಅತಿಪ್ರಸರಣದ ಸಮಸ್ಯೆಯು ಸ್ಥಿಮಿತತೆಯನ್ನು ಕಾಪಾಡಿಕೊಳ್ಳುತ್ತದೆ ಎಂದು ಭಾವಿಸಿದರು.ಆದ್ದರಿಂದ ಇದನ್ನು ಪೂರೈಕೆ ಭಾಗದ ಅರ್ಥಶಾಸ್ತ್ರ ಎಂದು ಕರೆಯುತ್ತಾರೆ.ಹೊಸ ಸಂಪ್ರದಾಯ ಪಂಥದ ಆರ್ಥಿಕ ಚಿಂತನೆಯನ್ನು ಪ್ರತಿಪಾದಿಸಿದ ಪ್ರಮುಖ ಆರ್ಥಿಕ ಚಿಂತೆಕರೆಂದರೆ ರಾಬರ್ಟ್ ಲ್ಯುಕಾಸ್,ನೈಲ್ ವ್ಯಾಲೇಸ್,ಆರ್.ಎಂ.ಸೋಲೋ,ರಾಬರ್ಟ್ ಬ್ಯಾರೋ,ಥಾಮಸ್ ಸಾರ್ಜೆಂಟ್,ಬಿ.ಮಕ್ ಕ್ಯಾಲಮ್,ಮುಂತಾದವರು.ಜೆ.ಎಂ.ಕೇನ್ಸರ ವಿಚಾರಗಳ ಪ್ರಬಲ ನಿರಾಕರಣೆಯ ರೂಪದಲ್ಲಿ ಮೂಡಿಬಂದ ಈ ಚಿಂತನೆಯನ್ನು ಹೊಸ ಸಂಪ್ರದಾಯ ಪಂಥದ ಸಮಗ್ರ ಅರ್ಥಶಾಸ್ತ್ರ ಆಧುನಿಕ ಹಣಕಾಸತ್ವ ಹಾಗೂ ಪೂರೈಕೆ ಭಾಗದ ಅರ್ಥಶಾಸ್ತ್ರ ಎಂಬ ಹೆಸರುಗಳಿಂದ ಕರೆಯಲಾಗಿದೆ.ಹೊಸ ಸಂಪ್ರಧಾಯ ಪಂಥದ ಪ್ರಮುಖ ಭಾವನೆಗಳನ್ನು ಸಂಕ್ಷಿಪ್ತವಾಗಿ ವಿವರಿಸಲಾಗಿದೆ.

ಪ್ರಮುಖ ಭಾವನೆಗಳು[ಬದಲಾಯಿಸಿ]

೧.ಪೂರೈಕೆ ಭಾಗದ ಅರ್ಥಶಾಸ್ತ್ರ ಇದರ ಮುಖ್ಯ ಉದ್ದೇಶವೇ ಅತಿಪ್ರಸರಣ ಹಾಗೂ ನಿರುದ್ಯೋಗವನ್ನು ಕಡಿಮೆಮಾಡುವುದು ಸರಕುಗಳ ಉತ್ಪಾದನೆಯನ್ನು ಹೆಚ್ಚಿಸುವುದರಿಂದ ಮಾರುಕಟ್ಟೆಗಳಲ್ಲಿ ಇದರ ಕೊರತೆ ಕಡಿಮೆಯಾಗಿ ಹಣದುಬ್ಬರ ಕಡಿಮೆಯಾಗುತ್ತದೆ ಎಂದು ಕಂಡುಬಂದಿದೆ.ಹಾಗೂ ಉತ್ಪಾದನೆ ಹೆಚ್ಚಾಗುವುದರಿಂದ ನಿರುದ್ಯೋಗವು ಕಡಿಮೆಯಾಗುತ್ತದೆ ಎಂದು ಆರ್ಥಿಕ ತಜ್ಜರು ವಾದಿಸಿದ್ದಾರೆ.೨.ವೈಚಾರಿಕ ನಿರೀಕ್ಷೆಗಳು ಇದರ ಮುಖ್ಯ ವಿಚಾರವೆಂದರೆ ಜನರ ನಿರೀಕ್ಷೆಗಳು.ಒಂದು ವೇಳೆ ಸಿಗುವ ಎಲ್ಲಾ ವಿಚಾರವನ್ನು ಆಧಾರಿಸಿದ್ದರೆ ಅವು ವೈಚಾರಿಕ ವಾಗುತ್ತದೆ ಎಂದು ಅರ್ಥ ಮಾರುಕಟ್ಟೆಯಲ್ಲಿ ಸಿಗುವ ಮಾಹಿತೆಗಳನ್ನು ಜವಬ್ದಾರಿಯುತವಾಗಿ ಬಳಸಿ ಭವಿಷ್ಯದಲ್ಲಿ ಏನಾಗ ಬಹುದೆಂದು ಚಿಂತಿಸಿ ನಿರ್ಧಾರವನ್ನು ತೆಗೆದುಕೊಳ್ಳುತ್ತಾರೆ.ಉದಾಹರಣೆಗೆ ವಸ್ತುವಿನ ಬೆಲೆ ಕಡಿಮೆ ಇದ್ದಾಗ ಜನರು ಹೆಚ್ಚಿನ ಪ್ರಮಾಣದಲ್ಲಿ ಖರೀದಿಸುತ್ತಾರೆ ಎಂಬುದು ಮುಖ್ಯವಾದ ವಿಷಯವಾಗಿದೆ.೩.ಬೇಡಿಕೆಯ ನಿರ್ವಹಣೆಯ ನಿರರ್ಥಕತೆ ಕೇನ್ಸರವರು ಒಂದು ವಸ್ತುವಿನ ಬೇಡಿಕೆಯನ್ನು ಹೆಚ್ಚಿಸುವುದರಿಂದ ನಿರುದ್ಯೋಗ ಹಾಗೂ ಹಲವಾರು ಸಮಸ್ಯೆಗಳನ್ನು ಕಡಿಮೆಮಾಡುವುದರ ಬಗ್ಗೆ ಚಿಂತಿಸಿದ್ದರು.ಆದರೆ ಅದು ಯಾವುದೇ ರೀತಿಯಲ್ಲಿ ಸರಿಯಾದುದಲ್ಲ ಎಂದುಸಮಗ್ರ ಹೊಸ ಪಂಥದ ಚಿಂತಕರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.೪.ಶ್ರಮದ ಬೇಡಿಕೆ ಮತ್ತು ಪೂರೈಕೆ ಸಮತೋಲನ ಇದರ ಮುಖ್ಯ ಸಾರಾಂಶವೆಂದರೆ ಕೂಲಿದರ ದಲ್ಲನ ಬದಲಾವಣೆಗಳು ಶ್ರಮದ ಬೇಡಿಕೆ ಹಾಗೂ ಪೂರೈಕೆಯ ನಡುವೆ ಹೊಂದಾಣಿಕೆ ತಂದು ಎರಡನ್ನೂ ನಿಯಂತಿಸುತ್ತದೆ ಎಂದು ಹೊಸ ಸಂಪ್ರದಾಯದ ಪಂಥದ ಆರ್ಥಿಕ ತಜ್ಜರು ವಾದಿಸಿದ್ದಾರೆಂದು ತಿಳಿಸುತ್ತದೆ.೫.ಸರ್ಕಾರದ ಮಧ್ಯ ಪ್ರವೇಶಿಕೆ ರಹಿತ ನೀತಿ ಬೇಡಿಕೆಯಲ್ಲಿನ ಬದಲಾವಣೆಗಳು ಉತ್ಪದನೆ ಹಾಗೂ ಉದ್ಯೋಗದ ಮೇಲೆ ಯಾವುದೇ ರೀತಿಯ ದುಷ್ಟಪರಿಣಾಮ ಬೀರದೆ ಇರುವುದರಿಂದ ನಿರ್ವಹಣೆಯ ನೀತಿಗಳು ಮಹತ್ವವನ್ನು ಕಳೆದುಕೊಳ್ಳುತ್ತದೆ.ಇದರಲ್ಲಿ ಸರ್ಕಾರವು ಮಧ್ಯ ಪ್ರವೇಶ ಮಾಡಬಾರದೆಂದು ಚಿಂತಕರು ವಾದಿಸಿದ್ದಾರೆ.೬.ಬೆಲೆ ಹೆಚ್ಚಳದ ತೀವ್ರತೆ ಉತ್ಪಾದನೆಯು ಹಣದ ಪೂರಿಕೆಯ ಹೆಚ್ಚುವರಿಯಿಂದ ಬೆಳವಣಿಗೆಳನ್ನು ಕಾಣುತ್ತದೆ ಎಂದು ಕೇನ್ಸ ಹೇಳಿದ್ದರು.ಈ ವಿಚಾರವನ್ನು ಹೊಸ ಸಂಪ್ರದಾಯ ಚಿಂತಕರ ಪ್ರಕಾರ ಹಣದ ಪೂರೈಕೆಯ ಹೆಚ್ಚುಳವು ಉತ್ಪಾದನೆಯನ್ನು ಅಧಿಕ ಗೊಳಿಸುವುದಕ್ಕಿತಲೂ ಹೆಚ್ಚಿನ ಪ್ರಮಾಣದಲ್ಲಿ ಬೆಲೆ ಹೆಚ್ಚಳಕ್ಕೆ ಕಾರಣ ವಾಗುತ್ತದೆ ಎಂದು ಹೇಳಿದ್ದರೆ.೭.ಹಣಕಾಸಿನ ಕ್ರಮಗಳ ಪ್ರಾಮುಖ್ಯತೆ ಹಣದ ಪೂರೈಕೆಯ ವಿಷಯದಲ್ಲಿ ಆಗುವ ಏರಿಳಿತಗಳು ರಾಷ್ಟ್ರೀಯ ಉತ್ಪನ್ನ ಹಾಗೂ ಬೆಲೆಗಳಲ್ಲಿ ಏರಿಳಿತಗಳಿಗೆ ಪ್ರಮುಖ ಕಾರಣವು ಎಂದು ವಾದಿಸಿದ್ದಾರೆ ಆರ್ಥಿಕ ವ್ಯವಸ್ಥೆಯಲ್ಲಿ ಸ್ಥಿರತೆಯನ್ನು ಸಾಧಿಸಲು ಪಾಲಿಸುವ ಹಣಕಾಸಿನ ಕ್ರಮಗಳಿಗೆ ಆಧುನಿಕ ಹಣಕಾಸತ್ವ ಎಂದು ಕರೆಯಲಾಗುತ್ತದೆ.

ಪೂರೈಕೆ ಭಾಗದ ಅರ್ಥಶಾಸ್ತ್ರದ ಪ್ರಮುಖ ಸೈದ್ದಾಂತಿಕ ಪ್ರಸ್ತಾವನೆಗಳು[ಬದಲಾಯಿಸಿ]

೧.ತೆರಿಗೆ ಮತ್ತು ಶ್ರಮದ ಪೂರೈಕೆ ಇದರ ಮುಖ್ಯ ವಿಶೇಷಣೆ ಎನೆಂದರೆ ತೆರೆಗೆಯ ದರದಲ್ಲಿ ಕಡಿತವಿದ್ದರೆ ಶ್ರಮದ ಪೂರೈಕೆ ಹಾಗೂ ಬೇಡಿಕೆಯನ್ನು ಕಡಿಮೆಮಾಡುತ್ತದೆ.ಹೆಚ್ಚಿದ ತೆರಿಗೆಯಿಂದ ಜನರಿಗೆ ದೊರೆಯುವ ಆದಾಯದಲ್ಲಿ ಕುಗ್ಗು ಕಂಡುಬರುತ್ತದೆ ಇದರಿಂದ ಜನರು ಕೆಲಸ ಮಾಡುವ ಆಸಕ್ತಿಯನ್ನು ಕಳೆದುಕೊಳ್ಳುತ್ತಾರೆ ಹಾಗೂ ಉತ್ಪನ್ನಗಳ ಬೇಡಿಕೆಯು ಕಡಿಮೆಯಾಗುತ್ತದೆ.ಆದ್ದರಿಂದ ಆದಷ್ಟು ತೆರಿಗೆಯ ದರ ಕಡಿಮೆಯಾದಲ್ಲಿ ಜನರಿಗೆ ದುಡಿಯುವ ಶ್ರಮದ ಪೂರೈಯು ಹಾಗೂ ಕೆಲಸ ಮಾಡುವ ಉತ್ಪೇದನ ದೊರೆಯುತ್ತದೆ ಎನ್ನುವುದೆ ಇದರ ಮುಖ್ಯ ಸಾರಾಂಶ.೨.ತೆರಿಗೆ ಕಡಿತದಿಂದ ಉಳಿತಾಯ ಮತ್ತು ಹೊಡಿಕೆಗೆ ಪ್ರೇರಣೆ ಇದರ ಪ್ರಕಾರ ತೆರಿಗೆ ದರವು ಕಡಿಮೆಯಾದರೆ ಅದಕ್ಕೆ ತಕ್ಕಂತೆ ಮನುಷ್ಯನ ಉಳಿತಾಯ ಮತ್ತು ಹೂಡಿಕೆಗಳು ಹೆಚ್ಚಾಗುತ್ತದೆ.ಉದಾಹರಣೆಗೆ ಒಬ್ಬ ಮನುಷ್ಯನ ಆದಾಯ ೧೦೦೦೦ರದಲ್ಲಿ ಶೇಕಡ ೧೦ ರಷ್ಟು ಬಡ್ಡಿದರದಲ್ಲಿ ಸಾಲ ನಿಡಿದರೆ ವರ್ಷದಲ್ಲಿ ಅವನು ೧೦೦೦ ರೂಪಾಯಿಗಳ ಆದಾಯ ಗಳೀಸುತ್ತಾನೆ ಇದರಲ್ಲಿ ಶೇಕಡ ೫೦ರಷ್ಟು ತೆರಿಗೆ ಪಾವತಿಸಿದರೆ ೫೦೦ ರೂಪಾಯಿ ಲಾಭಗಳಿಸುತ್ತಾನೆ ಆದರೆ ದರವು ೬೦ ಶೇಕಡ,೭೦ ಶೇಕಡ ದರ ಹೆಚ್ಚುತ್ತಾ ಹೋದರೆ ಆದಾಯ ಕಡಿಮೆಯಾಗಿ ಮನುಷ್ಯನ ಗಳಿಕೆಯು ಕುಗ್ಗುತ್ತದೆ.ಇದು ಮನುಷ್ಯನ ಉಳಿತಾಯ ಮಾಡಿ ಹೂಡಿಕೆಯನ್ನು ಕೈಗೊಳ್ಳಲು ಸಾಧ್ಯವಾಗುವುದಿಲ್ಲ.ಆದ್ದರಿಂದ ತೆರಿಗೆಯ ದರವನ್ನು ಆದಷ್ಟು ಕಮ್ಮಿ ಮಾಡಬೇಕೆಂಬುದು ಹೊಸ ಸಂಪ್ರದಾಯ ಪಂಥದ ಆರ್ಥಿಕ ತಜ್ಜರು ತಿಳಿಸಿದ್ದಾರೆ.೩.ತೆರಿಗೆ ಕಡಿತದ ಮೂಲಕ ಸಮಗ್ರ ಪೂರೈಕೆಗೆ ಹೆಚ್ಚಳ ತೆರಿಗೆ ದರವನ್ನು ಕಡಿಮೆ ಮಾಡುವುದರಿಂದ ಶ್ರಮದ ಪೂರೈಕೆ,ಬಂಡವಾಳದ ಪೂರೈಕೆ,ವಿಸ್ತಾರವಾಗಿ ಎಲ್ಲಾರೀತಿಯ ಪೂರೈಕೆಯು ಸಹಜವಾಗಿ ಹೆಚ್ಚಾಗುತ್ತದೆ ಎಂಬ ಭಾವನೆಯನ್ನು ವ್ಯಕ್ತಪಡಿಸುತ್ತದೆ.

ಟೀಕೆಗಳು[ಬದಲಾಯಿಸಿ]

೧.ತೆರಿಗೆ ಕಡಿತವು ಕೆಲಸದ ಪ್ರಯತ್ನವನ್ನು ಹೆಚ್ಚಿಸಲಾರದು ಇದರಲ್ಲಿ ಪ್ರೋತ್ಸಾಹಕ ಪರಿಣಾಮಗಳನ್ನು ಬೀರಲಾರದು ಎಂದು ಟೀಕಾಕಾರರು ಹೇಳಿದ್ದಾರೆ.ಅವರ ಪ್ರಕಾರ ತಾವು ಬಯಸುವ ಸರಕುಗಳನ್ನು ಮತ್ತು ಸೇವೆಗಳನ್ನು ಕೊಳ್ಳಲು ಒಂದು ನಿರ್ಧಿಷ್ಟ ಮಟ್ಟದ ಆದಾಯಗಳಿಕೆಯನ್ನು ಗುರಿಯಾಗಿಟ್ಟು ಕೊಂಡಿರುವ ಜನರು ಅಷ್ಟು ಆದಾಯವನ್ನು ಗಳಿಸಲು ಎಷ್ಟು ಕೆಲಸ ಮಾಡಬೇಕೋ ಅಷ್ಟು ಅವಧಿಯ ಕೆಲಸವನ್ನು ಮಾತ್ರ ಮಾಡುತ್ತಾರೆ.೨.ಉಳಿತಾಯ ಮತ್ತು ಹೊಡಿಕೆಯನ್ನು ಪ್ರೇರೇಪಿಸುವುದಿಲ್ಲ ತೆರಿಗೆಯ ಕಡಿತವು ಉಳಿತಾಯ ಮತ್ತು ಹೂಡಿಕೆಯ ಪ್ರಯತ್ನಗಳ ಮೇಲೆ ಅನುಕೂಲಕರ ಪರಿಣಾಮಗಳನ್ನು ಬೀರಲು ವಿಫಲಗೊಳುತ್ತದೆ ಎಂದು ಟೀಕಾಕಾರರು ಪ್ರತಿಪಾದಿಸುತ್ತಾರೆ.ಅವರ ಪ್ರಕಾರ ತೆರಿಗೆ ಕಡಿತವು ಕೆಲವು ಜನರನ್ನು ಹೆಚ್ಚಿಗೆ ಉಳಿತಾಯ ಮತ್ತು ಹೂಡಿಕೆ ಮಾಡಲು ಉತ್ತೇಜಿಸಿದರೆ ಮತ್ತೆ ಕೆಲವರನ್ನು ಕಡಿಮೆ ಉಳಿತಾಯ ಮತ್ತು ಹೂಡಿಕೆಗೆ ಸಂತೃಪ್ತರಾಗುವಂತೆ ಮಾಡುತ್ತದೆ.೩.ಮುಂಗಡ ಪತ್ರದಲ್ಲಿನ ಕೊರತೆಯ ಹೆಚ್ಚಳ ಪೂರೈಕೆ ಭಾಗದ ಆರ್ಥಿಕ ತಜ್ಜರು ತೆರಿಗೆ ಕಡಿತದಿಂದ ಆಯವ್ಯಯ ಕೊರತೆಯನ್ನು ತಗ್ಗಿಸಲು ಸಾಧ್ಯ ಎಂಬ ಅಭಿಪ್ರಾಯವನ್ನು ವ್ಯಕ್ತಪಡಿಸುತ್ತಾರೆ.ಅವರ ಪ್ರಕಾರ ತೆರಿಗೆ ಕಡಿತವು ಮುಂಗಡ ಪತ್ರದ ಕೊರತೆಯನ್ನು ಕಡಿಮೆ ಮಾಡುವ ಬದಲು ಹೆಚ್ಚಿಸುತ್ತದೆ.೪.ಅಸಮಾನತೆಗಳ ಹೆಚ್ಚಳ ಪೂರೈಕೆ ಭಾಗದ ಆರ್ಥಿಕತಜ್ಜರ ಪ್ರಕಾರ ತೆರಿಗೆಯ ಕಡಿತವು ಆದಾಯದ ವಿತರಣೆಯಲ್ಲಿ ಅಸಮಾನತೆಗಳನ್ನು ಹೆಚ್ಚಿಸಬಹುದು ಎಂದು ಪ್ರತಿಪಾದಿಸಿದ್ದಾರೆ.ಪೂರೈಕೆ ಭಾಗದ ಅರ್ಥಶಾಸ್ತ್ರವು ಹೆಳುವಂತೆ ತೆರಿಗೆಗಳ ದರಗಳನ್ನು ಕಡಿಮೆ ಮಾಡಿದಾಗ ಶ್ರೀಮಂತವರ್ಗದ ಜನರಿಗೆ ಇನ್ನೂ ಅನುಕೂಲವಾಗುತ್ತದೆ.೫.ಅವಾಸ್ತವಿಕ ಪ್ರಸ್ತಾಪಗಳು ಪೂರೈಕೆ ಭಾಗದ ಆರ್ಥಿಕ ತಜ್ಜರು ತೆರಿಗೆದರದ ಹೆಚ್ಚಳವು ಜನರು ಭೂಗತ ಅರ್ಥವ್ಯವದ್ಥೆಯಲ್ಲಿ ತೊಡಗಲು ಉತ್ತೇಜಿಸುತ್ತದೆ ಎಂಬ ಪ್ರಸ್ತಾಪವು ಅವಾಸ್ತವಿಕವೆನಿಸಿದೆ.ಏಕೆಂದರೆ ಟೀಕಾಕಾರರ ದೃಷ್ಟಿಯಲ್ಲಿ ಕೆಲವು ಸಲ ತೆರಿಗೆ ದರದ ಹೆಚ್ಚಳ ವಿಲ್ಲದಿದ್ದರೂ ಕೂಡ ಗರಿಷ್ಟ ಲಾಭ ಪಡೆಯುವ ಉದ್ದೇಶದಿಂದ ಭೂಗತ ಅರ್ಥವ್ಯವಸ್ಥೆಯಲ್ಲಿ ಜನರು ತೊಡಗುವ ಸಂಭವವಿದೆ.[೧],[೨]

ಉಲ್ಲೇಖನಗಳು[ಬದಲಾಯಿಸಿ]