ಸದಸ್ಯ:Letisha Thomas/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜಾನ್ ಆರ್.ಹಿಕ್ಸ್: ಜಾನ್ ಹಿಕ್ಸ್ ಅವರಿಗೆ ೧೯೭೨ರಲ್ಲಿ ನಾಲ್ಕನೆಯ ನೊಬೆಲ್ ಪಾರಿತೋಷಕ ನೀಡಲಾಗಿದೆ. ಇದನ್ನು ಅವರು ಪ್ರೊ. ಕೆನ್ನತ್ ಆರೊ ಅವರೊಡನೆ ಹಂಚಿಕೊಂಡಿದ್ದಾರೆ. ಹಿಕ್ಸ್ ಅರ್ಥಶಾಸ್ತ್ರಕ್ಕೆ ನೀಡಿದ ಅತ್ಯಂತ ಮಹತ್ವದ ಕೊಡುಗೆಗಳಾದ ಸಾರ್ವತ್ರಿಕ ಸಮತೋಲನ ಸಿದ್ದಾಂತ ಮತ್ತು ಯೋಗಕ್ಷೇಮ ಸಿದ್ದಾಂತ ಇವುಗಳಿಗೆ ನೊಬೆಲ್ ಪ್ರಶಸ್ತಿ ನೀಡಲಾಗಿದೆ. ಹಿಕ್ಸ್ ಅವರ ಜನನ ೧೯೦೪ರಲ್ಲಿ ವಾರ್ವಿಕ್ ಎಂಬಲ್ಲಾಯಿತು. ಶಿಕ್ಷಣ ಅಕ್ಸ್ ಫರ್ಡ್ ವಿಶ್ವವಿದ್ಯಾನಿಲಯದಲ್ಲಾಯಿತು. ಲಂಡನ್ ಸ್ಕೂಲ್ ಆಫ್ ಎಕನಾಮಿಕ್ಸ್ ನಲ್ಲಿ ಅಧ್ಯಾಪಕ ವೃತ್ತಿ ಪ್ರಾರಂಭಿಸಿದರು. ಅನಂತರ ಕೇಂಬ್ರಿಡ್ಜ್ ಮತ್ತು ಮ್ಯಾಂಚೆಸ್ಟರ್ ವಿಶ್ವವಿಧ್ಯಾನಿಲಯಗಳಲ್ಲಿ ಸೇವೆ ಸಲ್ಲಿಸಿದರು. ಅನೇಕ ಅಕ್ಯಡೆಮಿಗಳಲ್ಲಿ ಸದಸ್ಯತ್ವ. ೧೯೬೫ರಲ್ಲಿ ನಿವೃತ್ತಿ ಹೊಂದಿದರು. ಹಿಕ್ಸ್ ಅವರ ಬಹುಮುಖ ಸೇವೆಯನ್ನು ಪರಿಗಣಿಸಿ ೧೯೦೪ರಲ್ಲಿ ಬ್ರಿಟಷ್ ಸರ್ಕಾರವು ಅವರಿಗೆ 'ಸರ್' ಎಂಬ ಬಿರುದನ್ನು ನೀಡಿ ಗೌರವಿಸಿತು. ಹಿಕ್ಸ್ ಪ್ರಪಂಚ ಲೇಖಕ ಹಾಗೂ ಚಿಂತಕ.ಅವರು ಅನೇಕ ಸಂಶೋಧನ ಲೇಖಕನಗಳನ್ನು ಮತ್ತು ಹೆಸರಾಂತ ಗ್ರಂಥಗಳನ್ನು ಪ್ರಕಟಿಸಿದ್ದಾರೆ.ಅವುಗಳಲ್ಲಿ ಅವರ ಮೇರುಕೃತಿಗಳೆಂದರೆ.ಇವರು ಮುಂತಾದ ಕೃತಿಗಳನ್ನು ಬರೆದಿದಾರೆ.ಹಿಕ್ಸ್ ತಮ್ಮ ಆರ್ಥಿಕ ಚಿಂತನೆಯಲ್ಲಿ ಗಣತೀಯ ಸೂತ್ರಗಳನ್ನು ವ್ಯಾಪಕವಾಗಿ ಬಳಸಿದ್ದಾರೆ.ಅದರ ಜೊತೆಗೆ ಅವುಗಳನ್ನು ತೀವ್ರವಾಗಿ ಪರಿಗಣಿಸಬೇಕೆಂದು ಸಲಹೆ ಮಾಡಿದ್ದಾರೆ.ಹಿಕ್ಸ ಅವರ ಚಿಂತನೆಯ ಮೇಲೆ ಆಧುನಿಕ ಅರ್ಥಶಾಸ್ರ್ತರ ವಿಚಾರಗಳು ಗಮನಾರ್ಹವಾದ ಪ್ರಭಾವ ಬೀರಿವೆ.ಇವರ ಮೌಲ್ಯ ಸಿದ್ದಾಂತದ ವಿಚಾರಗಳು ರಷ್ಯಾದ ಅರ್ಥಶಾಸ್ರ್ತ ಸ್ಲಟ್-ಸ್ಕಿ ಅವರ ಲೇಖನಗಳಿಂದ ಪ್ರಭಾವಿತವಾಗಿವೆ.ವರಮಾನ ಮತ್ತು ನಿರೀಕ್ಷೆಗಳಿಗೆ ಸಂಬಂಧಿಸಿದ ವಿಚಾರಗಳನ್ನು ಸ್ವೀಡನ್ನಿನ ಗುನ್ನಾರ್ ಮಿರ್ಡಲ್ ಮತ್ತು ಲಿಂಡಾಲ್ ಅವರುಗಳಿಂದ ಪಡೆದುಕೊಂಡಿದ್ದಾರೆ.ಅವರ ಆರ್ಥಕಾಭಿವೃದ್ಧಿಗೆ ಸಂಬಂಧಿಸಿದ ವಿಚಾರಗಳಿಗೆ ಮಾರ್ಷಲ್,ಸ್ಮಿತ್ ಮತ್ತು ರಿಕಾರ್ಡೊ ಅವರ ವಿಚಾರಗಳು ಒತ್ತು ಕೊಟ್ಟಿವೆ.ಕಾರ್ಮಿಕರ ಕೂಲಿಯ ಬಗ್ಗೆ ಪಿಗು ಮತ್ತು ಜೆ.ಬಿ.ಕ್ಲಾರ್ಕ್ ಅವರ ಚಿಂತನೆಗಳಿಂದ ಪ್ರಭಾವಿತರಾಗಿದ್ದಾರೆ. ಆರ್ಥಕ ವಿಚಾರಗಳು: ಹಿಕ್ಸ್ ಮೂಲತಃ ಸಾರ್ವತ್ರಿಕ ಸಮತೋಲನ ವಿಶ್ಲೇಷಣೆಯ ಅರ್ಥಶಸ್ರ್ತ.ಆರ್ಥಿಕ ಚಿಂತನೆಯ ಇತಿಹಾಸದಲ್ಲಿ ಅವು ಮಹತ್ವದ ಸ್ಥಾನ ಪಡೆದಿವೆ.ಅವು ಈ ಮುಂದಿನಂತಿವೆ.ಕಲ್ಯಾಣ ಅರ್ಥಶಾಸ್ರ್ತಕ್ಕೆ ಸಂಬಂಧಿಸಿದಂತೆ ಹಿಕ್ಸ ತನಗಿಂತ ಮೊದಲೆ ಮಂಡಿಸಲ್ಪಟ್ಟದ್ದ ಪೆರಿಟೊಅವರ ವಿಚಾರಗಳನ್ನು ಕೆಲಮಟ್ಟಿಗೆ ಸ್ವೀಕರಿಸಿ ಅವುಗಳನ್ನು ಪರಿಷ್ಕರಿಸುವ ಪ್ರಯತ್ನ ಮಾಡಿದ್ದಾನೆ."ಯಾವೊಬ್ಬ ವ್ಯಕ್ತಿಯ ಪರಿಸ್ಥಿತಿಯು ಕ್ಷೀಣಿಸದೆ ಮತ್ತೊಬ್ಬ ವ್ಯಕ್ತಿಯ ಪರಿಸ್ಥಿತಿಯನ್ನು ಉತ್ತಮ ಗೊಳಿಸುವುದು ಸಾಧ್ಯವಿಲ್ಲ "ಎಂಬ ಪೆರಿಟೊ ಅವರ ಸಿದ್ದಾಂತವನ್ನು ವಿಸ್ತರಿಸುವುದರ ಮೂಲಕ ಹಿಕ್ಸ್ "ಪರಿಹಾರ ತತ್ವ"ವನ್ನು ರೂಪಿಸಿದ್ದಾನೆ.ವಿನಿಮಯ ಕಾರ್ಯದಿಂದ ಎರಡು ಪಕ್ಷದವರು ಪ್ರಯೋಜನ ಪಡೆದು ಕೊಳ್ಳುವ ಸಾಧ್ಯತೆ ಇದೆ ಎಂಬ ಅಭಿಪ್ರಾಯವನ್ನು ಹಿಕ್ಸ್ ವ್ಯಕ್ತಪಡಿಸುತ್ತಾನೆ.ಹಿಕ್ಸ್-ನ ಪ್ರಕಾರ ಸಮಾಜದ ಕಲ್ಯಾಣವನ್ನು ಹೆಚ್ಚಿಸಿಕೊಳ್ಳಬೇಕಾದರೆ ಪ್ರಯೋಜನ ಪಡೆದುಕೊಂಡವರು ನಷ್ಟಕ್ಕೂಳಗಾದವರಿಗೆ ಸೂಕ್ತ ಪರಿಹಾರ ಕೊಡಬೇಕು.ಉದಾ:ಸರ್ಕಾರದ ಹೊಸ ನೀತಿಯಿಂದಾಗಿ ಕೆಲವು ವ್ಯಕ್ತಿಗಳಿಗೆ ಹೆಚ್ಚಿನ ಲಾಭ ದೊರೆತು ಮತ್ತು ಕೆಲವರಿಗೆ ಹಾನಿಯುಂಟಾದಾಗ,ಲಾಭ ಪಡೆದುಕೊಂಡವರು ನಷ್ಟಕ್ಕೀಡಾದವರಿಗೆ ಸೂಕ್ತ ಪರಿಹಾರ ಕೊಟ್ಟಲ್ಲಿ ಯಾರಿಗೂ ತೊಂದರೆಯಾಗುವುದಲ್ಲ;ಯಾರ ಪರಿಸ್ಥಿತಿಯೂ ಕ್ಷೀಣಿಸುವುದಿಲ್ಲ,ಲಾಭ ಪಡೆದುಕೊಂಡವರು ನಷ್ಟಕ್ಕೊಳಗಾದವರಿತಗೆ ಪರಿಹಾರ ಕೊಟ್ಟ ಮೇಲೂ ವೃದ್ಧಿಯಾದ ವರಮಾನದಲ್ಲಿ ಸ್ವಲ್ಪ ಉಳಿಯುತ್ತವೆ.ಆಗ ಸಮಾಜದಲ್ಲಿ ಉತ್ಪಾದನೆಯು ಹೆಚ್ಚುವುದರ ಮೂಲಕ ನೈಜ ವರಮಾನವು ಗಣ ನೀಯವಾಗಿ ವೃದ್ಧಸಿ ಇಡೀ ಸಮೂಹದ ಕಲ್ಯಾಣವೇ ಹೆಚ್ಚುತ್ತದೆ ಎಂಬುದೇ "ಪರಿಹಾರ ತತ್ವ"ದ ತಿರುಳಾಗಿದೆ.ಈ ವಿಷಯದಲ್ಲಿ ಹಿಕ್ಸ್ ಪೆರಿಟೊಗಿಂತ ಒಂದು ಹೆಜ್ಜೆ ಮುಂದೆ ಹೋಗಿ ಆರ್ಥಕತೆಯಲ್ಲಿ ಪುನರ್ ವ್ಯವಸ್ಥೆಯಿಂದ ಬದಲಾವಣೆಯಾದಾಕ್ಷಣವೇ ಜನತೆಯ ಕಲ್ಯಾಣ ವೃದ್ಧಿಸುವುದಿಲ್ಲ;ಅದು ಸಫಲವಾಗಬೇಕಾದರೆ ಅದರ ಜೊತೆಗೆ ಹಂಚಿಕೆಯ ಅಂಶವನ್ನು ಗಣನೆಗೆ ತೆಗೆದುಕೊಳ್ಳಬೇಕು ಎನ್ನುತ್ತಾನೆ.ಹಿಕ್ಸ್ ಅರ್ಥಶಸ್ರ್ತವು "ವ್ಯಾಪಾರ ವಿಷಯಗಳ ವಿಜ್ಞಾನ"ವಾಗಿದೆ ಎಂಬುದಾಗಿ ಹೇಳುತ್ತಾನೆ.ಮಾನವನ ವರ್ತನೆಯನ್ನು ವೈಜ್ಞಾನಿಕವಾಗಿ ಅರ್ಥಶಾಸ್ರ್ತದಲ್ಲಿ ಅಭ್ಯಸಿಸಲಾಗುತ್ತದೆ.ಆದುದರಿಂದ ಅರ್ಥಶಾಸ್ರ್ತವು ಉಳಿದೆಲ್ಲ ಸಮಾಜಶಾಸ್ರ್ತಗಳಿಗಿಂತ ಶ್ರೇಷ್ಠವಾಗಿದೆ ಎಂದು ಅಭಿಪ್ರಾಯಪಡುತ್ತಾನೆ.ಹಿಕ್ಸ್ನ ಅನುಭೋಗಿ ವರ್ತನೆಯ ಸಿದ್ಧಾಂತವು ಹೆಚ್ಚು ಕಡಿಮೆ ಮಾರ್ಷಲನ ತುಷ್ಟಿಗುಣ ಮೀಮಾಂಸೆಯ ಪರಿಷ್ಕೃತ ನಿರೂಪಣೆಯಾಗಿದೆ.ಹಿಕ್ಸ್ ಅನುಭೋಗಿಯ ವರ್ತನೆಯನ್ನು ವಿವರಿಸಲು ಔದಾಸೀನ್ಯ ವಕ್ರರೇಖಾ ತಂತ್ರವನ್ನು ಬಳಸುತ್ತಾನೆ.೧೯೩೪ರಲ್ಲಿ ಆರ್.ಜಿ.ಡಿ.ಅಲೆನ್ ಅವರ ಜೊತೆಗೂಡಿ ಹಿಕ್ಸ್ ಔದಾಸೀನ್ಯ ವಕ್ರರೇಖಾ ತಂತ್ರವನ್ನು ನಿರೂಪಿಸಿದ್ದಾರೆ.ಇದಕ್ಕೆ ಸಂಬಂಧಿಸಿದ ಹೆಚ್ಚಿನ ವಿವರಣೆಯನ್ನು.ಔದಾಸೀನ್ಯ ವಕ್ರರೇಖೆಯ ನಿರೂಪಣೆಯನ್ನು ಕ್ರಮದರ್ಶಕ ಸಂಖ್ಯೆಗಳ ಮೇಲೆ ರಚಿಸಲಾಗಿದೆ.ಮಾರ್ಷಲನ ಇಳಿಮುಖ ಸೀಮಾಂತ ತುಷ್ಟಿಗುಣದ ವಿಶ್ಲೇಷಣೆಯನ್ನು ಹಿಕ್ಸ್ ಅಲ್ಲಗಳೆದಿದ್ದಾನೆ.ಅನುಭೋಗಿಯು ಒಂದು ವಸ್ತುವನ್ನು ಒಂದಾದ ಮೇಲೊಂದರಂತೆ ಸೇವಿಸಿದಲ್ಲಿ ಅವನು ನಿರ್ದಿಷ್ಟವಾದ ತೃಪ್ತಿಯನ್ನು ಪಡೆಯುತ್ತಾನೆ ಮತ್ತು ಅಂತಹ ತೃಪ್ತಿಯನ್ನು ಹಣದ ಮೂಲಕ ಅಳೆಯಬಹುದು ಎಂಬ ಮಾರ್ಷಲನ ವಿವರಣೆಯನ್ನು ತಳ್ಳಿಹಾಕಲಾಗಿದೆ ಅನುಭೋಗಿಗೆ ಎಕ್ಸ್ ವಸ್ತುವಿನ ಸೇವನೆಯ ಬದಲು ವೈ ವಸ್ತುವಿನ ಸೇವನೆಯಿಂದ ಹೆಚ್ಚು ತುಷ್ಟಿಗುಣ ದೊರೆಯುವುದು ಎಂದು ಹೇಳಿದರೆ ತಪ್ಪಾಗಲಾರದು.ಹಿಕ್ಸ್ ತುಷ್ಟಿಗುಣವನ್ನು ಅಳೆಯುವ 'ಹೆಚ್ಚು,ಕಡಿಮೆ,ಸಮಾನ'ಗಳ ಅಳತೆಯನ್ನು ಪ್ರಯೋಗಿಸಿ ತನ್ನ ಸಿದ್ಧಾಂತವನ್ನು ಮಂಡಿಸಿರುವನು.ಅನುಭೋಗಿಯ ಇಚ್ಛೆಗಳನ್ನು ಕಂಡುಕೊಂಡರೆ ಅವನ ಔದಾಸೀನ್ಯ ರೇಖೆಗಳನ್ನು ರಚಿಸಬಹುದು.ಹಿಕ್ಸ್-ನ ಪ್ರಕಾರ ವಸ್ತುವಿನ ಬೆಲೆಯ ರೇಖೆಯು ಔದಾಸೀನ್ಯ ವಕ್ರರೇಖೆಯನ್ನು ಸ್ಪರ್ತಿಸಿದಾಗ ಅನುಭೋಗಿಯು ಸಮತೋಲನದ ಸ್ಥಿತಿಯನ್ನು ತಲುಪುತ್ತಾನೆ.ಆದರೆ ಹಿಕ್ಸ್ ಸೀಮಾಂತ ತುಷ್ಟಿಗುಣದ ಪರಿಕಲ್ಪನೆಯನ್ನು ಸಂಪೂರ್ಣವಾಗಿ ತ್ಯಜಿಸಲ್ಲ.ಸೀಮಾಂತ ತುಷ್ಟಿಗುಣ ಎನ್ನುವ ಬದಲು ಹಿಕ್ಸ್ "ಸೀಮಾಂತ ಬದಲಿಕೆಯದರ" ಎಂಬ ಪದಾವಳಿಯನ್ನು ಪ್ರಯೋಗಿಸುತ್ತಾನೆ.ಹಿಕ್ಸ್-ನ ಸಿದ್ಧಾಂತವು ಮಾರ್ಷಲನ ಸಿದ್ಧಾಂತಕ್ಕಿಂತ ಹೆಚ್ಚು ಸಮಂಜಸವಾಗಿದೆ,ಏಕೆಂದರೆ ಹಿಕ್ಸ್-ನ ಔದಾಸೀನ್ಯ ವಕ್ರರೇಖಾ ತಂತ್ರದಲ್ಲಿ ಸರಕುಗಳ ಬೆಲೆ ಮತ್ತು ವ್ಯಕ್ತಿಗಳ ವರಮಾನದಲ್ಲಾಗುವ ಬದಲಾವಣೆಗಳನ್ನು ಗಣನೆಗೆ ತೆಗೆದು ಕೊಂಡು ಬೇಡಿಕೆಯ ಮೇಲಾಗುವ ಪರಿಣಾಮಗಳನ್ನು ಚರ್ಚಿಸಲಾಗಿದೆ.ಅವುಗಳನ್ನು ಕ್ರಮವಾಗಿ "ಬೆಲೆಯ ಪರಿಣಾಮ" ಮತ್ತು "ಆದಾಯದ ಪರಿಣಾಮ" ಎಂಬುದಾಗಿ ಕರೆಯಲಾಗಿದೆ.ವಸ್ತುಗಳ ಬೆಲೆಗಳು ಇಳಿದರೆ ಅನುಭೋಗಿಯ ನೈಜ ವರಮಾನವು ಹೆಚ್ಚುತ್ತದೆ ಎಂದು ಹಿಕ್ಸ್ ಹೇಳುತ್ತಾನೆ.ಆಗ ಬೇಡಿಕೆಯಲ್ಲಿ ಬದಲಾವಣೆಗಳಾಗುತ್ತವೆ.ಇಷ್ಟೇ ಅಲ್ಲದೆ,ಒಂದು ಸರಕಿನ ಬೆಲೆಯು ಇಳಿದು ಅದೇ ಸಮಯಕ್ಕೆ ಮತ್ತೆ ಕೆಲವು ಸರಕುಗಳ ಬೆಲೆಗಳು ಏರಿದರೆ,ಆಗ ಅನುಭೋಗಿಯು ತುಟ್ಟಿಯಾದ ಸರಕುಗಳಿಗೆ ಬದಲಾಗಿ ಆಗ್ಗದ ಸರಕುಗಳನ್ನು ಕೂಳ್ಳಲು ಇಷ್ಟಪಡುತ್ತಾನೆ ಎಂಬ ಅಂಶವನ್ನು ಹಿಕ್ಸ್ ವ್ಯಕ್ತಪಡಿಸುತ್ತಾನೆ.ಇದನ್ನು ಹಿಕ್ಸ್ "ಬದಲಿಕೆಯ ಪರಿಣಾಮ" ಎಂದು ಕರೆಯುತ್ತಾನೆ.ಈ ರೀತಿ ವಸ್ತುಗಳ ಬೆಲೆಗಳಲ್ಲಾಗುವ ಬದಲಾವಣೆಗಳು ಅನುಭೋಗಿಯು ಬೇಡಿಕೆಯನ್ನು ಎರಡು ರೀತಿಗಳಲ್ಲಿ ಬದಲಾಯಿಸುತ್ತವೆ ಎಂಬುದು ಹಿಕ್ಸ್-ನ ವಿಚಾರಧಾರೆಯಾಗಿದೆ.ಮಾರ್ಷಲನ ಇಳಿಮುಖ ಸೀಮಾಂತ ತುಷ್ಟಿಗುಣ ವಿಶ್ಲೇಷಣೆಯಲ್ಲಿ 'ಆದಾಯದ ಪರಿಣಾಮ' ಮತ್ತು 'ಬೆಲೆಯ ಪರಿಣಾಮ'ಗಳಿಗೆ ಆಸ್ಪದವಿಲ್ಲವಾಗಿದೆ.ಅದಕ್ಕೆ ಬದಲು ಅವು ಸ್ಥಿರವಾಗಿರುತ್ತವೆ ಎಂಬುದಾಗಿ ಭಾವಿಸಲಾಗಿದೆ.ತುಷ್ಟಿಗುಣಗಳನ್ನು ಅಳೆಯಬಹುದು ಎಂಬುದಾಗಿ ಭಾವಿಸಲಾಗಿತ್ತು.ಇಂತಹ ಅವಾಸ್ತವ ಕಲ್ಪನೆಗಳನ್ನು ಕೈಬಿಟ್ಟು ಅನುಭೋಗಿಯ ವರ್ತನೆಯ ಬಗ್ಗೆ ನೈಜ ಚಿತ್ರವನ್ನು ಮಾಡಿದ್ದಾನೆ ಹಿಕ್ಸ್.