ಸದಸ್ಯ:Leesha kamala/sandbox

ವಿಕಿಪೀಡಿಯ ಇಂದ
Jump to navigation Jump to search
Vectors of circular motion.png

ವೃತ್ತೀಯ ಚಲನೆ[ಬದಲಾಯಿಸಿ]

ನಾವೆಲ್ಲ ಸರಳ ರೇಖೆ ಬಗ್ಗೆ ತಿಳಿದ್ದಿದ್ದೇವೆ.ಸರಳ ರೇಖೆಯಲ್ಲಿ ಚಲನೆಯು ನೇರ ಚಲನೆಯಾಗಿದ್ದರು, ಸರಳ ರೇಖಾ ಪಥದಲ್ಲಿನ ಚಲನೆಗಿಂತ ವಕ್ರಪಥ ಚಲನೆಯನ್ನು ಕಾಣುವ ಸಂಭವಗಳೇ ಹೆಚ್ಚು.ಉದಾಹರಣೆಗೆ,

ನಾವು ರೈಲಿನಲ್ಲಿ ಪ್ರಯಾಣ ಮಾಡುವಾಗ ರೈಲು ವಕ್ರ ಮಾರ್ಗದಲ್ಲಿ ಹೋಗುವುದನ್ನು ನೋಡುತ್ತೇವೆ. ಹಾಗೆಯೇ ರಸ್ತೆ ಮಾರ್ಗವೂ ಸಹ ಅಲ್ಲಲ್ಲಿ ಕಂಸಗಳ ಆಕೃತಿ ಹೊಂದಿರುವುದನ್ನು ಕಾಣಬಹುದು. ಬೈಸಿಕಲ್ ಅಥವಾ ಕಾರ್‍ನಂತಹ ವಾಹನಗಳಲ್ಲಿ ಆಗಾಗ್ಗೆ ಅಂಕು ಡೊಂಕು ಪಥದಲ್ಲಿ ಹೋಗುತ್ತೇವೆ. ಕ್ರಿಡಾಪಟುಗಳು ಓಟದ ಪಂದ್ಯದಲ್ಲಿ ವೃತೀಯ ಹಾದಿಯಲ್ಲಿ ಓಡುವುದನ್ನು ನೋಡಿದ್ದೇವೆ. ಬೈಕ್ ರೇಸ್ ನಲ್ಲಿ ಬೈಕ್ ಗಳು ಓರೆಯಾಗಿ ಚಲಿಸುವುದು. ಕೃತಕ ಉಪಗ್ರಹಗಳು ಭೂಮಿಯ ಸುತ್ತುವುದು.

ಬೆಟ್ಟದ ಮೇಲಕ್ಕೆ ಹತ್ತುವಾಗಿನ ರಸ್ತೆಯನ್ನು ನೆನಪಿಸಿಕೊಳ್ಳಿ. ಅದರಲ್ಲಿ ತಿರುವುಗಳಿರುತ್ತವೆಯಲ್ಲವೇ? ಕೆರೆ ಏರಿಯ ಮೇಲಿನ ದಾರಿ, ರಾಟವಾಳ ಮತ್ತು ದೈತ್ಯ ಚಕ್ರ – ಇವುಗಳೆಲ್ಲವು ವೃತ್ತೀಯ ಚಲನೆಗೆ ಉದಾಹರಣೆಗಳು.

ವೃತ್ತೀಯ ಚಲನೆ[ಬದಲಾಯಿಸಿ]

ಒಂದು ಕಾಯದ ಮೇಲೆ ಪ್ರಯೋಗವಾಗುವ ನಿವ್ವಳ ಬಲವು ಚಲನೆಯ ನೇರದಲ್ಲಿ ವರ್ತಿಸಿದಾಗ ಅಥವಾ ಶೂನ್ಯವಾದಾಗ ಆ ಕಾಯವು ಸರಳ ರೇಖೆಯಲ್ಲಿ ಚಲಿಸುತ್ತದೆ. ನಿವ್ವಳ ಬಲವು ಚಲನೆಯ ನೇರಕ್ಕೆ ಯಾವಾಗಲೂ ಒಂದು ಕೋನದಲ್ಲಿ ಅಂದರೆ ಓರೆಯಾಗಿ ವರ್ತಿಸಿದಾಗ ಕಾಯವು ತನ್ನ ಚಲನ ನೇರವನ್ನು ಬದಲಿಸಿ ವಕ್ರಪಥದಲ್ಲಿ ಚಲಿಸತೊಡಗುತ್ತದೆ. ವಕ್ರಪಥದಲ್ಲಿನ ಚಲನೆಗೆ ಅತಿ ಸರಳ ಉದಾಹರಣೆಯೆಂದರೆ ಏಕರೂಪ ವೃತ್ತೀಯ ಚಲನೆ. ವೃತ್ತೀಯ ಪಥದಲ್ಲಿ ಸ್ಧಿರ ಜವದಿಂದ ಆಗುತ್ತಿರುವ ಚಲನೆಯೇ ಏಕರೂಪ ವೃತ್ತೀಯ ಚಲನೆ. ಏಕರೂಪ ವೃತ್ತೀಯ ಚಲನೆಗೆ ಉದಾಹರಣೆಗಳು

ಒಂದು ಸಣ್ಣ ಕಲ್ಲು ಅಥವಾ ಒಂದು ಚೆಂಡಿಗೆ ದಾರ ಕಟ್ಟಿ ನಿಮ್ಮ ತಲೆಯ ಸುತ್ತ ಅದನ್ನು ಒಂದೇ ರೀತಿಯಲ್ಲಿ ಸುತ್ತಿಸಿದ್ದೇ ಆದರೆ ಅದು ವೃತ್ತೀಯ ಚಲನೆಯಾಗುತ್ತದೆ. ಚಂದ್ರ ಭೂಮಿಯ ಸುತ್ತ ಪರಿಭ್ರಮಿಸುತ್ತಿದೆ. ಭೂಮಿಯು ಸೂರ್ಯನ ಸುತ್ತ ಪರಿಭ್ರಮಿಸುತ್ತಿದೆ. ಇವುಗಳು ಸರಿಸುಮಾರು ವೃತ್ತಗಳು. ಇವು ಏಕರೂಪ ವೃತ್ತೀಯ ಚಲನೆಗೆ ಕೆಲವು ಉದಾಹರಣೆಗಳು.

Uniform circular motion.svg

ಕೇಂದ್ರಾಭಿಮುಖ ಬಲ[ಬದಲಾಯಿಸಿ]

ಏಕರೂಪಿ ವೃತ್ತೀಯ ಚಲನೆಯ ದಿಕ್ಕಿನಲ್ಲಿ ಸತತ ಬದಲಾವಣೆ ಇರುತ್ತದೆ. ಆದುದರಿಂದ ನ್ಯೂಟನ್‍ನ ಚಲನೆಯ ಮೊದಲ ನಿಯಮದನ್ವಯ ವೇಗೋತ್ಕರ್ಷ ಉಂಟಾಗಬೇಕು ಹಾಗೂ ಈ ವೇಗೋತ್ಕರ್ಷವು ಚಲನ ಪಥಕ್ಕೆ ಲಂಬ ನೇರದಲ್ಲಿರಬೇಕು. ಏಕೆಂದರೆ, ಜವವು ಏಕರೂಪಿಯಾಗಿದೆ. ಅಂದರೆ ವೇಗೋತ್ಕರ್ಷವು ಕೇಂದ್ರದ ನೇರದಲ್ಲಿ ಪ್ರೇರಿತವಾಗಿರುತ್ತದೆ. ಈ ವೇಗೋತ್ಕರ್ಷವೆಂದು ಕರೆಯುತ್ತೇವೆ. ಈ ವೇಗೋತ್ಕರ್ಷಕ್ಕೆ ಸಂಬಂಧಿಸಿದ ಬಲವನ್ನು ಕೇಂದ್ರಭಿಮುಖ ಬಲ ಎನ್ನುತ್ತಾರೆ.

ವೃತ್ತೀಯ ಪಥದಲ್ಲಿ ಕಾಯವು ಚಲಿಸುತ್ತಿದ್ದಾಗ ವೃತ್ತದ ಕೇಂದ್ರಾದೆಡೆಗೆ ಪ್ರೇರಿತವಾಗುವ ತ್ರಿಜ್ಯೀಯ ಬಲವನ್ನು ಆ ಕಾಯದ ಮೇಲೆ ವರ್ತಿಸುವ ಕೇಂದ್ರಾಭಿಮುಖ ಬಲವೆಂದು ವ್ಯಾಖ್ಯಿಸಬಹುದು.

‘m’ ರಾಶಿಯುಳ್ಳ ಕಾಯವು ‘r’ ತ್ರಿಜ್ಯವುಳ್ಳ ವೃತ್ತೀಯ ಪಥದಲ್ಲಿ ‘v’ ಸ್ಥಿರ ಜವದಿಂದ ಚಲಿಸುತ್ತಿರುವಾಗ ಉಂಟಾಗುವ ಬಲ f= mv2/r

ಒಂದು ಕಲ್ಲನ್ನು ದಾರದ ತುದಿಗೆ ಕಟ್ಟಿ, ದಾರದ ಮತ್ತೊಂದು ತುದಿಯನ್ನು ಕೈಯಲ್ಲಿ ಹಿಡಿದು ಕಲ್ಲನ್ನು ಸುತ್ತುವಂತೆ ಮಾಡಿದ್ದೇವೆಂದಿಟ್ಟುಕೊಳ್ಳೋಣ. ದಾರದಲ್ಲಿನ ಎಳೆತವು ಕೇಂದ್ರಾಭಿಮುಖ ಬಲವನ್ನು ಒದಗಿಸುತ್ತದೆ. ಕಲ್ಲು ಯಾವಾಗಲೂ ಕೇಂದ್ರದ ಕಡೆಗೆ ಎಳೆಯಲ್ಪಡುತ್ತಿರುತ್ತದೆ.

ಯಾವುದೇ ಕಾರಣದಿಂದ ಕಲ್ಲಿನ ಮೇಲೆ ಪ್ರಯೋಗವಾಗುತ್ತಿರುವ ಬಲವು (ದಾರದಲ್ಲಿನ ಬಿಗುಪು) ಹಿಂತೆಗೆಯಲ್ಪಟ್ಟರೆ-ಆಂದರೆ ದಾರವು ತುಂಡಾದರೆ ಏನಾಗುತ್ತದೆ? ನ್ಯೂಟನ್ನನ ಮೊದಲ ಚಲನ ನಿಯಮದನ್ವಯ ಕಾಯವು ಹೊರಗಿನ ಬಲದ ಪ್ರಯೋಗವಿಲ್ಲದಿದ್ದರೆ ತನ್ನ ಚಲನ ಸ್ಥಿತಿಯಲ್ಲಿಯೇ ಮುಂದುವರೆಯುತ್ತದೆ. ಅಂದರೆ ಕಲ್ಲು ಗಿ ವೇಗದಿಂದ ಸ್ಪರ್ಶಕದ ನೇರದಲ್ಲಿ ಚಲನೆಯನ್ನು ಮುಂದುವರೆಸುತ್ತದೆ.

ಭೂಮಿಯ ಸುತ್ತ ಚಂದ್ರನು ಚಲ್ಲಿಸುವ ಕಕ್ಷೆ ಮತ್ತು ಸೂರ್ಯನ ಸುತ್ತ ಭೂಮಿಯು ಚಲಿಸುವ ಕಕ್ಷೆ – ಇವು ಸುಮಾರಾಗಿ ವೃತ್ತೀಯವಾಗಿವೆ. ಇವುಗಳ ಚಲನೆಯಲ್ಲಿ ಉಂಟಾಗುವ ಕೇಂದ್ರಾಭಿಮುಖ ಬಲವು ಗುರುತ್ವ ಬಲದಪರಿಣಾಮವಾಗಿದೆ. ಭೂಮಿಯ ಸುತ್ತ ಚಂದ್ರ ಚಲ್ಲಿಸುವಾಗ 2.27 10­­­־³ ms־ಶಿ ನಷ್ಟು ಕಡಿಮೆ ಪ್ರಮಾಣದ ವೇಗೋತ್ಕರ್ಷವನ್ನನುಭವಿಸುತ್ತದೆ.

ಕೇಂದ್ರತ್ಯಾಗಿ ಪ್ರತಿಕ್ರಿಯೆ : ನ್ಯೂಟನ್ನನ ಚಲನೆಯ ಮೂರನೆಯ ನಿಯಮದನ್ವಯ ಕೇಂದ್ರಾಭಿಮುಖ ಬಲವನ್ನು ಪ್ರಯೋಗಿಸುವ ಮೂಲವು ಕೇಂದ್ರತ್ಯಾಗಿ ಪ್ರತಿಕ್ರಿಯೆಗೆ ಒಳಪಟ್ಟಿರುತ್ತದೆ. ಇದು ಕೇಂದ್ರಾಭಿಮುಖ ಬಲಕ್ಕೆ ಸಮ ಮತ್ತು ವಿರುದ್ಧವಾಗಿದ್ದು, ವೃತ್ತೀಯ ಪಥದ ಕೇಂದ್ರಕ್ಕೆ ವಿರುದ್ಧ ನೇರದಲ್ಲಿ ವರ್ತಿಸುತ್ತದೆ. ಕೆಲವೊಮ್ಮೆ ಕೇಂದ್ರತ್ಯಾಗಿ ಎಂದು ಹೇಳುವ ಬದಲು ಕೇಂದ್ರತ್ಯಾಗಿ ಬಲ ಎಂದು ತಪ್ಪು ಹೇಳುವುದನ್ನು ಕಾಣಬಹುದು.

ಕೈಯಲ್ಲಿ ಹಿಡಿದ ದಾರಕ್ಕೆ ಕಟ್ಟಿದ ಕಲ್ಲು ಸುತ್ತುವಾಗ ಹಿಡಿದಿರುವ ಕೈಯ ಮೇಲೆ ಹೊರಮುಖ ಬಲ (ಕೇಂದ್ರತ್ಯಾಗಿ ಬಲ)ವನ್ನು ಪ್ರಯೋಗಿಸುತ್ತದೆ. ವಕ್ರಮಾರ್ಗದಲ್ಲಿ ಚಲಿಸುವಾಗ ರೈಲು ಗಾಡಿಯು ಹೊರಬಂದು ರೈಲು ಕಂಬಿಗಳ ಮೇಲೆ ಉಂಟು ಮಾಡುವ ಪಾರ್ಶ್ವತಳ್ಳುವಿಕೆಯೇ ಕೇಂದ್ರತ್ಯಾಗಿ ಪ್ರತಿಕ್ರಿಯೆ.

Centrifugal (PSF).jpg

ಕೇಂದ್ರತ್ಯಾಗಿ ಬಲ[ಬದಲಾಯಿಸಿ]

ವೃತ್ತೀಯ ಚಲನೆಯಲ್ಲಿರುವ ಒಂದು ವಸ್ತುವಿನ ಮೇಲೆ ಹೊರಮುಖವಾಗಿ ಪ್ರಯೋಗವಾಗುವ ಬಲವೊಂದಿದೆ ಎಂದು ತಪ್ಪು ಕಲ್ಲನೆ ಸಾಮಾನ್ಯವಾಗಿ ಕಂಡು ಬರುತ್ತದೆ. ಇದನ್ನು ಕೇಂದ್ರದಿಂದ ಹೊರಹೋಗುವ ಬಲ (ಛಿeಟಿಣಡಿiಜಿugಚಿಟ ಜಿoಡಿಛಿe) ಎನ್ನುತ್ತಾರೆ. ಕೇಂದ್ರತ್ಯಾಗಿ ಬಲ ಎಂಬುದು ನಿಜವಾಗಿ ಅಸ್ತಿತ್ವದಲ್ಲಿಲ್ಲವೆಂಬುದನ್ನು ಕೆಳಗೆ ತಿಳಿಸಿರುವ ಉದಾಹರಣೆಯಲ್ಲಿ ಮನಗಾಣಬಹುದು. ಕಲ್ಲಿಗೆ ದಾರ ಕಟ್ಟಿ ಸುತ್ತಿಸುತ್ತಿರುವಾಗ ದಾರ ಕಿತ್ತು ಹೋದರೆ ಏನಾಗುತ್ತದೆ? ಕೇಂದ್ರತ್ಯಾಗಿ ಬಲ ವರ್ತಿಸುತ್ತಿದ್ದರೆ ಕಲ್ಲು ಹೊರಮುಖವಾಗಿ ಹಾರಿ ಹೋಗಬೇಕಾಗಿದ್ದಿತು. ಆದರೆ ಹಾಗಾಗುವುದಿಲ್ಲ. ಕಲ್ಲು ಸ್ಪರ್ಶಕ ರೇಖೆಯ ನೇರದಲ್ಲಿ ಹಾರಿ ಹೋಗುವುದು. ಇದಕ್ಕೆ ಕಾರಣ ಕೇಂದ್ರದೆಡೆಗೆ ಎಳೆಯುವ ಬಲ ಇರುವುದಿಲ್ಲ.

ವೇಗವಾಗಿ ಚಲಿಸುತ್ತಿರುವ ವಾಹನವು ತಿರುವು ಹೊಗುವಾಗ ಅದರೊಳಗಿರುವವರಿಗೆ ಹೊರಕ್ಕೆ ತಳ್ಳಿದ ಅನುಭವವಾಗುತ್ತದೆ. ಆದರೆ ಅಂತಹ ಯಾವುದೇ ಕೇಂದ್ರತ್ಯಾಗಿ ಬಲ ಇರುವುದಿಲ್ಲ. ನಡೆಯುವ ವಿದ್ಯಮಾನವೆಂದರೆ, ಪ್ರಯಾಣಿಕರು ನೇರ ದಿಕ್ಕಿನಲ್ಲಿ ಚಲ್ಲಿಸುತ್ತಿದ್ದರೆ ವಾಹನವು ವಕ್ರಪಥದಲ್ಲಿ ಚಲಿಸತೊಡಗುತ್ತದೆ. ಪ್ರಯಾಣಿಕರನ್ನೂ ವಕ್ರ ಪಥಕ್ಕೆ ತೊಡಗಿಸಲು ವಾಹನದ ಸೀಟಿನ ಹಿಂಬದಿಯೋ ಅಥವಾ ಬಾಗಿಲೋ ಅವರ ಮೇಲೆ ಬಲ ಪ್ರಯೋಗಿಸುತ್ತದೆ.

ಕೇಂದ್ರತ್ಯಾಗಿ ಬಲವನ್ನು ಸೃಷ್ಟಿಸಲು ಸಾಧ್ಯವಿಲ್ಲ. ವೃತ್ತೀಯ ಚಲನೆಯಲ್ಲಿ ಅಥವಾ ಭ್ರಮಣದಲ್ಲಿ ಉಂಟಾಗುವ ಒಂದು ಅನುಭವ ಮಾತ್ರ. ಕೇಂದ್ರತ್ಯಾಗಿ ಬಲವು ಒಂದು ಕಾಯದ ವೃತ್ತೀಯ ಚಲನೆ ಅಥವಾ ಭ್ರಮಣದಲ್ಲಿ ಉಂಟಾಗಿವ ಜಡತ್ವದ ಪರಿಣಾಮ.

ಇದರಿಂದ ತಿಳಿಯುವುದೆನೆಂದರೆ: ಕೇಂದ್ರಾಭಿಮುಖ ಮತ್ತು ಕೇಂದ್ರತ್ಯಾಗಿ ಬಲಗಳು ಒಂದೇ ಕಾಯದ ಮೇಲೆ ವರ್ತಿಸುವುದರಿಂದ ಕ್ರಿಯೆ-ಪ್ರತಿಕ್ರಿಯೆ ಯುಗ್ಮವನ್ನು ಉಂಟು ಮಾಡುವುದಿಲ್ಲ. ಆದರೆ ಕೇಂದ್ರಾಭಿಮುಖ ಬಲ ಮತ್ತು ಕೇಂದ್ರತ್ಯಾಗಿ ಪ್ರತಿಕ್ರಿಯೆಗಳು ಕ್ರಿಯೆ-ಪ್ರತಿಕ್ರಿಯೆ ಯುಗ್ಮವನ್ನುಂಟು ಮಾಡುತ್ತವೆ. [೧]

ಕೇಂದ್ರಾಭಿಮುಖ ಬಲಕ್ಕೆ ಕೆಲವು ದೃಷ್ಟಾಂತಗಳು[ಬದಲಾಯಿಸಿ]

  1. ರಸ್ತೆ ಮತ್ತು ರೈಲು ಮಾರ್ಗಗಳಲ್ಲಿನ ಓರೆ ಒಂದು ವಾಹನವು ಸಮತಲ ರಸ್ತೆಯಲ್ಲಿ ಚಲಿಸುವಾಗ ತಿರುವು ಬಂದಾಗ ವಾಹನದ ಚಕ್ರಗಳು ಮತ್ತು ರಸ್ತೆಯ ನಡುವೆ ಉಂಟಾಗುವ ಘರ್ಷಣೆಯಿಂದಾಗಿ ಕೇಂದ್ರಾಭಿಮುಖ ಬಲದ ಅನುಭವವಿರುತ್ತದೆ.ವಾಹನವನ್ನು ನಿಧಾನವಾಗಿ ಚಲಾಯಿಸದಿದ್ದರೆ ಆದು ಉರುಲುವ ಸಂಭವವಿರುತ್ತದೆ. ಇದನ್ನು ನಿವಾರಿಸಲು ರಸ್ತೆಯ ಹೊರ ಅಂಚನ್ನು ಒಳ ಅಂಚಿಗಿಂತ ಎತ್ತರವಾಗಿರುವಂತೆ ನಿರ್ಮಿಸಿರುತ್ತಾರೆ. ಇದರಿಂದ ವಾಹನವು ಉರುಳುವುದು ಮತ್ತು ಟೈರುಗಳು ಉಜ್ಜುವುದು ತಪ್ಪುತ್ತದೆ.
  2. ರೈಲು ಮಾರ್ಗಗಳಲ್ಲಿ ತಿರುವು ಬಂದಾಗ ಹೊರಬದಿಯ ರೈಲು ಕಂಬಿಯನ್ನು ಒಳಬದಿಯ ಕಂಬಿಗಿಂತ ಸ್ವಲ್ಪ ಎತ್ತರದಲ್ಲಿವಂತೆ ಜೋಡಿಸಿರುತ್ತಾರೆ. ಇದರಿಂದ ಚಕ್ರಗಳ ಸವಕಳಿ ಕಡಿಮೆಯಾಗುವುದಲ್ಲದೆ ರೈಲ್ಲು ಹಳಿ ತಪ್ಪುವುದಿಲ್ಲ.
  3. ಓಟಗಾರನು ತಿರುವು ಪಥದಲ್ಲಿ ಓಡುವಾಗ ಕೇಂದ್ರಾಭಿಮುಖ ಬಲವನ್ನು ಪಡೆಯಲು ಓಟದ ಹಾದಿಯನ್ನು ಯುಕ್ತವಾಗಿ ಓರೆ ಮಾಡಬೇಕು.
  4. ಸೈಕಲ್ ಸವಾರನು ತಿರುವಿನಲ್ಲಿ ಹೋಗುವಾಗ ತಿರುವಿನ ಕೇಂದ್ರದ ಕಡೆಗೆ ವಾಲಿ ಅಗತ್ಯ ಕೇಂದ್ರಾಭಿಮುಖ ಬಲವನ್ನು ಪಡೆಯುತ್ತಾನೆ.

ಕೇಂದ್ರತ್ಯಾಗಿ ಪ್ರತಿಕ್ರಿಯೆ : ನ್ಯೂಟನ್ನನ ಚಲನೆಯ ಮೂರನೆಯ ನಿಯಮದನ್ವಯ ಕೇಂದ್ರಾಭಿಮುಖ ಬಲವನ್ನು ಪ್ರಯೋಗಿಸುವ ಮೂಲವು ಕೇಂದ್ರತ್ಯಾಗಿ ಪ್ರತಿಕ್ರಿಯೆಗೆ ಒಳಪಟ್ಟಿರುತ್ತದೆ. ಇದು ಕೇಂದ್ರಾಭಿಮುಖ ಬಲಕ್ಕೆ ಸಮ ಮತ್ತು ವಿರುದ್ಧವಾಗಿದ್ದು, ವೃತ್ತೀಯ ಪಥದ ಕೇಂದ್ರಕ್ಕೆ ವಿರುದ್ಧ ನೇರದಲ್ಲಿ ವರ್ತಿಸುತ್ತದೆ. ಕೆಲವೊಮ್ಮೆ ಕೇಂದ್ರತ್ಯಾಗಿ ಎಂದು ಹೇಳುವ ಬದಲು ಕೇಂದ್ರತ್ಯಾಗಿ ಬಲ ಎಂದು ತಪ್ಪು ಹೇಳುವುದನ್ನು ಕಾಣಬಹುದು.

ಕೈಯಲ್ಲಿ ಹಿಡಿದ ದಾರಕ್ಕೆ ಕಟ್ಟಿದ ಕಲ್ಲು ಸುತ್ತುವಾಗ ಹಿಡಿದಿರುವ ಕೈಯ ಮೇಲೆ ಹೊರಮುಖ ಬಲ (ಕೇಂದ್ರತ್ಯಾಗಿ ಬಲ)ವನ್ನು ಪ್ರಯೋಗಿಸುತ್ತದೆ. ವಕ್ರಮಾರ್ಗದಲ್ಲಿ ಚಲಿಸುವಾಗ ರೈಲು ಗಾಡಿಯು ಹೊರಬಂದು ರೈಲು ಕಂಬಿಗಳ ಮೇಲೆ ಉಂಟು ಮಾಡುವ ಪಾಶ್ರ್ವ ತಳ್ಳುವಿಕೆಯೇ ಕೇಂದ್ರತ್ಯಾಗಿ ಪ್ರತಿಕ್ರಿಯೆ.

ಕೇಂದ್ರತ್ಯಾಗಿ ಬಲಕ್ಕೆ ಕೆಲವು ದೃಷ್ಟಾಂತಗಳು[ಬದಲಾಯಿಸಿ]

ಸೆಂಟ್ರಿಫ್ಯೂಜ್[ಬದಲಾಯಿಸಿ]

ವಿಭಿನ್ನ ಸಾಂದ್ರತೆಯ ಸೂಕ್ಷ್ಮ ಕಣಗಳಿರುವ ಪ್ರತ್ಯೇಕಿಸಲು ರಚಿಸಿರುವ ಸಾಧನವೇ ಸೆಂಟ್ರಿಫ್ಯೂಜ್. ಕಣಗಳಿರುವ ದ್ರವವನ್ನು ಚಿಕ್ಕ ಪ್ರನಾಳಗಳಲ್ಲಿ ಹಾಕಿ, ಅವುಗಳನ್ನು ಚೌಕಟ್ಟಿನಲ್ಲಿ ಜೋಡಿವೇಗದಿಂದ ಒಂದು ಅಡ್ಡ ಸಮತಲದಲ್ಲಿ ಭ್ರಮಿಸುವಂತೆ ಮಾಡಿರುತ್ತಾರೆ. ಸೆಂಟ್ರಿಫ್ಯೂಜಿನಲ್ಲಿ ಹೆಚ್ಚು ಸಾಂದ್ರತೆಯ ಕಣಗಳು ಅಕ್ಷದಿಂದ ದೂರವಾಗಿಯೂಕಡಿಮೆ ಸಾಂದ್ರತೆಯ ಕಣಗಳು ಅಕ್ಷದ ಕಡೆಗೂ ಸರಿಯುತ್ತವೆ. ಹೀಗಾಗಿ ವಿಭಿನ್ನ ಸಾಂದ್ರತೆ ಕಣಗಳು ಪ್ರತ್ಯೇಕಗೊಳ್ಳುತ್ತವೆ. ಪ್ರೋಟೀನ್‍ಗಳು, ಚೋದಕಗಳು (hormones) ವೈರಸ್‍ಗಳು (viruses) ಇತ್ಯಾದಿಗಳನ್ನು ಬೇರೆ ಬೇರೆ ದ್ರವ ಮಾಧ್ಯಮದಿಂದ ಬೇರ್ಪಡಿಸಲು ಸೆಂಟ್ರಿಫ್ಯೂಜ್ ಹೆಚ್ಚು ಉಪಯೋಗಿಯಾಗಿದೆ.

ಆಳವಿಲ್ಲದ ಒಂದು ತಟ್ಟೆಯಲ್ಲಿ ಪಾದರಸ ಮತ್ತು ನೀರು ಇವುಗಳನ್ನು ಹಾಕಿ, ಲಂಬ ಅಕ್ಷದಲ್ಲಿ ಭ್ರಮಿಸುವಂತೆ ಮಾಡಿದರೆ ನೀರು ಮಧ್ಯ ಭಾಗದಲ್ಲಿದು ಪಾದರಸವು ಅಂಚಿನಲ್ಲಿ ಕಂಡು ಬರುತ್ತವೆ. ಪಾದರಸವು ಭಾರವಾಗಿದ್ದು ಅದರ ಕಣಗಳು ನೀರಿನ ಕಣಗಳಿಗಿಂತ ಅಧಿಕ ಕೇಂದ್ರತ್ಯಾಗಿ ಬಲವನ್ನು ಅನುಭವಿಸುವುದೇ ಇದಕ್ಕೆ ಕಾರಣವಾಗಿದೆ.

ಕೇಂದ್ರತ್ಯಾಗಿ ಶೋಷಕ ಯಂತ್ರ[ಬದಲಾಯಿಸಿ]

ಇದರಲ್ಲಿ ಪಕ್ಕಗಳಲ್ಲಿ ರಂಧ್ರಗಳಿರುವ ಒಂದು ಸ್ತಂಭಾಕೃತಿಯ ಪಾತ್ರೆ ಇರುತ್ತದೆ. ಈ ಪಾತ್ರೆಯನ್ನು ಒಂದು ಅಕ್ಷದ ಮೇಲೆ ವೇಗವಾಗಿ ಭ್ರಮಿಸುವಂತೆ ಅಣಿ ಮಾಡಿರುತ್ತಾರೆ. ಒದ್ದೆ ಬಟ್ಟೆಗಳನ್ನು ಪಾತ್ರೆಯಲ್ಲಿಟ್ಟು, ಪಾತ್ರೆಯು ವೇಗವಾಗಿ ತಿರುಗುವಂತೆ ಮಾಡಿದಾಗ ಕೇಂದ್ರತ್ಯಾಗಿ ಬಲದಿಂದ ನೀರು ಹೊರಹೋಗುತ್ತದೆ. ಬಟ್ಟೆ ಶುಪ್ಕವಾಗುತ್ತದೆ.

ಕೇಂದ್ರತ್ಯಾಗಿ ನಿಯಂತ್ರಕಗಳು[ಬದಲಾಯಿಸಿ]

ಜೇಮ್ಸವಾಟನು ರಚಿಸಿದ ಸ್ವಯಂ ಚಾಲಿತ ಸಲಕರಣೆಯೇ ನಿಯಂತ್ರಕ. ಇದರಿಂದ ಯಂತ್ರಗಳು ಕೆಲಸ ಮಾಡುವ ವೇಗವನ್ನು ನಿಯಂತ್ರಿಸಬಹುದು. ಈ ಸಲಕರಣೇ ಕೇಂದ್ರತ್ಯಾಗಿ ಬಲದ ಆಧಾರದ ಮೇಲೆ ರಚಿಸಲ್ಪಟ್ಟಿದೆ.

ಕೇಂದ್ರತ್ಯಾಗಿ ಪಂಪುಗಳ[ಬದಲಾಯಿಸಿ]

ಕಡಿಮೆ ಹಿಂದೊತ್ತಡವಿರುವ ಸಂದರ್ಭಗಳಲ್ಲಿ ಹೆಚ್ಚು ಪ್ರಮಾಣದ ದ್ರವಗಳನ್ನು ವರ್ಗಾಯಿಸಲು ಕೇಂದ್ರತ್ಯಾಗಿ ಪಂಪುಗಳನ್ನು ಬಳಸಲಾಗುತ್ತದೆ.ಕೇಂದ್ರತ್ಯಾಗಿ ಪಂಪುಗಳನ್ನು ಗಾಳಿ ಊದಲು ಮತ್ತು ನಿಷ್ಕಸನಗೊಳಿಸಲು ಬಳಸುತ್ತಾರೆ.

  1. https://en.wikipedia.org/wiki/Centrifugal_force