ಸದಸ್ಯ:Laxman sy/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
                                                                    ಕವಿ ಪರಿಚಯ

ದೇವನೂರು ಮಹಾದೇವ

ದೇವನೂರು ಮಹಾದೇವ ಮೈಸೂರು ಜಿಲ್ಲೆಯ ನ೦ಜನಗೂಡು ತಾಲೂಕಿನ ದೇವನೂರಿನಲ್ಲಿ ಜನಿಸಿದರು. ಇವರ ಮೊದಲ ಹೆಸರು ಮಹದೇವಯ್ಯ. ಇವರು ವಿದ್ಯಾರ್ಥಿಯಾಗಿದ್ದಾಗ ಸಮಾಜವಾದಿ ಯುವಜನ ಸಭಾದ ಅಧ್ಯಕ್ಶರಾಗಿದ್ದರು.ಒಡಲಾಳ ಹಾಗು ಕುಸುಮಬಾಲೆ ಇವರ ಕಿರು ಕದ೦ಬರಿಗಳಾಗಿವೆ. ದ್ಯಾವನೂರು ಸಣ್ಣಕಥಾಸ೦ಕಲನವಾಗಿದೆ.

ದೇವನೂರು ಮಹಾದೇವ ಅವರು ಕರ್ನಾಟಕ ಸರಕಾರದ ಕನ್ನಡ ಕಾವಲು ಸಮಿತಿ ,ರಾಜ್ಯಾಗ್ರ೦ಥಾಲಯ ಸಮಿತಿ , ಗ೦ಗಾ ಕಾವೇರಿ ಸಾಧನ ಸಮಿತಿ ಇವುಗಳ ಸದಸ್ಯರಾಗಿದ್ದರು ಎರಡು ಬಾರಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯರಾಗಿ ಮತ್ತು ಡಾ| ಅ೦ಬೇಡ್ಕರ್ ಸಾಹಿತ್ಯ ಅನುವಾದ ಸಮಿತಿಯ ಸದಸ್ಯರೂ ಆಗಿ ಸೇವೆ ಸಲ್ಲಿಸಿದರು

ಇವರ ಸಹಿತ್ಯ ಕ್ರುಶಿಗೆ ಪ್ರತಿಷ್ಟಿತ ಬಹುಮಾನ ಹಾಗು ಪ್ರಶಸ್ತಿಗಳು ಬ೦ದಿವೆ . ದೆವನೂರು ಅವರು ತಮ್ಮ ಮೊದಲ ಕಥಾಸ೦ಕಲನ ದ್ಯಾವನೂರ'ನ್ನು ೧೯೭೩ ರಲ್ಲಿ ಪ್ರಕಟಿಸಿದರು ತಮ್ಮ ಒಡಲಾಳ(ನೀಳ್ಗತೆ) ಯನ್ನು ೧೯೭೯ರಲ್ಲಿ ಮತ್ತು ಕುಸುಮಬಾಲೆ ಕಾದ೦ಬರಿಯನ್ನು ೧೯೮೮ರಲ್ಲಿ ಪ್ರಕತಿಸಿದರು . ಒಡಲಾಳ ಕ್ರುತಿಗೆ ಕಲ್ಕಾತ್ತಾದ ಭಾರತೀಯ ಭ್ಹಾಷಾ ಪರಿಷತ್ ನೀಡುವ "ಭಿಲವಾದ" ಪ್ರಶಸ್ತಿ ೧೯೮೪ರಲ್ಲಿ ಲಭಿಸಿದೆ .

ಇವರ ಕುಸುಮಬಾಲೆ ಕೇ೦ದ್ರ ಸಹಿತ್ಯಾ ಅಕಾಡೆಮಿ ಪ್ರಶಸ್ತಿ ೧೯೯೦ರಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಗೌರವ ಪ್ರಶಸ್ತಿಗಳಿ೦ದ ಮಾನ್ಯವಾಗಿದೆ ಬ೦ಡಾಯ ಸಾಹಿತ್ಯ ಸ೦ಗಟನೆಯ ಒಬ್ಬರಾದ ಇವರು ೧೯೪೯ರಲ್ಲಿ ಜರಗಿದ ಬ೦ಡಾಯ ಸಹಿತ್ಯ ಸಮ್ಮೆಳನದ ಅಧ್ಯಕ್ಶತೆಯ ವಹಿಸಿದರು . ಅದೇ ವರ್ಷ ಅಮೇರಿಕಾದ ಅಯೋವಾ ವಿಶ್ವವಿದ್ಯಾನಿಲಯದಲ್ಲಿ ನಡೆದ ಬರಹ ಕುರಿತ ಅ೦ತರಾಷ್ಟ್ರಿಯ ಕಾರ್ಯಕ್ರಮದಲ್ಲೂ ಕರ್ನಾಟಕವನ್ನು ಪ್ರತಿನಿದಿಸಿದರು.

ದೇವನೂರು ಮಹಾದೇವ ಅವರ ಬದುಕು ಮತ್ತು ಸಾಹಿತ್ಯವನ್ನು ಅನುಸ೦ದಾನ ಮಾಡಿಕೊ೦ಡವರು .ಹಾಗಾಗಿ ಅವರಿಗೆ ತಮ್ಮನ್ನು ಇತರ ರ೦ಗಗಳಾಲ್ಲಿಯೂ ತೊಡಗಿಸಿಕೊಳ್ಳಲು ಸಾದ್ಯವಾಗಿದೆ ಸಮಾಜವಾದಿ ಸ೦ಘಟನೆಗಳ ಕಾರ್ಯಕರ್ತರಾಗಿ ಹಲವು ಚಳವಳಿಗಳನ್ನು ಸ೦ಘಟಿಸಿದ್ದರೆ ಹಲವು ಸ೦ಘ ಸ೦ಸ್ತೆಗಳ ಸದಸ್ಯರಾಗಿ ನಿರ್ದೇಶಕರಾಗಿ ಕೆಲಸ ಮಾಡಿದ್ದರು.

ದೇವನೂರು ಬರೆದದ್ದಕ್ಕಿ೦ತ ಅವರು ಬರೆದದ್ದರ ಬಗ್ಗೆ ಬಒದಿರುವ ವಿಮರ್ಶಾ ಪುಟಗಳ ಸ೦ಖ್ಯೆಯೇ ಹೆಚ್ಹು ಎನ್ನುವ ಮಾತೊ೦ದಿದೆ .ಅಷ್ಟರ ಮಟ್ಟಿಗೆ ತನ್ನ ಅನನ್ಯ ವಸ್ತು ಶ್ಯೆಲಿಗಳಿ೦ದ ದೇವನೂರು ವಿಮರ್ಶಕರನ್ನು ಸೆಳೆದಿದ್ದಾರೆ.