ವಿಷಯಕ್ಕೆ ಹೋಗು

ಸದಸ್ಯ:LNK1490081/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಶ್ರೀ ದೇಗುಲಮಠ.......

                      ಕನಕಪುರ

  " ಶ್ರೀ ಆದಿ ನಿರ್ವಾಣ

                    ಮಹಾಶಿವಯೋಗಿಗಳಿಗೆ

                                                  ಕರಜೋಡಿಸಿ ಸಾವಿರಾರು ನಮಸ್ಕರಿಸೋಣ......"

ಕರುನಾಡಿನ ಪ್ರಸಿದ್ಧ ಮಠಗಳಲ್ಲಿ ರಾಮನಗರ ಜಿಲ್ಲೆಯ ಕನಕಪುರದ ಅರ್ಕಾವತಿ ನದಿ ತೀರದಲ್ಲಿರುವ ಶ್ರೀ ದೇಗುಲ ಮಠವು ಒಂದು.

ಶ್ರೀ ದೇಗುಲಮಠವು ಸುಮಾರು 700 ವರ್ಷಗಳ ಹಿಂದೆ ಅಲ್ಲಮಪ್ರಭು ವಿರಕ್ತ ಸಂಪ್ರದಾಯದಲ್ಲಿ ವೈರಾಗ್ಯ ಮೂರ್ತಿಗಳಾಗಿ ಬಂದ ಶ್ರೀ ಆದಿ ನಿರ್ವಾಣ ಮಹಾಶಿವಯೋಗಿಗಳವರಿಂದ ಶ್ರೀ ದೇಗುಲಮಠವು ಸ್ಥಾಪನೆಗೊಂಡಿತು.

ವೀರ ವೀರಾಗಿಗಳು, ತಪೋನಿಷ್ಠರು, ಶಾಪನುಗ್ರಹ ಸಮರ್ಥರು ಆದ ಶ್ರೀ ನಿರ್ವಾಣ ಮಹಾ ಶಿವಯೋಗಿಗಳು ಮಹಾ ಜಂಗಮ ಮೂರ್ತಿಗಳಾಗಿ ನಾಡಿನ ಅನೇಕ ಕಡೆಯಲ್ಲಿ ಸಂಚರಿಸಿ ಭಕ್ತರು ಸನ್ಮಾರ್ಗದಲ್ಲಿ ನಡೆಯಲು ಜ್ಞಾನ ಬೋಧೆಯನ್ನು ಮಾಡುತ್ತಾ ಕನಕಪುರದಲ್ಲಿ ತಪಸ್ಸನ್ನು ಗೈದು

ಶ್ರೀ ದೇಗುಲ ಮಠಕ್ಕೆ ಧರ್ಮ ಬುನಾದಿ ಹಾಕಿದರು.

ಭಕ್ತರ ಕಷ್ಟಗಳಿಗೆ ಸಂಜೀವಿನಿಯಾಗಿ, ಬೇಡಿ ಬಂದವರಿಗೆ ಕಲ್ಪವೃಕ್ಷವಾಗಿ ದೇಗುಲ ಮಠದ ದೇವರಾಗಿ ನೆಲೆಸಿದರು.

ಶ್ರೀ ಆದಿ ನಿರ್ವಾಣ ಮಹಾಶಿವಯೋಗಿ ಗಳವರು ಹಚ್ಚಿದ ದೇಗುಲ ಜ್ಯೋತಿ ಶತ ಶತಮಾನಗಳಿಂದ ಹದಿನಾಲ್ಕು ಜನ ಪರಮ ಪೂಜ್ಯರ ಮೂಲಕ ಪ್ರಕಾಶಿಸುತ್ತಾ ತನ್ನ ಅಮೂಲ್ಯ ಸೇವೆಯನ್ನು ನಾಡಿನಾದ್ಯಂತ ವಿಸ್ತಾರಗೊಳಿಸುತ್ತಾ ಬಂದಿದೆ. ಶತಾಯುಷಿ ಲಿಂಗೈಕ್ಯ ಶ್ರೀ ಇಮ್ಮಡಿ ನಿರ್ವಾಣ ಮಹಾಸ್ವಾಮಿಗಳು ಹಾಗೂ ಲಿಂಗೈಕ್ಯ ಶ್ರೀ ಇಮ್ಮಡಿ ಮಹಾಲಿಂಗ ಸ್ವಾಮಿಗಳವರು ಧರ್ಮ ಬೋಧೆ ಜೊತೆಗೆ ಶಿಕ್ಷಣಕ್ಕೆ ವಿಶೇಷ ಮಹತ್ವವನ್ನು ನೀಡಿದರು.

ಆ ಮೂಲಕವಾಗಿ ನಾಡಿನ ಪ್ರತಿಯೊಬ್ಬರು ಸುಶಿಕ್ಷಿತರಾಗಬೇಕು ಎನ್ನುವ ಮಹದಾಸೆಯನ್ನು ಹೊಂದಿದ್ದರು.

ಇದನ್ನು ಮನದಲ್ಲಿ ಅರಿತ ಪ್ರಸ್ತುತ ಪೀಠಾಧಿಪಥಿಗಳಾದ ಶ್ರೀ ಡಾ. ಮುಮ್ಮಡಿ ನಿರ್ವಾಣ ಮಹಾಸ್ವಾಮಿಗಳು ತ್ರಿವಿಧ ದಾಸೋಹ ಮೂರ್ತಿಗಳಾಗಿ ಅನೇಕ ಶಿಕ್ಷಣ ಸಂಸ್ಥೆಗಳನ್ನು ಸ್ಥಾಪಿಸಿ, ಲಕ್ಷಾಂತರ ಬಡವಿದ್ಯಾರ್ಥಿಗಳ ಬಾಳಿಗೆ  ದಾರಿದೀಪವಾಗಿದ್ದಾರೆ.

ಪೂಜ್ಯರ ಜೊತೆಗೆ ಲಿಂಗೈಕ್ಯ ಶ್ರೀ ಮುಮ್ಮಡಿ ಮಹಾಲಿಂಗ ಮಹಾಸ್ವಾಮಿಗಳು ಶ್ರೀ ಮಠದ ಧಾರ್ಮಿಕ, ಸಾಮಾಜಿಕ, ಸಾಂಸ್ಕೃತಿಕ ಹಾಗೂ ಶೈಕ್ಷಣಿಕ ಸೇವೆಗಳು ಉನ್ನತೊನ್ನತವಾಗಿ ಪಸರಿಸಲು ಕೈ ಜೋಡಿಸಿ ಬೆಳಕಾದುದು ಸ್ಮರಣೀಯ.

ಭವ್ಯ ಇತಿಹಾಸ ಹೊಂದಿದ ಶ್ರೀ ಮಠವು ಸಾಂಸ್ಕೃತಿಕವಾಗಿ, ಸಾಮಾಜಿಕವಾಗಿ ಹಾಗೂ ಶೈಕ್ಷಣಿಕವಾಗಿ ಜನೋಪಯೋಗಿ ಸೇವಾ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದು, ಸುಮಾರು 45 ಶಿಕ್ಷಣ ಸಂಸ್ಥೆಗಳು ಸೇವೆ ನೀಡುತ್ತಿವೆ. ಶ್ರೀ ಮಠದಲ್ಲಿ ಸುಮಾರು 2000 ವಿದ್ಯಾರ್ಥಿಗಳಿದ್ದು, ಅವರಿಗೆ ಉಚಿತವಾಗಿ ವಿದ್ಯಾಭ್ಯಾಸ ನೀಡಲಾಗುತ್ತಿದೆ.

ಕನಕಪುರ ಶ್ರೀ ದೇಗುಲ ಮಠದ ನೂತನ ಉತ್ತರಾಧಿಕಾರಿಯಾಗಿ ಕೆ.ಜಿ. ಶಿವಕುಮಾರ್ ನೇಮಕಗೊಂಡಿದ್ದು, ಅವರನ್ನು ಮಠದ ಹಿರಿಯ ಶ್ರೀಗಳಾದ ಡಾ. ನಿ.ಪ್ರ.ಸ್ವ.ಶ್ರೀ ಮುಮ್ಮಡಿ ನಿರ್ವಾಣ ಸ್ವಾಮೀಜಿ ಸ್ವೀಕಾರ ಮಾಡಿದರು.

ಶ್ರೀ ಮಠದ 13ನೆ ಮಠಾಧಿಪತಿಗಳಾದ್ದ ಶ್ರೀ ಮುಮ್ಮಡಿ ಮಹಾಲಿಂಗ ಸ್ವಾಮೀಜಿ ಆಕಸ್ಮಿಕವಾಗಿ ಕಿರಿಯ ವಯಸ್ಸಿನಲ್ಲಿಯೇ ಅನಾರೋಗ್ಯದಿಂದ ಲಿಂಗೈಕ್ಯರಾಗಿದ್ದರು. ಅವರ ಸ್ಥಾನಕ್ಕೆ ಶಿವಕುಮಾರ್ ಶ್ರೀ ಗಳನ್ನು ಆಯ್ಕೆ ಮಾಡಲಾಯಿತು.

ನೂತನ ಶ್ರೀಗಳಾದ ಶಿವಕುಮಾರ್ ಅವರು ಚಾಮರಾಜನಗರ ಜಿಲ್ಲೆಯ ಕುಲಗಾಣ ಗ್ರಾಮದ ಶರಣದಂಪತಿ ಎಸ್. ಕೋಮಲಾಂಬ ಹಾಗೂ ಕೆ. ಎಸ್. ಗೌರಿ ಶಂಕರ್ ಸ್ವಾಮಿಯ ಪುತ್ರ.

ಎಂ ಬಿ ಎ ಪದವಿಧರರಾಗಿದ್ದ, ಮೈಸೂರಿನ ಊಟಿ ರಸ್ತೆಯ ಜೆ ಎಸ್ ಎಸ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಿದ್ದಾರೆ.

ದೇಗುಲ ಮಠವ ಮತ್ತು ಶ್ರೀಗಳ ಕುರಿತು ಮಾಜಿ ಸಚಿವ ವಿ. ಸೋಮಣ್ಣ ರವರ ಮಾತುಗಳು.....

****** " ಸುತ್ತೂರು ಮತ್ತು ಸಿದ್ದಗಂಗಾ ಮಠಗಳು ಸಮಾಜದ ಎರಡು ಕಣ್ಣುಗಳಿಂದ್ದಂತೆ.ಇಂದು ಸುತ್ತೂರು ಶ್ರೀ ಮಠದಲ್ಲಿ ನಡೆಯುತ್ತಿರುವ ಶ್ರೀ ದೇಗುಲ ಮಠದ ನೂತನ ಉತ್ತರಾಧಿಕಾರಿ ಸ್ವೀಕಾರ ಕಾರ್ಯಕ್ರಮದಿಂದ ಖುಷಿಯಾಗಿದ್ದೇನೆ. [ ಅಂದಿನ ದಿನವಾಡಿದ ಮಾತಿದು]

ನಾನು ಕೂಡ ಶ್ರೀ ದೇಗುಲ ಮಠದ ಹಳೆಯ ವಿದ್ಯಾರ್ಥಿಯಾಗಿದ್ದೇನೆ. ಮಠವು ಸಾವಿರಾರು ವಿದ್ಯಾರ್ಥಿಗಳಿಗೆ ಅನ್ನ ಹಾಕುತ್ತಿವೆ. ವಿದ್ಯೆ ನೀಡುತ್ತಿದೆ. ನಾನು ಸಂಸ್ಕಾರ ಅಳವಡಿಸಿಕೊಳ್ಳಲು ದೇಗುಲ ಮಠವೇ ಕಾರಣ " ಎಂದರು.

ಹಾಗೆಯೇ

******* " ವೀರಶೈವ ಲಿಂಗಾಯತ ಧರ್ಮ ಸಾವಿರಾರು ವರ್ಷಗಳ ಇತಿಹಾಸ ಹೊಂದಿದೆ.

ಎಲ್ಲ ಮಠಗಳು ಸಮಾಜ ಮುಖಿ ಕೆಲಸ ಮಾಡುತ್ತಿದೆ. ಅಂತೆಯೇ ದೇಗುಲ ಮಠ ಹಳ್ಳಿ ಗಾಡು ಜನರ ಅಭಿವೃದ್ಧಿಗೆ ಶ್ರಮಿಸುತ್ತದೆ".

ಈ ಕುರಿತು ಶ್ರೀ ಶಿವರುದ್ರ ಸ್ವಾಮೀಜಿಗಳ ಮಾತು ----

" ಸುತ್ತೂರು ಮತ್ತು ಸಿದ್ದಗಂಗಾ ಮಠಗಳು ಸಮಾಜಕ್ಕೆ ಜ್ಞಾನ ನೀಡುತ್ತಿವೆ. ಸುತ್ತೂರು ಶ್ರೀಗಳ ಆಶೀರ್ವಾದದೊಂದಿಗೆ ಶ್ರೀ ದೇಗುಲ ಮಠಕ್ಕೆ ಉತ್ತರಾಧಿಕಾರಿಗಳನ್ನು ನೇಮಕ ಮಾಡಲಾಗಿದೆ. ಶ್ರೀ ಶಿವಕುಮಾರ್ ರವರು ದೇಗುಲ ಮಠದ ಹಿರಿಮೆ - ಗರಿಮೆಗಳನ್ನು ಕಾಪಾಡಿಕೊಂಡು ಮಠವನ್ನು ಇನ್ನಷ್ಟು ಬೆಳೆಸಬೇಕು". ಎಂದು ಹೇಳಿದರು.

                                                                     ----ಲಕ್ಷ್ಮೀ N K

                                                                            (LNK)