ವಿಷಯಕ್ಕೆ ಹೋಗು

ಸದಸ್ಯ:LNK1490081

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಬರಹ ರಾಕ್ಷಸ

[ಬದಲಾಯಿಸಿ]

ಬರಹ ರಾಕ್ಷಸ


ಕೆಣಕದಿರು ರಾಕ್ಷಸನ...

ಬರಹ ರಾಕ್ಷಸನ...

ಕೆಣಕಿದರೆ ಮಾಡುವನು

ನಿನ್ನಯ ಗುಣಗಾನ....


ಮುಟ್ಟ ದಿರು ಆತನ ಮನವನ್ನ

ಆತ ತೋರುವನು ರಕ್ಕಸತನ

ಆತನ ಸ್ನೇಹ- ಪ್ರೀತಿಯೇ ಲೇಖನ

ಬರಹದಲ್ಲೆ ಕೊಲ್ಲುವನು ಆತ ನಿನ್ನನ


ಬರಹದಲಿ ತ್ರಿಮೂರ್ತಿಗಳ ಗೆಲ್ಲುವವ

ಸಾಹಿತ್ಯ- ಸಾಹಿತ್ಯ ಪ್ರೇಮಿಗಳಿಗೆ ತಲೆ ಬಾಗುವವ

ದೇಶ- ಭಾಷೆಗಾಗಿ ನಿರಂತರ ಗೀಚುವವ

ಲೇಖನಿಯನ್ನು ಆಯುಧ ವೆನಿಸಿದವ


ಈತನು ರಕ್ಕಸ ರೂಪಿಯೇನಲ್ಲ

ಮನ್ಮಥನ ಹೋಲಲೆ ಬೇಕಂತಿಲ್ಲ

ಮನಸಾ ಏಕಾಗ್ರಹಿಸುವಲ್ಲಿ ಈತನು ನಲ್ಲ

ಕಾಲದ ಚಿಂತನೆಯನ್ನು ಈತ ಬಿಡುವವನಲ್ಲ


ಖಡ್ಗವೇನಿಲ್ಲ ಲೇಖನಿಯ ಮುಂದೆ

ಶಾರದಾ ದೇವಿಯೇ ಆತನ ಹಿಂದೆ

ಪುಸ್ತಕವೇ ಅವನ ತಾಯಿ- ತಂದೆ

ಇನ್ನೇನು ಅರಿಯುವೆ ಇದರ ಮುಂದೆ...

                                       - ಲಕ್ಷ್ಮೀ N K

                                         (LNK)