ಸದಸ್ಯ:Kushmetha K.A/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ


                                                              ಮುತ್ತುಗಳು
                                                            
 ಮುತ್ತುಗಳು:  
      ನವರತ್ನಗಳಲ್ಲಿ ಒಂದಾದ ಈ ಬೆಲೆಬಾಳುವ, ಅಪೂರ್ವ ರತ್ನ, ತನ್ನ್ನ ಆಕಾರ, ವರ್ಣವೈವಿಧ್ಯತೆ ಮತ್ತು ಮೃದುತ್ವಗಳಂತಹ ಗುಣಗಳಿಂದ, ಜನರನ್ನು ವಶೀಕರಿಸುತ್ತಾ ಬಂದಿದೆ. ಎಲ್ಲರನ್ನು ಪ್ರಾಚೀನ ಕಾಲದಿಂದಲೇ ತನ್ನ ಕಡೆ ಹಾಗು ತನ್ನ ಜನ್ಮರಹಸ್ಯದ ಕಡೆಗೆ ಸೆಳೆಯುತ್ತಾ ಬಂದಿರುವ ಈ ರತ್ನದ ಜನ್ಮವು ಒಂದು ನಿಜವಾದ ಪವಾಡವೇ ಎಂದು ಹೇಳಬಹುದು.
      ಎಲ್ಲಾ ಬೆಲೆಬಾಳುವ ರತ್ನಗಳು ಅಂದರೆ ವಜ್ರ, ಪಚ್ಚೆ, ಮಾಣಿಕ್ಯದಂತಹ ಹರಳುಗಳು ಹಾಗು ಚಿನ್ನ,, ಬೆಳ್ಳಿಯಂತಹ ಬೆಲೆ ಬಾಳುವ ಲೋಹಗಳು ಭೂಮಿಯನ್ನು ಅಗೆದಾಗ ಸಿಗುತ್ತವೆ. ಆದರೆ ಮುತ್ತುಗಳನ್ನು ಮಾತ್ರ ಆಳ ಸಮುದ್ರದೊಳಗೆ ಇರುವ ಸಿಂಪಿ ಚಿಪ್ಪುಗಳು ತಯಾರಿಸುತ್ತವೆ. ಬೆಲೆಬಾಳುವ ರತ್ನಗಳ ಅಂದ-ಚಂದಗಳನ್ನು ಹೊರತರಬೇಕಾದರೆ, ಅವುಗಳನ್ನು ಕತ್ತರಿಸಿ, ಮಾರ್ಪಡಿಸಿ, ಹೊಳೆಯುವಂತೆ ಮನುಷ್ಯರೇ ಮಾಡಬೇಕು. ಆದರೆ ಮುತ್ತುಗಳನ್ನು ಈ ಯಾವುದೇ ರೀತಿಯಲ್ಲಿ ಮಾರ್ಪಡಿಸುವ ಅಗತ್ಯವಿಲ್ಲ. ಅವುಗಳ ನೈಸರ್ಗಿಕ ಸೌಂದರ್ಯವೇ ಅವುಗಳ ವೈಶಿಷ್ಟ್ಯತೆ.
 ಮುತ್ತುಗಳ ಬಗ್ಗೆ ಇರುವ ತಪ್ಪು ಕಲ್ಪನೆಗಳು :
      ಕೆಲವರು ಮುತ್ತುಗಳು ದೇವರ ಕಂಬನಿಗಳೆಂದು ನಂಬಿದ್ದರು.ಇನ್ನು ಕೆಲವರು ಚಂದ್ರನ ಬೆಳದಿಂಗಳನ್ನು ತುಂಬಿಕೊಂಡ ಇಬ್ಬನಿ ಹನಿಗಳು ಸಮುದ್ರಕ್ಕೆ ಸೇರುತ್ತವೆ, ಆ ಹನಿಗಳನ್ನು ಸಿಂಪಿ ಚಿಪ್ಪುಗಳು ನುಂಗಿಬಿಟ್ಟವು, ಹೀಗೆ ಸಿಂಪಿ ಚಿಪ್ಪುಗಳ ಒಳಗೆ ಮುತ್ತುಗಳು ಬರುತ್ತವೆ ಎಂದು ಜನರು ತಿಳಿದರು.
      ಆದರೆ ಸಂಶೋಧನೆಗಳ ಮೂಲಕ ತಿಳಿದು ಬಂದಿರುವುದೇನೆಂದರೆ, ಮುತ್ತುಗಳು ಒಂದು ಜೈವಿಕ ಪ್ರಕ್ರಿಯೆಯ ಫಲಿತಾಂಶ. ಸಿಂಪಿಗಳು ತಮ್ಮನ್ನು ತಾವು ಹೊರಪದಾರ್ಥಗಳಿಂದ  ಕಾಪಾಡಿಕೊಳ್ಳುವ ಸಲುವಾಗಿ, ಮುತ್ತುಗಳನ್ನು ತಯಾರಿಸುತ್ತವೆ.
 ಸಿಂಪಿಗಳೆಂದರೇನು?
    ಸಿಂಪಿಗಳನ್ನು ನಾವು ಸಾಮಾನ್ಯವಾಗಿ ಸಮುದ್ರಗಳ ಒಳಗೆ ಕಾಣಬಹುದು. ಸಿಂಪಿಗಳಿಗಿರುವ ಚಿಪ್ಪುಗಳಿಗೆ ಎರಡು ಭಾಗಗಳನ್ನು ಒಂದು ಇಲಾಸ್ಟಿಕ್ ಕಟ್ಟು ಕುಡಿಸುತ್ತದೆ. ಅಂದರೆ, ಈ ಇಲಾಸ್ಟಿಕ್ ಕಟ್ಟು ಸಿಂಪಿ ಚಿಪ್ಪುಗಳ ಭಾಗಗಳ ಒಂದು ಬದಿಯನ್ನು ಕೂಡಿಸುತ್ತದೆ, ಮಾತ್ತು ಇನ್ನೊಂದು ಬದಿಯನ್ನು ಕೂಡಿಸದೆ ಅದನ್ನು ಹಾಗೆಯೇ ತೆರೆದಿಡುತ್ತದೆ. ಈ ತೆರೆದ ಬಾಯಿಯ ಮೂಲಕ ಸಿಂಪಿಗಳು ತಮ್ಮ ಆಹಾರವನ್ನು ಸೇವಿಸುತ್ತದೆ. ಸಿಂಪಿಗಳು ಬೆಳೆದಂತೆ, ಅವುಗಳ ಚಿಪ್ಪುಗಳ ಗಾತ್ರವೂ ಬೆಳೆಯುತ್ತದೆ. ಈ ಚಿಪ್ಪುಗಳ ಒಳಪದರವನ್ನು ಮುತ್ತು ಚಿಪ್ಪು ಎಂದು ಕರೆಯುತ್ತರೆ. ಸಿಂಪಿಗಳ ಕವಚವು , ಸಿಂಪಿಗಳು ತಿಂದ ಆಹಾರದಲ್ಲಿರುವ ಖನಿಜಗಳ ಸಹಾಯದಿಂದ ಈ ಮುತ್ತು ಚಿಪ್ಪುಗಳನ್ನು ತಯಾರು ಮಾಡುತ್ತದೆ. ಮುತ್ತು ಚಿಪ್ಪುಗಳ ಸಹಾಯದಿಂದ ಸಿಂಪಿಗಳು ಮುತ್ತುಗಳಿಗೆ ಜನ್ಮ ನೀಡುತ್ತವೆ.
   ಸಿಂಪಿಗಳಲ್ಲಿ ಹಲವಾರು-ತರಹದ ಸಿಂಪಿಗಳಿರುತ್ತವೆ, ಹಾಗೆಯೇ ಹಲವಾರು-ತರಹದ ಮುತ್ತುಗಳನ್ನು ತಯಾರಿಸುತ್ತವೆ. ಎಲ್ಲಾ ಸಿಂಪಿಗಳೂ ನೈಸರ್ಗಿಕ ಮುತ್ತುಗಳನ್ನು ತಯಾರಿಸುವುದಲ್ಲ. ನೈಸರ್ಗಿಕ ಮುತ್ತುಗಳು ಸಿಗುವುದು ಬಹಳ ಅಪರೂಪ. ನೈಸರ್ಗಿಕ ಮುತ್ತುಗಳನ್ನು ಮಾಡಲು ವಿಶಿಷ್ಟವಾದ ಸಿಂಪಿಗಳೇ ಇರುತ್ತವೆ. 
 ಮುತ್ತುಗಳು ಹೇಗೆ ತಯಾರಾಗುತ್ತವೆ?
   ಯಾವುದಾದರು ಪರೋಪಜೀವಿ ದಾಳಿ ಮಾಡಿದಾಗ, ಅಥವಾ ಯಾವುದಾದರು ಹೊರ ಪದಾರ್ಥವು, ಸಿಂಪಿಯ ಕವಚ ಹಾಗು ಚಿಪ್ಪುಗಳ ನಡುವೆ ಸಿಲುಕಿ ಕೊಂಡರೆ, ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗುತ್ತದೆ. ಕಿರಿಕಿರಿ ಉಂಟಾಗಲು ಶುರುವಾದಾಗ, ಮುತ್ತನ್ನು ತಯಾರು ಮಾಡಲು ಶುರುಮಾಡುತ್ತದೆ. ಸಿಂಪಿಯ ಕವಚಕ್ಕೆ ಕಿರಿಕಿರಿ ಉಂಟಾಗಿ ಅಲ್ಲಿ ಗಾಯವಾದಂತೆ ಆಗುತ್ತದೆ. ಹೀಗೆ ಆದ ಗಾಯವನ್ನು ಗುಣಪಡಿಸಿಕೊಳ್ಳಲು, ಮೊದಲು ಮುತ್ತು ಚಿಪ್ಪನ್ನು ತಯಾರಿಸುತ್ತದೆ.
   ಗಾಯವಾದಾಗ ಸಿಂಪಿಯು ಎರಡು ರೀತಿಯ ಪ್ರೋಟೀನನ್ನು ಹೊರಹಾಕುತ್ತದೆ. ಅವು ಕೊಂಚಿನ್ ಮತ್ತು ಪೆರ್ಲುಸಿನ್. ಈ ಎರಡು ಪ್ರೋಟೀನ್ ಗಳು ಸೇರಿ ಕೊಂಕಿಯೊಲಿನ್  ಎಂಬ ಒಂದು ಮೇಟ್ರಿಕ್ಸ್ ಆಗಿ ರೂಪುಗೊಳ್ಳುತ್ತದೆ. ಸಿಂಪಿಗಳೂ ಆರೊಗೊನೈಟ್ಹ ಹರಳುಗಳನ್ನು ಆ ಮೇಟ್ರಿಕ್ಸ್ ನಲ್ಲಿರುವ ಖಾಲಿ ಜಾಗಗಳಲ್ಲಿ ತುಂಬುತ್ತವೆ. ಆರೊಗೊನೈಟ್ ಹರಳುಗಳಲ್ಲಿ ಕಾಲ್ಶಿಯಂ ಕಾರ್ಬೊನೇಟ್  ಇರುತ್ತದೆ. ಈ ರೀತಿಯಲ್ಲಿ ಆಗಿರುವ ಕೊಂಕಿಯೊಲಿನ್ ಮತ್ತು ಆರೊಗೊನೈಟ್ ಮಿಶ್ರಣವೇ ಮುತ್ತು ಚಿಪ್ಪು . ಸಿಂಪಿಯು ಹೊರ ಪದಾರ್ಥದ ಮೇಲೆ ಈ ಮುತ್ತು ಚಿಪ್ಪಿನ ಪದರವನ್ನು ಹರಡುತ್ತಾ ಹೋಗುತ್ತದೆ. ಪದರಗಳ ಮೇಲೆ ಪದರವನ್ನು ಹರಡಿ, ಆ ಹೊರ ಪದಾರ್ಥವನ್ನು ಒಂದು ಮೃದುವಾದ ಮುತ್ತಾಗಿ ಹೊರಹಾಕುತ್ತದೆ.ಹೀಗೆ ಹೊರ ಪದಾರ್ಥವನ್ನು ಮುತ್ತಾಗಿ ಬದಲಾಯಿಸುವುದರಿಂದ ಸಿಂಪಿಗೆ ಆದ ಕಿರಿಕಿರಿಯು ಕಡಿಮೆ ಆಗುತ್ತದೆ. ಇದುವೇ ಸಿಂಪಿಗಳು ಮುತ್ತುಗಳನ್ನು ತಯಾರಿಸುವ ಅದ್ಭುತ ಪ್ರಕ್ರಿಯೆ. ಕೆಲವರು, ಒಂದು ಕಾಳು ಮರಳು ಸಿಂಪಿಗಳಲ್ಲಿ ಹೊರಪದಾರ್ಥವಾಗಿ ಕಿರಿಕಿರಿ ಮಾಡಲು ಪ್ರಯತ್ನಿಸಿದಾಗ ಮಾತ್ರ, ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ ಎನ್ನುತ್ತಾರೆ. ಆದರೆ ಮರಳಲ್ಲದೆ, ಯಾವುದೇ ವಿದೇಶಿ ಪದಾರ್ಥಗಳು ಅವುಗಳ ಮಧ್ಯೆ ಉಳಿದರೆ, ಅದರಿಂದ ಸಿಂಪಿಗೆ ಕಿರಿಕಿರಿ ಉಂಟಾಗಿ ಮುತ್ತು ಚಿಪ್ಪು ಹರಡಿಕೆ ಶುರುವಾಗುತ್ತದೆ.
 ಮುತ್ತುಗಳಲ್ಲಿ ವರ್ಗೀಕರಣ:
     ನೈಸರ್ಗಿಕ ಮುತ್ತುಗಳು: ಮನುಷ್ಯನ ಹಸ್ತಕ್ಷೇಪವಿಲ್ಲದೆ ಸಿಂಪಿಗಳಿಂದ ತಯಾರಾಗುವ ಮುತ್ತುಗಳೇ ನೈಸರ್ಗಿಕ ಮುತ್ತುಗಳು.
     ಬೆಳೆಸಿದ ಮುತ್ತುಗಳು: ಈ ರೀತಿಯ ಮುತ್ತುಗಳನ್ನು ಸಿಂಪಿಗಳು ತಯಾರು ಮಾಡುವಾಗ, ಅದರಲ್ಲಿ ಮನುಷ್ಯನ ಕೈವಾಡವೂ ಇರುತ್ತದೆ. ಅಂದರೆ ಮನುಷ್ಯರು ಸಿಂಪಿಗಳನ್ನು ಬೆಳೆಸಿ, ಅವುಗಳಿಂದ ಮುತ್ತುಗಳನ್ನು ಪಡೆಯಲು, ಅವುಗಳಿಗೆ ಗಾಯ ಮಾಡುತ್ತಾನೆ. ಈ ರೀತಿ ಗಾಯ ಮಾಡಿದಾಗ ಅವುಗಳಿಗೆ ಕಿರಿಕಿರಿ ಉಂಟಾಗಿ ಮುತ್ತುಚಿಪ್ಪಿನ ಪದರವನ್ನು ಗಾಯ/ಹೊರ ಪದಾರ್ಥದ ಮೇಲೆ ಹರಡಲು ಶುರುಮಾಡುತ್ತದೆ. ಈ ರೀತಿ ಜನ್ಮ ಪಡೆದುಕೊಂಡ ಮುತ್ತಿಗೆ ಬೆಳೆಸಿದ ಮುತ್ತುಗಳು ಎನ್ನುತ್ತಾರೆ.
     ನೈಸರ್ಗಿಕ ಮುತ್ತುಗಳು: ಇವು ಮುಟ್ಟಲು ಮೃದುವಾಗಿರುತ್ತದೆ; ಆದರೆ ಕಚ್ಚಿದಾಗ ಸಮಗ್ರವಾಗಿರುತ್ತದೆ.
     ಕೃತಕ ಮುತ್ತುಗಳು: ಇವುಗಳನ್ನು ಕಚ್ಚಿದರೆ ಅವು ಸಮಗ್ರವಾಗಿರುವುದಿಲ್ಲ.