ಸದಸ್ಯ:Kumara m lamani/sandbox

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಮೂಹ ಮಾದ್ಯಮ ಶಿಕ್ಷಣ ಅವಕಾಶ ಮತ್ತು ಆಧ್ಯತೆ

                ಹೇಗೆ ಶಾಸಕಾಂಗ,ಕಾರ್ಯಾಂಗ ನ್ಯಾಯಾಂಗ ಸಂವಿಧಾನದಲ್ಲಿ ಮುಖ್ಯ ಪಾತ್ರ ವಹಿಸುತ್ತವೆಯೋ ಅಂತೆಯೇ ಮಾಧ್ಯಮಗಳೂ ನಾಲ್ಕನೇ ಅಂಗವಾಗಿ ಕೆಲಸ ಮಾಡುತ್ತವೆಯಂತೆ! ಒಂದು ಸಮಾಜವನ್ನು ತಕ್ಕಮಟ್ಟಿಗೆ ತಿದ್ದುವ ಕೆಲಸ ಒಬ್ಬ ವ್ಯಕ್ತಿತಯಿಂದ ಸಾಧ್ಯವಾಗಬೇಕೆಂದರೆ ಅದು ಮಾಧ್ಯಮದಿಂದ ಮಾತ್ರ ಸಾಧ್ಯ.ಯಾಕೆಂದರೆ ಮಾಧ್ಯಮಗಳು ಅಷ್ಟೇ ಪರಿಣಾಮಕಾರಿಯಾಗಿ ಕೆಲಸ ಮಾಡುತ್ತದೆ ಮತ್ತು ಮಾಡಬೇಕಾಗಿದೆ ಕೂಡ. ಸಮೂಹ ಮಾಧ್ಯಮ ಎನ್ನುವುದು ಅದೊಂದು ವಿಶಾಲವಾದ ಕಲ್ಪನೆ.ಎಲ್ಲಿ ಸರಕಾರದ ಸಣ್ಣ ಸಂದೇಶವೂ ಒಬ್ಬ ಸಾಮಾನ್ಯ ವ್ಯಕ್ತಿಗೆ ತಲುಪುದೆಯೋ ಅಲ್ಲಿ ಸಮೂಹ ಮಾಧ್ಯಮಗಳು ಕ್ರಿಯಾಶೀಲಾರಾಗಿ ಕೆಲಸಮಾಡುತ್ತದೆ ಎಂದು ಅರ್ಧ.
                   "ಆಡು ಮುಟ್ಟದ ಸೊಪ್ಪಿಲ್ಲ" ಎಂಬಂತೆ ಮಾಧ್ಯಮಕ್ಕೆ ದಾಸರಾಗದ ಜನರಿಲ್ಲ"ಎಂಬ ಮಾತು ಇಂದು ಅಕ್ಷರಸಹ ಸತ್ಯ ಬೆಳಗೆದ್ದು ಟೀಯೋಡನೆ ದಿನಪತ್ರಿಕೆ ಕೈಗೆ ಸಿಗಲಿಲ್ಲ ಎಂದರೆ ಆ ದಿನವೆಲ್ಲ ಏನೋ ಕಳೆದುಕೊಂಡಂತೆ. ಒಂದು ವಿಷಯ ಮಾಧ್ಯಮದಲ್ಲಿ ಪ್ರಸಾರವಾಯಿತು ಎಂದರೆ ಮಾತ್ರ ಅದು ಸುದ್ದಿ ಏನಿಸಿಕೊಳ್ಳುವ ಕಾಲ ಇದು.ಸಮ ಮಾಧ್ಯಮಗಳು ಯಾವುದೇ ಆಗಿರಬಹುದು. ಟಿ.ವಿ,ರೇಡಿಯೋ,ವಾಟ್ಸಪ್ ಪಟ್ಟಿ ಬೆಳೆಯುತ್ತಾ ಹೋಗುತ್ತದೆ. ಇದು ಅವಸರದ ಯುಗ ಒಂದು ಕಡೆ ಕುಳಿತು ಓದುವ ತಾಳ್ಮೆ ಬಹಳ ಕಡಿಮೆ ಇದೆ. ಆದ್ದರಿಂದ ಅಂತರ್ಜಾಲದಲ್ಲಿ ಸಿಗುವ ಪುಟ್ಟ,ಪುಟ್ಟ ಮಾಹಿತಿಗಾಗಿ ಮೋರೆಹೋಗುತ್ತಾರೆ. 
                        ಈ ಬೆಳೆಯುತ್ತಿರುವ ಮಾಧ್ಯಮಗಳು ಪ್ರಮುಖ ಮಾಧ್ಯಮಗಳು ಬಿತ್ತಿರಿಸಿದ ಇರುವ ಸಣ್ಣ ಪುಟ್ಟ ಸುದ್ದಿ ಕೆಲವೊಮ್ಮೆ ಮಹತ್ವದ ವಿಷಯವನ್ನು ಬಿತ್ತರಿಸುತ್ತದೆ. ಯಾರು ಬೇಕಾದರು ಮಾಧ್ಯಮ ರಂಗದಲ್ಲಿ ಕೆಲಸ ಮಾಡಬಹುದು. ಆತನಿಗೆ ಸ್ವಲ್ಪ ಕ್ರಿಯೇಟಿವಿಟಿ ಮನಸ್ಸು ಇದ್ದರೆ ಸಾಕು ಎಂದು 'ಪೈಡ್ ನ್ಯೂಸ್'ಗಳ ಸಮಸ್ಯೆ ಬಹುಪಾಲು ಎಲ್ಲಾ ಮಾಧ್ಯಮಗಳ ಮೊದಲ ಆದ್ಯತೆಯಾಗಿದೆ ಎಂದೇ ಹೇಳಬಹುದು.ಕ್ರಿಯೇಟಿವಿಟಿ ಒಂದಿದ್ದರೆ ಮಾಧ್ಯಮಕ್ಕೆ ಯಾರು ಬೇಕಾದರೂ ದುಮ್ಮುಕಬಹುದು.