ಸದಸ್ಯ:Kumar S (2210564)/ನನ್ನ ಪ್ರಯೋಗಪುಟ
ನನ್ನ ಪರಿಚಯ
ನಮಸ್ಕಾರ! ನನ್ನ ಹೆಸರು ಕುಮಾರ್. ನಾನು ಬೆಂಗಳೂರಿನ ನಿವಾಸಿ. ನನ್ನ ತಂದೆಯ ಹೆಸರು ಸುಂದರ್ ರಾಜ್. ತಾಯಿ ಪಾರ್ವತಿ.ನಾನು ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದೆ . ನನ್ನನ್ನು ಯಾವಾಗಲೂ ಎತ್ತಿಕೊಂಡೇ ಬೆಳೆಸಿದ್ದರು. ಆದ್ದರಿಂದ ನಾನು ಯಾವುದೇ ಕೆಲಸ ಮಾಡಲು ಅವಕಾಶ ಸಿಗುತ್ತಿರಲಿಲ್ಲ. ಹಾಗೆ ನಾನು ಬಯಸಿದ ಮತ್ತು ಇಷ್ಟಪಡುವ ಎಲ್ಲಾ ವಸ್ತುಗಳನ್ನು ಬಹು ಬೇಗನೆ ಪಡೆಯುತ್ತಿದ್ದೆ.
ಬಾಲ್ಯದ ಬದುಕು
ನಾನು 5 ನೇ ವಯಸ್ಸಿನಲ್ಲಿ ನನ್ನ ಶಾಲಾ ಶಿಕ್ಷಣವನ್ನು ಪ್ರಾರಂಭಿಸಿದ ನನ್ನ ಮೊದಲ ಶಾಲೆ ಮಾರುತಿ ವಿದ್ಯಾಲಯ. ಅಲ್ಲಿ ಕಂಡ ಸುಂದರವಾದ ಕ್ಷಣಗಳನ್ನು ನೆನೆಸಿಕೊಂಡರೇ ಸಂತೋಷವಾಗುತ್ತದೆ. ಅಲ್ಲಿ ನಾನು ಒಳ್ಳೆಯ ಸ್ನೇಹಿತರೆ ಇದ್ದರು. ನಂತರ 7 ನೇ ತರಗತಿ ಆದಮೇಲೆ ಹೊಂಬೆಗೌಡ ಬಾಲಕರ ಪ್ರಾಡಶಾಲೆಗೆ ಸೇರಿದೆ. ಅಲ್ಲಿ ನನ್ನ ಪ್ರಾಥಮಿಕ ಶಿಕ್ಷಣವನ್ನು ಪಡೆದೆ. ಅಲ್ಲಿ ಪ್ರತಿಭಾಕಾರಂಜಿ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದೆ. ಅದರಲ್ಲಿ ಬಹುಮಾನಗಳನ್ನು ಗೆದ್ದಿದ್ದೇನೆ. ನಾನು ಚಿಕ್ಕವಯಸ್ಸಿನಿಂದಲೂ ಖೋಖೋ ಆಡುತ್ತೀದ್ದೇನೆ. ತುಂಬಾ ಆಸಕ್ತಿ. ಅದರಲ್ಲಿ ಆಟ ವಾಡಿ ಬಹುಮಾನ ಗೆದ್ದಿದ್ದೇನೆ. ಶಾಲೆ ಮುಗಿದ ನಂತರ ಮನೆಗೆ ಹೋಗಿ ಗೆಳೆಯರ ಜೊತೆ ಮೈದಾನದಲ್ಲಿ ಆಟವಾಡುತ್ತಿದ್ದೆ . ನಂತರ ಮನೆಗೆ ತೆರಳುತ್ತಿದ್ದೆ. ಮನೆಯಲ್ಲಿ ಸಮಯ ಸಿಕ್ಕರೆ ಓದುತ್ತಿದ್ದೆ. ಇಲ್ಲವೆಂದರೆ ಮಲಗುತ್ತಿದ್ದೆ. ಇದು ನನ್ನ ದಿನನಿತ್ಯದ ಚಟುವಟಿಕೆಯಾಗಿತ್ತು. ಶಾಲೆಯಲ್ಲಿ ಪರೀಕ್ಷೆ ನಡೆಯುವ ಸಮಯದಲ್ಲಿ ಒಳ್ಳೆಯ ಅಂಕಗಳನ್ನು ತೆಗೆದುಕೊಳ್ಳುತ್ತಿದ್ದೆ. ನಂತರ ಕಾಲೇಜು. ಮನೆಯಲ್ಲಿ ತಂದೆ ತಾಯಿ ಹೇಳಿದ ಮಾತು ಕೇಳುತ್ತಿದ್ದೇನೆ. ಅವರು ನನಗೆ ಯಾವಾಗಲು ಓದು ಓದು ಅಂತ ಹೇಳುತ್ತಾರೆ.
ನನ್ನ ಬದುಕಿನಲ್ಲಿ ನಡೆದ ಒಳ್ಳೆಯ ಘಟನೆಯೆಂದರೆ ಖೋ ಖೋ ಗೆ ಆಯ್ಕೆಯಾಗಿದ್ದು. ಮೊದಲಿನಿಂದ ನನಗೆ ಚಿಕ್ಕವನಿಂದ ಕ್ರೀಡೆಯಲ್ಲಿ ಆಸಕ್ತಿ ಇರಲಿಲ್ಲ.
ಯಾವುದೇ ಚಟುವಟಿಕೆಗಳಲ್ಲಿ ಭಾಗವಹಿಸುತ್ತಿರಲಿಲ್ಲ ಶಾಲೆ ಮುಗಿದ ನಂತರ ಮನೆಗೆ ತೆರಳುತ್ತಿದ್ದೆ. ಸ್ನೇಹಿತರ ಬಳಿಯೂ ಸಹ ಕಾಲವನ್ನು ಕಳೆಯುತ್ತಿರಲಿಲ್ಲ. ನಂತರ ವಾತಾವರಣ ಬದಲಾಗುತ್ತಿದ್ದ ಹಾಗೆ ನಾನು ಬದಲಾಗುತ್ತಿದ್ದೆ. ನಾನು 6 ನೇ ತರಗತಿಯಿಂದ ಖೋ ಖೋ ಆಡಲು ಪ್ರಾರಂಭಿಸಿದೆ. ಈ ಆಟವನ್ನು ಮುಂದುವರಿಸಬೇಕೆಂದು ಅಂದೇ ತೀರ್ಮಾನ ಮಾಡಿದ್ದೆ.
ಕ್ರೀಡೆಯಲ್ಲಿ ಆಸಕ್ತಿ
ನನ್ನ ಮೊದಲ ಪಂದ್ಯ ಮಾರುತಿ ವಿದ್ಯಾಲಯ ಶಾಲೆಯ ಪರವಾಗಿ ಆಡಿದ್ದೆ. ಅದು ಕ್ಲಸ್ಟರ್ ಮಟ್ಟದ ಪಂದ್ಯಾವಳಿ ಆಗಿತ್ತು ನಾನು ನನ್ನ ತಂಡದ ನಾಯಕನಾಗಿದ್ದೆ. ಇದರಲ್ಲಿ ನಂತರ ನಾವು ಮೊದಲ ಪಂದ್ಯವನ್ನು ಗೆದ್ದೆವು ನಂತರ ನಾವು ಮುಂದಿನ ಹಂತಕ್ಕೆ ಪ್ರವೇಶಿಸಿದ್ದರು ಇದುವರೆಗೂ ನಮ್ಮ ಮಾರುತಿ ವಿದ್ಯಾಲಯ ಶಾಲೆ ಕ್ಲಸ್ಟರ್ ಮಟ್ಟವನ್ನು ಗೆದ್ದಿಯೇ ಇರಲಿಲ್ಲ. ನಂತರ ಫೈನಲ್ ಪಂದ್ಯ ರಾಣಿ ಸರಳಾ ದೇವಿ ಶಾಲೆಯ ಮೇಲಿತ್ತು.
ಎಲ್ಲರೂ ನಾವು ಗೆಲ್ಲುವುದಿಲ್ಲ ಒಂದೇ ಹೇಳುತ್ತಿದ್ದಾರೆ ಆಟವನ್ನು ನಂಬುತ್ತಿರಲಿಲ್ಲ. ಎಲ್ಲರಿಗೂ ಭಯವಿತ್ತು ನಾವು ಸೋಲೆ ಸೋಲುತ್ತೇವೆ ಎಂದು ಆದರೆ ಆ ಸಮಯದಲ್ಲಿ ನಮ್ಮ ಮೇಷ್ಟ್ರು ಎಲ್ಲರ ಗಮನವನ್ನು ಗೆಲುವಿನತ್ತ ಸೆಳೆದರು. ಬೇರೆ ಬೇರೆ ಶಾಲೆಯ ಮಕ್ಕಳು ನಮ್ಮನ್ನು ಭಯಪಡಿಸಿದರು ನೀವು ಗೆಲ್ಲುವುದಕ್ಕೆ ಆಗುವುದಿಲ್ಲವೆಂದು ಏಕೆಂದರೆ ಅವರದು ಬಲಿಷ್ಠವಾದ ತಂಡ ಆದ್ದರಿಂದ ನಮಗೆ ಅವರನ್ನು ಸೋಲಿಸಲು ಆಗುವುದಿಲ್ಲ. ಆದರೆ ಇದನ್ನು ನಾವು ಸವಾಲಾಗಿ ಪರಿಗಣಿಸಿದೆವು. ನಂತರ ಪಂದ್ಯ ಆರಂಭವಾದಾಗ ನಾವು ಗೆಲ್ಲಲೇ ಬೇಕೆಂಬ ಮನೋಭಾವನೆಯಿಂದ ಆಡಿದೆವು. ನಂತರ ಆ ಪಂದ್ಯವನ್ನು ನಾವು ಗೆದ್ದೆವು ಇದರಲ್ಲಿ ನನಗೆ ಖುಷಿಯನ್ನು ತಂದು ಕೊಡುವ ವಿಚಾರ. ನನಗೆ ಹೆಮ್ಮೆಯ ವಿಚಾರವೇನೆಂದರೆ ಇದುವರೆಗೂ ಕ್ಲಸ್ಟರ್ ಮಟ್ಟವನ್ನು ಗೆಲ್ಲದೆ ಇದ್ದ ಶಾಲೆ ನನ್ನ ನಾಯಕತ್ವದಲ್ಲಿ ಗೆದ್ದಿತು. ಇದು ನನಗೆ ತುಂಬಾ ಖುಷಿ ಪಡುವಂತ ವಿಚಾರವಾಗಿದ್ದು ನಂತರ ನನ್ನ ಖೋ ಖೋ ಪ್ರಯಾಣ ಆರಂಭವಾಯಿತು. ನಂತರ ಆಟವನ್ನು ಇನ್ನೂ ಬಲಪಡಿಸಲು ಬೇರೆಯ ಕ್ಲಬ್ ಗಳಿಗೆ ಸೇರಿದೆ ಮಾರನೇ ದಿನ ನನಗೆ ನನ್ನ ಶಾಲೆಯಲ್ಲಿ ಸಿಕ್ಕ ಗೌರವ ನೋಡಿ ಖುಷಿಯಾಯಿತು. ನಂತರ ನನ್ನ ಏಳನೇ ತರಗತಿ ಮುಗಿಯಿತು ನಂತರ ಹೊಂಬೆಗೌಡ ಬಾಲಕರ ಪ್ರೌಢಶಾಲೆಯಲ್ಲಿ ನನ್ನ ಮುಂದಿನ ಓದನ್ನು ನಡೆಸಿದೆ. ಅಲ್ಲಿಯೂ ಸಹ ಕ್ರೀಡೆಗೆ ಗೌರವಿಸುತ್ತಿದ್ದರು. ನಾನು ನನ್ನ ಪ್ರಾಥಮಿಕ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲೇ ನಡೆದಿದೆ ನಂತರ ನನ್ನ ಪ್ರೌಢ ಶಿಕ್ಷಣವನ್ನು ಬೊಂಬೆಗಳ ವಾದಕರ ಪ್ರೌಢಶಾಲೆಯಾದ ಆಂಗ್ಲ ಮಾಧ್ಯಮದಲ್ಲಿ ನಡೆಸಲು ಮುಂದಾದೆನು. ನಾನು ಎಂಟನೇ ತರಗತಿಯಲ್ಲಿ ಅಷ್ಟು ಚೆನ್ನಾಗಿ ಏನು ಓದುತ್ತಿರಲಿಲ್ಲ ನಂತರ ಅದರಿಂದ ಆದ ನನಗೆ ನೋವು ನಾನು ನನಗೆ ಮುಂದೆ ಚೆನ್ನಾಗಿ ಓದಲು ಪ್ರೋತ್ಸಾಹಿಸಿದ್ದು ನಂತರ ನಾನು ಚೆನ್ನಾಗಿ ಓದಲು ಪ್ರಾರಂಭಿಸಿದೆ. ಅದಾದ ಮೇಲೆ ಎಂಟನೇ ತರಗತಿ ಮುಗಿಯಿತು ಒಂಬತ್ತನೇ ತರಗತಿಗೆ ತೇರ್ಗಡೆಯಾದೆ 9ನೇ ತರಗತಿಯಲ್ಲಿ ನಾನು ಸರಿಯಾಗಿ ಓದರ ಕಾರಣ ಮೊದಲನೇ ಸೆಮಿಸ್ಟರ್ನಲ್ಲಿ ಫೇಲಾದೆ. ನಂತರ ಪರೀಕ್ಷೆಯನ್ನು ಮತ್ತೆ ಕಟ್ಟಿ ಬರೆದು ಅದರಲ್ಲಿ ಪಾಸಾಗಿ ಹತ್ತನೇ ತರಗತಿಗೆ ತೇರ್ಗಡೆಯಾದೆ ಹತ್ತನೇ ತರಗತಿಯಲ್ಲೂ ಸಹ ಕ್ರೀಡೆಯಲ್ಲಿ ತುಂಬಾ ಭಾಗವಹಿಸುತ್ತಿದೆ ಆದ ಕಾರಣದಿಂದ ಓದಲು ಸರಿಯಾಗಿ ಆಗುತ್ತಿರಲಿಲ್ಲ. ನಂತರ ಅದಕ್ಕೆ ಸ್ವಲ್ಪ ವಿರಾಮವನ್ನು ಕೊಟ್ಟು ಓದಿನ ಕಡೆ ಗಮನವಿಟ್ಟು, ನಂತರ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಗಳಿಸಿದೆನು. ಹೊಂಬೆಗೌಡ ಬಾಲಕರ ಪ್ರೌಢಶಾಲೆಯಲ್ಲಿ ಓದಿದ ನಾನು ಅಲ್ಲಿಯೂ ಸಹ ಕ್ರೀಡೆಯಲ್ಲಿ ಭಾಗವಹಿಸಿ ತಾಲೂಕು ಮಟ್ಟದಲ್ಲಿ ಪ್ರಥಮ ಬಹುಮಾನಗಳಿಗೆ 15 ವರ್ಷಗಳ ನಂತರ ಒಂದೇಗೌಡ ಶಾಲೆಯು ತಾಲೂಕು ಮಟ್ಟವನ್ನು ಗೆದ್ದಿತು ಅದರಲ್ಲೂ ಸಹ ನಾನೇ ನಾಯಕನಾಗಿದ್ದೇನು. ನಾನು ಕ್ರೀಡೆಯಲ್ಲಿ ಅಲ್ಲದೆ ಓದಿನಲೂ ಸಹ ತುಂಬಾ ಆಸಕ್ತಿಯುಳ್ಳವನಾಗಿದ್ದವನು. 10ನೇ ತರಗತಿ ಮುಗಿದ ಮೇಲೆ ಮುಂದೆ ಏನು ಮಾಡುವುದು ಎಂದು ತಿಳಿಯದೆ ಬೇರೆ ಬೇರೆಯವರನ್ನು ಕೇಳಿ ಅವರ ಜೊತೆ ಮಾತನಾಡಿ ಯಾವ ಏನು ಮಾಡಬೇಕೆಂದು ಮುಂದೆ ಯೋಚಿಸಿ ಮೊದಲನೇ ಪಿಯುಗೆ ಸೇರಿಕೊಂಡೆನು. ನಾನು ಓದಿದ ಪಿಯು ಕಾಲೇಜ್ ಓದಿದ ಪಿಯು ಕಾಲೇಜ್ ಶ್ರೀಮತಿ ಗಂಗಮ್ಮ ಹೊಂಬೆಗೌಡ ಪದವಿಪೂರ್ವ ಕಾಲೇಜು. ನನ್ನ ಪ್ರೌಢ ಶಿಕ್ಷಣವನ್ನು ಅಲ್ಲಿಯೇ ಮುಗಿಸಿದ ನಂತರ ಪದವಿಪೂರ್ವ ಕಾಲೇಜು ಸಹ ಅಲ್ಲಿಯೇ ಓದಿದ್ದರಿಂದ ನನಗೆ ಫೀಸ್ ಅನ್ನು ತುಂಬಾ ಕಡಿಮೆ ಮಾಡಿಕೊಂಡಿದ್ದರು. ಆದರೆ ನಾನು ತಪ್ಪು ಮಾಡಿಬಿಟ್ಟೆನು ಎಂದು ನನಗೆ ತುಂಬಾ ಚಿಂತೆಯಾಯಿತು ಏಕೆಂದರೆ ಅಲ್ಲಿ ಅಂತಹ ವಿದ್ಯಾಭ್ಯಾಸ ಇರಲಿಲ್ಲ ಏಕೆಂದರೆ ಅಲ್ಲಿನ ಅಧ್ಯಾಪಕರು ಸರಿಯಾಗಿ ಹೇಳಿಕೊಡುತ್ತಿರಲಿಲ್ಲ ಎಷ್ಟೋ ಜನರು ನನಗೆ ಬೈದರು ಏಕೆಂದರೆ ಯಾಕೆ ನೀನು ಅಲ್ಲಿ ಸೇರಿದೆ ಎಂದು ಆದರೂ ಸಹ ನಾನು ಏನು ಮಾಡಲಿಕ್ಕೆ ಸಾಧ್ಯವಾಗದೆ ಅಲ್ಲಿಯೇ ನನ್ನ ಪದವಿಪೂರ್ವ ಶಿಕ್ಷಣವನ್ನು ಮುಗಿಸಿದೆ. ನಂತರ ಎರಡನೇ ಪಿಯುಸಿ ಆದರೆ ಆ ಸಮಯದಲ್ಲಿ ಕರೋನ ನಮಗೆ ಒಕ್ಕರೀಸಿತು. ಕರುಣದ ಮೊದಲನೇ ಅಲೆಯಲ್ಲಿ ತುಂಬಾ ಸಂಕಷ್ಟಗಳನ್ನು ಎದುರಿಸಿದವು. ಆಗ ಕಾಲೇಜುಗಳೆಲ್ಲಾ ಮುಚ್ಚಿದ್ದವು ಆದ್ದರಿಂದ ಮನೆಯಲ್ಲಿ ಕುಳಿತು ಕಾಲವನ್ನು ಕಳೆಯಬೇಕಾಗಿತ್ತು ಆದರೂ ಸಹ ಈ ಕರೋನವೂ ಹೊರಗಿನ ಪ್ರಪಂಚಕ್ಕೆ ಕೆಟ್ಟದಾದರೂ ಸಹ ನಮ್ಮ ಒಳಗಿನ ಪ್ರಪಂಚಕ್ಕೆ ಒಳ್ಳೆಯದಾಯಿತು ಏಕೆಂದರೆ ಲಾಕ್ಡೌನ್ ನಿಂದ ಎಲ್ಲರೂ ಸಹ ತಮ್ಮ ಕುಟುಂಬ ಕುಟುಂಬದ ಜೊತೆ ಕಾಲವನ್ನು ಕಳೆಯಲು ಇದು ಸಹಾಯ ಮಾಡಿತು ಆದರೆ ಇನ್ನೊಂದು ಕಡೆ ಯೋಚಿಸಿದಾಗ ಇದು ಒಂದು ಕೆಟ್ಟ ರೀತಿಯಲ್ಲಿ ನಮಗೆ ಹಾನಿ ಉಂಟು ಮಾಡಿತು. ಈ ಕಾಲದಲ್ಲಿ ನಮಗೆ ನಮ್ಮ ಕುಟುಂಬದವರಿಗೆ ಎಲ್ಲರಿಗೂ ಸಹ ತುಂಬಾ ಭಯದಿಂದ ಕಾಡುತ್ತಿತ್ತು ಒಂದು ವೇಳೆ ಯಾರಿಗಾದರೂ ಸದಸ್ಯರಿಗೆ ಕೆಮ್ಮು ಜ್ವರ ಬಂದರೆ ಕರೋನವೇ ಬಂದಿದೆ ಎಂಬ ಹೆದರಿಕೆ ಉಂಟಾಗುತ್ತಿತ್ತು. ಕರುಣದ ಕಾರಣದಿಂದ ಶಾಲೆಯು ಹಾಗೂ ಹೊರಗೆ ಹೋಗುವ ಅವಕಾಶವೂ ಅದು ಕಿತ್ತಿಕೊಂಡಿತು. ಮನೆಯಲ್ಲಿ ಕುಳಿತು ಕಾಲ ಕಳೆಯುವಂತಹ ಸಂದರ್ಭ ಎಲ್ಲರಿಗೂ ಬಂದಿತು. ಆದರೆ ಅದರಲ್ಲೂ ಕಾಲೇಜುಗಳಲ್ಲಿ ಪಾಠ ನಡೆಸುವುದಕ್ಕೆ ಆಗುವುದಿಲ್ಲ ಎಂದು ಆನ್ಲೈನ್ ಕ್ಲಾಸಸ್ ಅನ್ನು ತಂದರು. ಇದನ್ನು ಎಲ್ಲಾ ಶಾಲಾ ಕಾಲೇಜುಗಳಲ್ಲಿ ಜಾರಿಗೆ ತಂದರು. ಪ್ರಕಾರ ಉತ್ತಮವಾದ ವಿಧಾನ ಎಂದು ಅನ್ನಿಸಲಿಲ್ಲ. ಏಕೆಂದರೆ ಇದರಿಂದ ಕೆಲವು ವಿದ್ಯಾರ್ಥಿಗಳು ಪಾಠವನ್ನು ಕೇಳಬಹುದು ಆದರೆ ಎಲ್ಲರೂ ಸಹ ಕೇಳಲು ಇಚ್ಚಿಸುವುದಿಲ್ಲ. ನಂತರ ನಾವು ನಮ್ಮ ಎಲ್ಲಾ ಪಾಠಗಳನ್ನು ಸಹ ಆನ್ಲೈನ್ ನಲ್ಲಿ ಕಲಿತು ನಂತರ ಪರೀಕ್ಷೆಯನ್ನು ಬರೆದೆನು. ಪರೀಕ್ಷೆಯಲ್ಲಿ ಉತ್ತಮವಾದ ಅಂಕಗಳನ್ನು ಗಳಿಸಿ ಎಲ್ಲರ ಮೆಚ್ಚುಗೆಗೆ ಪಾತ್ರನಾದನು. ನಂತರ ಕೊರೊನವು ಮುಗಿಯಿತೆ ಎಂದು ಹೇಳುವ ಸಂದರ್ಭದಲ್ಲಿ ಮತ್ತೆ ಎರಡನೇ ಅಲೆಯೂ ಪ್ರಾರಂಭವಾಯಿತು ಮತ್ತೆ ಅದೇ ರೀತಿಯ ಲಾಕ್ ಡೌನ್ ಎಲ್ಲಾ ಬಂದಿತು. ನನ್ನ ಅಮ್ಮನಿಗೂ ನಾನು ಕ್ರೀಡೆಯಲ್ಲಿ ಭಾಗವಹಿಸುವುದು ಇಷ್ಟವಿರಲಿಲ್ಲ ಏಕೆಂದರೆ ಅದರಿಂದ ಆಗುವ ಗಾಯ ಹಾಗೂ ಅದರಿಂದ ಆಗುವ ಸುಸ್ತು ಇವೆಲ್ಲವನ್ನೂ ನೋಡಿ ನನ್ನ ಅಮ್ಮ ನನಗೆ ನೀನು ಇನ್ನು ಮುಂದೆ ಆಳಬೇಡ ಏಕೆಂದರೆ ನೀನು ಸರಿಯಾಗಿ ಊಟ ಮಾಡುವುದಿಲ್ಲ ಆದರೂ ಸಹ ನೀನು ಆಡಿದರೆ ನಿನ್ನ ಆರೋಗ್ಯವು ಸರಿ ಇರುವುದಿಲ್ಲ ಎಂದು ಬೈಯುತ್ತಿದ್ದರು. ಆದರೂ ಸಹ ನಾನು ಆಟವನ್ನು ಬಿಡದೆ ಅದನ್ನೇ ನಾನು ಮುಂದೆ ಆಡುತ್ತಾ ಹೋಗುತ್ತಿದ್ದೆ. ಎರಡನೇ ಪಿಯುಸಿ ಆದ ನಂತರ ನನಗೆ ಎರಡು ತಿಂಗಳ ಕಾಲ ರಜೆ ಸಿಕ್ಕಿತು. ಆದಕಾರಣ ನಾನು ಆ ಎರಡು ತಿಂಗಳ ರಜೆಯನ್ನು ಉಪಯೋಗಿಸಬೇಕೆಂಬ ಕಾರಣದಿಂದ ಕೆಲಸವನ್ನು ಹುಡುಕುತ್ತಿದ್ದೆ. ಹೀಗೆ ಹುಡುಕುತ್ತಿದ್ದ ಸಂದರ್ಭದಲ್ಲಿ ಒಂದು ಕಡೆ ನನಗೆ ಕೆಲಸವು ಸಿಕ್ಕಿತು ಆದರೆ ನನಗೆ ಆ ಕೆಲಸವು ಮಾಡುವಷ್ಟು ನನ್ನಲ್ಲಿ ಬಲವಿರಲಿಲ್ಲ. ಆದ ನಂತರ ಆ ಕೆಲಸವನ್ನು ನಾನು ಬಿಟ್ಟು ಬೇರೆ ಕೆಲಸವನ್ನು ಹುಡುಕುತ್ತಿದ್ದೆ. ಆಗ ನನ್ನ ಒಬ್ಬ ಸ್ನೇಹಿತನೂ ನನಗೆ ಒಂದು ಕೆಲಸವನ್ನು ಹೇಳುತ್ತೇನೆಂದು ಒಂದು ದೇವಾಲಯದಲ್ಲಿ ಕೆಲಸ ಮಾಡಲು ನನ್ನನ್ನು ಕರೆದುಕೊಂಡು ಹೋದನು. ನಂತರ ದೇವಾಲಯದ ಕೆಲಸವನ್ನು ಮಾಡಲು ನನಗೆ ತುಂಬಾ ಆಸಕ್ತಿ ಇತ್ತು. ದೇವಾಲಯದ ಲ್ಲಿ ನನ್ನ ಕೆಲಸವೇನೆಂದರೆ ಪ್ರತಿ ದಿನ ಬಂದು ಏನಾದರೂ ಅಲಂಕಾರ ಅಭಿಷೇಕ ಬುಕ್ ಮಾಡಿಕೊಳ್ಳುವ ಕೆಲಸ. ದೇವಸ್ಥಾನದ ಆವರಣವನ್ನು ಸ್ವಚ್ಛವಾಗಿ ಇಡುವುದು ಸಹ ನನ್ನ ಮೇಲೆಯೇ ಇತ್ತು. ಅದಾದ ನಂತರ ಇನ್ನೇನು ಕಾಲೇಜು ಆರಂಭವಾಗಬೇಕು ನಾನು ಆ ಕ್ಷಣದಲ್ಲಿ ಯಾವ ಕಾಲೇಜಿನಲ್ಲಿ ಓದಬೇಕೆಂದು ಯೋಚಿಸುವ ಸಂದರ್ಭದಲ್ಲಿ ನನ್ನ ಗೆಳೆಯ ಕ್ರೈಸ್ಟ್ ಕಾಲೇಜಿನಲ್ಲಿ ಸೇರು ಎಂದು ಹೇಳಿದನು. ಇನ್ನೇನು ಕಾಲೇಜು ಆರಂಭವಾಗಬೇಕು ಮೊದಲನೇ ದಿನ ನನಗೆ ತುಂಬಾ ಭಯವಾಗುತ್ತಿತ್ತು ಏಕೆಂದರೆ ನಾನು ಆ ಕಾಲೇಜನ್ನು ಏನು ಎಂದು ತಿಳಿದಿದ್ದೆ ಆದಕಾರಣದಿಂದ ಅಲ್ಲಿಗೆ ಬರಲು ನನಗೆ ತುಂಬಾ ಹೆದರಿಕೆಯಾಗುತ್ತಿತ್ತು ಹಾಗೂ ಏನೋ ಒಂದು ಮನಸ್ಸಿನಲ್ಲಿ ಭಯ ಉಂಟು ಮಾಡುತ್ತಿತ್ತು. ಮುಂದೆ ದಿನಗಳು ಕಳೆಯುತ್ತಾ ಹೋಗುತ್ತಲೇ ಇದ್ದಾಗ ಆ ಕಾಲೇಜಿನ ವಾತಾವರಣಕ್ಕೆ ಅನುಸರಿಸುತ್ತಾ ಹೋದೆ. ಇಲ್ಲಿಯೂ ಸಹ ಕ್ರೀಡೆಯಲ್ಲಿ ಭಾಗವಹಿಸುವ ಅವಕಾಶ ನನಗೆ ದೊರಕಿತು ಅದರಲ್ಲಿ ಖೋ ಖೋ ನನ್ನ ಪ್ರಮುಖವಾದ ಕ್ರೀಡೆಯಾಗಿತ್ತು. ಅದಾದ ಮೇಲೆ ಇಲ್ಲಿ ನನ್ನ ಗೆಳೆತನದ ಒಂದು ಹೊಸ ಅಧ್ಯಾಯ ತೆರೆಯಿತು. ನನ್ನ ಜೀವನ ಹೇಗಿದೆ ಎಂದರೆ ಬೆಳಿಗ್ಗೆ 7.30 ಕ್ಕೆ ಕಾಲೇಜಿಗೆ ಬಂದರೆ ಮಧ್ಯಾಹ್ನ 1:00 ಯವರೆಗೂ ಕಾಲೇಜಿನಲ್ಲಿಯೇ ಇರಬೇಕಿತ್ತು. ಕಾಲೇಜನ್ನು ಮುಗಿಸಿ ಮನೆಗೆ ಹೋಗುವಷ್ಟರಲ್ಲಿ ಎರಡು ಗಂಟೆಯಾಯಿತು 30 ನಿಮಿಷಗಳ ಕಾಲ ವಿಶ್ರಾಂತಿಯನ್ನು ಪಡೆಯುತ್ತಿದ್ದೇನೆ. ಸಂಜೆ 3: 30 ಮತ್ತೆ ಕಾಲೇಜಿನಲ್ಲಿ ಕೊಕ್ಕೋ ಅಭ್ಯಾಸವನ್ನು ನಡೆಸಬೇಕಾಯಿತು. ಸಂಜೆ 6:00 ವರೆಗೂ ಅಭ್ಯಾಸವನ್ನು ನಡೆಸುತ್ತಿದ್ದೆ. ಅದು ಮುಗಿದ ನಂತರ ದೇವಸ್ಥಾನದ ಕೆಲಸವನ್ನು ಮಾಡುತ್ತಿದ್ದೆ. ಎಲ್ಲಾ ಮುಗಿದ ಎಲ್ಲಾ ಮುಗಿದಾದ ಮೇಲೆ ಮನೆಗೆ ಹೋಗುವಷ್ಟರಲ್ಲಿ 9:30 ರಾತ್ರಿ ಆಗುತ್ತಿತ್ತು. ಮನೆಗೆ ಬಂದ ಮೇಲೆ ಊಟ ಮಾಡಿ ಮಲಗುವಷ್ಟರಲ್ಲಿ ನನ್ನ ಒಂದು ದಿನದ ದಿನಚರಿ ಮುಗಿಯುತ್ತಿತ್ತು.