ಸದಸ್ಯ:Krishnaveni. 172/ನನ್ನ ಪ್ರಯೋಗಪುಟ

ವಿಕಿಪೀಡಿಯ ಇಂದ
Jump to navigation Jump to search

ಮುಂಬಯಿ ಐ.ಐ.ಟಿ'.ಯ ಸ್ನಾತಕೋತ್ತರ ವಿಧ್ಯಾರ್ಥಿ' ಡಿ.ಉದಯಕುಮಾರ್, ರಚಿಸಿದ ಹೊಸ ಸಂಕೇತ ಚಿಹ್ನೆ ಯನ್ನು ಕೆಂದ್ರ ಸಂಪುಟ, ಅಂಗೀಕರಿಸುವ ಮೂಲಕ ಭಾರತೀಯ ರೂಪಾಯಿಗೆ ಕೊನೆಗೂ 'ಚಿಹ್ನೆಧಾರಣೆ'ಯಾಗಿದೆ. ಭಾರತೀಯ ರೂಪಾಯಿಗೆ ಚಿಹ್ನೆ ಹೊಂದಿಸುವ ಪ್ರಕ್ರಿಯೆ ವರ್ಷದ ಹಿಂದೆಯೇ ಪ್ರಾರಂಭವಾಗಿತ್ತು.ಮುಂಬಯಿ ಐ.ಐ.ಟಿ'.ಯ ಸ್ನಾತಕೋತ್ತರ ವಿಧ್ಯಾರ್ಥಿ' ಡಿ.ಉದಯಕುಮಾರ್, ಸಮಂಜಸವಾದ 'ಲೋಗೋ, ರಚಿಸಿ, ನಮ್ಮ ರುಪಾಯಿಯನ್ನು ಸುಲಭವಾಗಿ ನಮೂದಿಸುವ ಸೌಲಭ್ಯವನ್ನು ಒದಗಿಸಿ ಎಲ್ಲರಿಗೂ ಸಹಾಯ ಮಾಡಿದ್ದಾರೆ.

ಡಿ ಉದಯ ಕುಮರ್ ಧರ್ಮಲಿಂಗಂ ಅವರು ಚನ್ನೈನ ಕಲ್ಲಕುರುಚಿಯಲ್ಲಿ ೧೦ನೇ ಅಕ್ಟೋಬರ್ ೧೯೭೮ ರಂದು ಕೋಜನಿಸಿದರು.ಇವರು ಮಾಜಿ ಡಿ.ಎಂ.ಕೆ ಶಾಸಕರ ಮಗ . thumb|ಡಿ ಉದಯ ಕುಮಾರ್

ಶೈಕ್ಷಣಿಕ[ಬದಲಾಯಿಸಿ]

       ಉದಯ ಕುಮಾರ್ ಅವರು ಚೆನೈನ ಲಾಯಜಮನಿಯಲ್ಲಿ ತಮ್ಮ ಶಿಕ್ಷಣ ಮುಗಿಸಿದರು.ಇವರು ೨೦೦೧ರಲ್ಲಿ ಅನ್ನಾ ವಿಶ್ವವಿದ್ಯಾಲಯದಲ್ಲಿ ವಾಸ್ತು ಶಿಪ್ಪಿ ಪದವಿ ಪಡೆದರು.ಆನಂತರ ಅವರು ೨೦೦೩ರಲ್ಲಿ ಕೈಗಾರಿಕಾ ವಿನ್ಯಾಸ ಸೆಂಟರ್, ಐ.ಐ.ಟಿ ಬಾಂಬಿಯಲ್ಲಿ ಸ್ನಾತಕೋತ್ತರ ಪದವಿಯನ್ನು ಎಂ.ಡಿ.ಇ ದೃಶ್ಯ ಸಂವಹನದಲ್ಲಿ ಪಡೆದರು, ಹಾಗು ೨೦೧೦ ರಲ್ಲಿ ಡಾಕ್ಟರೇಟ್ ಅಧ್ಯಯನವನ್ನು ಐ.ಡಿ.ಸಿ ಯಲ್ಲಿ ಮುಗಿಸಿ ಪಿ.ಎಚ್.ಡಿ ಸ್ವೀಕರಿಸಿದರು. ಪಬ್ಲಿಷಿಂಗ್ ಹೌಸನಲ್ಲಿ ತನ್ನ ಎರಡು ವರ್ಷಗಳ ವೃತ್ತಿಪರ ಅನುಭವ ಅವರನ್ನು ಮುದ್ರಣ ಮಾದ್ಯಮದಲ್ಲಿ ಉತ್ತಮ ಮಾಡಿದೆ.ಇವರು ಭಾರತದ ರೂಪಾಯಿ ಚಿಹ್ನೆಯ ಡಿಸೈನರ್. ತನ್ನ ವಿನ್ಯಾಸವು ಐದು ಸಣ್ಣ ಪಟ್ಟಿ ಚಿಹ್ನೆಗಳ ನಡುವೆ ಆಯ್ಕೆ. ಉದಯ ಕುಮರ್ ರವರ ಪ್ರಕಾರ ವಿನ್ಯಾಸ ಭಾರತೀಯ ತ್ರಿವರ್ಣ ಆಧರಿಸಿದೆ. 

thumb|ಭಾರತದ ರೂಪಾಯಿ

ಹಣ[ಬದಲಾಯಿಸಿ]

    ಅಂತರಾಷ್ಟ್ರಿಯ ಸ್ತರದಲ್ಲಿ ದೇಶದ ಹಣ ಬೆಲೆ ಬದಲಾದರೆ ಆ ದೇಶದ ಆರ್ಥಿಕತೆಗೆ ಹೆಚ್ಚು ಪ್ರಮಾಣವಾದ ತೊಂದರೆಯಾಗುವುದು ಅತ್ಯಂತ ಸಹಜ ಮತ್ತು ಸ್ವಾಭಾವಿಕ . ಬೆಳೆಯುತ್ತಿರುವ ದೇಶಗಳಿಗಂತೂ ಇವರಿಂದ ತುಂಬಾ ತೊಂದರೆಯಾಗುತ್ತದೆ. ಬೇರೆ ಮಾತಿಲ್ಲದೆ ಈಗಿನ ಆರ್ಥಿಕ ದೇಶಗಳಿಗೂ ಈ ತತ್ವ ಅನುವಹಿಸುತ್ತದೆ .ನಮ್ಮ ದೇಶ ಸ್ವಾತಂತ್ರ್ಯವಾದ ನಂತರವೂ ದುರಾದೃಶ್ಟತೆಯಿಂದ ರುಪಾಯಿಯ ಬೆಲೆ ಕಡಿಮೆಯಾಗುತ್ತಲೇ ಬಂದಿದೆ ಈ ಅವಧಿಗಳಲ್ಲಿ ಭಾರತದ ನಾಯಕತ್ವ ವಹಿಸಿಕೊಂಡ ಸರ್ಕಾರಗಳು ಮತ್ತು ಅದನ್ನು ಆಳುತ್ತಿರುವ ನಯಕರು ತಮ್ಮ ಏಳಿಗೆಯನ್ನು ಮತ್ತು ತಮ್ಮ ಪಕ್ಷದ ಅಸ್ಥಿತ್ವವನ್ನು ಗಟ್ತಿಗೊಳಿಸಿಕೊಂಡಿದ್ದಾರೆ, ದೇಶದ ಆರ್ಥಿಕತೆಗೆ ತೊಂದರೆಯಾದರೂ ತಮ್ಮ ಏಳಿಗೆಯನ್ನು ಚೆನ್ನಾಗಿ ಕಾಪಾಡಿಕೊಂಡಿದ್ದಾರೆ. ಈ ದೇಶದ ದುರಂತವೇನೆಂದರೆ ಭಾರತದ ಹಣ ಕುಸಿದರೆ ಕೋಟ್ಯಾಂತರ ಉದ್ಯಮಿಗಳಿಗೆ , ಶೇರು ಮಾರುಕಟ್ಟೆಗೆ, ಕೋಟ್ಯಾಂತರ ಹಣ ನಶ್ಟವಾದರು ಸಹ ರಾಜಕೀಯ ಪಕ್ಷದ ಚುನಾವಣೆಯಲ್ಲಿ ಬಾಗವಹಿಸುವ ಕೆಲವು ಉದ್ಯಮಿಗಳಿಗಂತೂ ಲಾಭ ಕಟ್ಟಿಟ್ಟ ಬುತ್ತಿಯಾಗಿರುತ್ತದೆ. ಒಂದು ದೇಶದ ಹಣ ಕ್ಷೀಣಿಸುವುದಕ್ಕೆ ಹಲವಾರು ಕಾರಣಗಳಿವೆ ಅವುಗಳೆಂದರೆ ಆಯಾ ದೇಶದ ಹಣದುಬ್ಬರ, ನಿರುಧ್ಯೋಗ ಸಮಸ್ಯೆ , ವ್ಯಾಪಾರ ವಹಿವಾಟು, ಬೆಳವಣಿಗೆಯ ಪ್ರಮಾಣ, ಆಮದು ರಫ್ತು, ಸರ್ಕಾರದ ನೀತಿಗಳು ವಿದೇಶಿ ಬಂಡವಾಳ ಹರಿವು, ಹಣಕಾಸು ಸಂಸ್ಥೆಗಳ ಬಂಡವಾಳ ಮುಂತಾದವುಗಳು. ಸ್ವಾತಂತ್ರೊತ್ತರ ಭಾರತದ ಹಣ ಚೇತರಿಕೆ ಕಾಣದೆ ಕುಸಿಯುತ್ತಲೆ ಬಂದಿದೆ. ೧೯೪೭ರಿಂದ ೨೦೧೪ವರೆಗೂ ಭಾರತದ ರುಪಾಯಿಯ ಏರಿಳಿತವನ್ನು ಅಮೇರಿಕಾದ ಡಾಲರ್ ಗೆ ಹೊಂದಿಸಿ ನೋಡುವುದಾದರೆ ಒಂದು ಭಾರತದ ರುಪಾಯಿ ಅಮೇರಿಕಾದ ಒಂದು ಡಾಲರ್ ಗೆ ಸಮವಾಗುತ್ತಿತ್ತು. ೭೦ನೇ ಇಸವಿಯಿಂದ ನಾಲ್ಕೈದು ರುಪಾಯಿಯ ಏರಿಳಿತದಿಂದ ಬದಲಾವಣೆಯಾಗುತ್ತಿದ್ದ ಹಣ ೧೯೭೪ರಲ್ಲಿ ಎಂಟು ರೂಪಾಯಿಗೆ ಕುಸಿಯಿತು. ಕಳೆದ ಮೂರು ನಾಲ್ಕು ವರ್ಷಗಳಲ್ಲಿ ಅಂದರೆ ೨೦೦೨ರಿಂದೀಚೆಗೆ ೧೫ರುಪಾಯಿಯಷ್ಟು ಬೆಲೆ ಇಳಿದಿದರಿಂದ ಶೇ.೩೦ರಷ್ಟು ಬೆಲೆ ಕುಸಿದು ಭಾರತದ ಆರ್ಥಿಕ ವ್ಯವಸ್ತೆ ಜಿಂಬಾಬ್ವೆಯಂತಹ ಫೈಲ್ದ್ ದೇಶಗಳ ಮಟ್ಟಕ್ಕೆ ಇಳಿದಿದೆ . ಆದ್ದರಿಂದ ಭಾರತದ ರೂಪಾಯಿ ಅಸ್ವಸ್ತವಾದರೆ ಚುನಾವಣೆಗೆ ಆದಾರಸ್ತಂಭವೆಂಬ ಲೆಕ್ಕಾಚಾರದಲ್ಲಿರುವ ಎಲ್ಲಾ ಪಕ್ಷಗಳನ್ನು ಧಿಕ್ಕರಿಸುವವರೆಗೂ ಭಾರತದ ಆರ್ಥಿಕತೆ ಉದ್ದಾರವಾಗದು. 

thumb|ರೂಪಯಿ ಡಿಸೈನ್

ಡಿ ಉದಯ ಕುಮರ್ ರವರ ಸಂಶೋಧನೆ[ಬದಲಾಯಿಸಿ]

                ಅವರಿಗೆ ಗ್ರಾಫಿಕ್ ವಿನ್ಯಾಸ ಮುದ್ರಣಕಲೆ, ಮಾದರಿ ವಿನ್ಯಾಸ ಹಾಗು ವಿನ್ಯಾಸ ಸಂಶೋಧನೆ, ತಮಿಳು ಮುದ್ರಣಕಲೆಯಲ್ಲಿ ವಿಶೇಷ ಗಮನ. ಇವರು ಪ್ರೊ..ಜಿ.ವಿ.ಶ್ರೀಕುಮಾರ ರವರ ಮಾರ್ಗದರ್ಶನದಲ್ಲಿ ಪರಶಕ್ತಿ ಎಂಬ ಮಿನಿ ಯೋಜನೆಯನ್ನು ಐ.ಡಿ.ಸಿ.ಯಲ್ಲಿ ವಿನ್ಯಾಸ ಮಾಡಿದರು. ನಮ್ಮ ದೀಶದ ಕೆಲವು ಫಾಂಟ್ ತಜ್ಞ ರಲ್ಲಿ ಜಿ.ವಿ.ಶ್ರೀಕುಮಾರ್ ರವರು ಒಬ್ಬರು. ಉದಯ ಕುಮರ್ ರವರು ತಮ್ಮ ಎಮ್.ಡಿ ಯೋಜನೆಯ ಸಮಯದಲ್ಲಿ "ತಮಿಳು ಮುದ್ರಣಕಲೆ"ಎಂಬ ಪುಸ್ತಕವನ್ನು ಬರೆದು ವಿನ್ಯಾಸ ಮಡಿದರು. ಇದು ತಮಿಳು ಪ್ರೇಕ್ಷಕರಿಗೆ ವಿಷಯ ತರುವ ಮೊದಲ ಪ್ರಯತ್ನವಾಗಿದೆ. ಈ ಪುಸ್ತಕದಲ್ಲಿ ಉದಯ ಕುಮರ್ ರವರು ಇಂಗ್ಲೀಷ್ ಶಬ್ದ ಬಳಸಲಾಗುತ್ತಿದ್ದ ಆನೇಕ ಮುದ್ರಣದ ಅವಧಿಗೆ ಹೊಸ ತಮಿಳು ಪರಿಭಾಷೆ ದಾಖಲಿಸಿದರು. ಅವರು ಭೈತಿಯಲ್ಲಿ ನಡೆದ ೪೯ನೇ ಇಂಟರ್ ಐ.ಐ.ಟಿ. ಕ್ರೀಡೆ ಮೀಟ್ ನಲ್ಲಿ ಅಧಿಕೃತ ಲಾಂಛನವನ್ನು/ಮ್ಯಾಸ್ಕಾಟ್ಅನ್ನು ವಿನ್ಯಾಸ ಮಾರ್ಗದರ್ಶನವನ್ನು ಒದಗಿಸಿದರು. ವಾರ್ತಾ ಮತ್ತು ಪ್ರಸಾರ ಸಚಿವೆ 'ಅಂಬಿಕಾ ಸೋನಿ' ರವರು ಜುಲೈ ೧೫ರಂದು ಉದಯ ಕುಮಾರ್ ರವರ ಹೊಸ ಭಾರತೀಯಾ ಕರೆನ್ಸಿ ರೂಪಾಯಿಯ ಚಿಹ್ನೆಯ ವಿನ್ಯಾಸಕ್ಕೆ ಅನುಮೋದನೆ ನೀಡಿದರು. ಉದಯ ಕುಮಾರ್ ರವರ ಪ್ರಯತ್ನಗಳಿಗಾಗಿ ರೂ.೨,೫೦,೦೦೦ ಬಹುಮಾನ ನೀಡಲಾಯಿತು.[೧] 

ಅವರ ವೈಯಕ್ತಿಕ ಜೀವನ[ಬದಲಾಯಿಸಿ]

             ಉದಯ ಕುಮಾರ್ ರವರು ದೈನ್ಯ ಮತ್ತು ಸರಳ ಜೀವನ ಶೈಲಿಯನ್ನು ನಂಬಿದರು. ಸದಾಚಾರ, ಸಮಾನತೆ, ಪ್ರೀತಿ, ವಿಶ್ವಾಸ , ಸ್ವಚ್ಛತೆ ಮತ್ತು ಶಿಸ್ತಿನಲ್ಲಿ ಬಲವಾದ ಸ್ವಂತ ಮತ್ತು ಕೆಲವು ಮೂಲಭೂತ ತತ್ವಗಳನ್ನು ನಂಬಿದರು. ಅವರು ಕ್ರೀಡೆ ಉತ್ಸಾಹಿ ಮತ್ತು ಪ್ರಕೃತಿ ಪ್ರೇಮಿ. ಭಾರತ ಸರ್ಕಾರ ರೂಪಾಯಿಯ ಚಿಹ್ನೆಯನ್ನು ಬದಲಿಸಲು ನಿರ್ಧಾರ ತೆಗೆದುಕೊಂಡಾಗ, ಸರ್ಕಾರವು ದೇಶದ ಪ್ರಜೆಗಳಿಗೆ ರೂಪಾಯಿಯ ಚಿಹ್ನೆಯನ್ನು ವಿನ್ಯಾಸಗೊಳಿಸಿ ಸರ್ಕಾರಕ್ಕೆ ಸೂಚಿಸುವಂತೆ ಜನರಿಗೆ ಮನವಿ ನೀಡಿದರು. ಡಿ.ಉದಯಕುಮಾರ್ ಅವರು ವಿನ್ಯಾಸಗೊಳಿಸಿದ ರೂಪಾಯಿಯ ಚಿಹ್ನೆಯು ಆಯ್ಕೆಯಾಯಿತು. ಈ ಚಿಹ್ನೆಯೇ ಇಂದು ನಾವು ನೀವು ಬಳಸುತ್ತಿರುವ ನಾಣ್ಯ ಮತ್ತು ನೋಟುಗಳ ಮೇಲೆ ಕಾಣಬಹುದಾಗಿದೆ.ಇವರ ಈ ಕೊಡಿಗೆಗೆ ಭಾರತ ಸರ್ಕಾರವು ಇವರಿಗೆ ಸಂಭಾವನೆಯನ್ನು ನೀಡಿತು.[೨] 

thumb|ಭಾರತದ ರೂಪಾಯಿ ಚಿಹ್ನೆ

ಮೂಲ[ಬದಲಾಯಿಸಿ]

    ೫ ಮರ್ಚ್ ೨೦೦೯ರಂದು ಭಾರತದ ಸರ್ಕಾರವು ಭಾರತದ ರೂಪಾಯಿ ಚಿನ್ಹೆ ರಚಿಸಲು ಒಂದು ಸ್ಪರ್ಧೆಯನ್ನು ಪ್ರಕಟಿಸಿದರು. ೨೦೧೦ ಕೇಂದ್ರ ಬಡ್ಜೆಟ್ ಸಮಯದಲ್ಲಿ, ಆಗಿನ ಕೇಂದ್ರ ಹಣ ಕಾಸು ಸಚಿವ 'ಪ್ರಣವ್ ಮುಖರ್ಜಿ'ರವರು ಈ ರೂಪಾಯಿ ಚಿಹ್ನೆಯು ಭಾರತದ ತತ್ವಗಳನ್ನು ಹಾಗು ಸಂಸ್ಕೃತಿಯನ್ನು ,ಪ್ರತಿಬಿಂಬಿಸಬೇಕೆಂದು ತಿಳಿಸಿದರು, ಸುಮಾರು ೩೩೩೧ ಪತ್ರಿಕೆಗಳಲ್ಲಿ ಐದು ಚಿಹ್ನೆಗಳನ್ನು ಆರಿಸಿಕೊಳ್ಳಲಾಯಿತು.

ಡಿಸೈನ್[ಬದಲಾಯಿಸಿ]

    ಹೊಸ ಚಿಹ್ನೆ ದೇವನಾಗಿರಿ ಅಕ್ಷರದ ಸಂಯೋಜನೆಯನ್ನು ಮತ್ತು ಲಾಟಿನ್ ಬಂಡವಾಳ ಪತ್ರ 'ಆರ್" ಅದರ ಲಂಬ ಬಾರ್ ಇಲ್ಲದೆ ಆಗಿದೆ. ವೇಲ್ಬಾಗದಲ್ಲಿ ಸಮನಾಂತರ ರೇಖೆಗಳು ತ್ರಿವರ್ಣ ಭಾರತೀಯ ಧ್ವಜದ ಸೂಚನೆ ಎಂದು ಹೇಳಲಾಗಿದೆ , ಆರ್ಥಿಕ ಅಸಮಾನತೆಗೆ ಕಡಿಮೆ ದೇಶದ ಉದ್ದೇಶದಿಂದ ಸಂಕೇತಿಸುತ್ತಾ ಒಂದು ಸಮಾನತೆ ಚಿಹ್ನೆ ಚಿತ್ರಿಸುತ್ತದೆ ಅಂತಿಮವಾಗಿ ಆಯ್ಕೆಯಾದ ಚಿಹ್ನೆಯನ್ನು ಉದಯ ಕುಮಾರ್ ರವರು ವಿನ್ಯಾಸಗೊಳಿಸಿದ್ದು. 

ಅನುಮೋದನೆ[ಬದಲಾಯಿಸಿ]

      ೨೬ ಆಗಸ್ಟ್ ೨೦೧೦ರಂದು ಹಣಕಾಸು ಇಲಾಖೆ ಭಾರತ ಸರ್ಕಾರದ ಆರ್ಥಿಕ ವ್ಯವಹಾರಗಳ ಸಚಿವಾಲಯ ಅಂತಿಮವಾಗಿ ಚಿಹ್ನೆ ಅಂಗೀಕರಿಸಿತು. ಭಾರತ ಸರ್ಕಾರದ ಕಾರ್ಯದರ್ಶಿ ಅಡಿಯಲ್ಲಿ ಸುಶೀಲ್ ಕುಮಾರ್ ಅನುಮೋದನೆ ನೀಡಿದರು.

ಹೀಗೆ ನಮ್ಮ ಭಾರತದ ರೂಪಯಿಯ ಚಿಹ್ನೆ ಬದಲಾಯಿತ್ತು.

ಉಲ್ಲೇಖನಗಳು[ಬದಲಾಯಿಸಿ]

 1. http://economictimes.indiatimes.com/news/economy/policy/d-udaya-kumar-the-man-who-design-the-rupee-symbol/articleshow/6174462.cms
 2. http://www.idc.iitb.ac.in/students/phd/udayakumar/