ಸದಸ್ಯ:Kishorkumar420/ನನ್ನ ಪ್ರಯೋಗಪುಟ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ವಜ್ರ[ಬದಲಾಯಿಸಿ]

ವಜ್ರವು ಇಂಗಾಲದ ಒಂದು ರೂಪ. ಇದು ಪ್ರಕೃತಿಯಲ್ಲಿರುವ ವಸ್ತುಗಳಲ್ಲಿ ಅತ್ಯಂತ ಕಠಿಣವಾದುದು. ಅಲ್ಲದೆ ಇದುವರೆಗೆ ತಯಾರಾಗಿರುವ ವಸ್ತುಗಳಲ್ಲಿ ಮೂರನೆಯ ಅತಿ ಕಠಿಣ ವಸ್ತು. ವಜ್ರವು ತನ್ನ ಕಾಠಿಣ್ಯ ಮತ್ತು ಬೆಳಕನ್ನು ಚದುರಿಸುವ ಗುಣಗಳಿಂದಾಗಿ ಆಭರಣಗಳಲ್ಲಿ ಮತ್ತು ಕೈಗಾರಿಕೆಗಳಲ್ಲಿ ಉಪಯೋಗಿಸಲ್ಪಡುತ್ತದೆ.

ವಜ್ರವು ತನ್ನ ಕೆಲವು ಅತಿ ವಿಶಿಷ್ಟ ಭೌತಿಕ ಗುಣಗಳಿಗೆ ಹೆಸರಾಗಿದೆ. ಅತಿ ಕಠಿಣವಾಗಿರುವುದರಿಂದ ವಜ್ರವನ್ನು ಘರ್ಷಕಗಳ ತಯಾರಿಕೆಯಲ್ಲಿ ಉಪಯೋಗಿಸುತ್ತರೆ. ಒಂದು ವಜ್ರವನ್ನು ಗೀರಲು ಇನ್ನೊಂದು ವಜ್ರವೇ ಬೇಕು ಅಥವಾ ಬೋರಜೋನ್, ಅತಿ ಗಡಸು ಫುಲ್ಲರೈಟ್ ಅಥವ ವಜ್ರದ ನ್ಯಾನೋಕೊಳವೆಗಳು ಬೇಕು. ವಜ್ರವು ತನ್ನ ಹೊಳಪನ್ನು ಮತ್ತು ಮೆರುಗನ್ನು ಶಾಶ್ವತವಾಗಿ ಉಳಿಸಿಕೊಳ್ಳುವುದು

ಪ್ರತಿವರ್ಷ ಸುಮಾರು ೧೩ ಕೋಟಿ ಕ್ಯಾರಟ್ (೨೬೦೦೦ ಕಿ.ಗ್ರಾಂ) ಗಳಷ್ಟು ವಜ್ರವನ್ನು ಗಣಿಗಳಿಂದ ಪಡೆಯಲಾಗುವುದು. ಇದರ ಒಟ್ಟು ಮೌಲ್ಯ ಸುಮಾರು ೯ ಬಿಲಿಯನ್ಡಾಲರುಗಳಷ್ಟು. ಇದಲ್ಲದೆ ಸಾಲಿಯಾನ ಸುಮಾರು ೧೦೦,೦೦೦ ಕಿಲೋಗ್ರಾಂ ಗಳಷ್ಟು ಕೃತಕ ವಜ್ರವನ್ನು ಉತ್ಪಾದಿಸಲಾಗುತ್ತದೆ. ಈ ಕೃತಕ ವಜ್ರವು ಹೆಚ್ಚಾಗಿ ಕೈಗಾರಿಕೆಗಳಲ್ಲಿ ಬಳಸಲ್ಪಡುತ್ತದೆ.

ವಜ್ರದ ಆಂಗ್ಲ ಹೆಸರಾದ ಡೈಮಂಡ್ ಪದವು ಅಜೇಯ ಎಂಬ ಅರ್ಥವುಳ್ಳ ಅದಮಾಸ್ ಎಂಬ ಗ್ರೀಕ್ ಶಬ್ದದಿಂದ ವ್ಯುತ್ಪ್ತತ್ತಿಯಾಗಿದೆ. ಅತಿ ಪ್ರಾಚೀನ ಕಾಲದಿಂದಲೂ ವಜ್ರಗಳನ್ನು ಧಾರ್ಮಿಕ ಸಂಕೇತಗಳಾಗಿ ಮತ್ತು ಕೊರೆಯುವ ಸಾಧನಗಳಾಗಿ ಮಾನವನು ಬಳಸುತ್ತಾ ಬಂದಿರುವನು. ಅಮೂಲ್ಯರತ್ನವನ್ನಾಗಿ ವಜ್ರವನ್ನು ಜೋಪಾನ ಮಾಡಿಕೊಂಡೂ ಬಂದಿರುವನು. ೧೯ನೆಯ ಶತಮಾನದಿಂದೀಚೆಗೆ ವಜ್ರದ ಜನಪ್ರಿಯತೆ ಹೆಚ್ಚುತ್ತಲೇ ಬಂದಿದೆ. ಹೆಚ್ಚಿನ ಪ್ರಮಾಣದಲ್ಲಿ ವಜ್ರಗಳ ಲಭ್ಯತೆ, ಕತ್ತರಿಸಲು ಮತ್ತು ಹೊಳಪು ನೀಡಲು ಉತ್ತಮ ನವೀನ ತಂತ್ರಜ್ಞಾನ ಮತ್ತು ಒಟ್ಟಾರೆ ವಿಶ್ವದ ಆರ್ಥಿಕ ಸ್ಥಿತಿಯ ಮೇಲ್ಮುಖ ಪ್ರಗತಿ ಇವುಗಳು ವಜ್ರಗವನ್ನು ಹೆಚ್ಚುಹೆಚ್ಚು ಜನರೆಡೆಗ ತಲುಪಿಸುತ್ತಿವೆ.

ವಜ್ರದ ಗುಣಮಟ್ಟವನ್ನು ಅದರ ತೂಕ (ಕ್ಯಾರಟ್), ಬಣ್ಣ, ಕತ್ತರಿಸಲ್ಪಟ್ಟ ರೀತಿ ಮತ್ತು ಸ್ಪಷ್ಟತೆಗಳಿಂದ ಅಳೆಯಲಾಗುತ್ತದೆ.

ಜಗತ್ತಿನ ಒಟ್ಟೂ ನೈಸರ್ಗಿಕ ವಜ್ರಗಳಲ್ಲಿ ೪೯% ಪಾಲು ಮಧ್ಯ ಮತ್ತು ದಕ್ಷಿಣ ಆಫ್ರಿಕಾಗಳಲ್ಲಿ ದೊರೆಯುತ್ತದೆ. ಉಳಿದಂತೆ ಕೆನಡಭಾರತರಷ್ಯಾಬ್ರೆಜಿಲ್ ಮತ್ತುಆಸ್ಟ್ರೇಲಿಯಾಗಳಲ್ಲಿ ಸಹ ಗಣನೀಯ ಪ್ರಮಾಣದ ವಜ್ರದ ನಿಕ್ಷೇಪವಿರುವುದು ಕಂಡುಬಂದಿದೆ. ವಜ್ರವನ್ನು ಕಿಂಬರ್ಲೈಟ್ ಮತ್ತು ಲಾಂಪೊರೈಟ್ ಗಳಿಂದ ಗಣಿಗಾರಿಕೆಯ ಮೂಲಕ ತೆಗೆಯಲಾಗುವುದು. ಈ ಎರಡೂ ಅದಿರುಗಳು ಭೂಗರ್ಭದಿಂದ ಜ್ವಾಲಾಮುಖಿಗಳ ಚಟುವಟಿಕೆಯಿಂದಾಗಿ ಮೇಲ್ಭಾಗಕ್ಕೆ ತಳ್ಳಲ್ಪಟ್ಟವಾಗಿವೆ. ಸಾಮಾನ್ಯವಾಗಿ ವಜ್ರದ ಹರಳುಗಳು ಬಹಳ ಆಳದಲ್ಲಿ ಅತಿಯಾದ ಉಷ್ಣತೆ ಮತ್ತು ಒತ್ತಡಗಳಿರುವ ಸನ್ನಿವೇಶದಲ್ಲಿ ಸೃಷ್ಟಿಯಾಗುತ್ತವೆ. ಒಂದು ಪಾರದರ್ಶಕ ಹರಳು. ಇದರಲ್ಲಿ ಇಂಗಾಲದ ಪರಮಾಣು ಒಂದು ವಿಶಿಷ್ಟ ರೀತಿಯಲ್ಲಿ ಸಂಯೋಜಿಸಸಲ್ಪಟ್ಟಿರುತ್ತವೆ. ತನ್ನ ಹಲವು ಅದ್ಭುತ ಭೌತಿಕ ಗುಣಗಳಿಂದಾಗಿ ವಜ್ರವು ಹಲವು ಉಪಯೋಗಗಳನ್ನು ಕಂಡಿದೆ. ವಜ್ರವು ಅತಿ ಕಠಿಣ ವಸ್ತು. ಇದರ ಬೆಳಕು ಚದುರಿಸುವಿಕೆಯ ಸೂಚ್ಯಂಕ ಬಹಳ ಹೆಚ್ಚು. ವಜ್ರವು ಅತುತ್ತಮ ಉಷ್ಣವಾಹಕ ಕೂಡ. ವಜ್ರವು ೩೫೪೭ ಡಿಗ್ರಿ ಸೆಂಟಿಗ್ರೇಡ್ ತಾಪಮಾನ್ದಲ್ಲಿ ಕರಗುವುದು ಮತ್ತು ೪೮೨೭ ಡಿಗ್ರಿಯಲ್ಲಿ ಕುದಿಯುತ್ತದೆ. ನೈಸರ್ಗಿಕ ವಜ್ರದ ಸಾಂದ್ರತೆಪ್ರತಿ ಘನ ಸೆಂಟಿಮೀಟರಿಗೆ ೩.೧೫ ರಿಂದ ೩.೫೩ ಗ್ರಾಂ ಗಳಷ್ಟಿರುವುದು. ಅತಿ ಶುದ್ಧ ವಜ್ರದ ಸಾಂದ್ರತೆ ೩.೫೨ ಗ್ರಾಂ ನಷ್ಟು.